Kannada News  /  Lifestyle  /  Best Foods For Uterus Health
ಗರ್ಭಕೋಶದ ಆರೋಗ್ಯಕ್ಕೆ ಸಹಾಯಕವಾಗುವ ಆಹಾರಗಳು
ಗರ್ಭಕೋಶದ ಆರೋಗ್ಯಕ್ಕೆ ಸಹಾಯಕವಾಗುವ ಆಹಾರಗಳು (PC: Freepik)

Foods for Uterus health: ಗರ್ಭಕೋಶದ ಆರೋಗ್ಯಕ್ಕೆ ನಿಮ್ಮ ಡಯಟ್‌ನಲ್ಲಿ ಈ ಆಹಾರಗಳು ಹೆಚ್ಚಾಗಿರಲಿ

07 February 2023, 15:41 ISTHT Kannada Desk
07 February 2023, 15:41 IST

ಫೈಬ್ರಾಯ್ಡ್ ಗೆಡ್ಡೆಗಳನ್ನು ನಿಯಂತ್ರಿಸಲು ಮತ್ತು ತಡೆಯಲು ಫೈಬರ್ ಸಹಾಯ ಮಾಡುತ್ತದೆ. ದೇಹದಿಂದ ಹೆಚ್ಚುವರಿ ಈಸ್ಟ್ರೊಜೆನ್ ಹೊರಹಾಕುವ ಮೂಲಕ, ಸರಿಯಾದ ಕಾರ್ಯ ನಿರ್ವಹಣೆಗೆ ಧಾನ್ಯಗಳು ಸಹಾಯ ಮಾಡುತ್ತದೆ.

ನಾವು ಆರೋಗ್ಯವಾಗಿರಲು ಉತ್ತಮ ಆಹಾರದ ಅವಶ್ಯಕತೆ ಇದೆ. ಹಾಗೇ ನಮ್ಮ ದೇಹದ ಅಂಗಾಗಗಳು ಸಮಪರ್ಕವಾಗಿ ಕಾರ್ಯ ನಿರ್ವಹಿಸುವಲ್ಲಿ ಕೂಡಾ ಕೆಲವೊಂದು ಆಹಾರಗಳನ್ನು ಸೇವಿಸುವುದು ಬಹಳ ಅಗತ್ಯವಾಗಿದೆ. ಅದರಲ್ಲಿ ಗರ್ಭಕೋಶ ಕೂಡಾ ಒಂದು. ಗರ್ಭಾಶಯ, ಅಂಡಾಶಯ, ಫಾಲೋಪಿಯನ್ ಟ್ಯೂಬ್‌, ಸಂತಾನೋತ್ಪತ್ತಿ ವ್ಯವಸ್ಥೆಯಲ್ಲಿ ಈ ಮೂರೂ ಒಟ್ಟಾಗಿ ಪ್ರಮುಖ ಪಾತ್ರವನ್ನು ವಹಿಸುತ್ತವೆ.

ಟ್ರೆಂಡಿಂಗ್​ ಸುದ್ದಿ

ಗರ್ಭಕೋಶ ಆರೋಗ್ಯಕರವಾಗಿಲ್ಲದಿದ್ದರೆ ಅದು ಮಹಿಳೆಯರ ಫಲವತ್ತತೆಯ ಮೇಲೆ ಪರಿಣಾಮ ಬೀರುತ್ತದೆ. ಗರ್ಭಕೋಶದ ಆರೋಗ್ಯದ ಬಗ್ಗೆ ಕಾಳಜಿ ವಹಿಸದಿದ್ದರೆ, ಗರ್ಭಾಶಯದ ಸೋಂಕುಗಳು, ಉರಿಯೂತ, ಫೈಬ್ರಾಯ್ಡ್‌ ತೊಡಕುಗಳ ಅಪಾಯವಿದೆ. ಕೆಲವು ಜನರು ಗರ್ಭಾವಸ್ಥೆಯಲ್ಲಿ ಗರ್ಭಾಶಯದ ಹಿಗ್ಗುವಿಕೆಯನ್ನು ಅನುಭವಿಸುತ್ತಾರೆ. ಈ ಸಮಸ್ಯೆಗಳನ್ನು ತಪ್ಪಿಸಲು, ಗರ್ಭಾಶಯವನ್ನು ಆರೋಗ್ಯಕರವಾಗಿರಿಸಿಕೊಳ್ಳುವುದು ಬಹಳ ಮುಖ್ಯ. ಇದಕ್ಕೆ ಕೆಲವೊಂದು ಪೌಷ್ಠಿಕ ಆಹಾರ ಸೇವಿಸಬೇಕು.

ತಾಜಾ ಹಣ್ಣುಗಳು: ಮಹಿಳೆಯರು ತಮ್ಮ ಗರ್ಭಕೋಶದ ಆರೋಗ್ಯವನ್ನು ಕಾಪಾಡಲು ತಾಜಾ ಹಣ್ಣುಗಳನ್ನು ಸೇವಿಸಬೇಕು. ಹಣ್ಣುಗಳಲ್ಲಿ ವಿಟಮಿನ್, ಪೋಷಕಾಂಶಗಳು, ಫೈಬರ್, ಫೋಲಿಕ್ ಆಮ್ಲ ಮತ್ತು ಮೈಕ್ರೊನ್ಯೂಟ್ರಿಯೆಂಟ್‌ ಅಂಶಗಳು ಸಮೃದ್ಧವಾಗಿವೆ. ಆಯಾ ಸೀಸನ್‌ನಲ್ಲಿ ದೊರೆಯುವ ಹಣ್ಣುಗಳನ್ನು ನೀವು ಸೇವಿಸಬಹುದು. ಹಣ್ಣಿನಲ್ಲಿರುವ ವಿಟಮಿನ್ ಸಿ ಮತ್ತು ಫ್ಲೇವನಾಯ್ಡ್‌ಗಳು ಸಂತಾನೋತ್ಪತ್ತಿ ವ್ಯವಸ್ಥೆಯ ಆರೋಗ್ಯವನ್ನು ಕಾಪಾಡುತ್ತವೆ. ಇವು ಅಂಡಾಶಯದ ಕ್ಯಾನ್ಸರ್ ಬರದಂತೆ ತಡೆಯುತ್ತವೆ. ಆದ್ದರಿಂದ ಪ್ರತಿದಿನ ಸಾಧ್ಯವಾಗದಿದ್ದರೆ ಮೂರು ದಿನಗಳಿಗೊಮ್ಮೆ ಹಣ್ಣುಗಳನ್ನು ಸೇವಿಸಿ.

ಡ್ರೈ ಫ್ರೂಡ್ಸ್‌, ನಟ್ಸ್‌: ಗರ್ಭಕೋಶ‌ದ ಆರೋಗ್ಯಕ್ಕೆ ಡ್ರೈ ಫ್ರೂಟ್ಸ್‌ ಹಾಗೂ ಡ್ರೈ ನಟ್ಸ್‌ ಕೂಡಾ ಬಹಳ ಒಳ್ಳೆಯದು. ಬಾದಾಮಿ, ಗೋಡಂಬಿ, ವಾಲ್‌ನಟ್ಸ್ ಮತ್ತು ಅಗಸೆ ಬೀಜಗಳಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು ಮತ್ತು ಉತ್ತಮ ಕೊಬ್ಬುಗಳಿವೆ. ಈ ಪೋಷಕಾಂಶಗಳು ಗರ್ಭಾಶಯದ ಫೈಬ್ರಾಯ್ಡ್‌ಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಗರ್ಭಕಂಠದ ಕ್ಯಾನ್ಸರ್‌ನಿಂದ ರಕ್ಷಿಸುತ್ತದೆ.

ಹಸಿರು ಸೊಪ್ಪು: ಬಹಳಷ್ಟು ಜನರು ಹಸಿರು ಸೊಪ್ಪು ಹಾಗೂ ತರಕಾರಿಗಳಿಂದ ದೂರ ಇರುತ್ತಾರೆ. ಆದರೆ ಇದನ್ನು ಸೇವಿಸಿದರೆ ನಿಮ್ಮ ಆರೋಗ್ಯ ವೃದ್ಧಿಸುತ್ತದೆ. ಲೆಟ್ಯೂಸ್, ಪಾಲಕ್‌ನಂತಹ ಸೊಪ್ಪುಗಳು ಗರ್ಭಾಶಯದ ಆರೋಗ್ಯವನ್ನು ಅದ್ಭುತವಾಗಿ ರಕ್ಷಿಸುತ್ತದೆ. ಕ್ಷಾರೀಯ ಸಮತೋಲನವನ್ನು ನಿರ್ವಹಿಸುತ್ತದೆ. ಇದರಲ್ಲಿರುವ ವಿಟಮಿನ್ ಮತ್ತು ಫೋಲಿಕ್ ಆಮ್ಲಗಳು ಗರ್ಭಾಶಯವನ್ನು ಆರೋಗ್ಯವಾಗಿರಿಸುತ್ತದೆ.

ನಿಂಬೆ ರಸ: ಪ್ರತಿದಿನ ನೀವು ಬೆಚ್ಚಗಿನ ನೀರಿಗೆ ನಿಂಬೆರಸ ಮಿಕ್ಸ್‌ ಮಾಡಿ ಸೇವಿಸಿದರೆ ಹಲವಾರು ಪ್ರಯೋಜನಗಳನ್ನು ಪಡೆಯಬಹುದು. ಈ ನಿಂಬೆ ಮಿಶ್ರಿತ ನೀರು ನಿಮ್ಮ ಗರ್ಭಕೋಶಕ್ಕೆ ಬಹಳ ಒಳ್ಳೆಯದು. ನಿಂಬೆ ಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ಗರ್ಭಾಶಯದ ಸೋಂಕನ್ನು ತಡೆಯುತ್ತದೆ.

ಧಾನ್ಯಗಳು: ಧಾನ್ಯಗಳಲ್ಲಿ ಫೈಬರ್‌ ಅಂಶ ಹೆಚ್ಚಾಗಿದೆ. ಫೈಬ್ರಾಯ್ಡ್ ಗೆಡ್ಡೆಗಳನ್ನು ನಿಯಂತ್ರಿಸಲು ಮತ್ತು ತಡೆಯಲು ಫೈಬರ್ ಸಹಾಯ ಮಾಡುತ್ತದೆ. ದೇಹದಿಂದ ಹೆಚ್ಚುವರಿ ಈಸ್ಟ್ರೊಜೆನ್ ಹೊರಹಾಕುವ ಮೂಲಕ, ಸರಿಯಾದ ಕಾರ್ಯ ನಿರ್ವಹಣೆಗೆ ಧಾನ್ಯಗಳು ಸಹಾಯ ಮಾಡುತ್ತದೆ. ನಿಮ್ಮ ಆಹಾರದಲ್ಲಿ ಓಟ್ಸ್‌, ಬ್ರೌನ್‌ ರೈಸ್‌, ಬಾರ್ಲಿಯಂತಹ ಆಹಾರಗಳನ್ನು ಹೆಚ್ಚಾಗಿ ಬಳಸಿ.

ಗ್ರೀನ್‌ ಟೀ: ಇದರಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದೆ. ಇದು ಗರ್ಭಾಶಯವನ್ನು ಆರೋಗ್ಯವಾಗಿರಿಸುತ್ತದೆ. ಗರ್ಭಾಶಯದಲ್ಲಿನ ಫೈಬ್ರಾಯ್ಡ್‌ಗಳ ಸಮಸ್ಯೆಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಗರ್ಭಾಶಯದ ಫೈಬ್ರಾಯ್ಡ್ ಸಮಸ್ಯೆ ಇರುವ ಮಹಿಳೆಯರು ಪ್ರತಿದಿನದಂತೆ ಸುಮಾರು 8 ವಾರಗಳವರೆಗೆ ಗ್ರೀನ್‌ ಟೀ ಕುಡಿದರೆ ಫೈಬ್ರಾಯ್ಡ್ ಕುಗ್ಗುತ್ತದೆ ಎನ್ನಲಾಗಿದೆ.

ಈ ಎಲ್ಲಾ ಅಂಶಗಳೊಂದಿಗೆ ಗರ್ಭಾಶಯದ ಏನೇ ಸಮಸ್ಯೆಗಳಿದ್ದರೂ ತಡಮಾಡದೆ ತಜ್ಞ ವೈದ್ಯರನ್ನು ಸಂಪರ್ಕಿಸಿ.