ತಮನ್ನಾ ಭಾಟಿಯಾರಂತೆ ಕಾಂತಿಯುತವಾಗಿ ಚರ್ಮ ಹೊಳೆಯಬೇಕೆಂದರೆ ಈ ಫೇಸ್‍ಮಾಸ್ಕ್ ಬಳಸಿ; ಇಲ್ಲಿದೆ ನಟಿಯ ತ್ವಚೆಯ ದಿನಚರಿ
ತಮನ್ನಾ ಭಾಟಿಯಾ ಅತ್ಯಂತ ಸುಂದರವಾದ ಚರ್ಮವನ್ನು ಹೊಂದಿದ್ದಾರೆ. ಹೊಳೆಯುವ ತ್ವಚೆಗಾಗಿ ಅಡುಗೆಮನೆಯಲ್ಲಿರುವ ಕೆಲವು ಪದಾರ್ಥಗಳನ್ನು ಉಪಯೋಗಿಸಿ ಚರ್ಮದ ಆರೈಕೆ ಮಾಡಬಹುದು. ತಮನ್ನಾ ಈ ಎರಡು ಫೇಸ್‍ಮಾಸ್ಕ್ ಬಳಸುತ್ತಾರಂತೆ. ಇಲ್ಲಿದೆ ವಿವರ.

ನಟಿ ತಮನ್ನಾ ಭಾಟಿಯಾ ಹಲವರ ಹಾಟ್ ಫೇವರಿಟ್. ತಮನ್ನಾ ಭಾಟಿಯಾ ಅತ್ಯಂತ ಸುಂದರವಾದ ಚರ್ಮವನ್ನು ಹೊಂದಿದ್ದಾರೆ. ನಟಿಯ ಹೊಳೆಯುವ ಚರ್ಮ ಹಲವರನ್ನು ಆಕರ್ಷಿಸುತ್ತಿದೆ. ತನ್ನ ತ್ವಚೆಯ ಆರೈಕೆಗೆ ತಮನ್ನಾ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ. ಅಡುಗೆ ಮನೆಯಲ್ಲೇ ಇರುವ ಕೆಲವು ಪದಾರ್ಥಗಳನ್ನು ಉಪಯೋಗಿಸಿ ತ್ವಚೆಯ ಕಾಳಜಿ ವಹಿಸುತ್ತಾರೆ ನಟಿ. ತನ್ನ ತಾಯಿ ಹೇಳಿಕೊಟ್ಟ ತ್ವಚೆಯ ದಿನಚರಿಯನ್ನು ತಮನ್ನಾ ಪಾಲಿಸುತ್ತಾರಂತೆ.
ಹದಿಹರೆಯದಲ್ಲೇ ಸಿನಿಮಾಗಳಲ್ಲಿ ನಟಿಸಲು ಪ್ರಾರಂಭಿಸಿದ ತಮನ್ನಾ, ಬಾಲ್ಯದಿಂದಲೂ ಅನುಸರಿಸುತ್ತಿರುವ ಕೆಲವು ಸೌಂದರ್ಯ ರಹಸ್ಯಗಳನ್ನು ಹಂಚಿಕೊಂಡಿದ್ದಾರೆ. ನಟನಾ ವೃತ್ತಿಜೀವನವನ್ನು ಪ್ರಾರಂಭಿಸಿದಾಗ ತ್ವಚೆಯ ಆರೈಕೆಯ ಬಗ್ಗೆ ತಾಯಿ ಕಲಿಸಿದರು. ಏಕೆಂದರೆ ಪ್ರತಿದಿನ ಮೇಕಪ್ ಮತ್ತು ತನ್ನ ಕೂದಲನ್ನು ಸ್ಟೈಲ್ ಮಾಡಬೇಕಾಗಿತ್ತು. ಹೀಗಾಗಿ ದಿನಚರಿಯಲ್ಲಿ ನೈಸರ್ಗಿಕವಾದದ್ದನ್ನು ಬಳಸಬೇಕಾದುದು ಅನಿವಾರ್ಯತೆಯಾಯಿತು ಎಂದು ತಮನ್ನಾ ವಿವರಿಸಿದ್ದಾರೆ.
ನಟಿ ಫೇಸ್ ಮಾಸ್ಕ್‌ಗಳನ್ನು ಹೇಗೆ ತಯಾರಿಸುತ್ತಾರೆ ಎಂಬುದನ್ನು ತೋರಿಸಿದ್ದಾರೆ. ಕಚ್ಚಾ, ಸಾವಯವ ಪದಾರ್ಥಗಳನ್ನು ಬಳಸುವ ಮತ್ತು ನಿಮ್ಮ ಚರ್ಮದ ಪ್ರಕಾರಕ್ಕೆ ಅನುಗುಣವಾಗಿ ಫೇಸ್ ಮಾಸ್ಕ್‌ಗಳನ್ನು ಬಳಸಬೇಕು. ನೀವು ಒಣ ಚರ್ಮವನ್ನು ಹೊಂದಿದ್ದರೆ, ಮಾಸ್ಕ್‌ಗೆ ಹೆಚ್ಚು ಜೇನುತುಪ್ಪವನ್ನು ಸೇರಿಸಬೇಕು. ಏಕೆಂದರೆ ಜೇನುತುಪ್ಪವು ಚರ್ಮವನ್ನು ಹೈಡ್ರೇಟ್ ಮಾಡುತ್ತದೆ ಮತ್ತು ತೇವಾಂಶಗೊಳಿಸುತ್ತದೆ. ಇಲ್ಲಿದೆ ತಮನ್ನಾರ ಎಕ್ಸ್‌ಫೋಲಿಯೇಟಿಂಗ್ ಫೇಸ್ ಸ್ಕ್ರಬ್ ಮಾಸ್ಕ್.
ಇದನ್ನೂ ಓದಿ: ಆರೋಗ್ಯಕರ, ಹೊಳೆಯುವ ಚರ್ಮಕ್ಕೆ ಉಪಯುಕ್ತ ಈ ಚಹಾ
ಎಕ್ಸ್‌ಫೋಲಿಯೇಟಿಂಗ್ ಫೇಸ್ ಸ್ಕ್ರಬ್ ಮಾಸ್ಕ್
ಬೇಕಾಗುವ ಪದಾರ್ಥಗಳು: 1 ಚಮಚ ಶ್ರೀಗಂಧದ (ಚಂದನ) ಪುಡಿ, 1 ಚಮಚ ಕಾಫಿ ಪುಡಿ, 1 ಚಮಚ ಕಚ್ಚಾ ಜೇನುತುಪ್ಪ.
ಈ ಮೂರು ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಮುಖಕ್ಕೆ ಸ್ಕ್ರಬ್ ಮಾಡಿಕೊಂಡು ಕೆಲವು ನಿಮಿಷಗಳ ಕಾಲ ಮಸಾಜ್ ಮಾಡಿ. ಕಣ್ಣು ಮತ್ತು ಅದರ ಸುತ್ತಲಿನ ಸೂಕ್ಷ್ಮ ಪ್ರದೇಶಗಳನ್ನು ತಪ್ಪಿಸಿ. 10 ನಿಮಿಷಗಳ ನಂತರ, ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ನಂತರ ಬೆಚ್ಚಗಿನ ಬಟ್ಟೆಯಿಂದ ನಿಧಾನಕ್ಕೆ ಮುಖವನ್ನು ಒರೆಸಿ. ಈ ಮಾಸ್ಕ್ ಸತ್ತ ಚರ್ಮದ ಕೋಶಗಳನ್ನು (ಡೆಡ್ ಸ್ಕಿನ್) ತೆಗೆದುಹಾಕಲು ಸಹಾಯ ಮಾಡುತ್ತದೆ. ಇದರಿಂದ ಚರ್ಮವು ನಯವಾಗಿರುತ್ತದೆ ಮತ್ತು ಮೃದುವಾಗಿರುತ್ತದೆ.
ಮಾಯಿಶ್ಚರೈಸಿಂಗ್ ಫೇಸ್ ಮಾಸ್ಕ್
ಬೇಕಾಗುವ ಪದಾರ್ಥಗಳು: ರೋಸ್ ವಾಟರ್, ಕಡಲೆ ಹಿಟ್ಟು, ಮೊಸರು.
ಕಣ್ಣುಗಳ ಕೆಳಗಿರುವ ಭಾಗ ಸೇರಿದಂತೆ ನಿಮ್ಮ ಮುಖಕ್ಕೆ ಈ ಮಾಸ್ಕ್ ಅನ್ನು ಸಮವಾಗಿ ಹಚ್ಚಿ. ಸುಮಾರು 10 ನಿಮಿಷಗಳ ನಂತರ ಒಣಗುವವರೆಗೆ ಹಾಗೆಯೇ ಬಿಡಿ. ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಬೆಚ್ಚಗಿನ ಕಾಟನ್ ಟವೆಲ್‍ನಿಂದ ಚೆನ್ನಾಗಿ ಒರೆಸಿಕೊಳ್ಳಿ. ಈ ಮಾಸ್ಕ್ ಮುಖಕ್ಕೆ ತೇವಾಂಶವನ್ನು ನೀಡುತ್ತದೆ. ಚರ್ಮವನ್ನು ತಂಪಾಗಿಸುತ್ತದೆ ಮತ್ತು ಕೆಂಪು ಬಣ್ಣವನ್ನು ಕಡಿಮೆ ಮಾಡುತ್ತದೆ. ಎಕ್ಸ್‌ಫೋಲಿಯೇಟಿಂಗ್ ಫೇಸ್ ಸ್ಕ್ರಬ್ ಮಾಸ್ಕ್ ನಂತರ ನೀವು ರೋಸ್ ವಾಟರ್ ಅನ್ನು ಮುಖಕ್ಕೆ ಹಚ್ಚಬಹುದು ಎಂದು ನಟಿ ತಮನ್ನಾ ಹೇಳಿದ್ದಾರೆ.
ಇದನ್ನೂ ಓದಿ: ಬೇಸಿಗೆಯಲ್ಲಿ ಚರ್ಮದ ಆರೈಕೆಗೆ ಸಲಹೆಗಳು ಇಲ್ಲಿವೆ
ವಿಭಾಗ