ಬಿಸಿಲಿನ ತಾಪದಿಂದ ಸನ್‌ಟ್ಯಾನ್‌ ಆಗಿ ತ್ವಚೆಯ ಅಂದ ಕೆಟ್ಟಿದ್ರೆ ಮನೆಯಲ್ಲೇ ಈ ಕ್ರೀಮ್ ತಯಾರಿಸಿ ಬಳಸಿ, ಸೌಂದರ್ಯ ದುಪ್ಪಟ್ಟಾಗುತ್ತೆ
ಕನ್ನಡ ಸುದ್ದಿ  /  ಜೀವನಶೈಲಿ  /  ಬಿಸಿಲಿನ ತಾಪದಿಂದ ಸನ್‌ಟ್ಯಾನ್‌ ಆಗಿ ತ್ವಚೆಯ ಅಂದ ಕೆಟ್ಟಿದ್ರೆ ಮನೆಯಲ್ಲೇ ಈ ಕ್ರೀಮ್ ತಯಾರಿಸಿ ಬಳಸಿ, ಸೌಂದರ್ಯ ದುಪ್ಪಟ್ಟಾಗುತ್ತೆ

ಬಿಸಿಲಿನ ತಾಪದಿಂದ ಸನ್‌ಟ್ಯಾನ್‌ ಆಗಿ ತ್ವಚೆಯ ಅಂದ ಕೆಟ್ಟಿದ್ರೆ ಮನೆಯಲ್ಲೇ ಈ ಕ್ರೀಮ್ ತಯಾರಿಸಿ ಬಳಸಿ, ಸೌಂದರ್ಯ ದುಪ್ಪಟ್ಟಾಗುತ್ತೆ

ಬೇಸಿಗೆಯಲ್ಲಿ ಸೂರ್ಯನ ಅತಿನೇರಳೆ ಕಿರಣಗಳು, ಬೆವರು, ಧೂಳಿನಿಂದಾಗಿ ಚರ್ಮದ ಅಂದ ಹಾಳಾಗುವುದು ಖಂಡಿತ. ಅದರಲ್ಲೂ ಸನ್‌ಟ್ಯಾನ್ ಸಮಸ್ಯೆ ಹಲವರನ್ನು ಕಾಡುತ್ತದೆ. ಇದರ ನಿವಾರಣೆಗೆ ಅಡುಗೆಮನೆಯಲ್ಲಿರುವ ಈ ವಸ್ತುವಿನಿಂದ ಕ್ರೀಮ್ ತಯಾರಿಸಿ ಬಳಸಬೇಕು.

ಬಿಸಿಲಿನ ತಾಪದಿಂದ ಸನ್‌ಟ್ಯಾನ್‌ ಆಗಿ ತ್ವಚೆಯ ಅಂದ ಕೆಟ್ಟಿದ್ರೆ ಮನೆಯಲ್ಲೇ ಈ ಕ್ರೀಮ್ ತಯಾರಿಸಿ ಬಳಸಿ, ಸೌಂದರ್ಯ ದುಪ್ಪಟ್ಟಾಗುತ್ತೆ
ಬಿಸಿಲಿನ ತಾಪದಿಂದ ಸನ್‌ಟ್ಯಾನ್‌ ಆಗಿ ತ್ವಚೆಯ ಅಂದ ಕೆಟ್ಟಿದ್ರೆ ಮನೆಯಲ್ಲೇ ಈ ಕ್ರೀಮ್ ತಯಾರಿಸಿ ಬಳಸಿ, ಸೌಂದರ್ಯ ದುಪ್ಪಟ್ಟಾಗುತ್ತೆ

ಬೇಸಿಗೆಯಲ್ಲಿ ಅತಿಯಾದ ಸೂರ್ಯನ ಶಾಖದಿಂದಾಗಿ ಚರ್ಮದ ಅಂದ ಕೆಡುತ್ತದೆ. ಸನ್‌ಟ್ಯಾನ್‌ನಿಂದಾಗಿ ಚರ್ಮವು ಕಳೆಗುಂದುತ್ತದೆ. ಚರ್ಮದ ಬಣ್ಣ ನಿಧಾನಕ್ಕೆ ಮಾಸಿದಂತಾಗುತ್ತದೆ. ಇದರಿಂದ ನಿಮ್ಮ ಸೌಂದರ್ಯವನ್ನು ಮರಳಿ ಪಡೆಯುವುದು ಕಷ್ಟ ಎನ್ನಿಸಬಹುದು.

ಕೆಲವರು ಸನ್‌ಟ್ಯಾನ್ ನಿವಾರಣೆಗೆ ದುಬಾರಿ ಉತ್ಪನ್ನಗಳ ಮೊರೆ ಹೋಗುತ್ತಾರೆ. ಆದರೆ ಇದ್ಯಾವುದೂ ಬೇಡ, ಅಡುಗೆಮನೆಯಲ್ಲಿ ಸಿಗುವ ಈ ಒಂದೇ ಒಂದು ವಸ್ತು ಇದ್ದರೆ ಸಾಕು. ಯಾವುದು ಆ ವಸ್ತು ಅಂತೀರಾ, ಅದುವೆ ಆಲೂಗೆಡ್ಡೆ. ಇದರಿಂದ ತಯಾರಿಸಿದ ಕ್ರೀಮ್‌ ಬಿಸಿಲಿನ ಕಾರಣದಿಂದ ಅಂದಗೆಟ್ಟ ಚರ್ಮವನ್ನು ದುಪ್ಪಟ್ಟು ಸುಂದರವಾಗಿಸುತ್ತೆ.

ಬಿಸಿಲಿನ ದಿನಗಳಲ್ಲಿ ಮನೆಯಿಂದ ಹೊರಗೆ ಹೋಗುವಾಗ ಪ್ರತಿದಿನ ಸನ್‌ಸ್ಕ್ರೀನ್ ಲೋಷನ್ ಹಚ್ಚಿ, ಮುಖಕ್ಕೆ ಸ್ಕಾರ್ಫ್ ಕಟ್ಟಿಕೊಂಡು ಹೋದರೂ ಕೂಡ ಧೂಳು, ಕೊಳಕು ಮತ್ತು ಬೆವರು ಮುಖದ ಹೊಳಪನ್ನು ಕಸಿದುಕೊಳ್ಳಬಹುದು. ಆ ಸಂದರ್ಭದಲ್ಲಿ ಮುಖದ ಟ್ಯಾನ್ ನಿವಾರಿಸುವ ಕ್ರೀಮ್ ಬಳಸಬೇಕು. ಟ್ಯಾನ್ ನಿವಾರಿಸುವ ಕ್ರೀಮ್ ಅನ್ನು ಈ ಆಲೂಗೆಡ್ಡೆಯಿಂದ ತಯಾರಿಸಬಹುದು. ಆಲೂಗೆಡ್ಡೆ ಕ್ರೀಮ್ ತಯಾರಿಸಿ ಫ್ರಿಜ್‌ನಲ್ಲಿಟ್ಟು ವಾರಕ್ಕೆ 3 ರಿಂದ 4 ಬಾರಿ ಬಳಸಬಹುದು. ಇದರಿಂದ ಟ್ಯಾನ್ ಸಂಪೂರ್ಣವಾಗಿ ನಿವಾರಣೆಯಾಗಿ ಹೊಳಪು ಹೆಚ್ಚುತ್ತದೆ.

ಅತ್ಯಂತ ಮುಖ್ಯವಾದ ವಿಷಯವೆಂದರೆ ನೀವು ಈ ಕ್ರೀಮ್ ಅನ್ನು ನಿಯಮಿತವಾಗಿ ಹಚ್ಚುವ ಅಭ್ಯಾಸವನ್ನು ಮಾಡಿಕೊಂಡರೆ, ಸ್ವಲ್ಪ ಸಮಯದ ನಂತರ ನಿಮ್ಮ ಮುಖದಲ್ಲಿ ಉಂಟಾಗುವ ಬದಲಾವಣೆಗಳನ್ನು ನೀವೇ ಗುರುತಿಸುತ್ತೀರಿ. ಈ ಕ್ರೀಮ್‌ ಅನ್ನು ಕೇವಲ ಮುಖಕ್ಕೆ ಮಾತ್ರವಲ್ಲ, ಕೈ ಕಾಲುಗಳ ಟ್ಯಾನಿಂಗ್ ನಿವಾರಣೆಗೂ ಬಳಸಬಹುದು. ಹಾಗಾದರೆ DIY ಆಲೂಗಡ್ಡೆ ಕ್ರೀಮ್ ಅನ್ನು ಹೇಗೆ ತಯಾರಿಸೋದು ಎಂಬುದನ್ನು ನೋಡೋಣ.

ಆಲೂಗಡ್ಡೆ ಕ್ರೀಮ್ ತಯಾರಿಸುವುದು

ಮೊದಲು ಹಸಿ ಆಲೂಗಡ್ಡೆಯನ್ನು ಸಿಪ್ಪೆ ತೆಗೆದು ನುಣ್ಣಗೆ ತುರಿದುಕೊಳ್ಳಿ. ಸ್ಟ್ರೈನರ್ ಅಥವಾ ನಿಮ್ಮ ಕೈಗಳ ಸಹಾಯದಿಂದ, ಅದರ ರಸವನ್ನು ಒಂದು ಬಟ್ಟಲಿಗೆ ತೆಗೆದುಕೊಳ್ಳಿ. ಈಗ ಈ ಆಲೂಗಡ್ಡೆ ರಸಕ್ಕೆ ಮೂರರಿಂದ ನಾಲ್ಕು ಹನಿ ನಿಂಬೆ ರಸವನ್ನು ಸೇರಿಸಿ.

ಜೊತೆಗೆ ಅಲೋವೆರಾ ಜೆಲ್ ಅಥವಾ ವಿಟಮಿನ್ ಇ ಕ್ಯಾಪ್ಸುಲ್ ಅನ್ನು ಒಡೆದು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಅದಕ್ಕೆ ಸ್ವಲ್ಪ ಕಾಫಿ ಪುಡಿ ಸೇರಿಸಿ ಎಲ್ಲವನ್ನೂ ಮಿಶ್ರಣ ಮಾಡಿ ದಪ್ಪ ಪೇಸ್ಟ್ ತಯಾರಿಸಿ. ಈಗ ದಪ್ಪ ಪೇಸ್ಟ್ ಅನ್ನು ತೆಳುಗೊಳಿಸಲು ಸ್ವಲ್ಪ ರೋಸ್ ವಾಟರ್ ಸೇರಿಸಿ. ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಟ್ಯಾನ್ ಆಗಿರುವ ಮುಖ, ಕತ್ತು, ಕೈ, ಕಾಲಿನ ಭಾಗಕ್ಕೆ ಹಚ್ಚಿ. 20 ನಿಮಿಷಗಳ ನಂತರ ನೀರಿನಿಂದ ತೊಳೆಯಿರಿ.

ವಾರಕ್ಕೆ ಮೂರರಿಂದ ನಾಲ್ಕು ಬಾರಿ ಇದನ್ನು ಹಚ್ಚುವುದರಿಂದ ಮುಖವು ನೈಸರ್ಗಿಕ ಹೊಳಪನ್ನು ಕಾಪಾಡಿಕೊಳ್ಳುತ್ತದೆ. ಟ್ಯಾನಿಂಗ್ ಕಡಿಮೆಯಾಗುತ್ತದೆ.

ಆಲೂಗಡ್ಡೆ ಮತ್ತು ನಿಂಬೆಹಣ್ಣುಗಳು ನೈಸರ್ಗಿಕ ಬ್ಲೀಚಿಂಗ್ ಗುಣಗಳನ್ನು ಹೊಂದಿದ್ದು, ಚರ್ಮದ ಮೇಲೆ ಸಂಗ್ರಹವಾದ ಕೊಳೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಅದೇ ಸಮಯದಲ್ಲಿ, ಅಲೋವೆರಾ ಜೆಲ್ ಮತ್ತು ರೋಸ್ ವಾಟರ್ ಸಹಾಯದಿಂದ ಎಣ್ಣೆ ಉತ್ಪಾದನೆ ಕಡಿಮೆಯಾಗುತ್ತದೆ. ಆದ್ದರಿಂದ, ಈ DIY ಕ್ರೀಮ್ ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡಲು ಸಹಾಯ ಮಾಡುತ್ತದೆ. ಇಲ್ಲಿ ಉಲ್ಲೇಖಿಸಲಾದ ಆಲೂಗಡ್ಡೆ ಕ್ರೀಮ್ ತಯಾರಿಸುವುದು ಸುಲಭ, ಇದನ್ನು ತಯಾರಿಸಲು ಖರ್ಚು ಕೂಡ ಕಡಿಮೆ.

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.