Skin Fasting: ಏನಿದು ಸ್ಕಿನ್ ಫಾಸ್ಟಿಂಗ್, ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆದ ಈ ಸೌಂದರ್ಯ ರಹಸ್ಯದ ಗುಟ್ಟೇನು? ವಿವರ
ಸ್ಕಿನ್ ಫಾಸ್ಟಿಂಗ್ ಟ್ರೆಂಡ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಸ್ಕಿನ್ ಫಾಸ್ಟಿಂಗ್ ಅಂದ್ರೇನು? ಈ ವಿಷಯ ಟ್ರೆಂಡ್ ಯಾಕಾಗ್ತಿದೆ? ಚರ್ಮದ ಉಪವಾಸ ಮಾಡುವುದರಿಂದ ಆಗುವ ಪ್ರಯೋಜನಗಳೇನು, ಇದು ನಿಜಕ್ಕೂ ಅವಶ್ಯವೇ? ಈ ಕುರಿತ ವಿವರ ಇಲ್ಲಿದೆ.
ಸ್ಕಿನ್ ಫಾಸ್ಟಿಂಗ್ ಎಂಬ ಚರ್ಮದ ಕಾಳಜಿಯ ಕುರಿತ ಟ್ರೆಂಡ್ ಒಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಇನ್‌ಸ್ಟಾಗ್ರಾಂ, ಟ್ವಿಟರ್‌ನಂತಹ ಸಾಮಾಜಿಕ ಜಾಲಾತಾಣಗಳ ವೇದಿಕೆಗಳಲ್ಲಿ ಬ್ಯೂಟಿ ಇನ್ಲ್ಫೂಯೆನ್ಸರ್‌ಗಳು, ಬ್ಲಾಗರ್‌ಗಳು ಇದರ ಹ್ಯಾಷ್‌ಟ್ಯಾಗ್ ಬಳಕೆ ಮಾಡುವ ಮೂಲಕ ಈ ಟ್ರೆಂಡ್ ಸಂಚಲನ ಸೃಷ್ಟಿಸುವಂತೆ ಮಾಡಿದ್ದಾರೆ. ಹಾಗಾದ್ರೆ ಈ ಸ್ಕಿನ್ ಫಾಸ್ಟಿಂಗ್ ಎಂದರೇನು? ಇದು ಚರ್ಮದ ಹೊಳಪು ಹಾಗೂ ವಿನ್ಯಾಸವನ್ನು ವೃದ್ಧಿಗೊಳಿಸುವುದೇ, ಇದರಿಂದ ಚರ್ಮಕ್ಕೆ ಉಪಯೋಗವಿದೆಯೇ ಅಥವಾ ಇದು ಅಪಾಯವೇ? ಇದರಿಂದ ಆಗುವ ಉಪಯೋಗವಾದ್ರು ಏನು? ಇದು ನಿಜಕ್ಕೂ ಚರ್ಮಕ್ಕೆ ಅವಶ್ಯವೇ? ಇಂತಹ ನೂರಾರು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ ಸೌಂದರ್ಯದ ಬಗ್ಗೆ ಆಸಕ್ತರಾಗಿರುವ ಮಹಿಳಾಮಣಿಗಳು. ಅಲ್ಲದೆ ಈ ಟ್ರೆಂಡ್ ಅನ್ನು ಫಾಲೋ ಮಾಡಬೇಕೆ, ಬೇಡವೇ ಎಂಬ ಗೊಂದಲವೂ ಕೂಡ ಹಲವರಲ್ಲಿದೆ. ಈ ಎಲ್ಲಾ ಗೊಂದಲಗಳಿಗೆ ಈ ಲೇಖನದಲ್ಲಿದೆ ಪರಿಹಾರ ಹಾಗೂ ಉತ್ತರ.
ಸ್ಕಿನ್ ಫಾಸ್ಟಿಂಗ್ ಎಂದರೇನು?
ಯಾವುದೇ ಹೊಸ ಸೌಂದರ್ಯ ಉತ್ಪನ್ನ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ತಕ್ಷಣ ಇದರ ತಯಾರಿಕಾ ಕಂಪನಿ ಇದು ಯಾವ ಕಾರಣಕ್ಕೆ ಉತ್ತಮ, ಇದು ಚರ್ಮ ಯಾವ ಸಮಸ್ಯೆಯ ನಿವಾರಣೆಗೆ ಪರಿಣಾಮ ಎಂಬುದನ್ನು ತಿಳಿಸುವ ಮೂಲಕ ಗ್ರಾಹಕರ ಮನವೊಲಿಸುತ್ತದೆ. ಆದರೆ ಈ ಸ್ಕಿನ್ ಫಾಸ್ಟಿಂಗ್ ಇದಕ್ಕೆ ವಿರುದ್ಧವಾದದ್ದು. ಅಲ್ಲದೆ ತಜ್ಞರ ಪ್ರಕಾರ ಇದು ಶೇ 100 ರಷ್ಟು ಪರಿಣಾಮಕಾರಿ ಕೂಡ ಹೌದು. ಸ್ಕಿನ್ ಫಾಸ್ಟಿಂಗ್ ಎಂದರೆ ಎಲ್ಲಾ ಸೌಂದರ್ಯ ಉತ್ಪನ್ನಗಳಿಂದ ಚರ್ಮಕ್ಕೆ ವಿರಾಮ ನೀಡುವುದು.
ಸ್ಕಿನ್ ಫಾಸ್ಟಿಂಗ್ ಕಾಮನ್ ಅದ್ರಲ್ಲೇನಿದೆ ವಿಶೇಷ ಅಂತ ನೀವು ಅಂದ್ಕೋಬೋದು. ಆದರೆ ಖಂಡಿತ ಇದರಿಂದ ಚರ್ಮಕ್ಕೆ ಹಲವು ಪ್ರಯೋಜನಗಳಿವೆ. ಇದು ಚರ್ಮವನ್ನು ಮರುಹೊಂದಿಸಲು ಹಾಗೂ ಮರು ಸಮತೋಲನಗೊಳಿಸಲು ಸ್ವಲ್ಪ ಸಮಯ ನೀಡುತ್ತದೆ. ಚರ್ಮಕ್ಕೆ ವಿರಾಮ ನೀಡುವುದರಿಂದ ಒಟ್ಟಾರೆ ಚರ್ಮದ ಆರೋಗ್ಯ ಸುಧಾರಣೆಗೆ ಸಹಕಾರಿ ಎಂದು ತಜ್ಞರು ಸಲಹೆ ನೀಡುತ್ತಾರೆ.
ನಿರ್ದಿಷ್ಟ ಸಮಯದವರೆಗೆ ಅಂದರೆ ಕೆಲವು ದಿನಗಳಿಂದ ಕೆಲವು ವಾರಗಳವರೆಗೆ ಚರ್ಮದ ಉಪವಾಸ ಮಾಡುವುದು ಉತ್ತಮ. ಇದರ ಅರ್ಧ ತ್ವಚೆಯ ಅಂದ ಹೆಚ್ಚಿಸುವ ವಿಧಾನಗಳಾದ ಕೆನ್ಸರ್, ಟೋನರ್, ಸೀರಮ್, ಎಕ್ಸ್‌ಫೋಲಿಯಂಟ್‌ಗಳ ಬಳಕೆಯನ್ನು ಒಂದಿಷ್ಟು ದಿನಗಳ ಕಾಲ ನಿಲ್ಲಿಸುವುದು. ಈ ಅವಧಿಯಲ್ಲಿ ಚರ್ಮವು ನಿರಾಳವಾಗಿ ಉಸಿರಾಡುವಂತಾಗುತ್ತದೆ.
ಸ್ಕಿನ್ ಫಾಸ್ಟಿಂಗ್‌ನಿಂದಾಗುವ ಉಪಯೋಗಗಳೇನು?
* ಇದು ಚರ್ಮಕ್ಕೆ ಉಸಿರಾಡಲು ಸಹಾಯ ಮಾಡುತ್ತದೆ. ಚರ್ಮದ ಕೋಶಗಳು ಮರು ಹೊಂದಿಕೊಳ್ಳಲು ನೆರವಾಗುತ್ತದೆ. ಅಲ್ಲದೆ ಪುನರುಜ್ಜೀವನಗೊಳ್ಳುತ್ತವೆ.
* ಚರ್ಮದ ಗುಣಪಡಿಸುವಿಕೆಯನ್ನು ಸುಗಮಗೊಳಿಸುತ್ತದೆ. ಪ್ರತಿನಿತ್ಯ ಬಳಸುವ ಉತ್ಪನ್ನಗಳಿಂದ ಚರ್ಮವು ತನ್ನ ನೈಜ ಸ್ವಭಾವನ್ನು ಕಳೆದುಕೊಂಡಿರುತ್ತೆ. ಚರ್ಮಕ್ಕೆ ಉಪವಾಸ ಮಾಡುವುದರಿಂದ ಚರ್ಮ ಸ್ವಭಾವ ಮರಳಲು ಸಹಾಯ ಮಾಡಿದಂತಾಗುತ್ತದೆ.
* ಚರ್ಮದ ಲಿಪಿಡ್ ತಡೆಗೋಡೆಯನ್ನು ಪುನಃಸ್ಥಾಪಿಸಲು ಸ್ಕಿನ್ ಫಾಸ್ಟಿಂಗ್ ಸಹಾಯ ಮಾಡುತ್ತದೆ.
* ನೈಸರ್ಗಿಕ ಮಾಯಿಶ್ಚರೈಸರಿಂಗ್ ಅಂಶ ಉಳಿಯಲು ಸಹಾಯ ಮಾಡುತ್ತದೆ.
* ಹಂತ ಹಂತವಾಗಿ ಚರ್ಮದ ಹಲವು ಸಮಸ್ಯೆಗಳು ನಿವಾರಣೆಯಾಗುತ್ತವೆ.
ವಿಭಾಗ