ಊಟದ ಬಟ್ಟಲು ತುಂಬಾ ಮಾವಿನ ಖಾದ್ಯಗಳು: ಬೆಂಗಳೂರಿನ ಈ ಹೋಟೆಲ್‌ನ ಮ್ಯಾಂಗೋ ಬಫೆಟ್‌ ನೋಡಿದ್ರೆ ವಾವ್‌ ಅನ್ತೀರಿ
ಕನ್ನಡ ಸುದ್ದಿ  /  ಜೀವನಶೈಲಿ  /  ಊಟದ ಬಟ್ಟಲು ತುಂಬಾ ಮಾವಿನ ಖಾದ್ಯಗಳು: ಬೆಂಗಳೂರಿನ ಈ ಹೋಟೆಲ್‌ನ ಮ್ಯಾಂಗೋ ಬಫೆಟ್‌ ನೋಡಿದ್ರೆ ವಾವ್‌ ಅನ್ತೀರಿ

ಊಟದ ಬಟ್ಟಲು ತುಂಬಾ ಮಾವಿನ ಖಾದ್ಯಗಳು: ಬೆಂಗಳೂರಿನ ಈ ಹೋಟೆಲ್‌ನ ಮ್ಯಾಂಗೋ ಬಫೆಟ್‌ ನೋಡಿದ್ರೆ ವಾವ್‌ ಅನ್ತೀರಿ

ನೀವು ಮಾವಿನ ಹಣ್ಣಿನ ಪ್ರಿಯರೇ, ಬಗೆ ಬಗೆ ಮಾವಿನ ಖಾದ್ಯಗಳನ್ನು ಒಂದೇ ಸೂರಿನಡಿ ಸವಿಯುವ ಅವಕಾಶ ನಿಮಗಾಗಿ ಬಂದಿದೆ. ಬೆಂಗಳೂರಿನ ಜೆಪಿ ನಗರದ ಈ ಹೋಟೆಲ್‌ನಲ್ಲಿ‌ ನೀವು ಹಲವು ವಿವಿಧ ಮಾವಿನ ತಿನಿಸುಗಳ ರುಚಿ ನೋಡಬಹುದು.

ಬೆಂಗಳೂರಿನ ಈ ಹೋಟೆಲ್‌ನ ಮ್ಯಾಂಗೋ ಬಫೆಟ್‌ ನೋಡಿದ್ರೆ ವಾವ್‌ ಅನ್ತೀರಿ
ಬೆಂಗಳೂರಿನ ಈ ಹೋಟೆಲ್‌ನ ಮ್ಯಾಂಗೋ ಬಫೆಟ್‌ ನೋಡಿದ್ರೆ ವಾವ್‌ ಅನ್ತೀರಿ

ಮಾವಿನ ಹಣ್ಣು ಎಷ್ಟು ರುಚಿಯೋ ಅದಕ್ಕಿಂತ ದುಪ್ಪಟ್ಟು ರುಚಿ ಮಾವಿನ ಹಣ್ಣಿನಿಂದ ತಯಾರಿಸುವ ಖಾದ್ಯಗಳು. ನೀವು ಮಾವು ಪ್ರಿಯರಾದ್ರೆ ಈ ಸೀಸನ್‌ ಮುಗಿಯುವ ಮುನ್ನ ಮಾವಿನ ಖಾದ್ಯಗಳನ್ನು ಸವಿದು ನೋಡಬೇಕು. ಒಂದೇ ಸೂರಿನಡಿ ಹಲವು ಬಗೆಯ ಮಾವಿನ ಖಾದ್ಯಗಳನ್ನು ಸವಿಯುವ ಅವಕಾಶ ನಿಮಗಾಗಿ ಬಂದಿದೆ.

ನೀವು ಬೆಂಗಳೂರಿನಲ್ಲಿದ್ರೆ ಖಂಡಿತ ಮಿಸ್ ಮಾಡದೇ ಈ ಅವಕಾಶವನ್ನು ಬಳಸಿಕೊಳ್ಳಿ. ಬೆಂಗಳೂರಿನ ಜೆಪಿ ನಗರದಲ್ಲಿರುವ 24th main ಹೋಟೆಲ್‌ನಲ್ಲಿ ಮಾವು ಮೇಳ ನಡೆಯುತ್ತಿದೆ. ಜೂನ್ 15ರ ವರೆಗೂ ನೀವಿಲ್ಲಿ ಬಗೆ ಬಗೆ ಮಾವಿನ ಖಾದ್ಯಗಳ ರುಚಿ ನೋಡಲು ಸಾಧ್ಯವಿದೆ. ಸುಮಾರು 35ಕ್ಕೂ ಹೆಚ್ಚು ಖಾದ್ಯಗಳು ಈ ವಿಶೇಷ ಬಫೆ ಥಾಲಿಯಲ್ಲಿ ನಿಮ್ಮ ನಾಲಿಗೆ ಚಪಲ ತಣಿಸಲಿವೆ. ‌

ಮಾವಿನ ಮೇಳದ ಮೆನುವಿನಲ್ಲಿ ಏನೆಲ್ಲಾ ಇದೆ

24th main ಹೋಟೆಲ್‌ನ ಮಾವಿನ ಮೇಳದ ಮೆನು ಕೇಳಿದ್ರೆ ನಿಮಗೆ ಬಾಯಲ್ಲಿ ನೀರು ಬರೋದು ಖಂಡಿತ. ಮ್ಯಾಂಗೋ ಗೋಲ್‌ಗಪ್ಪ, ಮ್ಯಾಂಗೊ ಮಸಾಲ ಪುರಿ, ಮ್ಯಾಂಗೋ ಸೇವ್ ಪುರಿ, ಪಾಪ್‌ ಕಾರ್ನ್ ಚಾಟ್‌, ಮಾವಿನ ಪೂರಿ, ಮಾವಿನ ಹಣ್ಣಿನ ಗೊಜ್ಜು, ಮಾವಿನ ಕಾಯಿ ಸಾಂಬಾರ್‌, ಆಮ್ ಆಚಾರ್ ಪನೀರ್ ಟಿಕ್ಕಾ, ಮ್ಯಾಂಗೊ ದಮ್‌ಪ್ಲಿಂಕ್ಸ್‌, ಸ್ಪೈಸಿ ಮಾವಿನ ಕಾಯಿ ಟಿಕ್ಕಿ, ಮಾವಿನ ಕಾಯಿ ಬಜ್ಜಿ, ಮಾವಿನ ಕಾಯಿ ಹಕ್ಕಾ ನೂಡಲ್ಸ್‌, ಮ್ಯಾಂಗೋ ಕೋಫ್ತಾ, ಮಾವಿನ ಹಣ್ಣಿನ ರಸಮಲೈ, ಮಾವಿನ ಹಣ್ಣಿನ ರಸಾಯನ, ಮಾವಿನ ಹಣ್ಣಿನ ಹಲ್ವಾ ಜೊತೆಗೆ ಇನ್ನೂ ಹಲವು ಖಾದ್ಯಗಳು ಈ ಬಫೆಯಲ್ಲಿ ಸೇರಿವೆ.

ಬಫೆ ದರ ವಿರ ಹೀಗಿದೆ

ಈ ಮ್ಯಾಂಗೋ ಮೇಳದ ಬಫೆ ದರ ಸೋಮವಾರದಿಂದ ಗುರುವಾರದವರೆಗೆ ತಲಾ ಒಬ್ಬರಿಗೆ 656 ರೂ + ಜಿಎಸ್‌ಟಿ, ಶುಕ್ರವಾರದಿಂದ ಭಾನುವಾರದವರೆಗೆ 704 ರೂ + ಜಿಎಸ್‌ಟಿ 5 ರಿಂದ 9 ವರ್ಷದ ಒಳಗಿನ ಮಕ್ಕಳಿಗೆ 427+ ಜಿಎಸ್‌ಟಿ, 5 ವರ್ಷಗಳ ಒಳಗಿನ ಮಕ್ಕಳಿಗೆ ಯಾವುದೇ ಚಾರ್ಜ್ ಇರುವುದಿಲ್ಲ. ‌

ಈ ಹೋಟೆಲ್ ಇರುವುದು ಜೆಪಿ ನಗರ 2ನೇ ಹಂತ 24ನೇ ಮುಖ್ಯರಸ್ತೆ, ಆರ್‌ವಿ ಡೆಂಟಲ್ ಕಾಲೇಜು ಸಮೀಪ.

ನೀವು ಮಾವು ಪ್ರಿಯರಾದ್ರೆ ಮಿಸ್ ಮಾಡದೇ ಈ ಹೋಟೆಲ್‌ಗೆ ಬೇಡಿ ಕೊಡಿ, ಮಕ್ಕಳಿಗಂತೂ ಈ ಮಾವಿನ ಖಾದ್ಯಗಳು ಖಂಡಿತ ಇಷ್ಟವಾಗುತ್ತೆ. ಬೇಸಿಗೆ ರಜೆ ಮುಗಿಯುತ್ತಾ ಬಂದಿದ್ದು ಇನ್ನೇನು ಕೆಲವು ದಿನಗಳಲ್ಲಿ ಮಾವು ಮೇಳವೂ ಮುಗಿಯುವ ಕಾರಣ ನೀವು ಈಗಲೇ ಭೇಟಿ ನೀಡಿ ಮಾವಿನ ಸ್ವಾದವನ್ನು ಮನದಣಿಯೇ ಸವಿಯುವುದು ಉತ್ತಮ.

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.