Bengaluru News: ಬೆಂಗಳೂರಿನಲ್ಲೇ ರಾಜಸ್ಥಾನ ನೋಡಬೇಕಾ; ಹಾಗಾದ್ರೆ ಮಿಸ್ ಮಾಡದೇ ಇಲ್ಲಿಗೆ ಭೇಟಿ ಕೊಡಿ; ವೀಕೆಂಡ್ ಎಂಜಾಯ್ ಮಾಡಿ
Best Place for Weekend in Bengaluru: ವೀಕೆಂಡ್‌ಗೆ ಎಲ್ಲಾದ್ರೂ ಹೋಗೋಣ ಅಂತ ಪ್ಲಾನ್ ಮಾಡ್ತಾ ಇದ್ದೀರಾ. ಅದರಲ್ಲೂ ಮಕ್ಕಳಿಗೆ ಇಷ್ಟವಾಗುವಂತಹ ಜಾಗ ಇರಬೇಕು, ಇಡೀ ದಿನ ಟೈಮ್ ಪಾಸ್ ಆಗಬೇಕು ಅನ್ನೋ ಯೋಚನೆ ಇದ್ದರೆ ಇಲ್ಲೊಂದು ಜಾಗವಿದೆ. ಇಲ್ಲಿನ ವಿಶೇಷ ಏನು ಗೊತ್ತಾ, ಇಲ್ಲಿ ಸಂಪೂರ್ಣ ರಾಜಸ್ಥಾನವನ್ನೇ ನೀವು ಕಣ್ತುಂಬಿಕೊಳ್ಳಬಹುದು.

ರಾಜಸ್ಥಾನದ ಹಳ್ಳಿಯ ಸೊಬಗು, ಅಲ್ಲಿಯ ಸಾಂಪ್ರದಾಯಿಕ ಊಟ, ಆಟಗಳು, ಕುಶಲ ಕಲೆಗಳನ್ನು ನೀವು ಎಂಜಾಯ್ ಮಾಡಬೇಕು ಎಂದರೆ ರಾಜಸ್ತಾನಕ್ಕೆ ಹೋಗಬೇಕು ಎಂದೇನಿಲ್ಲ. ಬೆಂಗಳೂರಿನಲ್ಲೇ ರಾಜಸ್ಥಾನದ ಸೊಬಗನ್ನು ಕಣ್ತುಂಬಿಕೊಳ್ಳಬಹುದು.
ಹೌದು, ರಾಜಸ್ಥಾನಿ ಹಿನ್ನೆಲೆಯ ಧಾನಿ ರೆಸಾರ್ಟ್‌ನಲ್ಲಿ ನಿಮ್ಮ ಇಡೀ ದಿನವನ್ನು ಸಂತಸದಿಂದ ಕಳೆಯಬಹುದು. ಕುಟುಂಬದವರು ಹಾಗೂ ಸ್ನೇಹಿತರೊಂದಿಗೆ ಸಮಯ ಕಳೆಯಲು ಇಲ್ಲಿ ಸಾಕಷ್ಟು ಅವಕಾಶಗಳಿವೆ.
ಒಳಗೆ ಹೋಗುತ್ತಿದ್ದಂತೆ ನಿಮ್ಮನ್ನು ತಿಲಕವಿಟ್ಟು ಸ್ವಾಗತಿಸುತ್ತಾರೆ. ನಂತರ ಮಡಿಕೆ ತುಂಬಿದ ಮಜ್ಜಿಗೆಯನ್ನು ಕುಡಿಯಲು ಕೊಡುತ್ತಾರೆ. ಒಂಟೆ ಸವಾರಿ, ಕುದುರೆ ಸವಾರಿ, ಎತ್ತಿನ ಗಾಡಿ ರೈಡ್, ಬೊಂಬೆ ಪ್ರದರ್ಶನ ರಾಜಸ್ಥಾನಿ ಜಾನಪದ ನೃತ್ಯ ಸೇರಿದಂತೆ ಹಲವು ಚಟುವಟಿಕೆಗಳು ಇಲ್ಲಿದ್ದು, ಗ್ರಾಮೀಣ ಸಂಸ್ಕೃತಿಯನ್ನು ಎಂಜಾಯ್ ಮಾಡಬಹುದು.
ರಾಜಸ್ಥಾನಿ ಶೈಲಿಯ ಸಾಂಪ್ರದಾಯಿಕ ರುಚಿಕರವಾದ ಆಹಾರ ಇಲ್ಲಿ ಸಿಗಲಿದೆ. ಲೈವ್ ಸಂಗೀತ, ಡ್ಯಾನ್ಸ್, ಮೆಹಂದಿ ಸೆಲ್ಫಿ ಪಾಯಿಂಟ್‌ಗಳು ಮಾತ್ರವಲ್ಲದೆ ಇನ್ನೂ ಹತ್ತು ಹಲವು. ನೀವೂ ಸಂಗೀತಕ್ಕೆ ಹೆಜ್ಜೆ ಹಾಕಬಹುದು. ಕಚೋರಿ, ಪಾನಿಪೂರಿ, ತಿಂದುಕೊಂಡು ಸಕತ್ ಎಂಜಾಯ್ ಮಾಡಬಹುದಾದ ವಿಕೇಂಡ್ ಸ್ಪಾಟ್ ಎನ್ನಬಹುದು.
ರಾಜಸ್ಥಾನದಲ್ಲೇ ಇದ್ದೇವೆ ಎಂದು ಫೀಲ್ ಕೊಡುವಷ್ಟು ಸುಂದರವಾಗಿ ಈ ರೆಸಾರ್ಟ್ ಅನ್ನು ವಿನ್ಯಾಸ ಮಾಡಲಾಗಿದೆ. ಸುಂದರವಾದ ಗೋಡೆ, ವರ್ಣಚಿತ್ರಗಳು, ಸೆಟ್ಟಿಂಗ್‌ಗಳು ಎಲ್ಲರನ್ನು ಕಣ್ಮನ ಸೆಳೆಯುತ್ತದೆ. ಜೈಸಲ್ಮೇರ್ ಹಾಗೂ ರಾಜಸ್ಥಾನದ ಸಾಂಸ್ಕೃತಿಕ ಪರಂಪರೆಯ ಪ್ರದರ್ಶನ ಅದ್ಭುತವಾಗಿರಲಿದೆ. ಸಂಜೆಯಾಗುತ್ತಿದ್ದಂತೆ ಜೈಸಲ್ಮೇರ್‌ನ ಸಂಪೂರ್ಣ ಚಿತ್ರಣ ಕಣ್ಣ ಮುಂದೆ ಇರಲಿದೆ.
ಸೌದೆ ಓಲೆಯಲ್ಲಿ ಸುಟ್ಟ ರೊಟ್ಟಿ, ಪೂರಿ, ಸಬ್ಜಿ, ಸ್ವೀಟ್ಸ್‌ಗಳು ತಟ್ಟೆ ತುಂಬಾ ವಿವಿಧ ಬಗೆಯ ಖಾದ್ಯಗಳು ವಾವ್ ಅನ್ನುವಂತಿರುತ್ತದೆ. ಅನ್ ಲಿಮಿಟೆಡ್ ಫುಡ್ ಇಲ್ಲಿ ಲಭ್ಯ.
ಪ್ರತಿದಿನ ಮಧ್ಯಾಹ್ನ 3 ರಿಂದ ರಾತ್ರಿ 11 ಗಂಟೆಯವರೆಗೂ ಈ ರೆಸಾರ್ಟ್ ತೆಗೆದಿರುತ್ತದೆ. ದೊಡ್ಡವರಿಗೆ 1250, ಮಕ್ಕಳಿಗೆ 650 ರೂಪಾಯಿ ಪ್ರವೇಶ ಶುಲ್ಕವಿದೆ. ವಿಕೆಂಡ್ ಮಕ್ಕಳೊಂದಿಗೆ ಸಮಯ ಕಳೆಯಲು ಹೇಳಿ ಮಾಡಿಸಿದ ಜಾಗ ಎನ್ನಬಹುದು. ಅಂದ ಹಾಗೆ ಈ ಜಾಗ ಇರುವುದು ಬೆಂಗಳೂರಿನ ಹೆಸರಘಟ್ಟ ಮುಖ್ಯ ರಸ್ತೆಯಲ್ಲಿ.
ಲೇಖನ: ಅಕ್ಷರ ಕಿರಣ್
ಇದನ್ನೂ ಓದಿ
Bengaluru News: ಕಣ್ಮರೆಯಾಗುತ್ತಿರುವ ಮಿಂಚುಳಗಳನ್ನು ನೋಡುವ ಬಯಕೆಯೇ; ಬೆಂಗಳೂರಿನ ಈ ಜಾಗಕ್ಕೆ ಬನ್ನಿ; ಬೆಳಕಿನ ಹುಳುಗಳ ಅಂದ ಕಣ್ತುಂಬಿಕೊಳ್ಳಿ
Light Worm in Bengaluru: 80-90ರ ದಶಕಗಳಲ್ಲಿ ಹಳ್ಳಿಗಳಲ್ಲಿ ಹಾಗೂ ನಗರದ ಪ್ರದೇಶದ ಮರಗಳು ಹೆಚ್ಚಾಗಿದ್ದ ಕಡೆ ಕಾಣಿಸುತ್ತಿದ್ದ ಮಿಂಚುಳಗಳು ಇದೀಗ ಕಣ್ಮರೆಯಾಗಿವೆ. ಆದರೆ ಬೆಂಗಳೂರಿನ ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಈಗಲೂ ಇವುಗಳನ್ನು ಕಾಣಬಹುದಾಗಿದೆ. ಅಂತಹ ಜಾಗಗಳು ಹೀಗಿವೆ ನೋಡಿ.
ಮಳೆಗಾಲದಲ್ಲಿ ಅಲ್ಲಲ್ಲಿ ಮಿಂಚಿ ಮರೆಯಾಗುತ್ತಿದ್ದ, ರಾತ್ರಿ ವೇಳೆ ಆಲದ ಮರವನ್ನು ತನ್ನ ಬೆಳಕಿನಿಂದಲೇ ಸಿಂಗರಿಸುತ್ತಿದ್ದ ಮಿಂಚುಹುಳಗಳು ಈಗ ಅವಸಾನದ ಅಂಚಿನಲ್ಲಿವೆ. ಲೈಟ್ ಹುಳು, ಬೆಂಕಿ ಹುಳು, ಫೈರ್ ಹುಳು ಎಂದು ವಿವಿಧ ಹೆಸರಿನಿಂದ ಕರೆಯಲ್ಪಡುತ್ತಿದ್ದ ಮಿಂಚುಳಗಳು ಮಕ್ಕಳನ್ನು ಹೆಚ್ಚು ಸೆಳೆಯುತ್ತಿತ್ತು. ಇದೀಗ ಈ ಹುಳುಗಳು ಬೆರಳೆಣಿಕೆಯಷ್ಟು ಕಡೆಗಳಲ್ಲಿ ಮಾತ್ರ ಇವೆ. ಈ ಬಗ್ಗೆ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ ನಡೆಸಿರುವ ಅಧ್ಯಯನದಲ್ಲಿ ಬೆಂಗಳೂರಿನ 12 ಕಡೆಗಳಲ್ಲಿ ಫೈರ್ ಫ್ಲೈ - ಬೆಂಕಿ ಹುಳುಗಳು ಇರುವುದನ್ನು ಪತ್ತೆಯಾಗಿದೆ.
