ಹೃದಯದ ರಕ್ಷಕರು: ಹೃದಯ ಸ್ತಂಭನಕ್ಕೆ ಒಳಗಾದ ವಿಮಾನ ಯಾತ್ರಿಕರಿಗೆ ಆಪದ್ಭಾಂಧವರಾದರು ಈ ವೈದ್ಯರು, ಎಲ್ಲಿ, ಹೇಗಂತೀರಾ, ಈ ವರದಿ ಓದಿ
Cardiac Arrest: ಹೃದಯದ ರಕ್ಷಕರು ಯಾರು ಎಂಬ ಪ್ರಶ್ನೆಯೇ, ಸಿಪಿಆರ್ ತಂತ್ರ ಕಲಿತರೆ ಯಾರು ಬೇಕಾದರೂ ಹೃದಯದ ರಕ್ಷಕರಾಗಬಹುದು. ಅಂದ ಹಾಗೆ, ಇದೇ ತಿಂಗಳಲ್ಲಿ ಹೃದಯ ಸ್ತಂಭನಕ್ಕೆ ಒಳಗಾದ ವಿಮಾನ ಯಾತ್ರಿಕರಿಗೆ ಆಪದ್ಭಾಂಧವರಾದರು ಈ ವೈದ್ಯರು, ಎಲ್ಲಿ, ಹೇಗಂತೀರಾ, ಈ ವರದಿ ಓದಿ.
Cardiac Arrest: ಬಹುತೇಕ ಸಂದರ್ಭಗಳಲ್ಲಿ ಪ್ರಾಣ ಹೋಗುವುದಕ್ಕೆ ಕೆಲವೇ ಸೆಕೆಂಡ್ ಸಾಕಾಗಿಬಿಡುತ್ತದೆ. ಜೀವನದಲ್ಲಿ ಇಂತಹ ತುರ್ತು ವೈದ್ಯಕೀಯ ಸನ್ನಿವೇಶ ಯಾವುದೇ ಸಂದರ್ಭದಲ್ಲಿ ಎದುರಾಗಬಹುದು. ಇಂತಹ ಪ್ರಾಣ ಕಸಿಯಬಲ್ಲ ಪ್ರಮುಖ ಆರೋಗ್ಯ ಸಮಸ್ಯೆ ಕಾರ್ಡಿಯಾಕ್ ಅರೆಸ್ಟ್ ಅಥವಾ ಹೃದಯ ಸ್ತಂಭನ. ತುರ್ತಾಗಿ ಸ್ಪಂದಿಸಿದರೆ ಜೀವ ಉಳಿಯಬಹುದು. ಅದಕ್ಕೆ ಬೇಕಾಗಿರುವುದು ಸರಳ ಸಿಪಿಆರ್ ತಂತ್ರ. ಇದನ್ನು ಕಲಿತವರು ಕ್ಷಣಮಾತ್ರದಲ್ಲಿ ಸ್ಪಂದಿಸಿ ಅನೇಕರ ಜೀವ ಉಳಿಸಿದ ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಕಾಣುತ್ತಲೇ ಇರುತ್ತವೆ. ಈ ರೀತಿ ಇಬ್ಬರು ವಿಮಾನ ಯಾತ್ರಿಕರ ಪ್ರಾಣ ಉಳಿಸಿದ ಇಬ್ಬರು ವೈದ್ಯರ ವಿಚಾರ ಈಗ ಗಮನಸೆಳೆದಿದೆ. ಅವರ ವೃತ್ತಿಪರತೆ, ಮಾನವೀಯ ಗುಣ ಪ್ರಶಂಸೆಗೆ ಒಳಗಾಗಿದೆ. ಈ ಎರಡೂ ಘಟನೆಗಳು ಇದೇ ತಿಂಗಳು ನಡೆದಿರುವುದು ಗಮನಸೆಳೆದಿದೆ.
ಹೃದಯ ಸ್ತಂಭನಕ್ಕೆ ಒಳಗಾದ ವಿಮಾನ ಯಾತ್ರಿಕರಿಗೆ ಆಪದ್ಭಾಂಧವರಾದರು ಮಣಿಪಾಲ್ ಆಸ್ಪತ್ರೆ ವೈದ್ಯರು
ಇದೇ ತಿಂಗಳ ಅಂದರೆ ಡಿಸೆಂಬರ್ 6 ರಂದು ಕೋಲ್ಕತ್ತಾದಿಂದ ದೆಹಲಿಗೆ ತೆರಳಿದ ವಿಮಾನದಲ್ಲಿ, 45 ವರ್ಷದ ಮಹಿಳೆಯೊಬ್ಬರು ಹಠಾತ್ತಾಗಿ, ಉಸಿರಾಟದ ತೊಂದರೆ ಮತ್ತು ಮಾರಣಾಂತಿಕ ಮಟ್ಟದಲ್ಲಿ ಅಧಿಕ ರಕ್ತದೊತ್ತಡದಿಂದಾಗಿ ಕುಸಿದುಬಿದ್ದರು. ಸಮಸ್ಯೆಯ ಗಾಂಭೀರ್ಯ ಅರಿತ ಬ್ರಾಡ್‌ವೇ ಮಣಿಪಾಲ್ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ಡಾ. ಸ್ಮಿತಾ ಮೊಯಿತ್ರಾ, ಆ ಮಹಿಳೆಯ ಜೀವ ಉಳಿಸಿ ಆಪತ್ಬಾಂಧವರಾದರು.
ಕ್ಲಿಷ್ಟಕರ ಪರಿಸ್ಥಿತಿಯ ಹೊರತಾಗಿಯೂ, ವಿಮಾನದಲ್ಲಿ ಲಭ್ಯವಿರುವ ಸೀಮಿತ ವೈದ್ಯಕೀಯ ಉಪಕರಣ ಮತ್ತು ಔಷಧಗಳೊಂದಿಗೆ, ಡಾ. ಮೊಯಿತ್ರಾ ಕ್ಷಿಪ್ರವಾಗಿ ಸ್ಪಂದಿಸಿದರು. ದೇಹದಲ್ಲಿ ದ್ರವದ ಓವರ್‌ಲೋಡ್ ಅನ್ನು ಕಡಿಮೆ ಮಾಡಲು ಲಸಿಕ್ಸ್, ಎದೆನೋವಿಗೆ ನೈಟ್ರೋಗ್ಲಿಸರಿನ್ ಮತ್ತು ಮಹಿಳೆಯ ಉಸಿರಾಟವನ್ನು ಸ್ಥಿರಗೊಳಿಸಲು ಆಮ್ಲಜನಕವನ್ನು ನೀಡಿದರು. ವೈದ್ಯರ ಸಮಯೋಚಿತ ಮಧ್ಯಸ್ಥಿಕೆಯು ಮಾರಣಾಂತಿಕ ಹೃದಯ ಸ್ತಂಭನವನ್ನು ತಡೆಯುವ ಮೂಲಕ ಪ್ರಾಣಹಾನಿಯ ಸಂಭವವನ್ನು ನಿವಾರಿಸಿತು. ನಂತರ ತುರ್ತು ಲ್ಯಾಂಡಿಂಗ್‌ಗಾಗಿ ವಿಮಾನವನ್ನು ರಾಂಚಿಗೆ ತಿರುಗಿಸಿ, ಬಾಧಿತರನ್ನು ಹೆಚ್ಚಿನ ಆರೈಕೆಗಾಗಿ ಆಸ್ಪತ್ರೆಗೆ ವರ್ಗಾಯಿಸಲಾಯಿತು.
ಅದೇ ರೀತಿ, ಡಿಸೆಂಬರ್ 25 ರಂದು, ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೃದಯ ಸ್ತಂಭನಕ್ಕೆ ಒಳಗಾದವರನ್ನು ರಕ್ಷಿಸಿದ್ದು ಡಾಕ್ಟರ್ ಗರಿಮಾ ಅಗರವಾಲ್. ಅವರು ವರ್ತೂರು ರಸ್ತೆಯ ಮಣಿಪಾಲ್ ಹಾಸ್ಪಿಟಲ್ಸ್ ಕನ್ಸಲ್ಟೆಂಟ್ - ನೆಫ್ರಾಲಜಿಸ್ಟ್. ದೆಹಲಿಗೆ ತಮ್ಮ ವಿಮಾನಕ್ಕಾಗಿ ಕಾಯುತ್ತಿರುವಾಗ, ಹೃದಯಾಘಾತದಿಂದ ವ್ಯಕ್ತಿಯೊಬ್ಬರು ಇದ್ದಕ್ಕಿದ್ದಂತೆ ಕುಸಿದು ಬೀಳುವುದನ್ನು ಅವರು ನೋಡಿದರು. ಆ ಕ್ಷಣದಲ್ಲಿ ಡಾ. ಅಗರ್ವಾಲ್ ಅವರು ಸ್ಥಳಕ್ಕೆ ಧಾವಿಸಿ, ಕ್ಷಿಪ್ರವಾಗಿ ಸಿಪಿಆರ್ ನಿರ್ವಹಿಸಲು ಪ್ರಾರಂಭಿಸಿದರು. ಹೆಚ್ಚಿನ ಸಹಾಯಕ್ಕಾಗಿ ತುರ್ತು ಸಂದೇಶ ರವಾನಿಸಿದರು. ಶ್ವಾಸನಾಳದಲ್ಲಿ ತೊಡಕುಗಳನ್ನು ತೆರವುಗೊಳಿಸುವ ಸವಾಲುಗಳ ಹೊರತಾಗಿಯೂ, ವೈದ್ಯೆಯು ಸತತವಾಗಿ ಸಿಪಿಆರ್ ನಡೆಸಿದರು. ಅಷ್ಟರಲ್ಲಿ ವಿಮಾನ ನಿಲ್ದಾಣದ ವೈದ್ಯಕೀಯ ತಂಡವು ಆಗಮಿಸಿತು. ಅವರು ಎಇಡಿ ಬಳಕೆಯೊಂದಿಗೆ ಕಂಪನ (Shock) ಗಳನ್ನು ನೀಡಿ ಬಾಧಿತ ವ್ಯಕ್ತಿಯ ಆರೋಗ್ಯ ಚೇತರಿಸುವಂತೆ ಮಾಡಿದರು. ಡಾ. ಅಗರವಾಲ್ ಅವರು ಕ್ಷಿಪ್ರವಾಗಿ ಸ್ಪಂದಿಸಿದ್ದರಿಂದ ವ್ಯಕ್ತಿಯ ನಾಡಿಮಿಡಿತವನ್ನು ಮರಳಿ ಪಡೆದು, ಅವರ ಆರೋಗ್ಯ ಚೇತರಿಕೆ ಕಂಡಿತು. ಸಮಯೋಚಿತವಾಗಿ ಆಸ್ಪತ್ರೆಗೆ ಸಾಗಿಸಲು ಸಾಧ್ಯವಾಯಿತು.
ಗಾರ್ಡಿಯನ್ಸ್ ಆಫ್ ದಿ ಹಾರ್ಟ್; ಹೃದಯದ ರಕ್ಷಕರು ನೀವು ಕೂಡ ಆಗಬಹುದು
ಹೃದಯದ ತುರ್ತುಸ್ಥಿತಿಗಳಲ್ಲಿ ಸಮಯೋಚಿತ ನೆರವುಗಳ ಮೂಲಕ ಜೀವಗಳನ್ನು ಉಳಿಸಬಹುದು ಎಂಬುದನ್ನು ಡಾ. ಮೊಯಿತ್ರಾ ಮತ್ತು ಡಾ. ಅಗರ್ವಾಲ್ ಅವರ ತ್ವರಿತ ಕ್ರಮಗಳು ಸಾರಿದವು.
ಇದೇ ಅರಿವನ್ನು ಸಮುದಾಯದಲ್ಲಿ ವ್ಯಾಪಕವಾಗಿಸಲು ಮಣಿಪಾಲ್ ಹಾಸ್ಪಿಟಲ್ಸ್ ತಮ್ಮ “ಗಾರ್ಡಿಯನ್ಸ್ ಆಫ್ ದಿ ಹಾರ್ಟ್” ಉಪಕ್ರಮದ ಮೂಲಕ ಬೆಂಗಳೂರನ್ನು ಹಾರ್ಟ್-ಸ್ಮಾರ್ಟ್ ಸಿಟಿ ಮಾಡಲು ದಿಟ್ಟ ಹೆಜ್ಜೆ ಇಟ್ಟಿದೆ. ಅವರು ಭದ್ರತಾ ಸಿಬ್ಬಂದಿ, ಶಿಕ್ಷಣ ಸಂಸ್ಥೆಗಳಲ್ಲಿ ಸ್ವಯಂಸೇವಕರು, ಸಂಘಗಳು ಮತ್ತು ಸಮುದಾಯದ ಸದಸ್ಯರಿಗೆ CPR ತರಬೇತಿ ನೀಡುತ್ತಿದ್ದಾರೆ ಮತ್ತು ಆ ಮೂಲಕ ಸಹಾಯ ಯಾವಾಗಲೂ ಹತ್ತಿರದಲ್ಲಿದೆ ಎಂದು ಖಚಿತಪಡಿಸಿಕೊಳ್ಳುತ್ತಿದ್ದಾರೆ. ಅವರ ಇತ್ತೀಚಿನ "ಮಿಷನ್ 3K - 3000 ಹಾರ್ಟ್ಸ್ ಒನ್ ಬೀಟ್" ಈವೆಂಟ್, 3,319 ಭಾಗವಹಿಸುವವರೊಂದಿಗೆ, ಅತ್ಯಂತ ದೊಡ್ಡ ಕೈ-ಮಾತ್ರ CPR ರಿಲೇಗಾಗಿ ಗಿನ್ನೆಸ್ ವಿಶ್ವ ದಾಖಲೆಯನ್ನು ಸಾಧಿಸಿದೆ, ಇದು ತಯಾರಾಗುವುದರ ಮಹತ್ವವನ್ನು ಮತ್ತಷ್ಟು ಒತ್ತಿಹೇಳುತ್ತದೆ.
ಸಿಪಿಆರ್‌ನಲ್ಲಿ ತರಬೇತಿ ಪಡೆದ ಪ್ರತಿಯೊಬ್ಬ ವ್ಯಕ್ತಿಯು ಸಂಭಾವ್ಯ ಜೀವರಕ್ಷಕನಾಗುತ್ತಾನೆ, ಇದರಿಂದಾಗಿ ಹೆಚ್ಚಿನ ಹೃದಯ ಬಡಿತಗಳನ್ನು ಉಳಿಸಲು ಸಾಧ್ಯವಾಗುತ್ತದೆ. ಹೃದಯದ ತುರ್ತು ಪರಿಸ್ಥಿತಿಗಳು ಅನಿರೀಕ್ಷಿತವಾಗಿ ಎದುರಾಗುವ ಈ ಜಗತ್ತಿನಲ್ಲಿ, ಹೃದಯದ ಆರೋಗ್ಯಕ್ಕೆ ಮಣಿಪಾಲ್ ಆಸ್ಪತ್ರೆಗಳ ಅಚಲವಾದ ಬದ್ಧತೆಯು ಪ್ರತಿ ಹೃದಯ ಬಡಿತವನ್ನು ನಿಜವಾಗಿಯೂ ಗಣನೆಗೆ ತೆಗೆದುಕೊಳ್ಳುತ್ತದೆ. ಆದ್ದರಿಂದ ಸಿಪಿಆರ್ ತಂತ್ರ ಕಲಿಯಲು ಮರೆಯದಿರಿ.
ವಿಭಾಗ