ಮನೆಗೆ ಬಂದಳು ಭಾಗ್ಯ; ಕಾಲೇಜ್ ಫೀಸ್ ಬಗ್ಗೆ ಕಿರಿಕಿರಿ ಮಾಡಿದ ತನ್ವಿ : ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಮಂಗಳವಾರ ಫೆಬ್ರುವರಿ 4ರ ಸಂಚಿಕೆಯಲ್ಲಿ ಭಾಗ್ಯ, ಹೋಟೆಲ್‌ನಿಂದ ಮನೆಗೆ ಬಂದಿದ್ದಾಳೆ. ಕೆಲಸ ಬಿಟ್ಟು ಬರುವಾಗ ದೇವಸ್ಥಾನಕ್ಕೆ ಹೋಗಿ, ದೇವರಲ್ಲಿ ತನ್ನ ಕಷ್ಟ ಹೇಳಿಕೊಂಡಿದ್ದಾಳೆ, ಮನೆಗೆ ಬರುತ್ತಿದ್ದಂತೆ ಕಾಲೇಜು ಕೋರ್ಸ್ ಮತ್ತು ಫೀಸ್ ಬಗ್ಗೆ ತನ್ವಿ ಕಿರಿಕಿರಿ ಉಂಟುಮಾಡಿದ್ದಾಳೆ.

Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಮಂಗಳವಾರ ಫೆಬ್ರುವರಿ 4ರ ಸಂಚಿಕೆಯಲ್ಲಿ ಹೋಟೆಲ್‌ನ ಶೆಫ್ ಕೆಲಸಕ್ಕೆ ಭಾಗ್ಯ ರಾಜೀನಾಮೆ ಕೊಟ್ಟು ಮನೆಗೆ ಮರಳಿ ಬಂದಿದ್ದಾಳೆ. ಮನೆಗೆ ಮರಳುವಾಗ ದಾರಿಯಲ್ಲಿ ದೇವಸ್ಥಾನಕ್ಕೆ ಹೋಗಿದ್ದಾಳೆ. ದೇವರಲ್ಲಿ ತನ್ನ ಕಷ್ಟವನ್ನು ಭಾಗ್ಯ ಹೇಳಿಕೊಂಡಿದ್ದಾಳೆ. ದೇವಸ್ಥಾನದಲ್ಲಿ ಅರ್ಚಕರು, ನಿಮ್ಮೆಲ್ಲಾ ಕಷ್ಟಗಳು ದೂರವಾಗಲಿ ಎಂದು ಹರಸಿದ್ದಾರೆ. ನಂತರ ಭಾಗ್ಯ ಮನೆಗೆ ಮರಳಿದ್ದಾಳೆ. ಮನೆಯಲ್ಲಿ ಎಲ್ಲರೂ ಭಾಗ್ಯಾ ಬರುವುದನ್ನೇ ಎದುರು ನೋಡುತ್ತಿದ್ದಾರೆ. ಅಲ್ಲದೆ, ಪೂಜಾ ಹೋಟೆಲ್‌ಗೆ ಫೋನ್ ಮಾಡಿ, ಹಿತ ಜೊತೆ ಮಾತನಾಡುತ್ತಾಳೆ. ಹಿತ ಅವಳಿಗೆ ಎಲ್ಲವನ್ನೂ ವಿವರಿಸುತ್ತಾಳೆ. ಸಹೋದ್ಯೋಗಿಗಳ ಕೆಲಸ ಉಳಿಸಲು, ತಾನು ರಾಜೀನಾಮೆ ಕೊಟ್ಟು ಬಂದಿರುವುದು ಮನೆಯವರಿಗೆ ತಿಳಿಯುತ್ತದೆ. ಅದೇ ಹೊತ್ತಿಗೆ ಭಾಗ್ಯ, ಮನೆಗೆ ಬರುತ್ತಾಳೆ.
ಫೀಸ್ ಬಗ್ಗೆ ಕಿರಿಕಿರಿ ಮಾಡಿದ ತನ್ವಿ
ಭಾಗ್ಯ ಮನೆಗೆ ಬಂದ ಕೂಡಲೇ, ಎಲ್ಲರೂ ಆಕೆಯನ್ನು ಸುತ್ತುವರಿದು ಪ್ರಶ್ನಿಸುತ್ತಾರೆ. ಭಾಗ್ಯಾ ನಡೆದ ವಿಚಾರವನ್ನು ಹೇಳಿದಾಗ, ಕುಸುಮಾ ಮತ್ತು ಭಾಗ್ಯ ತಾಯಿ ಅವಳಿಗೆ ಬಯ್ಯುತ್ತಾರೆ. ನೀನು ಪ್ರತಿ ಬಾರಿಯೂ ಯಾಕೆ ಹೀಗೆ ಸಂಕಷ್ಟ ಅನುಭವಿಸುತ್ತಿದ್ದಿ ಎಂದು ಕೇಳುತ್ತಾರೆ. ಆದರೆ ಧರ್ಮರಾಜ್ ಮಾತ್ರ ಭಾಗ್ಯ ಮಾಡಿರುವುದು ಸರಿ ಇದೆ, ಅವಳದ್ದು ಏನೂ ತಪ್ಪಿಲ್ಲ ಎಂದು ಆಕೆಯನ್ನು ಪ್ರಶಂಸಿಸುತ್ತಾರೆ. ಅಷ್ಟರಲ್ಲಿ ಕಾಲೇಜಿನ ಕೋರ್ಸ್ ಫೀಸ್‌ಗೆ 80,000 ರೂ. ಬೇಕೆಂದು ತನ್ವಿ ಗಲಾಟೆ ಮಾಡುತ್ತಾಳೆ. ಆಗ ಮಕ್ಕಳ ಜವಾಬ್ದಾರಿ ಅಮ್ಮನ ಮೇಲೆ ಮಾತ್ರ ಇರುವುದಲ್ಲ, ತಾಂಡವ್‌ನದ್ದೂ ಆಗಿರುತ್ತದೆ, ಅವನಲ್ಲಿ ಕೇಳು, ಅವನಿಗೆ ಫೀಸ್ ಕೊಡಲು ಸಾಧ್ಯವಿಲ್ಲವೇ ಎಂದು ಕುಸುಮಾ ಮತ್ತು ಅಜ್ಜಿ ಆಕೆಗೆ ಗದರುತ್ತಾರೆ. ಭಾಗ್ಯ ಮಾತ್ರ, ಏನಾದರೂ ಮಾಡಿ, ಹಣ ಹೊಂದಿಸೋಣ, ಈಗ ಗಲಾಟೆ ಮಾಡಬೇಡ ಎಂದು ಸಮಾಧಾನ ಮಾಡುತ್ತಾಳೆ. ಅತ್ತ ತನ್ವಿ ತಾಂಡವ್ ಬಳಿ ಕೋರ್ಸ್ ಹಣ ಕೇಳುವ ಬಗ್ಗೆ ಯೋಚಿಸುತ್ತಾಳೆ.
ತಾಂಡವ್ ಮತ್ತು ಶ್ರೇಷ್ಠಾ ಭರ್ಜರಿ ಪಾರ್ಟಿ
ಭಾಗ್ಯಳನ್ನು ಕೆಲಸದಿಂದ ತೆಗೆದು ಮನೆಗೆ ಕಳುಹಿಸಿರುವುದು ತಾಂಡವ್‌ಗೆ ಅತಿ ಹೆಚ್ಚು ಖುಷಿ ನೀಡಿದೆ. ತಾಂಡವ್ ಶ್ರೇಷ್ಠಾಗೆ ಚಿನ್ನದ ಬ್ರೇಸ್‌ಲೆಟ್ ಉಡುಗೊರೆ ನೀಡಿದ್ದಾನೆ. ಜತೆಗೆ ಅವಳ ಫೇವರಿಟ್ ರೆಸ್ಟೋರೆಂಟ್‌ಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ತಾಂಡವ್ ಮತ್ತು ಶ್ರೇಷ್ಠಾ ಇಬ್ಬರೂ ಭರ್ಜರಿ ಪಾರ್ಟಿ ಮಾಡಿದ್ದಾರೆ. ಜತೆಗೆ ಭಾಗ್ಯಳನ್ನು ಮನೆಯವರು ಹೊರಗೆ ಹಾಕಬೇಕು, ಆಗ ಮಾತ್ರ ನನಗೆ ಸಮಾಧಾನ ಎಂದು ಹೇಳುತ್ತಾನೆ. ಅಲ್ಲಿಗೆ ಫೆಬ್ರುವರಿ 4ರ ಸಂಚಿಕೆ ಕೊನೆಯಾಗಿದೆ. ಪ್ರಸ್ತುತ ಭಾಗ್ಯಲಕ್ಷ್ಮಿ ಧಾರಾವಾಹಿ 706ನೇ ಸಂಚಿಕೆ ಮುಗಿಸಿದೆ. ಭಾಗ್ಯಾ ಕುಟುಂಬದ ನಿರ್ವಹಣೆಗೆ, ಲೋನ್ ಕಟ್ಟಲು ಮುಂದೇನು ಮಾಡುತ್ತಾಳೆ? ಹೇಗೆ ಈ ಪರಿಸ್ಥಿತಿಯನ್ನ ನಿಭಾಯಿಸುತ್ತಾಳೆ ಎಂದು ಮುಂದಿನ ಎಪಿಸೋಡ್‌ನಲ್ಲಿ ತಿಳಿಯಲಿದೆ.
ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ - ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್
