ಕನ್ನಡ ಸುದ್ದಿ  /  ಜೀವನಶೈಲಿ  /  Hair Care Tips: ರೇಷ್ಮೆಯಂತೆ ಹೊಳೆವ, ದಟ್ಟ ಕೂದಲು ನಿಮ್ಮದಾಗಬೇಕು ಎಂದರೆ ಈ ಸರಳ ಟಿಪ್ಸ್‌ಗಳನ್ನು ಪಾಲಿಸಿ; ಕೂದಲಿನ ಆರೋಗ್ಯ ಕಾಪಾಡಿಕೊಳ್ಳಿ

Hair Care Tips: ರೇಷ್ಮೆಯಂತೆ ಹೊಳೆವ, ದಟ್ಟ ಕೂದಲು ನಿಮ್ಮದಾಗಬೇಕು ಎಂದರೆ ಈ ಸರಳ ಟಿಪ್ಸ್‌ಗಳನ್ನು ಪಾಲಿಸಿ; ಕೂದಲಿನ ಆರೋಗ್ಯ ಕಾಪಾಡಿಕೊಳ್ಳಿ

Hair Care Tips: ಅತಿಯಾಗಿ ಕೂದಲು ಉದುರುವುದು, ತಲೆಹೊಟ್ಟಿನ ಸಮಸ್ಯೆ ಇತ್ತೀಚಿಗೆ ಹೆಚ್ಚುತ್ತಿದೆ. ಇದಕ್ಕೆ ಪರಿಹಾರವಿಲ್ಲ ಎಂದೇನಿಲ್ಲ. ಈ ಸಮಸ್ಯೆಗಳ ನಿವಾರಣೆಗೆ ತಜ್ಞರು ಕೆಲವೊಂದು ಪರಿಹಾರಗಳನ್ನು ಸೂಚಿಸುತ್ತಾರೆ. ಅವುಗಳನ್ನು ತಪ್ಪದೇ ಪಾಲಿಸುವುದರಿಂದ ಕೂದಲಿನ ಅಂದ, ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು.

ರೇಷ್ಮೆಯಂತೆ ಹೊಳೆವ, ದಟ್ಟ ಕೂದಲು ನಿಮ್ಮದಾಗಬೇಕು ಎಂದರೆ ಈ ಸರಳ ಟಿಪ್ಸ್‌ಗಳನ್ನು ಪಾಲಿಸಿ
ರೇಷ್ಮೆಯಂತೆ ಹೊಳೆವ, ದಟ್ಟ ಕೂದಲು ನಿಮ್ಮದಾಗಬೇಕು ಎಂದರೆ ಈ ಸರಳ ಟಿಪ್ಸ್‌ಗಳನ್ನು ಪಾಲಿಸಿ

ಸೌಂದರ್ಯಪ್ರಜ್ಞೆ ಹೊಂದಿರುವ ಹಲವರನ್ನು ಇತ್ತೀಚೆಗೆ ಕಾಡುತ್ತಿರುವುದು ಕೂದಲಿನ ಸಮಸ್ಯೆ. ಕಲುಷಿತ ನೀರು, ವಾತಾವರಣ, ರಾಸಾಯನಿಕ ಅಂಶಗಳುಳ್ಳ ಸೌಂದರ್ಯ ಪರಿಕರಗಳು ಕೂದಲಿನ ಅಂದ ಹಾಗೂ ಆರೋಗ್ಯ ಕೆಡಿಸುತ್ತಿರುವುದು ಸುಳ್ಳಲ್ಲ. ಇದರೊಂದಿಗೆ ಅತಿಯಾಗಿ ಕೂದಲು ಉದುರುವುದು, ತಲೆಹೊಟ್ಟಿನ ಸಮಸ್ಯೆಯೂ ಹೆಚ್ಚುತ್ತಿದೆ. ಇದಕ್ಕೆ ಪರಿಹಾರವಿಲ್ಲ ಎಂದೇನಿಲ್ಲ. ಈ ಸಮಸ್ಯೆಗಳ ನಿವಾರಣೆಗೆ ತಜ್ಞರು ಕೆಲವೊಂದು ಪರಿಹಾರಗಳನ್ನು ಸೂಚಿಸುತ್ತಾರೆ. ಅವುಗಳನ್ನು ತಪ್ಪದೇ ಪಾಲಿಸುವುದರಿಂದ ಕೂದಲಿನ ಅಂದ, ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು.

ಟ್ರೆಂಡಿಂಗ್​ ಸುದ್ದಿ

ಕೆಲವೊಮ್ಮೆ ನಾವು ಬಳಸುವ ಬಾಚಣಿಗೆ ಮತ್ತು ಬ್ರಷ್‌ ಕೂಡ ಕೂದಲ ಹಾನಿಗೆ ಕಾರಣವಾಗಬಹುದು. ಕೆಲವು ಬಾಚಣಿಗೆಗಳು ಗಟ್ಟಿಯಾಗಿದ್ದು, ಅವು ಕೂದಲಿಗೆ ಹಾನಿ ಮಾಡಬಹುದು. ಕೆಲವೊಮ್ಮೆ ಸಿಕ್ಕು ಬಿಡಿಸುವಾಗ ಕೂದಲು ಕಿತ್ತು ಬರಬಹುದು. ಕೂದಲಿನ ತುದಿ ಸೀಳಲು ಇದು ಕಾರಣವಾಗಬಹುದು. ಹಾಗಾಗಿ ನಾವು ಉತ್ತಮ ಗುಣಮಟ್ಟದ ಬಾಚಣಿಗೆಯನ್ನು ಬಳಸುವುದು ಅವಶ್ಯ.

ತೆಂಗಿನೆಣ್ಣೆ ಹಚ್ಚಿ

ಕೂದಲಿನ ಅಂದ, ಆರೋಗ್ಯ ಕಾಪಾಡಿಕೊಳ್ಳಲು ಬಹಳ ಹಿಂದಿನಿಂದಲೂ ತೆಂಗಿನೆಣ್ಣೆ ಬಳಸುವುದು ವಾಡಿಕೆ. ಈ ತೆಂಗಿನೆಣ್ಣೆ ಕೂದಲನ್ನು ಬುಡದಿಂದಲೇ ಸದೃಢಗೊಳಿಸುತ್ತದೆ. ನಿರ್ಜೀವ ಕೂದಲುಗಳಿಗೆ ಜೀವಕಳೆ ತರಲು ಇದು ಸಹಾಯಕಾರಿ. ಕೂದಲಿಗೆ ತೆಂಗಿನೆಣ್ಣೆಯಿಂದ ಚೆನ್ನಾಗಿ ಮಸಾಜ್‌ ಮಾಡಿ ರಾತ್ರಿ ಇಡಿ ಬಿಟ್ಟು ಬೆಳಿಗ್ಗೆ ಸ್ನಾನ ಮಾಡುವುದು ಉತ್ತಮ ಪರಿಹಾರ.

ನೀವೇ ಕೂದಲ ಆರೈಕೆ ಮಾಡಿಕೊಳ್ಳಿ

ಕೂದಲಿನ ಅಂದ ಹೆಚ್ಚಿಸಿಕೊಳ್ಳಲು ಸಲೂನ್‌ಗಳಿಗೆ ಹೋಗುವುದು ವಾಡಿಕೆ. ಆದರೆ ಇದರಿಂದ ಕೂದಲಿಗೆ ಹಾನಿಯಾಗುವ ಸಾಧ್ಯತೆ ಅಧಿಕ. ಅದರ ಬದಲು ಮನೆಯಲ್ಲೇ ಹೇರ್‌ ಸ್ಟೈಲಿಂಗ್‌ ಮಾಡಿಕೊಳ್ಳಬೇಕು. ಸ್ಟ್ರೈಟ್‌ನಿಂಗ್‌ ಅಥವಾ ಹೇರ್‌ ಡ್ರೈ ಮಾಡಿಕೊಳ್ಳುವಾಗ ಕಡಿಮೆ ಶಾಖ ಇರುವಂತೆ ನೋಡಿಕೊಳ್ಳಬೇಕು. ಅತಿಯಾದ ಶಾಖವು ಕೂದಲಿಗೆ ಹಾನಿ ಮಾಡುವುದು ಖಂಡಿತ. ಇದರೊಂದಿಗೆ ಕೂದಲಿನ ಆರೈಕೆಗೆ ನೈಸರ್ಗಿಕ ಉತ್ಪನ್ನಗಳನ್ನು ಬಳಸಿ.

ಗಾಳಿಗೆ ಕೂದಲು ಒಣಗಲು ಬಿಡಿ

ಕೂದಲನ್ನು ನೈಸರ್ಗಿಕವಾಗಿ ಒಣಗಲು ಬಿಡಬೇಕು. ಗಾಳಿಯಲ್ಲಿ ಕೂದಲನ್ನು ಒಣಗಿಸುವುದು ಉತ್ತಮ ವಿಧಾನ. ಇದು ಕೂದಲನ್ನ ಪುನರುಜ್ಜೀವನಗೊಳಿಸಲು ಸಹಾಯ ಮಾಡುತ್ತದೆ. ಕೂದಲು ಒಣಗಿಸುವಾಗ ಟವಲ್‌ನಿಂದ ಗಟ್ಟಿಯಾಗಿ ಉಜ್ಜುವುದು, ಹೇರ್‌ ಡ್ರೈಯರ್‌ ಬಳಸುವುದು ಮಾಡದಿರಿ. ಇದು ಕೂದಲಿನ ಸಮಸ್ಯೆಯನ್ನು ಹೆಚ್ಚಿಸಬಹುದು. ಅಲ್ಲದೆ ಇದರಿಂದ ಕೂದಲು ಉದುರುವ ಸಾಧ್ಯತೆಯೂ ಹೆಚ್ಚು.

ಯಾಂತ್ರಿಕ ಹಾನಿಗಳಿಂದ ತಪ್ಪಿಸಿ

ಹಲವು ಕಾರಣಗಳಿಂದ ಕೂದಲು ಉದುರುವುದು ಸಾಮಾನ್ಯ. ಯಾಂತ್ರಿಕ ಕಾರಣಗಳು ಕೂದಲು ಉದುರಲು ಕಾರಣವಾಗುತ್ತವೆ. ಅಂತಹ ಹಾನಿಯಿಂದ ತಪ್ಪಿಸಿಕೊಳ್ಳುವುದು ಕಷ್ಟ. ಆದರೆ ಕೆಲವೊಂದು ಸುಲಭ ಕ್ರಮಗಳು ಕೂದಲು ಉದುರುವುದನ್ನು ತಡೆಯಲು ಸಹಾಯ ಮಾಡುತ್ತವೆ. ಕೂದಲನ್ನು ಮರೆಸಲು ಸಾಧ್ಯವಾದಷ್ಟು ತೆಳ್ಳನೆಯ ಕಾಟನ್‌ ಬಟ್ಟೆಗಳನ್ನೇ ಬಳಸಿ. ಮೈಕ್ರೊ ಫೈಬರ್‌ ಟವೆಲ್‌ಗಳನ್ನು ಸಹ ಬಳಸಬಹುದು. ಕೂದಲ ಹಾನಿಯನ್ನು ತಪ್ಪಿಸಲು ಆಗಾಗ ದಿಂಬಿನ ಕವರ್‌ಗಳನ್ನು ವಾಶ್‌ ಮಾಡುತ್ತಿರಿ. ಸ್ಯಾಟಿನ್‌ ದಿಂಬಿನ ಕವರ್‌ ಬಳಸುವುದು ಕೂಡ ಉತ್ತಮ.

ವಿಭಾಗ