ಭೀಮನ ಅಮಾವಾಸ್ಯೆಗೆ ಹೊಸ ಲಟ್ಟಣಿಗೆ ಖರೀದಿಸಿದ ಹೆಂಡತಿ; ಗಂಡನ ಪಾದ ಪೂಜೆಗೆ ಇದೂ ಬೇಕಾ ಅಂದ್ರು ನೆಟ್ಟಿಗರು; ಸೋಷಿಯಲ್‌ ಮಿಡಿಯಾ ರೌಂಡಪ್‌-bheemana amavasya 2024 a wife who bought lattanige for husbands pooja bheemana amavasya memes social media viral ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಭೀಮನ ಅಮಾವಾಸ್ಯೆಗೆ ಹೊಸ ಲಟ್ಟಣಿಗೆ ಖರೀದಿಸಿದ ಹೆಂಡತಿ; ಗಂಡನ ಪಾದ ಪೂಜೆಗೆ ಇದೂ ಬೇಕಾ ಅಂದ್ರು ನೆಟ್ಟಿಗರು; ಸೋಷಿಯಲ್‌ ಮಿಡಿಯಾ ರೌಂಡಪ್‌

ಭೀಮನ ಅಮಾವಾಸ್ಯೆಗೆ ಹೊಸ ಲಟ್ಟಣಿಗೆ ಖರೀದಿಸಿದ ಹೆಂಡತಿ; ಗಂಡನ ಪಾದ ಪೂಜೆಗೆ ಇದೂ ಬೇಕಾ ಅಂದ್ರು ನೆಟ್ಟಿಗರು; ಸೋಷಿಯಲ್‌ ಮಿಡಿಯಾ ರೌಂಡಪ್‌

ಭೀಮನ ಅಮಾವಾಸ್ಯೆ ಬಂತು ಅಂದ್ರೆ ಕರ್ನಾಟಕದ ಹೆಣ್ಣುಮಕ್ಕಳೆಲ್ಲಾ ಗಂಡನ ಪಾದ ಪೂಜೆ ಮಾಡಲು ಸಿದ್ಧರಾಗುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಭೀಮನ ಅಮಾವಾಸ್ಯೆ ಸಂಭ್ರಮ ನೋಡಿದ್ರೆ ನಿಮಗೆ ಬಿದ್ದು ಬಿದ್ದು ನಗು ಬರೋದು ಖಂಡಿತ. ಭೀಮನ ಅಮಾವಾಸ್ಯೆಯಂದು ಪೂಜೆ ಮಾಡೋಕೆ ಲಟ್ಟಣಿಗೆ ಖರೀದಿಸಿದ್ರಂತೆ ನಾರಿಮಣಿಯರು. ಇದೇನಪ್ಪಾ ಹೀಗೂ ಪೂಜೆ ನಡಿಯುತ್ತಾ ಅಂತ ಕೇಳ್ಬೇಡಿ, ಮುಂದೆ ಓದಿ

ಭೀಮನ ಅವಾಮಾಸ್ಯೆಗೆ ಹೊಸ ಲಟ್ಟಿಣಿಗೆ ಖರೀದಿಸಿದ ಹೆಂಡತಿ; ಗಂಡನ ಪಾದ ಪೂಜೆಗೆ ಇದೂ ಬೇಕಾ ಅಂದ್ರು ನೆಟ್ಟಿಗರು; ಸೋಷಿಯಲ್‌ ಮಿಡಿಯಾ ರೌಂಡಪ್‌ (ಚಿತ್ರಗಳು: ಡಾ. ಆನಂದ್‌ ಋಗ್ವೇದಿ ಹಾಗೂ ಚೈತನ್ಯ ಮಜಲು ಕೋಡಿ ಅವರ ಫೇಸ್‌ಬುಕ್‌ ಪುಟಗಳಿಂದ)
ಭೀಮನ ಅವಾಮಾಸ್ಯೆಗೆ ಹೊಸ ಲಟ್ಟಿಣಿಗೆ ಖರೀದಿಸಿದ ಹೆಂಡತಿ; ಗಂಡನ ಪಾದ ಪೂಜೆಗೆ ಇದೂ ಬೇಕಾ ಅಂದ್ರು ನೆಟ್ಟಿಗರು; ಸೋಷಿಯಲ್‌ ಮಿಡಿಯಾ ರೌಂಡಪ್‌ (ಚಿತ್ರಗಳು: ಡಾ. ಆನಂದ್‌ ಋಗ್ವೇದಿ ಹಾಗೂ ಚೈತನ್ಯ ಮಜಲು ಕೋಡಿ ಅವರ ಫೇಸ್‌ಬುಕ್‌ ಪುಟಗಳಿಂದ)

ಭಾರತದಲ್ಲಿ ಆಚರಿಸುವ ಪ್ರತಿ ಹಬ್ಬಕ್ಕೂ ವಿಶೇಷ ಮಹತ್ವವಿದೆ. ಭೀಮನ ಅಮಾವಾಸ್ಯೆ ಕರ್ನಾಟಕದ ಬಹುತೇಕ ಭಾಗಗಳಲ್ಲಿ ವಿಶೇಷ ಹಬ್ಬ. ಈ ದಿನ ಮಹಿಳೆಯರು ಗಂಡನ ಪಾದಪೂಜೆ ಮಾಡುವ ಮೂಲಕ ಮಂಗಳಭಾಗ್ಯ ಗಟ್ಟಿಯಾಗಿರಲಿ ಎಂದು ದೇವರಲ್ಲಿ ಬೇಡಿಕೊಳ್ಳುವುದು ಪದ್ಧತಿ. ಭೀಮನ ಅಮಾವಾಸ್ಯೆ ಪೂಜೆಗೆ ಕರ್ನಾಟಕ ನಾರಿಮಣಿಯರು ಹೇಗೆಲ್ಲಾ ತಯಾರಾಗ್ತಾರೆ ಅಂದ್ರೆ ಗಂಡಂದಿರು ಪೂಜೆ ಮಾಡಿಸಿಕೊಳ್ಳೋಕೆ ಹಿಂದೆ ಮುಂದೆ ನೋಡಬೇಕು, ಆ ರೀತಿ ಇತ್ತು ತಯಾರಿ ಅಂತಿದೆ ಸಾಮಾಜಿಕ ಜಾಲತಾಣ. ಇದೇನಪ್ಪಾ ಇದು ಹೀಗೆ, ಪೂಜೆ ಮಾಡಿಸಿಕೊಳ್ಳೋಕೆ ಗಂಡ ಯಾಕೆ ಹೆದರಬೇಕು ಅಂತ ನೀವು ಯೋಚಿಸಬಹುದು. ಖಂಡಿತ ಇದರ ಹಿಂದಿದೆ ತಮಾಷೆಯ ಸಂಗತಿ ಇದೆ. ಅದೇನು ಅಂತ ನೋಡಿ.

ಮೊದಲಿನಿಂದಲೂ ಹೆಂಡತಿ ಗಂಡನ ಪೂಜೆ ಮಾಡ್ತಾಳೆ ಅಂದ್ರೆ ಗಂಡನಿಗೆ ಗ್ರಹಚಾರ ಕಾದಿದೆ ಅಂತಾನೆ ಅರ್ಥ. ಮೀಮ್ಸ್‌ಗಳಲ್ಲೂ ಹೆಂಡತಿ ಗಂಡನ ಪೂಜೆ ಮಾಡೋದು ಲಟ್ಟಣಿಗೆ ಹಿಡಿದುಕೊಂಡು ಓಡಿಸಿಕೊಂಡು ಹೋಗೋದನ್ನೇ ಚಿತ್ರಿಸುತ್ತಾರೆ. ಇದನ್ನು ಭೀಮ ಅಮಾವಾಸ್ಯೆಗೂ ಲಿಂಕ್‌ ಮಾಡಲಾಗಿದೆ. ಭೀಮನ ಅಮಾವಾಸ್ಯೆ ಪೂಜೆ ಅಂದ್ರೆ ಗಂಡನ ಪೂಜೆ ಆಗಿರುವ ಕಾರಣ ಸಾಮಾಜಿಕ ಜಾಲತಾಣದಲ್ಲಿ ಈ ಪೂಜೆ ಬಗ್ಗೆ ಹಾಸ್ಯಮಯವಾಗಿ ಗಂಡದಿರಿಗೆ ಶುಭಾಶಯ ಕೋರಲಾಗುತ್ತದೆ.

ಹೆಂಡತಿಗೂ ಲಟ್ಟಣಿಗೆಗೂ ಬಿಡಿಸಲಾರದ ನಂಟು

ಚಪಾತಿ ಲಟ್ಟಿಸುವ ಪರಿಕರಕ್ಕೂ ಹೆಂಡತಿಗೂ ಅದೇನೋ ಬಿಡಿಸಲಾಗದ ನಂಟು. ಗಂಡನಿಗೆ ಹೆಂಡತಿ ಲಟ್ಟಣಿಗೆ ಪೂಜೆ ಮಾಡೋದು ಮೀಮ್ಸ್‌ಗಳಲ್ಲಿ ಸಹಜ ಸಂಗತಿ. ಚೈತನ್ಯ ಮಜಲುಕೋಡಿ ಎನ್ನುವವರು ಲಟ್ಟಣಿಗೆ ಫೋಟೊ ಹಾಕಿಕೊಂಡು ʼನಿನ್ನೆ ತಾನೇ ಪತಿಪೂಜೆಗೆಂದು ಹೆಂಡತಿ ಕೊಂಡುಕೊಂಡ popular best quality ಆಯುಧ!!ʼ ಎಂದು ಶೀರ್ಷಿಕೆ ಬರೆದುಕೊಂಡಿದ್ದಾರೆ. ಇವರ ಈ ಪೋಸ್ಟ್‌ಗೆ ಥರಹೇವಾರಿ ಕಾಮೆಂಟ್‌ಗಳು ಬಂದಿದ್ದು ಸುಳ್ಳಲ್ಲ. ʼಭೀಮಾಸ್ ಜ್ಯೂವೆಲರಿʼ ಎಂದು ಇಬ್ಬರು ಕಾಮೆಂಟ್‌ ಮಾಡಿದ್ದರೆ, ʼಎಂಥ ಚಪಾತಿ ಮಾಡಿದ್ಲ ಹೋಳಿಗೆ ಮಾಡಿದ್ಲ ಪತಿ ಪೂಜೆಗೆʼ ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ. ಪೂಜೆ ಆಯ್ತಾ, ಈಗ ಹೇಗಿದ್ದೀರಿ ಎಂದೆಲ್ಲಾ ಜನ ಅವರ ಪೋಸ್ಟ್‌ಗೆ ತಮಾಷೆಯಾಗಿ ಕಾಮೆಂಟ್‌ ಮಾಡುವ ಪ್ರಶ್ನೆ ಕೇಳಿದ್ದಾರೆ.

ಭೀಮನ ಅಮಾವಾಸ್ಯೆಗೆ ಹೀಗೂ ಶುಭಾಶಯ ಕೋರಿದ್ದಾರೆ

ಹೆಂಡತಿಯರಿಂದ ಅಮಾವಾಸ್ಯೆಯ ದಿನ ಬೆಳ್ಳಂಬೆಳಿಗ್ಗೆಯೇ ಪೂಜೆ ಮಾಡಿಸಿಕೊಂಡ ಎಲ್ಲ ಗಂಡಂದಿರಿಗೂ ಬ್ರಹ್ಮಚಾರಿಗಳ ಸಂಘದಿಂದ ಶುಭಾಶಯ ಎಂದು ಪತ್ರಕರ್ತ ಸೂರ್ಯಪ್ರಕಾಶ್‌ ಪಂಡಿತ್‌ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ʼಶುಭಾಶಯಕ್ಕೆ ಧನ್ಯವಾದಗಳು. ನಮ್ಮನೇಲಿ ನಿತ್ಯ ಹುಣ್ಞಿಮೇನೆ ಸಾ... ಅಮಾಸೆ ಬರೂದೇ ಇಲ್ಲ!!!ʼ ಎಂದು ಇವರ ಪೋಸ್ಟ್‌ಗೆ ಕಾಮೆಂಟ್‌ ಮಾಡಿದ್ದಾರೆ.

ಗಂಡನಿಗಿಂದು ವಿಶೇಷ ಪೂಜೆ

ಡಾ. ಆನಂದ ಋಗ್ವೇದಿ ಎನ್ನುವವರು ʼಭೀಮನ ಅಮಾವಾಸ್ಯೆ ಎಂದು ತಮ್ಮ ಪತ್ನಿಯರಿಂದ ವಿಶೇಷ ಪೂಜೆ ಮಾಡಿಸಿಕೊಂಡ ಎಲ್ಲಾ ಪತಿ ದೇವರುಗಳಿಗೆ ಶುಭಾಶಯ ಎಂದು ಬರೆದುಕೊಂಡಿರುವ ಅವರು ಪೊರಕೆ ಹಿಡಿದು ಗಂಡನನ್ನು ಓಡಿಸಿಕೊಂಡು ಹೋಗುತ್ತಿರುವ ಹೆಂಡತಿಯ ಮೀಮ್ಸ್‌ ಇರುವ ಚಿತ್ರ ಹಂಚಿಕೊಂಡಿದ್ದಾರೆ.

ಇನ್ನೂ ಕೆಲವರು ಭೀಮ ಅಮಾವಾಸ್ಯೆ ಸಲುವಾಗಿ ಗಂಡನ ಪಾದಪೂಜೆ ಮಾಡುವ ವಿಡಿಯೊ, ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ಒಟ್ಟಾರೆ ಪ್ರತಿದಿನ ಹೆಂಡತಿಯಿಂದ ಪೂಜೆ ಮಾಡಿಸಿಕೊಳ್ಳುವ ಗಂಡಂದಿರಿಗೆ ಭೀಮನ ಅಮಾವಾಸ್ಯೆ ದಿನ ವಿಶೇಷ ಪೂಜೆ ಸಿಗೋದು ಮಾತ್ರ ಸುಳ್ಳಲ್ಲ. ಆದ್ರೆ ಆ ಪೂಜೆ ಹೇಗಿರುತ್ತೆ ಅನ್ನೋದು ಅವರ ಅವರ ಮನೆಯ ವಿಚಾರ. ಒಟ್ಟಾರೆ ಹೆಂಡತಿಯಿಂದ ಪೂಜೆ ಸಾರಿ ಸಾರಿ ಪಾದ ಪೂಜೆ ಮಾಡಿಸಿಕೊಂಡ ಗಂಡಂದಿರಿಗೆಲ್ಲಾ ಭೀಮನ ಅಮಾವಾಸ್ಯೆಯ ಶುಭಾಶಯಗಳು.