ಮದುವೆಯ ಉಡುಗೊರೆ: ನಿಮ್ಮ ಆಪ್ತರ ವಿವಾಹ ಸಮಾರಂಭಕ್ಕೆ ಕೊಡಲು ಇಲ್ಲಿವೆ ಅತ್ಯುತ್ತಮ ಗಿಫ್ಟ್ ಐಡಿಯಾ
ಮದುವೆ ಸೀಸನ್ ಮತ್ತೆ ಬಂದಿದೆ. ಆಪ್ತರ ವಿವಾಹ ಸಮಾರಂಭಕ್ಕೆ ಯಾವ ಗಿಫ್ಟ್ ಕೊಡುವುದು ಎಂದು ಯೋಚಿಸುತ್ತಿದ್ದೀರಾ? ಹಾಗಾದರೆ ಇಲ್ಲಿವೆ ನೋಡಿ ಬೆಸ್ಟ್ ಐಡಿಯಾಗಳು. ಈ ಉಡುಗೊರೆ ಕೊಡುವುದರಿಂದ ನೂತನ ವಧುವರರ ನೆನಪಿನಲ್ಲಿ ನೀವು ಬಹುಕಾಲ ಉಳಿಯುವಿರಿ.

ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಅನೇಕ ವಿವಾಹ ಮುಹೂರ್ತಗಳಿವೆ. ನಿಮಗೆ ತಿಳಿದಿರುವ ಅನೇಕ ಜನರು ಮತ್ತು ಗೆಳೆಯರು, ಕುಟುಂಬಿಕರು, ಸಂಬಂಧಿಕರು ಇಲ್ಲವೇ ಸಹೋದ್ಯೋಗಿಗಳು ಮದುವೆಗೆ ತಯಾರಾಗುತ್ತಿದ್ದಾರೆ. ನೀವು ಅವರ ಮದುವೆಗೆ ಬರಿಗೈನಲ್ಲಿ ಹೋದರೆ ಹೇಗಿರುತ್ತದೆ? ಹಾಗೆ ಸುಮ್ಮನೆ ಹೋಗುವುದು ಸರಿಯಲ್ಲ ಅಲ್ಲವೇ, ಉಡುಗೊರೆ ಬೇಡ ಎಂದು ಅವರು ಹೇಳಿದ್ದರೂ, ನಮ್ಮ ಖುಷಿಗಾಗಿ ಸಣ್ಣಪುಟ್ಟ ಮದುವೆ ಉಡುಗೊರೆ ಕೊಡುವುದು ತಪ್ಪಲ್ಲ. ಅವರು ತಮ್ಮ ಜೀವನದುದ್ದಕ್ಕೂ ನೆನಪಿನಲ್ಲಿ ಉಳಿಯುವ ಉತ್ತಮ ಉಡುಗೊರೆಯನ್ನು ನೀವು ಅವರ ಮದುವೆಗೆ ಒಯ್ಯಬೇಕು. ನಿಮ್ಮ ಬಜೆಟ್‌ನಲ್ಲಿ ಹೊಸ ದಂಪತಿಗಳು ಬಳಸಬಹುದಾದ ಮದುವೆಯ ಉಡುಗೊರೆಗಳಿಗೆ ಇಲ್ಲಿದೆ ಟಿಪ್ಸ್. ನೀವು ಉತ್ತಮ ಉಡುಗೊರೆಯನ್ನು ನೀಡಲು ಬಯಸಿದರೆ ಯಾವ ರೀತಿಯ ಗಿಫ್ಟ್ ಪ್ಲ್ಯಾನ್ ಉತ್ತಮ ಎಂಬ ವಿವರ ಇಲ್ಲಿದೆ. ಇದನ್ನು ನೋಡಿ, ನಿಮ್ಮ ನೆಚ್ಚಿನ ದಂಪತಿಗೆ ಉಡುಗೊರೆ ಆಯ್ಕೆ ಮಾಡಬಹುದು.
ಅಡುಗೆಮನೆಯ ವಸ್ತುಗಳು
ನವ ದಂಪತಿಗಳಿಗೆ ಖಂಡಿತವಾಗಿಯೂ ಮನೆಯಲ್ಲಿ ಸಾಕಷ್ಟು ವಸ್ತುಗಳು ಬೇಕಾಗುತ್ತವೆ. ಅವರು ಯಾವ ವಸ್ತುಗಳನ್ನು ಹೆಚ್ಚಾಗಿ ಬಳಸುತ್ತಾರೆ ಎಂಬುದರ ಬಗ್ಗೆ ಯೋಚಿಸಿ ಮತ್ತು ಅಂತಹ ವಸ್ತುಗಳನ್ನು ಖರೀದಿಸಿ. ಅಡುಗೆ ಮನೆಯಲ್ಲಿ ಮಿಕ್ಸಿ ಇರಬೇಕು. ಹೀಗಾಗಿ ನೀವು ಮಿಕ್ಸಿ ನೀಡಿದರೆ, ಅದನ್ನು ಮೂಲೆಯಲ್ಲಿ ಎಸೆಯದೆ ಖಂಡಿತವಾಗಿಯೂ ಬಳಸಲಾಗುತ್ತದೆ. ಆದ್ದರಿಂದ ನೀವು ದಂಪತಿಗಳಿಗೆ ಮಿಕ್ಸಿಯನ್ನು ನೀಡಿದರೆ, ಅದನ್ನು ಅವರು ಬಳಸುವವರೆಗೂ ಖಂಡಿತವಾಗಿಯೂ ನಿಮ್ಮನ್ನು ನೆನಪಿಟ್ಟುಕೊಳ್ಳುತ್ತಾರೆ.
ಟ್ರೆಂಡಿ ಕುಕ್‌ವೇರ್
ವಿವಾಹಿತ ದಂಪತಿಗಳಿಗೆ ಅಡುಗೆ ಬಹಳ ಮುಖ್ಯ. ಈಗ ಕುಕ್‌ವೇರ್‌ನಲ್ಲಿ ಟ್ರೆಂಡಿಯಾಗಿರುವ ಡಿಸೈನ್ ಐಟಂಗಳು, ಪಾತ್ರೆ ಪರಿಕರಗಳು ಅಡುಗೆಮನೆಯಲ್ಲೂ ಬಂದಿದೆ. ವಿವಿಧ ಬ್ರ್ಯಾಂಡ್ ಮತ್ತು ಇತರ ಅನೇಕ ಕಂಪನಿಗಳು ಸುಂದರವಾದ ಪಾತ್ರೆಗಳನ್ನು ಮಾರುಕಟ್ಟೆಗೆ ತಂದಿವೆ ಮತ್ತು ಅವು ಅದನ್ನು ಅಡುಗೆ ಮನೆಯಲ್ಲಿ ಆಕರ್ಷಕವಾಗಿ ಕಾಣುವಂತೆ ಮಾಡುತ್ತವೆ. ಅಂತಹ ಸುಂದರವಾದ ಅಡುಗೆ ಪಾತ್ರೆಯನ್ನು ಅವರಿಗೆ ನೀಡಿ. ಆ ಕುಕ್‌ವೇರ್ ಸೆಟ್ ಯಾವಾಗಲೂ ಅವರ ಅಡುಗೆಮನೆಯಲ್ಲಿ ಉಪಯೋಗಕ್ಕೆ ಬರುತ್ತದೆ.
ಹನಿಮೂನ್ ಪ್ಯಾಕೇಜ್
ನವ ದಂಪತಿಗೆ ಉಡುಗೊರೆ ನೀಡಲು ಇನ್ನೊಂದು ಉತ್ತಮ ಆಯ್ಕೆ ಹನಿಮೂನ್ ಪ್ಯಾಕೇಜ್. ವೆಡ್ಡಿಂಗ್ ಗಿಫ್ಟ್ ಬಜೆಟ್ ಅನ್ನು ಹೆಚ್ಚಿಸಲು ಬಯಸುವವರು, ದಂಪತಿಗಳಿಗೆ ಹನಿಮೂನ್ ಪ್ಯಾಕೇಜ್ ಸಹ ಉಡುಗೊರೆಯಾಗಿ ನೀಡಬಹುದು. ಹೀಗೆ ಮಾಡುವುದರಿಂದ ನೀವು ಅವರಿಗೆ ಶಾಶ್ವತ ನೆನಪುಗಳನ್ನು ನೀಡಿದವರಾಗಿರುತ್ತೀರಿ. ನೀವು ಅವರಿಗೆ ಐಷಾರಾಮಿ ಹನಿಮೂನ್ ಪ್ಯಾಕೇಜ್ ನೀಡಿದರೆ, ಅವರು ಯಾವಾಗಲೂ ಅದನ್ನು ನೆನಪಿಟ್ಟುಕೊಳ್ಳುತ್ತಾರೆ. ಮತ್ತು ಹನಿಮೂನ್ ಫೋಟೊ ನೋಡಿದಾಗೆಲ್ಲ ಅವರಿಗೆ ನಿಮ್ಮ ನೆನಪಾಗುತ್ತದೆ.
ಡಿನ್ನರ್ ವೋಚರ್
ನಗರಗಳಲ್ಲಿ ಡೈನಿಂಗ್ ರೆಸ್ಟೋರೆಂಟ್‌ಗಳ ಉತ್ತಮ ಭೋಜನಕ್ಕಾಗಿ ನೀವು ಅವರಿಗೆ ಡಿನ್ನರ್ ವೋಚರ್ ಸಹ ಉಡುಗೊರೆಯಾಗಿ ನೀಡಬಹುದು. ಈ ರೀತಿಯ ವೋಚರ್ ಇದ್ದರೆ, ಅವರು ಖಂಡಿತವಾಗಿಯೂ ಊಟಕ್ಕೆ ಹೊರಗೆ ಹೋಗುತ್ತಾರೆ. ಆದರೆ ಉತ್ತಮ ರೆಸ್ಟೋರೆಂಟ್ ಆಯ್ಕೆ ಮಾಡಲು ಮರೆಯಬೇಡಿ. ಜತೆಗೆ, ಉತ್ತಮ ವಾತಾವರಣ, ಅವರು ಮೆಚ್ಚುವ ಆಹಾರ ದೊರೆಯುವ ರೆಸ್ಟೋರೆಂಟ್ ಆಯ್ಕೆ ಮಾಡಿ, ಇದರಿಂದ ಅವರಿಗೂ ಖುಷಿಯಾಗುತ್ತದೆ.
ಪರ್ಸನಲ್ ಮನೆ ಡೆಕೊರ್
ಮದುವೆಯ ದಿನಾಂಕದಂದು ತೆಗೆದ ಫೋಟೋ ಫ್ರೇಮ್‌ಗಳು, ಕಸ್ಟಮೈಸ್ ಮಾಡಿದ ವಾಲ್ ಆರ್ಟ್, ದಂಪತಿಗಳ ಹೆಸರುಗಳನ್ನು ಬರೆದಿರುವ ಉಡುಗೊರೆಗಳನ್ನು ಇಂದಿನ ವಧು ಮತ್ತು ವರರು ಇಷ್ಟಪಡುತ್ತಾರೆ. ಅವುಗಳನ್ನು ಸಹ ನೀಡಲು ಪ್ರಯತ್ನಿಸಿ. ಅವರ ಮದುವೆ ಮತ್ತು ಪ್ರಿ ವೆಡ್ಡಿಂಗ್ ಫೋಟೊಗಳನ್ನು ಕೂಡ ಫ್ರೇಮ್ ಹಾಕಿ ಉಡುಗೊರೆ ನೀಡಬಹುದು.
ಗಿಫ್ಟ್ ಹ್ಯಾಂಪರ್ಸ್
ಮರುಬಳಕೆ ಮಾಡಿದ ವಸ್ತುಗಳಿಂದ ತಯಾರಿಸಿದ ಉಡುಗೊರೆ ಹ್ಯಾಂಪರ್ ಸೇರಿದಂತೆ ಪರಿಸರ ಸ್ನೇಹಿ ಗೃಹ ಉತ್ಪನ್ನಗಳು ಅನೇಕ ಮಾರುಕಟ್ಟೆಗಳಲ್ಲಿ ಲಭ್ಯವಿದೆ, ಅವು ವಿಭಿನ್ನ ಮಾತ್ರವಲ್ಲದೆ ಎಲ್ಲರನ್ನೂ ಆಕರ್ಷಿಸುತ್ತವೆ. ನೀವು ಅವುಗಳನ್ನು ನೀಡಲು ಸಹ ಯೋಜಿಸಬಹುದು. ಅವು ಕೂಡ ಇತರ ಮಾಮೂಲಿ ಉಡುಗೊರೆಗಿಂತ ಭಿನ್ನವಾಗಿರುತ್ತವೆ.
ಮ್ಯಾಚಿಂಗ್ ಉಡುಪು ಗಿಫ್ಟ್
ಸ್ವಲ್ಪ ಹೆಚ್ಚು ಟ್ರೆಂಡಿಯಾಗಿ ಗಿಫ್ಟ್ ನೀಡಲು ನೀವು ಬಯಸಿದರೆ, ಗಂಡ ಮತ್ತು ಹೆಂಡತಿ ಇಬ್ಬರಿಗೂ ಹೊಂದಿಕೆಯಾಗುವ ಉಡುಪುಗಳನ್ನು ಸಹ ಗಿಫ್ಟ್ ಮಾಡಬಹುದು, ಇದು 5,000 ರೂ.ಗಳವರೆಗೆ ವೆಚ್ಚವಾಗಬಹುದು. ಆದರೆ ಅವರ ಇಚ್ಚೆಗೆ ಅನುಸಾರ, ಅವರು ಮೆಚ್ಚುವ ಮತ್ತು ಧರಿಸುವ ಮಾದರಿಯ ಉಡುಪುಗಳನ್ನೇ ಉಡುಗೊರೆ ನೀಡಿದರೆ ಬೆಸ್ಟ್.
ಬಜೆಟ್ ಬಗ್ಗೆ ಗಮನವಿರಲಿ
ಉಡುಗೊರೆಗಳು ನಿಮ್ಮ ಬಜೆಟ್ ಅನ್ನು ಅವಲಂಬಿಸಿರುತ್ತದೆ. ಸಸ್ಯಗಳು, ಫೋಟೋ ಫ್ರೇಮ್, ಡಿನ್ನರ್ ಡೇಟ್ ಇತ್ಯಾದಿಗಳು ಕಡಿಮೆ ಬಜೆಟ್‌ನಲ್ಲಿ ನಿಮಗೆ ದೊರೆಯುತ್ತವೆ. ಇವುಗಳ ಬೆಲೆ ರೂ. 1000 ರಿಂದ ರೂ. 2000 ದವರೆಗೆ ಇರಬಹುದು. ಹೀಗಾಗಿ ನೀವು ಅವರಿಗೆ ಹೆಚ್ಚು ಟ್ರೆಂಡಿ ರೀತಿಯಲ್ಲಿ ಉಡುಗೊರೆಗಳನ್ನು ನೀಡಲು ಸಾಧ್ಯವಾಗುತ್ತದೆ. ಜತೆಗೆ ನವದಂಪತಿಗೂ ಅದರಿಂದ ಖುಷಿಯಾಗುತ್ತದೆ.