ಐಆರ್‌ಸಿಟಿಸಿ ಟೂರ್ ಪ್ಯಾಕೇಜ್; ಜೂನ್ 24ಕ್ಕೆ ಬೆಂಗಳೂರಿನಿಂದ ಶಿಮ್ಲಾ, ಮನಾಲಿ ಪ್ರವಾಸ, ಸಂಪೂರ್ಣ ಮಾಹಿತಿ ಹೀಗಿದೆ
ಐಆರ್‌ಸಿಟಿಸಿ ಆರಂಭಿಸಿರುವ ಬೆಂಗಳೂರಿನಿಂದ ಶಿಮ್ಲಾ-ಮನಾಲಿ-ಚಂಡೀಗಢ 7 ದಿನಗಳ ಪ್ರವಾಸದ ಪ್ಯಾಕೇಜ್ ಜೂನ್ 24ಕ್ಕೆ ಆರಂಭವಾಗಲಿದೆ. ಪ್ರವಾಸ ಪ್ಯಾಕೇಜ್ ಮೊತ್ತ, ಹೋಟೆಲ್, ಊಟ, ಯಾವೆಲ್ಲಾ ಸ್ಥಳಗಳನ್ನು ವೀಕ್ಷಿಸಬಹುದು ಅನ್ನೋದರ ವಿವರ ಇಲ್ಲಿದೆ.
ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸ ಕಾರ್ಪೊರೇಷನ್ - ಐಆರ್‌ಸಿಟಿಸಿ (IRCTC Tour Package) ಭಾರತ್ ಗೌರವ್ ಯಾತ್ರಾ (Bharat Gaurav Yatra) ಪ್ರವಾಸಿ ರೈಲು ಸೇವೆಯನ್ನು ಆರಂಭಿಸಿದ್ದು, ಹಲವು ಶ್ರೇಣಿಗಳನ್ನು ಒಳಗೊಂಡಿದೆ. ಭಾರತ್ ಗೌರವ್ ರೈಲು ಪ್ರವಾಸಿ ರೈಲುಗಳಲ್ಲಿ ನಾನ್ ಎಸಿ ಸ್ಲೀಪರ್, ಎಸಿ III, ಎಸಿ II ಶ್ರೇಣಿಯ ಕೋಚ್‌ಗಳ ಮಿಶ್ರ ಸಂಯೋಜನೆಯನ್ನು ಹೊಂದಿವೆ. 600 ರಿಂದ 700 ಆಸನಗಳ ಸಾಮರ್ಥ್ಯವನ್ನು ಭಾರತ್ ಗೌರವ್ ಪ್ರವಾಸಿ ರೈಲು ಹೊಂದಿದೆ. ಭದ್ರತೆಯ ದೃಷ್ಟಿಯಿಂದ ಸಿಸಿಟಿವಿ ಕ್ಯಾಮೆರಾ, ತಾಜಾ ಊಟ ತಯಾರಿಸಲು ಸುಸಜ್ಜಿತ ಪ್ಯಾಂಟ್ರಿ ಕಾರ್ ಸಹ ಈ ರೈಲಿನಲ್ಲಿ ಇರುತ್ತದೆ. ಐಆರ್‌ಸಿಟಿಸಿ ಪ್ಯಾಕೇಜ್ ಮಾದರಿಯಲ್ಲಿ ವಿಮಾನದ ಮೂಲಕವೇ ಪ್ರವಾಸಕ್ಕೆ ವ್ಯವಸ್ಥೆ ಮಾಡಲಾಗುತ್ತದೆ.
ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾ ಭಾರತದ ಅತ್ಯಂತ ಜನಪ್ರಿಯ ಗಿರಿಧಾಮಗಳಲ್ಲಿ ಒಂದಾಗಿದೆ. ಇಲ್ಲಿನ ಮತ್ತೊಂದು ಅತ್ಯಂತ ಜನಪ್ರಿಯ ಪ್ರವಾಸಿ ತಾಣ ಮನಾಲಿ ಬಿಯಾಸ್ ನದಿಯ ಕಣಿವೆಯಲ್ಲಿ ನೆಲೆಸಿರುವ ಸುಂದರ ಪಟ್ಟಣವಾಗಿದೆ. ವಾಸ್ತು ಶಿಲ್ಪಕ್ಕೆ ಹೆಸರುವಾಸಿಯಾಗಿರುವ ಚಂಡೀಗಢ ವಿಶ್ವ ಪ್ರಸಿದ್ಧ ತಾಣವಾಗಿದೆ. ಪಂಜಾಬ್ ಮತ್ತು ಹರಿಯಾಣ ರಾಜ್ಯಗಳ ರಾಜಧಾನಿ ಅನ್ನೋದು ಇದರ ಮತ್ತೊಂದು ವಿಶೇಷವಾಗಿದೆ.
ನೀವೇನಾದರೂ ಬೆಂಗಳೂರಿನಿಂದ ಶಿಮ್ಲಾ, ಮನಾಲಿ ಹಾಗೂ ಚಂಡೀಗಢಕ್ಕೆ ಐಆರ್‌ಸಿಟಿಸಿ ಟೂರ್ ಪ್ಯಾಕೇಜ್‌ನಲ್ಲಿ ಹೋಗುವ ಪ್ಲಾನ್ ಮಾಡಿದ್ದರೆ, ಈ ಮಾಹಿತಿ ನಿಮಗೆ ಉಪಯೋಗವಾಗಲಿದೆ. ಜೂನ್ 24 ರಂದು ಆರಂಭವಾಗಲಿರುವ ಈ ಟೂರ್ ಪ್ಯಾಕೇಜ್ ಮೊತ್ತ, ಊಟ, ಉಳಿದುಕೊಳ್ಳುವ ಹೋಟೆಲ್, ವಿಮಾನದ ಸಮಯ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಬೆಂಗಳೂರಿನಿಂದ ಚಂಡೀಗಢ, ಶಿಮ್ಲಾ-ಮನಾಲಿ ಟೂರ್ ಪ್ಯಾಕೇಜ್ ವಿವರಗಳು
ಪ್ಯಾಕೇಜ್ ಹೆಸರು: ಬೆಂಗಳೂರಿನಿಂದ ಚಂಡೀಗಢ, ಶಿಮ್ಲಾ-ಮನಾಲಿ
ತಲಪುವ ಸ್ಥಳ: ಚಂಡೀಗಢ, ಶಿಮ್ಲಾ, ಮನಾಲಿ
ಪ್ರಯಾಣ ಮೋಡ್: ವಿಮಾನ ಮೂಲಕ
ವಿಮಾನ ನಿಲ್ದಾಣ/ನಿರ್ಗಮನ ಸಮಯ: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಜೂನ್ 24ರ ಬೆಳಗ್ಗೆ 4.45ಕ್ಕೆ
ಆವರ್ತನ/ಪ್ರವಾಸ ದಿನಾಂಕ: 06N/07D - 24.06.2024
ಶಿಮ್ಲಾದಲ್ಲಿ ಹೋಟೆಲ್: ಹೋಟೆಲ್ ರೀಜೆಂಟಾ ಪ್ಲೇಸ್ ಅಥವಾ ಇದೇ ರೀತಿಯ ಹೋಟೆಲ್
ಮನಾಲಿಯಲ್ಲಿ ಹೋಟೆಲ್: ಹೋಟೆಲ್ ರೀಜೆಂಟಾ ಪ್ಲೇಸ್, ಗ್ರೀನ್ಲೀಫ್ ಅಥವಾ ಇದೇ ರೀತಿಯ ಹೋಟೆಲ್
ಚಂಡೀಗಢದಲ್ಲಿ ಹೋಟೆಲ್: ಹೋಟೆಲ್ ರೀಜೆಂಟಾ ಸೆಂಟ್ರಲ್ ಕ್ಯಾಸಿಯಾ, ಜಿರಾಕ್‌ಪುರ ಅಥವಾ ಇದೇ ರೀತಿಯ ಹೋಟೆಲ್
ವಿಮಾನದ ವಿವರಗಳು
ದಿನಾಂಕ: 24.6.2024 - ವಿಮಾನ ಸಂಖ್ಯೆ - 6E-6633
ಎಲ್ಲಿಂದ ಎಲ್ಲಿಗೆ: ಬೆಂಗಳೂರು-ಚಂಡೀಗಢ
ವಿಮಾನ ನಿಲ್ಗಾಣ-ಆಗಮನ: 4.45 ಗಂಟೆ - 7.50 ಗಂಟೆ
ದಿನಾಂಕ: 30.06.24 - ವಿಮಾನ ಸಂಖ್ಯೆ - 6E-593 - ಚಂಡೀಗಢ-ಬೆಂಗಳೂರು
ನಿರ್ಗಮನ-ಆಗಮನ ಸಮಯ: ಸಂಜೆ 7.20 ಗಂಟೆ ಚಂಡೀಗಢ ಬಿಟ್ಟು - ರಾತ್ರಿ 10.20 ಗಂಟೆ ಬೆಂಗಳೂರು ತಲುಪುವುದು
ಬೆಂಗಳೂರಿನಿಂದ ಶಿಮ್ಲಾ-ಮನಾಲಿ-ಚಂಡೀಗಢ ಟೂರ್ ಪ್ಯಾಕೇಜ್ ಮೊತ್ತ
ಒಬ್ಬರಿಗೆ 60,150 ರೂಪಾಯಿ, ಇಬ್ಬರಿಗೆ ತಲಾ 44,500, 5 ರಿಂದ 11 ವರ್ಷದೊಳಗಿನ ಹಾಸಿಗೆ ಹೊಂದಿರುವ ಮಗುವಿಗೆ 37,000 ರೂಪಾಯಿ, ಹಾಸಿಗೆ ಇಲ್ಲದ ಮಗು (5-11 ವರ್ಷ) 34,100, ಹಾಸಿಗೆ ಇಲ್ಲದ ಮಗು (2-4 ವರ್ಷ) 26,050 ರೂಪಾಯಿ ಆಗಲಿದೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)