Bengaluru Water Issue: ಮುಂದಿನ ದಿನಗಳಿಗಾಗಿ ನೀರು ಉಳಿಸುವುದು ಹೇಗೆ; ಬೆಂಗಳೂರು ಜನತೆಗಾಗಿ ರಾಜೀವ್‌ ಹೆಗ್ಡೆ ನೀಡಿರುವ ಟಿಪ್ಸ್‌ ಇದು
ಕನ್ನಡ ಸುದ್ದಿ  /  ಜೀವನಶೈಲಿ  /  Bengaluru Water Issue: ಮುಂದಿನ ದಿನಗಳಿಗಾಗಿ ನೀರು ಉಳಿಸುವುದು ಹೇಗೆ; ಬೆಂಗಳೂರು ಜನತೆಗಾಗಿ ರಾಜೀವ್‌ ಹೆಗ್ಡೆ ನೀಡಿರುವ ಟಿಪ್ಸ್‌ ಇದು

Bengaluru Water Issue: ಮುಂದಿನ ದಿನಗಳಿಗಾಗಿ ನೀರು ಉಳಿಸುವುದು ಹೇಗೆ; ಬೆಂಗಳೂರು ಜನತೆಗಾಗಿ ರಾಜೀವ್‌ ಹೆಗ್ಡೆ ನೀಡಿರುವ ಟಿಪ್ಸ್‌ ಇದು

Bengaluru Water Issue: ಬೆಂಗಳೂರಿನಲ್ಲಿ ನೀರಿಗೆ ಹಾಹಾಕಾರ ಶುರುವಾಗಿದೆ. ಕೆಲವರು ನೀರು ಸಿಗದೆ ಸ್ವಲ್ಪ ದಿನಗಳ ಮಟ್ಟಿಗೆ ಹುಟ್ಟೂರಿಗೆ ವಾಪಸ್‌ ಹೋಗುತ್ತಿದ್ದಾರೆ. ರಾಜ್ಯ ಸರ್ಕಾರ ಕೂಡಾ ನೀರಿನ ಸಮಸ್ಯೆ ಬಗೆಹರಿಸಲು ಸತತ ಪ್ರಯತ್ನ ಮಾಡುತ್ತಿದೆ. ಬರಹಗಾರ ರಾಜೀವ್‌ ಹೆಗ್ಡೆ, ನೀರು ಉಳಿಸಲು ಕೆಲವೊಂದು ಸಲಹೆಗಳನ್ನು ಹಂಚಿಕೊಂಡಿದ್ದಾರೆ.

ನೀರು ಉಳಿಸಲು ಬರಹಗಾರ ರಾಜೀವ್‌ ಹೆಗ್ಡೆ ಟಿಪ್ಸ್‌
ನೀರು ಉಳಿಸಲು ಬರಹಗಾರ ರಾಜೀವ್‌ ಹೆಗ್ಡೆ ಟಿಪ್ಸ್‌ (PC: Rajeev hegde, Pixabay)

ಬೆಂಗಳೂರು: ಬೇಸಿಗೆಯ ಹೊಸ್ತಿಲಲ್ಲಿದ್ದೇವೆ. ಈಗಲೇ ಸುಡು ಬಿಸಿಲು ನಮ್ಮನ್ನು ಕಾಡುತ್ತಿದೆ. ಈಗಲೇ ಈ ಸ್ಥಿತಿ ಆದರೆ ಮುಂದಿನ 2-3 ತಿಂಗಳಲ್ಲಿ ಪರಿಸ್ಥಿತಿ ಇನ್ನೆಷ್ಟು ಬಿಗಡಾಯಿಸಬಹುದು ಎಂಬ ಪ್ರಶ್ನೆ ಕಾಡುತ್ತಿದೆ. ಬೆಂಗಳೂರು ಜನತೆಗೆ ನೀರಿನ ಸಮಸ್ಯೆ ಎದುರಾಗಿದೆ. ದೈನಂದಿನ ಚಟುವಟಿಕೆಗಳಿಗಿರಲಿ ಕುಡಿಯುವ ನೀರಿಗೂ ಸಮಸ್ಯೆ ಎದುರಾಗಿದೆ.

ಜನರ ನೀರಿನ ಸಮಸ್ಯೆಯನ್ನು ನೀಗಿಸಲು ಸರ್ಕಾರ ಕೂಡಾ ಬಹಳ ಪ್ರಯತ್ನಿಸುತ್ತಿದೆ. ನೀರು ಉಳಿಸಲು, ನೀರನ್ನು ಮಿತವಾಗಿ ಬಳಸಲು ಜನರಿಗೆ ಅರಿವು ಮೂಡಿಸುವ ಪ್ರಯತ್ನವನ್ನೂ ಮಾಡುತ್ತಿದೆ. ಬೆಂಗಳೂರು ನೀರಿನ ಸಮಸ್ಯೆ ವಿಚಾರವಾಗಿ ಬರಹಗಾರ ರಾಜೀವ್‌ ಹೆಗ್ಡೆ ತಮ್ಮ ಫೇಸ್‌ಬುಕ್‌ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.

ಹಿಂದೆಂದೂ ಕಾಣದ ಜಲಕ್ಷಾಮದತ್ತ ಬೆಂಗಳೂರು ಹಾಗೂ ಕರ್ನಾಟಕದ ಬಹುತೇಕ ಪ್ರದೇಶಗಳು ಸಾಗುತ್ತಿವೆ. ಹೀಗಾಗಿ ಈ ಕಷ್ಟದ ಕಾಲದಲ್ಲಿ ನಮ್ಮನ್ನು ಹಾಗೂ ನಮಗಿಷ್ಟವಾಗಿರುವುದನ್ನು ಕಾಪಾಡಿಕೊಳ್ಳಲು ಹರಸಾಹಸ ಪಡಲೇಬೇಕು. ಲಭ್ಯವಿರುವ ಅಲ್ಪ ನೀರಿನಲ್ಲಿ ನಮ್ಮ ದಿನಚರಿಯನ್ನು ಹೇಗೆ ಶಿಸ್ತುಬದ್ಧ ಮಾಡಿಕೊಳ್ಳಬಹುದು ಎನ್ನುವ ಬಗ್ಗೆ ಗಂಭೀರವಾಗಿ ಆಲೋಚಿಸಬೇಕಿದೆ. ಅದರಲ್ಲೂ ನೀರಿನ ವಿಚಾರಕ್ಕೆ ಹೆಚ್ಚುವರಿ ಗಮನ ಆಗಲೇಬೇಕು. ಇಲ್ಲವಾದಲ್ಲಿ ಇನ್ನೆರಡು ತಿಂಗಳನ್ನು ದೂಡುವುದು ಸುಲಭವಲ್ಲ.

ಹೀಗಾಗಿ ನನಗೆ ತಿಳಿದ ಮಟ್ಟಿಗೆ ನಾನು ಪಾಲಿಸುತ್ತಿರುವ ಅಂಶಗಳನ್ನು ಹಂಚಿಕೊಳ್ಳುತ್ತೇನೆ. ದಯವಿಟ್ಟು ನಿಮ್ಮ ವಿಚಾರವನ್ನೂ ಕಾಮೆಂಟ್‌ ರೂಪದಲ್ಲಿ ತಿಳಿಸಿ. ಇನ್ನಷ್ಟು ಜನರಿಗೆ ಸಹಾಯವಾಗಲಿ.

ಕಾರಿನ ಸ್ವಚ್ಛತೆಗಾಗಿ

ನನ್ನ ಹಾಗೆ ಅದೆಷ್ಟೋ ಮಂದಿಗೆ ಕಾರು ಸ್ವಚ್ಛವಾಗಿರದಿದ್ದಲ್ಲಿ ಹಿಂಸೆಯಾಗಬಹುದು. ಆದರೆ ಇಂದಿನ ಸ್ಥಿತಿಯಲ್ಲಿ ಯಥೇಚ್ಛವಾಗಿ ನೀರು ಬಳಸಿ ಕಾರನ್ನು ಶುದ್ಧ ಮಾಡುವುದು ಸೂಕ್ತವಲ್ಲ. ಹೀಗಾಗಿ ಮೃದುವಾಗಿರುವ ಬ್ರಶ್‌ ಮೂಲಕ ಮೊದಲು ಕಾರಿನ ಮೇಲಿನ ಧೂಳನ್ನು ತೆಗೆಯಲು ನಿರ್ಧರಿಸಿದ್ದೇನೆ. ಬಳಿಕ ಮೃದುವಾಗಿರುವ ಬಟ್ಟೆಯನ್ನು ನೀರಿನಲ್ಲಿ ಅದ್ದಿಕೊಂಡು ಒರೆಸುತ್ತೇನೆ. ಅಗತ್ಯಬಿದ್ದಲ್ಲಿ ನೀರಿನ ಬಾಟಲ್‌ನ ಸ್ಪ್ರೇ ಕೂಡಾ ಬಳಸಬಹುದು. ಇದರಿಂದ ಅತಿ ಕಡಿಮೆ ನೀರಿನಲ್ಲಿ ಕಾರನ್ನು ಶುದ್ಧವಾಗಿರಿಸಿಕೊಳ್ಳಬಹುದು. ಇದರ ಜತೆಗೆ ಇನ್ನು ಕಾರನ್ನು ಕಡ್ಡಾಯವಾಗಿ ಮುಚ್ಚಿಡಬೇಕೆಂದು ನಿರ್ಧರಿಸಿದ್ದೇನೆ. ಅದರಿಂದ ಕಾರನ್ನು ಶುದ್ಧಗೊಳಿಸುವ ದಿನಗಳ ಅಂತರವನ್ನು ಹೆಚ್ಚಿಸಬಹುದು. ‌

ಕಡಿಮೆ ನೀರಿನಲ್ಲಿ ಕಾರನ್ನು ಸ್ವಚ್ಛವಾಗಿರಿಸಿಕೊಳ್ಳಲು ನೀವೇನು ಮಾಡುತ್ತಿದ್ದೀರಿ?

ನೀರಿನ ರಕ್ಷಣೆಗೆ ಹೀಗೂ ಮಾಡಬಹುದು

1. ವಾಷಿಂಗ್‌ ಮಶೀನ್‌ನಲ್ಲಿ ಕಡಿಮೆ ಬಟ್ಟೆಯನ್ನು ತೊಳೆಯಲು ಹಾಕುವುದನ್ನು ನಿಲ್ಲಿಸಬಹುದು.

2. ಪಾತ್ರೆ ಹಾಗೂ ಕೈ ತೊಳೆಯುವಾಗ ಅಗತ್ಯಕ್ಕಿಂತ ಹೆಚ್ಚು ನೀರನ್ನು ಬಿಟ್ಟಿಡದಂತೆ ನೋಡಿಕೊಳ್ಳೋಣ.

3. ಆದಷ್ಟು ಕಡಿಮೆ ನೀರಿನಲ್ಲಿ ಸ್ನಾನ ಮುಗಿಸಲು ಪ್ರಯತ್ನಿಸೋಣ.

4. ಮನೆಯ ಹತ್ತಿರ ಹಕ್ಕಿಗಳು ಬರುತ್ತಿದ್ದರೆ ಅವುಗಳಿಗೆ ಕುಡಿಯಲು ನೀರಿನ ವ್ಯವಸ್ಥೆ ಮಾಡಲು ಪ್ರಯತ್ನಿಸೋಣ.

5. ಎಲ್ಲೆಲ್ಲಿ ನೀರು ಹಾಕಿ ತೊಳೆಯುವ ಪ್ರಸಂಗ ಬರುತ್ತದೋ, ಅಲ್ಲೆಲ್ಲ ಸಾಧ್ಯವಾದಲ್ಲಿ ಬಟ್ಟೆಯಿಂದ ಒರೆಸುವ ಪ್ರಯತ್ನ ಮಾಡೋಣ.

6. ಅಕ್ವಾಗಾರ್ಡ್‌ ವೇಸ್ಟ್‌ ನೀರನ್ನು ಮರು ಬಳಕೆ ಮಾಡುವತ್ತ ಆಲೋಚಿಸೋಣ. ಉದಾಹರಣೆಗೆ ಗಿಡಕ್ಕೆ ನೀರು ಹಾಕಲು, ಪಾತ್ರೆ ತೊಳೆಯಲು, ನೆಲ ಒರೆಸಲು....

ನಿಮ್ಮ ಸಲಹೆಗಳನ್ನು ದಯವಿಟ್ಟು ಪಟ್ಟಿ ಮಾಡಿ ಬರೆದು ಹಾಕಿ. ನಿಮ್ಮ ಅಮೂಲ್ಯ ಸಲಹೆಗಳು ಒಂದಿಷ್ಟು ಜನರ ಜೀವನವನ್ನು ತಂಪಾಗಿಸಬಹುದು.

#SaveWater #Bengaluru #Karnataka

ಎಂದು ರಾಜೀವ್‌ ಹೆಗ್ಡೆ, ನೀರು ಉಳಿಸಲು ಕೆಲವೊಂದು ಸಲಹೆಗಳನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ಗೆ ಅನೇಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೆಲ್ಲಕ್ಕಿಂತ ಹೆಚ್ಚಾಗಿ ಮನೆಯ ಎಲ್ಲ ಕೊಳಾಯಿಗಳು ಲೀಕ್ ಆಗದಂತೆ ನೋಡಿಕೊಳ್ಳಿ. ಕಾಲಕಾಲಕ್ಕೆ ಕೊಳಾಯಿಯ ನಿರ್ವಹಣೆ ಮಾಡುತ್ತಿರಿ. ಓದಲು ಸಾಮಾನ್ಯ ಅನ್ನಿಸಬಹುದು, ಅಂದಾಜಿನ ಪ್ರಕಾರ ಶೇ. 30 ರಷ್ಟು ನೀರು ವ್ಯರ್ಥವಾಗಿ ಸೋರಿಕೆಯಾಗುತ್ತಿರುತ್ತದೆ ಎಂದು ರಾಜೀವ್‌ ಪಟವರ್ಧನ್‌ ಎಂಬುವವರು ಕಾಮೆಂಟ್‌ ಮಾಡಿದ್ದರೆ,

ಅರ್ಧ ಲೀಟರ್ ನೀರಿಗೆ ಅರ್ಧ ಬೂಚು ಈ ಲಿಕ್ವಿಡ್ ಮಿಕ್ಸ್ ಮಾಡಿ ಸ್ಪ್ರೇ ಬಾಟಲಿಯಿಂದ ಸ್ಪ್ರೇ ಮಾಡ್ತಾ ಮೈಕ್ರೋಫೈಬರ್ ಬಟ್ಟೆಯ ಮೂಲಕ ಒರೆಸುತ್ತಾ ಹೋದರೆ, ಕಾಲು ಗಂಟೆಯಲ್ಲಿ ಕಾರು ಲಕಲಕ! ಇಡೀ ಕಾರನ್ನು ಅರ್ಧ ಲೀಟರ್ ನೀರಿನಲ್ಲಿ ವಾಷ್ ಮಾಡಬಹುದು. ಒಮ್ಮೆ ಕೊಂಡರೆ, ನೀವು ವಾರಕ್ಕೊಮ್ಮೆ ಕಾರ್ ಕ್ಲೀನ್ ಮಾಡುವವರಾದರೆ, ಎರಡು ವರ್ಷ ಬರುತ್ತೆ. ಎಷ್ಟೇ ಗಲೀಜಾಗಿದ್ದರೂ ಹೋಗುತ್ತೆ. ಜತೆಗೆ ವ್ಯಾಕ್ಸ್ ಇರೋದರಿಂದ ಶೈನ್ ಸಹ ಬರುತ್ತೆ. ನಾನು ಐದು ವರ್ಷದಿಂದ ಇದನ್ನೇ ಬಳಸ್ತಿರೋದು ಎಂದು ಸುಶ್ರುತ ದೊಡ್ಡೇರಿ ಎನ್ನುವವರು ಟಿಪ್ಸ್‌ ಕೊಟ್ಟಿದ್ದಾರೆ.

Whats_app_banner