ಶಂಖಪುಷ್ಪ: ನೋಡಲು ಮಾತ್ರ ಪುಟ್ಟ ಹೂವು; ಪ್ರಯೋಜನಗಳು ಇವೆ ಬೆಟ್ಟದಷ್ಟು..
ಕನ್ನಡ ಸುದ್ದಿ  /  ಜೀವನಶೈಲಿ  /  ಶಂಖಪುಷ್ಪ: ನೋಡಲು ಮಾತ್ರ ಪುಟ್ಟ ಹೂವು; ಪ್ರಯೋಜನಗಳು ಇವೆ ಬೆಟ್ಟದಷ್ಟು..

ಶಂಖಪುಷ್ಪ: ನೋಡಲು ಮಾತ್ರ ಪುಟ್ಟ ಹೂವು; ಪ್ರಯೋಜನಗಳು ಇವೆ ಬೆಟ್ಟದಷ್ಟು..

ಪ್ರಕೃತಿಯಲ್ಲಿ ನಮಗೆ ಸಿಗುವ ಪ್ರತಿಯೊಂದು ವಸ್ತು ಕೂಡ ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ಶಂಖಪುಷ್ಪ ಹೂವು ನೋಡಲು ಗಾತ್ರದಲ್ಲಿ ಚಿಕ್ಕದು. ಆದರೆ ಅದರ ಪ್ರಯೋಜನಗಳು ಮಾತ್ರ ಅಗಾಧ. ಶಂಖಪುಷ್ಪ ಹೂವಿನ ವೈಶಿಷ್ಟ್ಯಗಳು ಮತ್ತು ಔಷಧೀಯ ಪ್ರಯೋಜನಗಳ ವಿವರ ಇಲ್ಲಿದೆ.

ಶಂಖಪುಷ್ಪ ಹೂವಿನ ವೈಶಿಷ್ಟ್ಯಗಳು ಮತ್ತು ಔಷಧೀಯ ಪ್ರಯೋಜನಗಳ ವಿವರ
ಶಂಖಪುಷ್ಪ ಹೂವಿನ ವೈಶಿಷ್ಟ್ಯಗಳು ಮತ್ತು ಔಷಧೀಯ ಪ್ರಯೋಜನಗಳ ವಿವರ (Pixabay)

ಶಂಖಪುಷ್ಪ ಹೂವು. ಆಯುರ್ವೇದದಲ್ಲಿ ಮತ್ತು ಪ್ರಾಚೀನ ಔಷಧೀಯ ಶಾಸ್ತ್ರಗಳಲ್ಲಿ ಈ ಹೂವಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಪ್ರಕೃತಿಯಲ್ಲಿ ಕಾಣಸಿಗುವ ಸುಂದರ ಹೂವುಗಳಲ್ಲಿ ಅತ್ಯಂತ ನಯನ ರಮಣೀಯ ಹೂವುಗಳಲ್ಲಿ ಇದೂ ಒಂದು. ಬಣ್ಣದ ವಿಶೇಷತೆಯಿಂದಲೇ ಗಮನ ಸೆಳೆಯುವ ಈ ಹೂವು ಕೇವಲ ಸುಂದರ ಮಾತ್ರವಲ್ಲ ಅದ್ಭುತ ಶಕ್ತಿ ತುಂಬಿದ ಔಷಧೀಯ ಗುಣಗಳನ್ನೂ ಹೊಂದಿದೆ.

ಇತ್ತೀಚಿನ ದಿನಗಳಲ್ಲಿ ವೈವಿಧ್ಯಮಯ ಚಹಾಗಳು ಚಹಾ ಪ್ರಿಯರ ಗಮನ ಸೆಳೆಯುತ್ತಿದೆ. ಅದರಲ್ಲೂ ಬೆಂಗಳೂರಿನಂತಹ ನಗರಗಳಲ್ಲಿ ಹಿಂದೆಂದೂ ಸವಿದಿರದ ಹಲವು ರೀತಿಯ ಚಹಾಗಳು ಟ್ರೆಂಡ್ ಆಗುತ್ತಿವೆ. ಅಂತಹ ಹೊಸ ಟ್ರೆಂಡ್ ಗಳಲ್ಲಿ ಶಂಖ ಪುಷ್ಪ ಹೂವಿನ ಚಹಾ ತನ್ನದೇ ಆದ ಸ್ಥಾನವನ್ನು ಪಡೆಯುತ್ತಿದೆ. ಹಾಗಾದರೆ ಏನಿದರ ವಿಶೇಷ? ಅರೋಗ್ಯ ವೃದ್ಧಿಸುವಲ್ಲಿ ಇದರ ಪಾತ್ರವೇನು? ಮನೆಯಲ್ಲಿಯೇ ಶಂಖಪುಷ್ಪದ ಚಹಾ ತಯಾರಿಸುವುದು ಹೇಗೆ? ನೀವೇ ಓದಿ.

ಶಂಖ ಪುಷ್ಪ ಹೂವಿನ ಚಹಾ

ಶಂಖ ಪುಷ್ಪ ಹೂವು ಎಂಬ ನೀಲ ಹೂವು, ಅದರ ಆರೋಗ್ಯ ಪ್ರಯೋಜನಗಳಿಗಾಗಿ ಎಲ್ಲೆಡೆ ಪ್ರಸಿದ್ಧವಾಗಿದೆ. ಇದರಲ್ಲಿರುವ ಅದ್ಭುತ ಆರೋಗ್ಯಕರ ಗುಣಗಳು ಈಗ ಎಲ್ಲೆಡೆ ಪರಿಚಿತವಾಗಿದೆ. ಏನಿದರ ಪ್ರಯೋಜನ?

ಮಾನಸಿಕ ಶಾಂತಿ ಮತ್ತು ಒತ್ತಡ ಕಡಿಮೆ ಮಾಡುತ್ತದೆ

ಇದನ್ನು ಸೇವಿಸುವುದರಿಂದ ಮಾನಸಿಕ ಒತ್ತಡ, ಆತಂಕ, ಮತ್ತು ಮಾನಸಿಕ ಅಶಾಂತಿ ಕಡಿಮೆಯಾಗುತ್ತದೆ. ಇದು ತಲೆನೋವು ಮತ್ತು ಆಲಸ್ಯತನವನ್ನು ಗುಣಪಡಿಸುತ್ತದೆ.

ಆ್ಯಂಟಿ-ಆಕ್ಸಿಡೆಂಟ್ಸ್‌ ಗುಣಗಳು

ಈ ಹೂವು ಶಕ್ತಿಶಾಲಿ ಆ್ಯಂಟಿ-ಆಕ್ಸಿಡೆಂಟ್ಸ್‌ಗಳನ್ನು ಹೊಂದಿದೆ. ಈ ಗುಣಗಳು ದೇಹದಲ್ಲಿನ ವಿಷಕಟುಗಳನ್ನು ತೆಗೆದುಹಾಕುತ್ತವೆ ಮತ್ತು ರಾಡಿಕಲ್ಸ್‌ನಿಂದ ಜೀವಕೋಶಗಳನ್ನು ರಕ್ಷಿಸುತ್ತವೆ.

ಮೂತ್ರಶುದ್ಧಿ ಮತ್ತು ಕಿಡ್ನಿ ಆರೋಗ್ಯ

ಈ ಚಹಾ ದೇಹದಲ್ಲಿ ಕೊಳೆಯುವ ಟಾಕ್ಸಿನ್‌ಗಳನ್ನು ಮೂತ್ರದ ಮೂಲಕ ಹೊರಹಾಕಿ ಕಿಡ್ನಿಗಳ ಶುದ್ಧತೆಗೆ ಸಹಾಯ ಮಾಡುತ್ತದೆ.

ಮೆದುಳಿಗೆ ಶಕ್ತಿ ಮತ್ತು ನೆನಪಿನ ಸುಧಾರಣೆ

ಈ ಶಂಖಪುಷ್ಪ ಹೂವಿನ ಚಹಾ ಮಿದುಳಿನ ಕಾರ್ಯಕ್ಷಮತೆಯನ್ನು ಉತ್ತೇಜಿಸುತ್ತದೆ. ಮಕ್ಕಳಿಗೆ ಮತ್ತು ವಿದ್ಯಾರ್ಥಿಗಳಿಗೆ ನೆನಪಿನ ಶಕ್ತಿ ಹೆಚ್ಚಿಸಲು ಸಹಕಾರಿ.

ಜೀರ್ಣಕ್ರಿಯೆ ಸುಧಾರಣೆ

ಈ ಚಹಾ ಜೀರ್ಣಕ್ರಿಯೆ ಸುಧಾರಿಸಲು ಸಹಕಾರಿ. ಆಹಾರ ಜೀರ್ಣವಾಗದ ಸಮಸ್ಯೆ, ಗ್ಯಾಸ್ಟ್ರಿಕ್, ಬೆವರು ಮತ್ತು ಚಯಾಪಚಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.

ಚರ್ಮದ ತಾಜಾತನ ಮತ್ತು ಯೌವನವನ್ನು ಕಾಯ್ದುಕೊಡುವುದು

ಈ ಚಹಾದಲ್ಲಿ ಇರುವ ಫ್ಲೇವನಾಯ್ಡ್ಸ್ ಚರ್ಮವನ್ನು ತಾಜಾ, ಮೃದುವಾಗಿ ಇರಿಸುತ್ತದೆ. ವಯಸ್ಸಾಗುವಿಕೆಯ ಗುರುತುಗಳನ್ನು ತಡೆಯುತ್ತದೆ ಮತ್ತು ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ.

ಕೂದಲು ಬೆಳವಣಿಗೆಗೆ ಸಹಾಯ

ಈ ಹೂವಿನ ಎಕ್ಸ್‌ಟ್ರ್ಯಾಕ್ಟ್‌ ಕೂದಲಿನ ತೇವಾಂಶವನ್ನು ಕಾಯ್ದುಕೊಳ್ಳುತ್ತದೆ, ಕೂದಲು ಉದುರುವಿಕೆ ಕಡಿಮೆ ಮಾಡುತ್ತದೆ ಮತ್ತು ಬೆಳವಣಿಗೆಗೆ ಉತ್ತೇಜನ ನೀಡುತ್ತದೆ.

ಸಂಭಾವ್ಯ ಡಯಾಬಿಟಿಸಿ ನಿಯಂತ್ರಣ

ಕೆಲವೊಂದು ಅಧ್ಯಯನಗಳ ಪ್ರಕಾರ, ಶಂಖಪುಷ್ಪ ಹೂವು ರಕ್ತದ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಕಾರಿಯಾಗಿದೆ.

ಗ್ರಂಥಿಗಳ ಸಮತೋಲನ

ಇದು ದೇಹದ ಹಾರ್ಮೋನ್‌ ಮಟ್ಟಗಳನ್ನು ಸಮತೋಲನಗೊಳಿಸಲು ಸಹಕಾರಿಯಾಗಿದ್ದು, ಮಹಿಳೆಯರ ಹಾರ್ಮೋನಲ್ ಸಮಸ್ಯೆಗಳಿಗೆ ಸಹಾಯಕವಾಗಿದೆ.

ದೃಷ್ಟಿ ಶಕ್ತಿ ಸುಧಾರಣೆ

ಈ ಹೂವಿನಲ್ಲಿ ಆಂಟೋಸಯಾನಿನ್‌ ಎಂಬ ತತ್ವವಿದ್ದು, ಕಣ್ಣಿನ ಆರೋಗ್ಯವನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ ಮತ್ತು ದೃಷ್ಟಿ ಶಕ್ತಿಯನ್ನು ಸುಧಾರಿಸುತ್ತದೆ.

ತಯಾರಿಸುವುದು ಹೇಗೆ?

4-5 ಒಣ ಶಂಖಪುಷ್ಪದ ಹೂವಿಗೆ ಒಂದು ಕಪ್ ಕುದಿದ ನೀರು ಹಾಕಿ ಅಥವಾ ನೇರವಾಗಿ ಕುದಿಸಬಹುದು.

5 ನಿಮಿಷ ವರೆಗೆ ಮುಚ್ಚಳ ಮುಚ್ಚಿ ಇಡಿ.

ಬಿಸಿಯಾದರೆ ಸ್ವಲ್ಪ ನಿಂಬೆರಸ ಸೇರಿಸಿ ಸೇವಿಸಬಹುದು ಅಥವಾ ಎಳನೀರು, ನಿಂಬೆ ಜ್ಯೂಸಿನ ಜೊತೆಗೆ ಬೆರೆಸಿಯೂ ಕುಡಿಯಬಹುದು.

ಸಿಹಿ ಬೇಕಾದರೆ ಸ್ವಲ್ಪ ಬೆಲ್ಲವನ್ನೂ ಸೇರಿಸಬಹುದು.

ಗೊತ್ತಿರಲಿ ನಿಂಬೆಹಣ್ಣು ಸೇರಿಸಿದಾಗ ಚಹಾದ ಬಣ್ಣ ನೀಲಿಯಿಂದ ನೇರಳೆ ಬಣ್ಣಕ್ಕೆ ಬದಲಾಗುತ್ತದೆ – ಇದು ಮಕ್ಕಳಿಗೆ ಅಚ್ಚರಿಯ ಜೊತೆಗೆ ಆನಂದದ ಅನುಭವ ನೀಡಬಹುದು!

ಪ್ರಕೃತಿಯ ಒಡಲಲ್ಲಿ ಸಿಗುವ ಪ್ರತಿಯೊಂದು ಹೂವು ಹಣ್ಣುಗಳು ವಿಶೇಷ ಗುಣಗಳನ್ನು ಹೊಂದಿದೆ. ಆದರೆ ಹೆಚ್ಚಿನವರಿಗೆ ಅದರ ಬಗ್ಗೆ ಅರಿವಿಲ್ಲವಷ್ಟೆ. ಒಂದು ಸಣ್ಣ ಹೂವು ನಮ್ಮ ದೇಹ, ಮನಸ್ಸಿನ ಮೇಲೆ ಎಷ್ಟು ಪ್ರಭಾವ ಬೀರುವ ಶಕ್ತಿ ಹೊಂದಿರಬಹುದು ಎಂಬುದಕ್ಕೆ ಈ ಹೂವು ಒಂದು ಸುಂದರ ಉದಾಹರಣೆ. ಮನಸ್ಸಿಗೆ ಶಾಂತಿ ನೀಡುವುದು, ದೇಹದ ಅರೋಗ್ಯ ದೋಷಗಳನ್ನು ಶಮನ ಮಾಡುವುದು ಈ ಚಹಾದ ವಿಶೇಷತೆಗಳು. ಇನ್ನು ನಿಮ್ಮ ಸುತ್ತಮುತ್ತ ಈ ಹೂವು ಲಭ್ಯವಿಲ್ಲವೆಂದಾರೆ ಆನ್ ಲೈನ್ ನಲ್ಲಿ ಒಣಗಿಸಿದ ಹೂವುಗಳು ಕಡಿಮೆ ದರದಲ್ಲಿ ಲಭ್ಯವಿದೆ. ಅಲ್ಲಿಂದಲೇ ಖರೀದಿಸಿ ಮನೆಯಲ್ಲಿ ಚಹಾ ತರಿಸಿಕೊಳ್ಳಬಹುದು.

Kiran Kumar I G

TwittereMail
ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in