ಆಪಲ್ ವಿಷನ್ ಪ್ರೋ ಹೆಡ್‌ಸೆಟ್‌ನೊಂದಿಗೆ ಎಂಟ್ರಿ ಕೊಟ್ಟ ಬೆಂಗಳೂರಿನ ವ್ಯಕ್ತಿ; ಕೋರಮಂಗಲ ಕಡೆ ಬರ್ಬೇಡಿ ಅಂದಿದ್ಯಾಕೆ ನೆಟ್ಟಿಗರು
ಆಪಲ್ ಈ ತಿಂಗಳ ಆರಂಭದಲ್ಲಿ ಬಿಡುಗಡೆ ಮಾಡಿರುವ ಆಪಲ್ ವಿಶನ್ ಪ್ರೋ ಹೆಡ್‌ಸೆಟ್ ಧರಿಸಿರುವ ವ್ಯಕ್ತಿಯೊಬ್ಬರು ಬೆಂಗಳೂರಿನ ಬೀದಿಯಲ್ಲಿ ಕಾಣಿಸಿದ್ದಾರೆ. ಎಕ್ಸ್‌ನಲ್ಲಿ ಇವರ ಫೋಟೊವನ್ನು ಪೋಸ್ಟ್ ಮಾಡಲಾಗಿದ್ದು, ಈ ಫೋಟೊ ಈಗ ಸಾಕಷ್ಟು ವೈರಲ್ ಆಗುತ್ತಿದೆ. ಅಲ್ಲದೆ ಹಲವರು ಕಾಮೆಂಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಹೊಸ ಹೊಸ ತಂತ್ರಜ್ಞಾನಗಳು ಬಂದಾಗ ಬಹುಶಃ ಅದು ಮೊದಲು ಪರಿಚಯವಾಗುವುದು ಬೆಂಗಳೂರನಲ್ಲಿ ಅನ್ಸುತ್ತೆ. ಬೆಂಗಳೂರು ಆಲ್ಟ್ರಾ ಮಾರ್ಡನ್ ಸಿಟಿ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಇತ್ತೀಚಿಗೆ ಫೋಟೊವೊಂದು ವೈರಲ್ ಆಗಿದೆ. ಆಪಲ್ ಕಂಪನಿ ಕೆಲ ದಿನಗಳ ಹಿಂದಷ್ಟೇ ಬಿಡುಗಡೆ ಮಾಡಿದ್ದ ಆಪಲ್ ವಿಶನ್ ಪ್ರೋವನ್ನು ಬೆಂಗಳೂರಿನ ವ್ಯಕ್ತಿಯೊಬ್ಬರು ಖರೀದಿ ಮಾಡಿದ್ದಾರೆ. ಜೊತೆಗೆ ಅದನ್ನು ಧರಿಸಿ ರಸ್ತೆಗಳಲ್ಲಿ ಓಡಾಡಿದ್ದಾರೆ.
ಏನಿದು ಸ್ಟೋರಿ?
ಆಪಲ್ ಕಂಪನಿ ಇತ್ತೀಚೆಗೆ ವರ್ಚುವಲ್ ರಿಯಾಲಿಟಿ ಹೆಡ್‌ಸೆಟ್ ಆಪಲ್ ವಿಶನ್ ಪ್ರೋ ಬಿಡುಗಡೆ ಮಾಡಿತ್ತು. ಈ ತಂತ್ರಜ್ಞಾನವು ಬಳಕೆದಾರರಿಗೆ ತಮ್ಮ ದೈನಂದಿನ ಜೀವನದಲ್ಲಿ ಅಂತರ್ಗತವಾಗಿರುವ ವರ್ಚುವಲ್ ರಿಯಾಲಿಟಿ ಅನುಭವವನ್ನು ಹೊಂದಲು ಅವಕಾಶ ಒದಗಿಸುತ್ತದೆ. ಈ ಪ್ರಾಡಕ್ಟ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದಾಗಿನಿಂದ ಹಲವರು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಿದ್ದಾರೆ. ಇದಲ್ಲದೇ ಈ ಆಪಲ್ ವಿಶನ್ ಪ್ರೋ ಬಳಸುವ ಹಲವರ ವಿಡಿಯೊಗಳು ಕೂಡ ವೈರಲ್ ಆಗಿವೆ. ಇತ್ತೀಚಿಗೆ ಬೆಂಗಳೂರಿನಲ್ಲಿ ಇದನ್ನು ಧರಿಸಿರುವ ವ್ಯಕ್ತಿಯೊಬ್ಬರ ಫೋಟೊ ಇದೀಗ ಸಾಕಷ್ಟು ವೈರಲ್ ಆಗುತ್ತಿದೆ.
ಎಕ್ಸ್ ಬಳಕೆದಾರರ ಆಯುಷ್ ಪ್ರಣವ್ ಈ ತಂತ್ರಜ್ಞಾನವನ್ನು ಬಳಸುತ್ತಿರುವ ವರುಣ್ ಮಯ್ಯ ಅವರ ಚಿತ್ರವನ್ನು ಹಂಚಿಕೊಂಡಿದ್ದಾರೆ. ಇಂದಿರಾನಗರದ ಬೀದಿಗಳಲ್ಲಿ ಆಪಲ್ ವಿಶನ್ ಪ್ರೋ ಜೊತೆ ಕಾಣಿಸಿದ್ದಾರೆ ವರುಣ್, ಪೀಕ್ ಬೆಂಗಳೂರು ಕ್ಷಣದಲ್ಲಿ ಕಂಡಿದ್ದುʼ ಎಂದು ಬರೆದುಕೊಂಡಿದ್ದಾರೆ. ಈ ಚಿತ್ರದಲ್ಲಿ ವರುಣ್ ಮಯ್ಯ ಅವರ ಆಪಲ್ ವಿಶನ್ ಪ್ರೋ ಹೆಡ್‌ಸೆಟ್ ಧರಿಸಿ ರಸ್ತೆಯೊಂದರಲ್ಲಿ ಇರುವುದನ್ನು ಕಾಣಬಹುದಾಗಿದೆ.
ಫೆಬ್ರುವರಿ 12ರಂದು ಇವರು ಈ ಪೋಸ್ಟ್ ಹಂಚಿಕೊಂಡಿದ್ದ, ಈಗಾಗಲೇ 50,000ಕ್ಕೂ ಅಧಿಕ ಮಂದಿ ಇದನ್ನು ನೋಡಿದ್ದಾರೆ. ಹಲವರು ಲೈಕ್ ಮಾಡಿದ್ದರೆ, ಕೆಲವರು ಕಾಮೆಂಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಆಪಲ್ ವಿಶನ್ ಪ್ರೋಗೆ ಬಂದ ಕಾಮೆಂಟ್‌ಗಳು ಹೀಗಿವೆ
ʼಕೋರಮಂಗಲದಲ್ಲಿ ಅದನ್ನ ಟ್ರೈ ಮಾಡ್ಬೇಡಿ, ಬರೀ ಗುಂಡಿಗಳೇ ಇವೆʼ ಎಂದು ವ್ಯಕ್ತಿಯೊಬ್ಬರು ಕಾಮೆಂಟ್ ಮಾಡಿದ್ದಾರೆ.
ʼನೇತತ್ರಜ್ಞರು ಮುಂಬರುವ ದಿನಗಳಿಗೆ ಸಿದ್ಧರಾಗಬೇಕು ಎಂದು ವ್ಯಕ್ತಿಯೊಬ್ಬರು ವ್ಯಂಗ್ಯ ಧಾಟಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ʼಬೆಂಗಳೂರಿನ ಬೀದಿಗಳಲ್ಲಿ ವಿಶನ್ ಪ್ರೋ ಜಾಂಬಿಗಳು ಬಂದಿದ್ದಾರೆʼ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ʼಸೋಂಕು ಬಹಳ ಬೇಗ ಹರಡುತ್ತೆʼ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ
Viral News: ಐಸ್‌ಕ್ರೀಮ್ ಇಡ್ಲಿ ವಿಡಿಯೊ ವೈರಲ್; ಇಡ್ಲಿಗೆ ನ್ಯಾಯ ಸಿಗ್ಲೇಬೇಕು ಅಂದ್ರು ನೆಟ್ಟಿಗರು; ಏನಿದು ಕಥೆ ನೋಡಿ
ಜಗತ್ತಲ್ಲಿ ಜನ ಏನೇನೆಲ್ಲಾ ಪ್ರಯೋಗ ಮಾಡ್ತಾರೆ ಅಂತ ಊಹಿಸೋಕು ಸಾಧ್ಯ ಇಲ್ಲ. ಕೆಲವೊಮ್ಮೆ ಇದೆಲ್ಲಾ ಸಾಧ್ಯಾನಾ ಅಂತಾನೂ ಅನ್ನಿಸುತ್ತೆ, ಇಲ್ಲೊಬ್ಬ ವ್ಯಾಪಾರಿ ಐಸ್‌ಕ್ರೀಮ್ ಇಡ್ಲಿ ಮಾಡುವ ಮೂಲಕ ನೆಟ್ಟಿಗರ ಕೋಪಕ್ಕೆ ಗುರಿಯಾಗಿದ್ದಾರೆ. ಮಾತ್ರವಲ್ಲ ನೆಟ್ಟಿಗರೆಲ್ಲಾ ಸೇರಿ ಇಡ್ಲಿಗೆ ನ್ಯಾಯ ಕೊಡಿಸುವ ಹೋರಾಟದಲ್ಲಿ ತೊಡಗಿದ್ದಾರೆ.
ವಿಭಾಗ