ಸಿಲ್ಕ್ ಬೋರ್ಡ್ ಸಿಗ್ನಲ್‌ನ ಹೀಗೂ ಸದುಪಯೋಗ ಮಾಡ್ಕೋಬೋದು; ಟ್ರಾಫಿಕ್ ಜಾಮ್‌ಗೆ ಬಯ್ಯೋರು ಇಲ್ಕೇಳಿ; ರಾಜೀವ ಹೆಗಡೆ ಬರಹ
ಬೆಂಗಳೂರಿನ ಸಿಲ್ಕ್ ಬೋರ್ಡ್ ಸಿಗ್ನಲ್ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಸಿಲಿಕಾನ್ ಸಿಟಿಯಲ್ಲಿ ಅತಿ ಹೆಚ್ಚು ಟ್ರೋಲ್ ಆಗೋದು ಬಹುಶಃ ಇದೇ ಇರ್ಬೇಕು. ಅದಕ್ಕೆ ಕಾರಣ ಇಲ್ಲಿನ ಟ್ರಾಫಿಕ್ ಜಾಮ್. ಆದ್ರೆ ಈ ಸಿಲ್ಕ್ ಬೋರ್ಡ್ ಸಿಗ್ನಲ್ ಟ್ರಾಫಿಕ್‌ನ ಹೇಗೆಲ್ಲಾ ಸದುಪಯೋಗ ಮಾಡಿಕೊಳ್ಳಬಹುದು ಅಂತ ರಾಜೀವ ಹೆಗಡೆ ಹೇಳಿದ್ದಾರೆ ನೋಡಿ.
ಬೆಂಗಳೂರಿನ ಸಿಲ್ಕ್ ಬೋರ್ಡ್ ಸಿಗ್ನಲ್ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಬಹುಶಃ ಪ್ರಪಂಚದ ಯಾವ ಮೂಲೆಯಲ್ಲಿ ಕೇಳಿದ್ರೂ ಹೋ ಅದಾ, ಗೊತ್ತು ಬಿಡಿ ಅನ್ನಬಹುದು, ಅಷ್ಟೊಂದು ಫೇಮಸ್ಸ್ ನಮ್ಮ ಬೆಂಗಳೂರಿನ ಈ ಜಾಗ. ಟ್ರೋಲರ್ಸ್‌ಗಳಿಗೆ ಈ ಜಾಗ ಒಂಥರಾ ಹಾಟ್‌ಸ್ಪಾಟ್ ಅನ್ನೋದು ಸುಳ್ಳಲ್ಲ, ಸಿಲ್ಕ್ ಬೋರ್ಡ್ ಸಿಗ್ನಲ್ ಬಗ್ಗೆ ಲೆಕ್ಕವಿಲ್ಲದಷ್ಟು ಮೀಮ್ಸ್‌ಗಳು ಹುಟ್ಟಿಕೊಂಡಿವೆ. ಆದರೆ ಇದು ಪ್ರಸಿದ್ಧಿ ಪಡೆದಿದ್ದು ಪ್ರಖ್ಯಾತಿಯಿಂದಲ್ಲ, ಕುಖ್ಯಾತಿಯಿಂದ. ಅದಕ್ಕೆ ಕಾರಣ ಇಲ್ಲಿನ ಟ್ರಾಫಿಕ್ ಜಾಮ್.
ಬೆಂಗಳೂರಿನಲ್ಲೇ ಅತೀ ಹೆಚ್ಚು ಟ್ರಾಫಿಕ್ ಜಾಮ್ ಉಂಟಾಗುವುದು ಈ ಜಾಗದಲ್ಲೇ ಅನ್ನಬಹುದು. ಗಂಟೆಗಟ್ಟಲೇ ವಾಹನಗಳು ರಸ್ತೆಯುದ್ದಕ್ಕೂ ನಿಂತಿರುತ್ತವೆ. ನಿಧಾನಕ್ಕೆ ಆಮೆಯಂತೆ ವಾಹನಗಳು ಚಲಿಸುವುದನ್ನು ಇಲ್ಲಿ ಕಾಣಬಹುದು. ನಿಮಗೇನಾದ್ರೂ ಅರ್ಜೆಂಟ್ ಕೆಲಸ ಇದ್ದು ಈ ರೋಡ್ ಅಲ್ಲಿ ಹೋದ್ರೆ ನಿಮ್ಮ ಕೆಲಸ ಆದ ಹಾಗೇ ಬಿಡಿ. ಹಾಗಾಗಿ ಬೆಂಗಳೂರಿನ ಸಿಲ್ಕ್ ಬೋರ್ಡ್‌ಗೆ ಜನ ಬಾಯಿಗೆ ಬಂದ ಹಾಗೆ ಬೈದುಕೊಳ್ಳುತ್ತಾರೆ. ಮಳೆ ಬಂದ್ರಂತೂ ಮುಗಿತು ಬಿಡಿ, 2 ಗಂಟೆಗಳ ಕಾಲ ನೀವು ಸಿಲ್ಕ್ ಬೋರ್ಡ್ ಸಿಗ್ನಲ್‌ನಲ್ಲೇ ನಿಂತಿದ್ರು ಆಶ್ಚರ್ಯವಿಲ್ಲ. ಬಹುತೇಕ ಬೆಂಗಳೂರಿನ ನಿವಾಸಿಗಳು ಈ ರಸ್ತೆಯಲ್ಲಿ ಓಡಾಡಲೂ ಭಯಪಡ್ತಾರೆ. ಆದ್ರೆ ಈ ಸಿಲ್ಕ್ ಬೋರ್ಡ್ ಸಿಗ್ನಲ್‌ನ ಟ್ರಾಫಿಕ್ ಜಾಮ್‌ನಿಂದ ಎಷ್ಟೆಲ್ಲಾ ಪ್ರಯೋಜನ ಇದೆ, ಇದನ್ನು ಹೇಗೆ ಸದುಪಯೋಗ ಮಾಡಿಕೊಳ್ಳಬಹುದು ಎಂದು ರಾಜೀವ್ ಹೆಗಡೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಇದನ್ನು ನೋಡಿದ್ರೆ ಹೌದಲ್ವಾ ಅಂತ ನಿಮಗೂ ಅನ್ನಿಸದೇ ಇರದು. ಸಿಲ್ಕ್ ಬೋರ್ಡ್ ಸಿಗ್ನಲ್‌ನ ಸದುಪಯೋಗವನ್ನು ನೀವೂ ನೋಡಿ.
ರಾಜೀವ ಹೆಗಡೆ ಬರಹ
ಸಿಲ್ಕ್ ಬೋರ್ಡ್ ಸಿಗ್ನಲ್ ಸದುಪಯೋಗಗಳು
1. ಖಾತೆಗೆ ತಿಂಗಳ ಸಂಬಳ ಜಮೆ ಆದ ಕೂಡಲೇ ಸಿಗ್ನಲ್ ಮುಗಿಯುವುದರೊಳಗೆ ಮನೆ ಬಾಡಿಗೆ, ಇಎಂಐ, ಬಿಲ್ಲಿಂಗ್ಸ್, ಸೇವಿಂಗ್ಸ್ ಎಲ್ಲ ಟ್ರಾನ್ಸ್‌ಫರ್ ಮಾಡೋದು.
2. ಅಕ್ಕಪಕ್ಕದಲ್ಲಿ ಪರಿಚಯದವರು ಯಾರಾದರು ಇದ್ದಾರಾ ನೋಡೋದು
3. ಯಾರಿಗೆಲ್ಲ ಫೋನ್ ಮಾಡಿ ಮಾತನಾಡುವುದು ಬಾಕಿ ಇದೆ ಎಂದು ಪರಿಶೀಲಿಸುವುದು
4. ಓದದ ಸಂದೇಶಗಳನ್ನು ನೋಡುವುದು
5. ಮಧುರವಾದ ಹಾಡುಗಳನ್ನು ಹುಡುಕುವುದು
6. ಹೆಂಡತಿ ಹೇಳಿದ ಕೆಲಸಗಳ ಸ್ಥಿತಿಗತಿ ಅವಲೋಕಿಸೋದು
7. ಹೆಂಡತಿ ಹೇಳಿರುವ ಯಾವುದಾದರೂ ಕೆಲಸ ಮರೆತಿದ್ದಾಗ, ಅದಕ್ಕೆ ಹೇಗೆ ಬೆಣ್ಣೆ ಹಚ್ಚೋದು ಎಂದು ಆಲೋಚಿಸುವುದು
(ನಿಮ್ಮ ದಿನಚರಿ, ಸಲಹೆಯನ್ನೂ ಸೇರಿಸಬಹುದು)
ನೋಡಿ ರಾಜೀವ ಹೆಗಡೆ ಅವರಿಗೆ ಸಿಲ್ಕ್‌ಬೋರ್ಡ್ ಸಿಗ್ನಲ್‌ನ ಇಷ್ಟೆಲ್ಲಾ ರೀತಿ ಸದುಪಯೋಗ ಮಾಡ್ಕೋಬಹುದು ಅನ್ನಿಸಿದೆ. ಸುಮ್ನೆ ಸಿಲ್ಕ್ ಬೋರ್ಡ್‌ಗೆ ಬಯ್ಯೋದಲ್ಲ, ಬಯ್ಯೋ ಮುಂಚೆ ಹಿಂಗೂ ಯೋಚ್ನೇ ಮಾಡಿ.
ರಾಜೀವ ಹೆಗಡೆ ಫೆ. 29ಕ್ಕೆ ಈ ಪೋಸ್ಟ್ ಹಾಕಿದ್ದಾರೆ. ಈಗಾಗಲೇ 100 ಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದು, ಹಲವರು ಕಾಮೆಂಟ್ ಮಾಡುವ ಮೂಲಕ ಸಿಲ್ಕ್ ಬೋರ್ಡ್ ಸಿಗ್ನಲ್‌ನ ಬಗ್ಗೆ ಹಾಗೂ ರಾಜೀವ ಹೆಗಡೆ ಅವರ ಪೋಸ್ಟ್ ಬಗ್ಗೆ ಕಾಮೆಂಟ್ ಮಾಡಿದ್ದಾರೆ.
ಕಾಮೆಂಟ್‌ಗಳು ಹೀಗಿವೆ
ʼRelaxation time at silk board signal.… Almost ಎಲ್ಲಾ ಕಡೆ ಇದೇ ಹಣೆಬರಹ. ಹೊಸ ಹೊಸ ಕಂಪನಿಗಳಿಗೆ ಇನ್ವೆಸ್ಟ್ ಮಾಡೋಕೆ ಆಹ್ವಾಹನ ಕೊಡುವ ಸರ್ಕಾರ ಬೆಂಗಳೂರಿನ ರಸ್ತೆ ಬಗ್ಗೆ ಮೊದಲು ಗಮನ ಹರಿಸಲಿ.ಈಗ ಇದ್ದವರೇ ಇಲ್ಲಿಯ ಮೂಲಭೂತ ಸೌಕರ್ಯಗಳಾದ ನೀರು, ಒಳಚರಂಡಿ ವ್ಯವಸ್ಥೆ, ವಿದ್ಯುತ್, ಟ್ರಾಫಿಕ್ ಸಮಸ್ಯೆಗಳಿಂದ ಹೈರಾಣಾಗಿದ್ದಾರೆʼ ಎಂದು ಶಶಿಪ್ರಭಾ ಹೆಗಡೆ ಎನ್ನುವವರು ಕಾಮೆಂಟ್ ಮಾಡಿದ್ದಾರೆ.
ʼನಾವು ಸದ್ಯಕ್ಕೆ ವಾರಕ್ಕೆ ಎರಡು ದಿನ ಮಾತ್ರ ಆಫೀಸ್ ಇರುವುದರಿಂದ ಸ್ವಂತ ವಾಹನ ಹೊರಗೆ ತೆಗೆಯುವುದನ್ನು ಬಿಟ್ಟು ಬೆಮಸಾಸಂ ವಜ್ರ ಬಳಸಲು ಪ್ರಾರಂಭಿಸಿದ ಮೇಲೆ ಸಿಲ್ಕ್ ಬೋರ್ಡ್ ಸಿಗ್ನಲ್ ಮೂವಿ ನೋಡಲು, ಪುಸ್ತಕ ಓದಲು ಉಪಯೋಗಕ್ಕೆ ಬರುತ್ತಿದೆʼ ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ ರೋಹಿತ್ ಬಾಸ್ರಿ.
ʼಆಫೀಸ್ ನಲ್ಲಿ ಅಳಿದುಳಿದ ಕೆಲಸ (ಲಾಪ್ಟಾಪಿನಿಂದ) ವನ್ನು ಸಿಗ್ನಲ್ ನಲ್ಲಿ ಮಾಡಿಕೊಳ್ಳುವುದುʼ ಎಂದು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ ರಾಜೀವ್ ಪಟವರ್ಧನ್ ಎನ್ನುವವರು.
(This copy first appeared in Hindustan Times Kannada website. To read more like this please logon to kannada.hindustantimes.com)