ಕನ್ನಡ ಸುದ್ದಿ  /  ಜೀವನಶೈಲಿ  /  Coconut Water: ಬಿಸಿಲಿನ ತಾಪ ನೀಗಿಸುವ ಎಳನೀರು ಹೊಳೆಯುವ ಚರ್ಮಕ್ಕೂ ವರ; ತ್ವಚೆಯ ಅಂದ, ಆರೈಕೆಗೆ ಇದನ್ನು ಹೀಗೆ ಬಳಸಿ

Coconut Water: ಬಿಸಿಲಿನ ತಾಪ ನೀಗಿಸುವ ಎಳನೀರು ಹೊಳೆಯುವ ಚರ್ಮಕ್ಕೂ ವರ; ತ್ವಚೆಯ ಅಂದ, ಆರೈಕೆಗೆ ಇದನ್ನು ಹೀಗೆ ಬಳಸಿ

ಬೇಸಿಗೆಯಲ್ಲಿ ಎಳನೀರು ಕುಡಿಯುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಇದರಿಂದ ನಿರ್ಜಲೀಕರಣವಾಗದಂತೆ ತಡೆಯಬಹುದು. ಆದರೆ ಇದು ಚರ್ಮದ ಆರೋಗ್ಯಕ್ಕೂ ಉತ್ತಮ. ಎಳನೀರಿನಿಂದ ತ್ವಚೆಗೆ ಏನೆಲ್ಲಾ ಪ್ರಯೋಜನಗಳಿವೆ ನೋಡಿ.

ಬೇಸಿಗೆಯ ದಾಹ ನೀಗಿಸುವ ಎಳನೀರು ಹೊಳೆಯುವ ಚರ್ಮಕ್ಕೆ ವರ
ಬೇಸಿಗೆಯ ದಾಹ ನೀಗಿಸುವ ಎಳನೀರು ಹೊಳೆಯುವ ಚರ್ಮಕ್ಕೆ ವರ

ಬೇಸಿಗೆಯಲ್ಲಿ ನಿರ್ಜಲೀಕರಣ ಸಮಸ್ಯೆಯನ್ನು ತಪ್ಪಿಸಿ, ದೇಹಕ್ಕೆ ಚೈತನ್ಯ ಸಿಗಲು ಎಳನೀರು ಸೇವಿಸುವುದು ಉತ್ತಮ. ಇದು ನೈಸರ್ಗಿಕವಾಗಿ ದೇಹವನ್ನು ರಿಫ್ರೆಶ್‌ ಮಾಡುತ್ತದೆ. ಎಳನೀರು ಸೇವನೆಯಿಂದ ದೇಹಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಇದು ಚರ್ಮದ ಆರೋಗ್ಯಕ್ಕೂ ಉತ್ತಮ. ತ್ವಚೆಯ ಮೇಲಿನ ಕಲೆ, ಮೊಡವೆಯಂತಹ ಹಲವು ಸಮಸ್ಯೆಗಳಿಗೆ ಇದು ಪರಿಹಾರ ನೀಡುತ್ತದೆ. ಬೇಸಿಗೆಯಲ್ಲಿ ನಿಮ್ಮ ತ್ವಚೆಯ ಆರೈಕೆಯ ದಿನಚರಿಯಲ್ಲಿ ಎಳನೀರು ಸೇರಿಸಿಕೊಳ್ಳುವುದರಿಂದ ಸಾಕಷ್ಟು ಪ್ರಯೋಜನಗಳಿವೆ.

ಟ್ರೆಂಡಿಂಗ್​ ಸುದ್ದಿ

ಎಳನೀರು

ತೆಂಗಿನಮರದಲ್ಲಿ ಬಿಡುವ ಹಸಿರು ಬಣ್ಣದ ಕಾಯಿಯ ಒಳಗೆ ಇರುವ ದ್ರವವನ್ನು ಎಳನೀರು ಎಂದು ಕರೆಯುತ್ತಾರೆ. ಇದು ಪೊಟ್ಯಾಶಿಯುಂ, ಸೋಡಿಯಂ ಹಾಗೂ ಮೆಗ್ನಿಶಿಯಂ ಸೇರಿದಂತೆ ಎಲೆಕ್ಟ್ರೋಲೈಟ್‌ಗಳ ನೈಸರ್ಗಿಕ ಮೂಲವಾಗಿದೆ ಎಂದು ಚರ್ಮರೋಗ ತಜ್ಞರಾದ ಡಾ. ಮೌನಿಕಾ ಸಿ. ಹೇಳತ್ತಾರೆ. ತೆಂಗಿನಹಾಲು ಕೂಡ ಎಳನೀರಿನಷ್ಟೇ ಪ್ರಯೋಜನಕಾರಿ ಎಂದು ಡಾ. ಮೌನಿಕ ಹೇಳುತ್ತಾರೆ.

ಎಳನೀರಿನಿಂದ ತ್ವಚೆಗೆ ಏನೆಲ್ಲಾ ಪ್ರಯೋಜನಗಳಿವೆ

ಹಲವು ಪೋಷಕಾಂಶಗಳಿಂದ ಸಮೃದ್ಧವಾಗಿರುವ ಎಳನೀರು ತ್ವಚೆಯ ಆರೋಗ್ಯಕ್ಕೆ ಬಹಳ ಉತ್ತಮ.

ಒಣ ಚರ್ಮಕ್ಕೆ: ಒಣ ಚರ್ಮ ಹೊಂದಿರುವವರು ಎಳನೀರು ಸೇವಿಸುವುದು ಅತ್ಯಗತ್ಯ. ಇದು ಒಣ ಚರ್ಮ ಹೊಂದಿದವರಿಗೆ ಉತ್ತಮ. ಇದರಲ್ಲಿ ನೈಸರ್ಗಿಕ ಎಲೆಕ್ಟ್ರೋಲೈಟ್‌ ಅಂಶವಿದ್ದು, ಚರ್ಮದಲ್ಲಿ ತೇವಾಂಶ ಹೆಚ್ಚುವಂತೆ ಮಾಡುತ್ತದೆ. ಇದು ಚರ್ಮದ ಕೋಶಗಳನ್ನು ಮಾಯಿಶ್ಚರೈಸ್‌ ಮಾಡುತ್ತದೆ. ಆ ಮೂಲಕ ತ್ವಚೆಯ ಹೊಳಪು ಹೆಚ್ಚಿಸುತ್ತದೆ.

ವಯಸ್ಸಾದಂತೆ ಕಾಣುವ ಲಕ್ಷಣಗಳನ್ನು ನಿವಾರಿಸುತ್ತದೆ: ಎಳನೀರಿನಲ್ಲಿ ಕಂಡುಬರುವ ಸೈಟೊಕಿನಿನ್‌ ಅಂಶಗಳು ವಯಸ್ಸಾಗುವ ಲಕ್ಷಣಗಳನ್ನು ವಿರೋಧಿಸುತ್ತದೆ. ಇದು ಜೀವಕೋಶಗಳ ಪುನರುತ್ಪಾದನೆಯನ್ನು ಉತ್ತೇಜಿಸುವ ಮೂಲಕ ಸೂಕ್ಷ್ಮರೇಖೆಗಳು ಹಾಗೂ ಚರ್ಮದಲ್ಲಿ ಸುಕ್ಕು ಉಂಟಾಗುವುದನ್ನು ಕಡಿಮೆ ಮಾಡುತ್ತದೆ. ಎಳನೀರು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಇದು ಫ್ರಿ ರಾಡಿಕಲ್ಸ್‌ಗಳ ವಿರುದ್ಧ ಹೋರಾಡುವ ಮೂಲಕ ಚರ್ಮಕ್ಕೆ ಹಾನಿಯಾಗುವುದನ್ನು ತಡೆಯುತ್ತದೆ.

ಸ್ಥಿತಿಸ್ಥಾಪಕತ್ವವನ್ನು ಸುಧಾರಿಸುತ್ತದೆ: ತ್ವಚೆಯ ಆರೋಗ್ಯವನ್ನು ಸುಧಾರಿಸುವ ಕಾಲಜನ್‌ ಎಂಬ ಪ್ರೊಟೀನ್‌ ಮತ್ತು ಎಳನೀರಿಗೂ ಸಂಬಂಧವಿದೆ. ಇದು ಕಾಲಜನ್‌ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುವ ಆಹಾರದ ಮೂಲವಾಗಿ ಕಾರ್ಯನಿರ್ವಹಿಸುತ್ತದೆ. ಇದು ಚರ್ಮಕ್ಕೆ ತಾರುಣ್ಯ ಒದಗಿಸುತ್ತದೆ.

ಎಣ್ಣೆ ಚರ್ಮ, ಮೊಡವೆ ಪೀಡಿತ ಚರ್ಮ: ಜರ್ನಲ್ ಆಫ್ ಇಂಟರ್ನ್ಯಾಷನಲ್ ಸೊಸೈಟಿ ಆಫ್ ಪ್ರಿವೆಂಟಿವ್ ಮತ್ತು ಕಮ್ಯುನಿಟಿ ಡೆಂಟಿಸ್ಟ್ರಿಯಲ್ಲಿ ಪ್ರಕಟವಾದ 2017 ರ ಅಧ್ಯಯನದ ಪ್ರಕಾರ, ತೆಂಗಿನ ನೀರು ಆಂಟಿಮೈಕ್ರೊಬಿಯಲ್ ಪರಿಣಾಮವನ್ನು ಹೊಂದಿದೆ. ಹಾಗಾಗಿ ಎಳನೀರು ಸೇವನೆಯಿಂದ ಮೊಡವೆ ಕಡಿಮೆಯಾಗುತ್ತದೆ. ಎಳನೀರಿನಲ್ಲಿನ ಲಾರಿಕ್‌ ಆಮ್ಲವು ಸಂಭಾವ್ಯ ಉರಿಯೂತದ ಲಕ್ಷಣಗಳನ್ನು ಹೊಂದಿದೆ. ಇದು ಚರ್ಮದ ಕಿರಿಕಿರಿ ಹಾಗೂ ಚರ್ಮ ಬಿರುಕು ಉಂಟಾಗುವುದನ್ನು ತಡೆಯುತ್ತದೆ. ಎಣ್ಣೆಚರ್ಮ ಹಾಗೂ ಮೊಡವೆ ಪೀಡಿತ ಚರ್ಮಕ್ಕಾಗಿ ಎಳನೀರು ಸೇವನೆ ಉತ್ತಮ ಎಂದು ಡಾ. ಮೌನಿಕ ಹೇಳುತ್ತಾರೆ.

ಸನ್‌ಬರ್ನ್‌ ನಿವಾರಣೆಗೂ ಒಳನೀರು ಉತ್ತಮ: ಸೂರ್ಯನ ಬೆಳಕಿಗೆ ಹೆಚ್ಚು ಒಡ್ಡಿಕೊಳ್ಳುವುದು ಸನ್‌ಬರ್ನ್‌ ಉಂಟಾಗಲು ಕಾರಣವಾಗಬಹುದು. ಇದು ಕಪ್ಪು ಕಲೆ ಹಾಗೂ ಸುಕ್ಕಿನಂತರ ಸಮಸ್ಯೆಗಳನ್ನು ಹೆಚ್ಚಿಸಬಹುದು. ಎಳನೀರು ಸೇವಿಸುವುದರಿಂದ ದೇಹ ತಂಪಾಗುತ್ತದೆ. ಇದರಲ್ಲಿ ಹೈಡ್ರೇಟ್‌ ಗುಣಗಳಿದ್ದು ಇದು ಬಿಸಿಲಿನ ಬೇಗೆಯನ್ನು ಪರಿಹರಿಸುತ್ತದೆ.

ಚರ್ಮದ ಆರೋಗ್ಯಕ್ಕೆ ಎಳನೀರು ಕುಡಿಯುವುದು ಉತ್ತಮವೇ ಅಥವಾ ಹಚ್ಚಿಕೊಳ್ಳುವುದು ಉತ್ತಮವೇ?

ಚರ್ಮಕ್ಕೆ ಎಳನೀರಿನಿಂದ ಪರಿಣಾಮಕಾರಿ ಪ್ರಯೋಜನ ಸಿಗಬೇಕು ಎಂದರೆ ಎಳನೀರು ಕುಡಿಯುವುದು ಉತ್ತಮವೇ ಅಥವಾ ಫೇಸ್‌ಮಾಸ್ಕ್‌, ಫೇಸ್‌ಸ್ಕ್ರಬ್‌ ರೀತಿ ಬಳಸುವುದು ಉತ್ತಮವೇ ಎಂಬ ಪ್ರಶ್ನೆ ನಿಮ್ಮಲ್ಲೂ ಇರಬಹುದು. ಈ ಪ್ರಶ್ನೆಗೆ ತಜ್ಞರ ಉತ್ತರ ಇಲ್ಲಿದೆ.

ಎಳನೀರು ಕುಡಿಯುವ ಪ್ರಯೋಜನ

ನಾವು ಸೇವಿಸಿದ ಆಹಾರ ಹಾಗೂ ಪಾನೀಯಗಳಿಂದ ಪೋಷಕಾಂಶಗಳನ್ನು ಪರಿಣಾಮಕಾರಿಯಾಗಿ ಹೀರಿಕೊಳ್ಳಲು ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ರಚಿಸಲಾಗಿದೆ. ಎಳನೀರು ಕುಡಿಯುವುದರಿಂದ ಒಟ್ಟಾರೆ ದೇಹದ ಆರೋಗ್ಯ ಸುಧಾರಿಸುತ್ತದೆ. ಇದರಿಂದ ಎಳನೀರಿನಲ್ಲಿರುವ ಎಲೆಕ್ಟ್ರೋಲೈಟ್‌ಗಳು, ವಿಟಮಿನ್‌ಗಳು ಹಾಗೂ ಖನಿಜಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತದೆ.

ಹೈಡ್ರೇಷನ್‌: ನಿರ್ಜಲೀಕರಣವು ಚರ್ಮದ ಆರೋಗ್ಯದ ಮೇಲೆ ಗಮನಾರ್ಹ ಕಾಳಜಿಯನ್ನು ನೀಡುತ್ತದೆ. ಎಳನೀರ ಸೇವನೆಯು ಆಂತರಿಕವಾಗಿ ಪರಿಣಾಮಕಾರಿಯಾಗಿ ಹೈಡ್ರೀಕರಣಿಸುತ್ತದೆ. ಇದು ಚರ್ಮದಲ್ಲಿ ತೇವಾಂಶವನ್ನು ಹೆಚ್ಚಿಸುತ್ತದೆ. ದೇಹವನ್ನು ಹೈಡ್ರೇಟ್‌ ಮಾಡುವ ಜೊತೆಗ ಚರ್ಮದ ಆರೋಗ್ಯಕ್ಕೂ ಉತ್ತಮ.

ಎಳನೀರನ್ನು ತ್ವಚೆಗೆ ಹೇಗೆ ಬಳಸಬಹುದು

ಎಳನೀರು ಸೇವನೆಯ ಜೊತೆಗೆ ಇದನ್ನು ಇತರ ಮಾರ್ಗಗಳ ಮೂಲಕವೂ ಬಳಸಬಹುದು. ಆ ಮೂಲಕ ಚರ್ಮದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು.

ಫೇಶಿಯಲ್‌ ಟೋನರ್‌: ತಾಜಾ ಎಳನೀರನ್ನು ನೈಸರ್ಗಿಕ ಟೋನರ್‌ ರೂಪದಲ್ಲೂ ಬಳಸಬಹುದು. ಇದು ಚರ್ಮ ಸುಕ್ಕುಗಟ್ಟುವುದನ್ನು ತಡೆಯುತ್ತದೆ. ಎಳನೀರನ್ನು ಹತ್ತಿ ಉಂಡೆಯಲ್ಲಿ ಅದ್ದಿ ಅದರಿಂದ ತ್ವಚೆಗೆ ಚೆನ್ನಾಗಿ ಮಸಾಜ್‌ ಮಾಡಬಹುದು. ಇದು ಕ್ಲೆನ್ಸರ್‌ ರೂಪದಲ್ಲಿ ಕೆಲಸ ಮಾಡುತ್ತದೆ. ಇದು ತ್ವಚೆಯ ಅಂದ, ಆರೋಗ್ಯ ವೃದ್ಧಿಸುವ ಬೆಸ್ಟ್‌ ಟೋನರ್‌ ಎಂದರೂ ತಪ್ಪಾಗಲಿಕ್ಕಿಲ್ಲ.

ಫೇಸ್‌ಮಾಸ್ಕ್‌: ಎಳನೀರನ್ನು ಫೇಸ್‌ಮಾಸ್ಕ್‌ಗೆ ಬಳಸಬಹುದು.

ಒಣಚರ್ಮದವರು ಬೆಣ್ಣೆಹಣ್ಣು ಹಾಗೂ ಜೇನುತುಪ್ಪ ಮಿಶ್ರಣದೊಂದಿಗೆ ಮಾಸ್ಕ್‌ ತಯಾರಿಸಬಹುದು.

ಎಣ್ಣೆಚರ್ಮದವರು ಮುಲ್ತಾನಿಮಿಟ್ಟಿಯೊಂದಿಗೆ ಎಳನೀರು ಮಿಶ್ರಣ ಮಾಡಿ ಮುಖಕ್ಕೆ ಹಚ್ಚಬಹುದು.

ಫೇಶಿಯಲ್‌ ಮಿಸ್ಟ್‌: ಎಳನೀರನ್ನು ಸ್ಪೆ ಬಾಟಲಿಗೆ ಹಾಕಿ ಅದನ್ನು ಮುಖಕ್ಕೆ ಸಿಂಪಡಿಸಬಹುದು. ಇದರಿಂದ ತ್ವಚೆಯು ಬೇಗ ಹೈಡ್ರೇಟ್‌ ಆಗುತ್ತದೆ. ಬೇಸಿಗೆಯಲ್ಲಿ ಚರ್ಮ ರಿಫ್ರೆಶ್‌ ಆಗಲು ಇದು ಬೆಸ್ಟ್‌.

ಐಸ್‌ ಕ್ಯೂಬ್‌: ಎಳನೀರನ್ನು ಫ್ರಿಜ್‌ನಲ್ಲಿಟ್ಟು ಐಸ್‌ಕ್ಯೂಬ್‌ ತಯಾರಿಸಿ. ಇದರಿಂದ ಮುಖವನ್ನು ಚೆನ್ನಾಗಿ ಮಸಾಜ್‌ ಮಾಡಿ. ಇದರಿಂದ ಚರ್ಮಕ್ಕೆ ಸಾಕಷ್ಟು ಪ್ರಯೋಜನಗಳಿವೆ.

ಸ್ಕ್ರಬ್‌: ಎಳನೀರನ್ನು ಸಕ್ಕರೆ ಹಾಗೂ ಕಾಫಿ ಪೌಡರ್‌ ಜೊತೆ ಮಿಶ್ರಣ ಮಾಡಿ ಅದನ್ನು ಸ್ಕ್ರಬ್‌ ರೀತಿ ಮುಖ ಹಚ್ಚಬಹುದು. ಇದರಿಂದ ನಿರ್ಜೀವ ಕೋಶಗಳನ್ನು ತೊಡೆದುಹಾಕಿ, ಚರ್ಮದ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು.

ಚರ್ಮದ ಮೇಲೆ ಎಳನೀರಿನ ಅಡ್ಡಪರಿಣಾಮಗಳು

ಎಳನೀರಿನಿಂದ ಚರ್ಮದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಆದರೂ ಕೆಲವರಿಗೆ ಇದು ಅಲರ್ಜಿ ಉಂಟು ಮಾಡಬಹುದು.

* ಎಳನೀರಿನ ಅಲರ್ಜಿ ಇರುವವರು ಇದರ ಸೇವನೆಯಿಂದ ಸಮಸ್ಯೆಗಳನ್ನು ಎದುರಿಸಬಹುದು. ಊತ ಅಥವಾ ಉಸಿರಾಟದ ತೊಂದರೆಗಳನ್ನು ಎದುರಿಸಬಹುದು.

* ಅತಿಯಾದ ಬಳಕೆ ಅಥವಾ ಕಾಮೆಡೋಜೆನಿಕ್ ಪದಾರ್ಥಗಳೊಂದಿಗೆ ಮಿಶ್ರಣವು ರಂಧ್ರಗಳ ಅಡಚಣೆಗೆ ಕಾರಣವಾಗಬಹುದು.

* ಕೆಲವೊಮ್ಮೆ ಮುಖಕ್ಕೆ ಎಳನೀರು ಬಳಸುವುದು ತುರಿಕೆ, ಕಿರಿಕಿರಿಗೂ ಕಾರಣವಾಗಬಹುದು.

* ಎಳನೀರಿನಲ್ಲಿರುವ ನೈಸರ್ಗಿಕ ಅಂಶಗಳು ಸೂರ್ಯನ ಕಿರಣಗಳ ಸೂಕ್ಷ್ಮತೆಯನ್ನು ಹೆಚ್ಚಿಸಬಹುದು.

* ಚರ್ಮದ ರೋಗದ ಸಮಸ್ಯೆ ಇರುವವರು ಎಳನೀರು ಬಳಕೆಗೂ ಮುನ್ನ ವೈದ್ಯರಿಂದ ಸಲಹೆ ಪಡೆಯುವುದು ಉತ್ತಮ.