ಬೆಂಗಳೂರಿನಲ್ಲಿರುವ ಬೆಸ್ಟ್ ಕೊರಿಯನ್ ರೆಸ್ಟೋರೆಂಟ್‌ಗಳು; ನೀವು ಕೆ–ಪಾಪ್ ಫ್ಯಾನ್ ಆದ್ರೆ ಒಮ್ಮೆಯಾದ್ರೂ ಭೇಟಿ ಕೊಡಿ
ಕೊರಿಯನ್ ಫುಡ್ ಒಮ್ಮೆಯಾದ್ರೂ ಟ್ರೈ ಮಾಡ್ಬೇಕು ಅಂತ ನಿಮಗೆ ಅನ್ನಿಸಿದ್ರೆ ಬೆಂಗಳೂರಲ್ಲಿ ಆಯ್ಕೆ ಇಲ್ಲ ಅಂತಲ್ಲ. ಕೆ–ಡ್ರಾಮಾ ಫ್ಯಾನ್ ನೀವಾದ್ರೆ ಬೆಂಗಳೂರಿನಲ್ಲಿರುವ ಈ ಕೊರಿಯನ್ ರೆಸ್ಟೋರೆಂಟ್‌ಗಳಿಗೆ ಒಮ್ಮೆಯಾದ್ರೂ ಭೇಟಿ ಕೊಡಬೇಕು.

ಇತ್ತೀಚಿನ ದಿನಗಳಲ್ಲಿ ಕೆ-ಪಾಪ್ ಸಂಸ್ಕೃತಿ ಮತ್ತು ಕೆ-ಡ್ರಾಮಗಳ ಮೇಲೆ ಯುವಜನರ ಕ್ರೇಜ್ ಹೆಚ್ಚುತ್ತಿದೆ. ಮಿಲೇನಿಯಲ್ಸ್, ಬೂಮರ್‌ಗಳು ಮತ್ತು ಜೆನ್ ಝಡ್‌ಗಳು ಕೆ–ಪಾಪ್ ಸಂಸ್ಕೃತಿಯ ಜೊತೆಗೆ ಕೊರಿಯನ್ ಆಹಾರಗಳ ಮೇಲೂ ಒಲವು ಹೊಂದುತ್ತಿದ್ದಾರೆ. ಬೆಂಗಳೂರಲ್ಲಿ ನೀವಿದ್ದೂ ಕೆ–ಡ್ರಾಮಾ ಫ್ಯಾನ್ ಆಗಿದ್ರೆ ಖಂಡಿತ ನಿಮಗೆ ಒಮ್ಮೆಯಾದ್ರೂ ಕೊರಿಯನ್ ಫುಡ್ ತಿನ್ನಬೇಕು ಅನ್ನಿಸಿ ಇರುತ್ತೆ.
ಐಟಿ ಸಿಟಿ ಬೆಂಗಳೂರಲ್ಲಿ ಪ್ರಪಂಚದ ವಿವಿಧ ದೇಶಗಳ ಆಹಾರಗಳು ಸಿಗುತ್ತವೆ. ಇದಕ್ಕೆ ಕೊರಿಯನ್ ಫುಡ್ ಕೂಡ ಹೊರತಾಗಿಲ್ಲ. ಬೆಂಗಳೂರಿನಲ್ಲಿ ಹಲವು ಕೊರಿಯನ್ ಫುಡ್ ಸಿಗುವ ಬೆಸ್ಟ್ ಹಾಗೂ ಬಜೆಟ್ ಫ್ರೆಂಡ್ಲಿ ರೆಸ್ಟೋರೆಂಟ್‌ಗಳಿವೆ. ಟೆಯೋಕ್‌ಬೊಕ್ಕಿ, ರಾಮೆನ್ ಸೇರಿದಂತೆ ಇತರ ಅತ್ಯುತ್ತಮ ಕೊರಿಯನ್ ಖಾದ್ಯಗಳ ಸವಿಯನ್ನು ನೀವು ಸವಿಬೇಕು ಅಂತಿದ್ರೆ ಈ ರೆಸ್ಟೋರೆಂಟ್‌ಗಳಿಗೆ ಒಮ್ಮೆಯಾದ್ರೂ ಭೇಟಿ ಕೊಡಬೇಕು.
ದಿ ಹಿಮಾಲಯನ್
ದಿ ಹಿಮಾಲಯನ್ ಅತ್ಯುತ್ತಮ ಕೊರಿಯನ್ ಆಹಾರವನ್ನು ಪೂರೈಸುವ ಅತ್ಯುತ್ತಮ ತಾಣವಾಗಿದೆ. ಬಿಬಿಂಬಾಪ್, ನೂಡಲ್ಸ್, ಬಲ್ಗೋಗಿ, ಕಿಮ್ಚಿ, ಸುಶಿ ಪ್ಲಾಟರ್ ಮತ್ತು ಜಾಸ್ಮಿನ್ ಟೀ ಮುಂತಾದುವನ್ನು ನೀವಿಲ್ಲಿ ಆರ್ಡರ್ ಮಾಡಬಹುದು. ಇದು ಬಜೆಟ್ ಫ್ರೆಂಡ್ಲಿ ರೆಸ್ಟೋರೆಂಟ್ ಕೂಡ ಹೌದು. ಈ ರೆಸ್ಟೊರೆಂಟ್ ಇರುವುದು ಕೋರಮಂಗಲ, ಕೆಎಚ್‌ಬಿ ಕಾಲೋನಿ, 5ನೇ ಬ್ಲಾಕ್‌ನಲ್ಲಿ. ಈ ರೆಸ್ಟೋರೆಂಟ್ ಮಧ್ಯಾಹ್ನರಿಂದ ರಾತ್ರಿ 11ರವರೆಗೆ ತೆರೆದಿರುತ್ತದೆ. ದರ ಇಬ್ಬರಿಗೆ 1,400 ರೂ. ಈ ರೆಸ್ಟೋರೆಂಟ್‌ಗೆ ಗೂಗಲ್ ರೇಟಿಂಗ್ 4.2 ಇದೆ.
ಹಾಯ್ ಸಿಯೋಲ್
ಕಲ್ಯಾಣನಗರದಲ್ಲಿರುವ ಬಜೆಟ್ ಫ್ರೆಂಡ್ಲಿ ರೆಸ್ಟೋರೆಂಟ್ ಇದಾಗಿದೆ. ಬಿಬಿಂಬಾಪ್, ಚಿಕನ್ ಗಿಂಬಾಪ್, ಕಿಮ್ಚಿ, ಹಾಟ್ ಪಾಟ್ ಮತ್ತು ಮೊಮೊ ಸೇರಿದಂತೆ ಇವರ ಮೆನುವಿನಲ್ಲಿ ವಿಭಿನ್ನ ಸ್ಟಿರ್-ಫ್ರೈ ಮತ್ತು ನೂಡಲ್‌ನಂತಹ ರೆಸಿಪಿಗಳು ಕೂಡ ಇವೆ. ಈ ರೆಸ್ಟೋರೆಂಟ್ ಇರುವುದು ಕಲ್ಯಾಣ್‌ನಗರದ ಎಚ್‌ಆರ್‌ಬಿಆರ್ ಲೇಔಟ್‌ನಲ್ಲಿ ಒಂದನೇ ಬ್ಲಾಕ್‌ನಲ್ಲಿ. ಈ ರೆಸ್ಟೋರೆಂಟ್ ಬೆಳಿಗ್ಗೆ 11.30 ರಿಂದ ರಾತ್ರಿ 10 ಗಂಟೆವರೆಗೆ ತೆರೆದಿರುತ್ತದೆ. ದರ ಇಬ್ಬರಿಗೆ 950. ಈ ರೆಸ್ಟೋರೆಂಟ್‌ಗೆ ಗೂಗಲ್ ರೇಟಿಂಗ್ 4.3 ಇದೆ.
ಕೋರಿಕೆನ್
ಕೊರಿಕೆನ್ ಕೊರಿಯನ್ ಮತ್ತು ಏಷ್ಯನ್ ಫಿಂಗರ್ ಫುಡ್ ಸವಿಯಲು ಹೇಳಿ ಮಾಡಿಸಿದ ಜಾಗ. ಈ ರೆಸ್ಟೋರೆಂಟ್ ಕಾಂಟಿನೆಂಟಲ್ ಆಹಾರದ ಬೇಡಿಕೆಗಳನ್ನು ಪೂರೈಸುತ್ತದೆ. ಬುಲ್ಡಕ್ ಫೈರ್ ಚಿಕನ್, ಸ್ಪೈಸಿ ಚಿಕನ್ ಲೋಡೆಡ್ ಫ್ರೈಸ್, ಹನಿ ಸೋಯಾ ಗಾರ್ಲಿಕ್ ಚಿಕನ್, ಹನಿ ಸೋಯಾ ಕಾಲಿಫ್ಲವರ್, ಕಿಮ್ಚಿ ನೂಡಲ್ಸ್, ಸ್ಪೈಸಿ ವೆಜ್ ಬರ್ಗರ್ ಈ ಎಲ್ಲವೂ ಈ ರೆಸ್ಟೋರೆಂಟ್‌ನಲ್ಲಿ ಸಿಗುತ್ತದೆ. ಈ ರೆಸ್ಟೋರೆಂಟ್ ಇರುವುದು ನ್ಯೂ ಬಿಇಎಲ್ ರಸ್ತೆ, ಜಲದರ್ಶಿನಿ ಲೇಔಟ್ ಮತ್ತಿಕೆರೆಯಲ್ಲಿ. ಮಧ್ಯಾಹ್ನ 12 ರಿಂದ ರಾತ್ರಿ 11ರವರೆಗೆ ಈ ರೆಸ್ಟೋರೆಂಟ್ ತೆರೆದಿರುತ್ತದೆ. ಇಲ್ಲಿ ಇಬ್ಬರಿಗೆ ಬರೀ 500 ರೂ. ಗೂಗಲ್‌ನಲ್ಲಿ ಈ ರೆಸ್ಟೋರೆಂಟ್‌ಗೆ 4.6 ರೇಟಿಂಗ್ ಇದೆ. ಇದು ಸಖತ್ ಬಜೆಟ್ ಫ್ರೆಂಡ್ಲಿ ರೆಸ್ಟೋರೆಂಟ್ ಅನ್ನೋದ್ರದಲ್ಲಿ ಡೌಟ್ ಇಲ್ಲ ಬಿಡಿ.
ದಾಮ್ಸ್ ಕಿಚನ್
ಅತ್ಯುದ್ಭುತ ಕೊರಿಯನ್ ಆಹಾರಗಳನ್ನು ಸೇವಿಸಬೇಕು ಅಂತಿದ್ದರೆ ನೀವು ದಾಮ್ಸ್ ಕಿಚನ್‌ಗೆ ಭೇಟಿ ನೀಡಿ. ಈ ರೆಸ್ಟೋರೆಂಟ್‌ನಲ್ಲಿ ಗಲ್ಬಿಟಾಂಗ್, ಪೋರ್ಕ್ ಟ್ಯಾಂಗ್ಸುಯುಕ್, ಜೆಯುಕ್ಬೊಕ್ಕುಮ್, ರಾಮೆನ್, ಟಿಯೋಕ್ಬೊಕ್ಕಿ ಮತ್ತು ಕಿಮ್ಚಿ ಫ್ರೈಡ್ ರೈಸ್ ತಿನ್ನಲೇಬೇಕು. ಈ ರೆಸ್ಟೋರೆಂಟ್ ದುಬಾರಿಯಾದ್ರೂ ಒಮ್ಮೆ ಇಲ್ಲಿನ ಆಹಾರ ಟ್ರೈ ಮಾಡಬೇಕು. ಈ ರೆಸ್ಟೋರೆಂಟ್ ಕೂಡ ಇರುವುದು ಎಚ್‌ಆರ್‌ಬಿಆರ್ ಲೇಔಟ್ ಕಲ್ಯಾಣನಗರದಲ್ಲಿ. ಪ್ರತಿದಿನ ಬೆಳಿಗ್ಗೆ 11.30 ರಿಂದ ರಾತ್ರಿ 11.30ರವರೆಗೆ ಈ ರೆಸ್ಟೋರೆಂಟ್ ತೆರೆದಿರುತ್ತದೆ. ಇಲ್ಲಿ ಒಬ್ಬರಿಗೆ 2000 ರೂ ದರ ಇರುತ್ತದೆ. ಈ ರೆಸ್ಟೋರೆಂಟ್‌ನ ಗೂಗಲ್ ರೇಟಿಂಗ್ 4.2 ಇದೆ.
ಹೊಕ್ಕೈಡೋ ಮಂಗಾ ಕೆಫೆ
ಇದೊಂದು ಪುಟ್ಟ, ಆದರೆ ಅಷ್ಟೇ ಸುಂದರವಾದ ರೆಸ್ಟೋರೆಂಟ್. ಜಪಾನಿಗರು ಹಾಗೂ ಕೊರಿಯನ್ನರು ಸಾಮಾನ್ಯವಾಗಿ ನೆಲ ಮೇಲೆ ಕೂತು ಊಟ ಮಾಡುವಂತೆ ನೀವು ಇಲ್ಲಿ ನೆಲದ ಮೇಲೆ ಕೂತು ತಿನ್ನಬಹುದು. ನಮ ಕಾಕಿ, ಚಿಕನ್ ಚೀಸ್ ಕಟ್ಸು, ಫ್ರೈಡ್ ಚಿಕನ್ ವಿಂಗ್ಸ್, ಪ್ರಾನ್ ಮೇಯೊ, ತೋಫು ಅಗೇಡಾಶಿ, ಅಗೇ ಗ್ಯೋಜಾ, ಸಾಲ್ಮನ್ ಹೊಟೇಟ್ ಡಾನ್ ಮತ್ತು ಗಾರ್ಲಿಕ್ ರೈಸ್ ವಿತ್ ಚಿಕ್‌ನಂತಹ ಖಾದ್ಯಗಳನ್ನು ಇಲ್ಲಿ ಮಿಸ್ ಮಾಡದೇ ತಿನ್ನಬೇಕು. ಈ ರೆಸ್ಟೋರೆಂಟ್ ಇರುವುದು ಅಪ್ಪಾರೆಡ್ಡಿ ಪಾಳ್ಯ, ಇಂದಿರಾನಗರದಲ್ಲಿ. ಇದು ಬೆಳಿಗ್ಗೆ 11.30 ರಿಂದ ರಾತ್ರಿ 11ರವರೆಗೆ ತೆರೆದಿರುತ್ತದೆ. ಇಲ್ಲಿ ಇಬ್ಬರಿಗೆ 2000 ರೂ ಆಗುತ್ತದೆ. ಈ ರೆಸ್ಟೋರೆಂಟ್ ಗೂಗಲ್ ರೇಟಿಂಗ್ 4.4 ಇದೆ.