ಕನ್ನಡ ಸುದ್ದಿ / ಜೀವನಶೈಲಿ /
Birthday Wishes: ದೂರದ ಊರಿನಲ್ಲಿರುವ ನಿಮ್ಮ ಗೆಳತಿ ಗೆಳೆಯನಿಗೆ ಹುಟ್ಟುಹಬ್ಬದ ಶುಭ ಕೋರಬೇಕಾ? ಇಲ್ಲಿದೆ ನೋಡಿ ಸುಮಧುರ ಸಂದೇಶಗಳು
Birthday Wishes: ದೂರದೂರಿನಲ್ಲಿ ವಾಸಿಸುತ್ತಿರುವ ಸ್ನೇಹಿತರ ಜನ್ಮ ದಿನಕ್ಕೆ ಯಾವ ರೀತಿ ಶುಭಾಶಯ ಕೋರಬಹುದು..? ಆತ್ಮೀಯ ಗೆಳತಿ / ಗೆಳೆಯನಿಗೆ ಜನ್ಮದಿನದ ಶುಭಾಶಯ ಕೋರಲು ಇಲ್ಲಿವೆ ಸರಳ ಐಡಿಯಾಗಳು.
ದೂರದ ಊರಿನಲ್ಲಿರುವ ಸ್ನೇಹಿತರಿಗೆ ಬರ್ತ್‌ಡೇ ಶುಭಾಶಯಗಳು
Birthday Wishes: ಈಗಂತೂ ಡಿಜಿಟಲ್ ಯುಗ. ಹಬ್ಬ ಹರಿದಿನಗಳು, ಮದುವೆ ಹಾಗೂ ಹುಟ್ಟಿದ ಹಬ್ಬ ಏನೇ ಇರಲಿ ಸೋಷಿಯಲ್ ಮೀಡಿಯಾ ವೇದಿಕೆಗಳ ಮೂಲಕವೇ ಶುಭ ಕೋರುತ್ತಾರೆ. ಕಾಲ ಎಷ್ಟೇ ಬದಲಾದರೂ ಆ ಕಾಲಘಟ್ಟಕ್ಕೆ ತಕ್ಕಂತೆ ಸ್ನೇಹ ಬದಲಾಗುತ್ತಾ ಹೋಗುತ್ತದೆ. ನಿಮ್ಮ ಸ್ನೇಹಿತರು ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರೂ ಸಹ ಅವರ ಜನ್ಮದಿನಕ್ಕೆ ನೀವು ಶುಭಾಶಯ ಕೋರಬಹುದು.
ಆದರೆ ಆಪ್ತ ಸ್ನೇಹಿತರಿಗೆ ಹುಟ್ಟು ಹಬ್ಬದ ಶುಭಾಶಯ ಕೋರುವಾಗ ಅದು ಅರ್ಥಗರ್ಭಿತವಾಗಿದ್ದರೆ ಮಾತ್ರ ಆ ಶುಭಾಶಯ ಹೆಚ್ಚು ವಿಶೇಷ ಎನಿಸುತ್ತದೆ. ಹಾಗಾದರೆ ನಿಮ್ಮ ಸ್ನೇಹಿತರ ಜನ್ಮ ದಿನದಂದು ಅತ್ಯುತ್ತಮ ರೀತಿ ಶುಭಾಶಯ ಕೋರುವುದು ಹೇಗೆ ಎಂದು ತಿಳಿಯೋಣ.
- ಜೀವನವು ನಮ್ಮನ್ನು ಮೈಲುಗಳಷ್ಟು ದೂರ ಮಾಡಿದ್ದರೂ ಸಹ ಇದರಿಂದ ನಮ್ಮ ಸ್ನೇಹದ ಬಂಧಕ್ಕೆ ಯಾವುದೇ ಅಡ್ಡಿಬಂದಿಲ್ಲ. ಪ್ರೀತಿಯ ಸ್ನೇಹಿತನಿಗೆ ಜನ್ಮ ದಿನದ ಹಾರ್ದಿಕ ಶುಭಾಶಯಗಳು. ನಿನ್ನನ್ನು ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ.
- ನಾವು ದೂರದ ಸ್ಥಳಗಳಲ್ಲಿ ಇರಬಹುದು ಆದರೆ ನಮ್ಮ ಸ್ನೇಹ ಎಂದಿಗೂ ದೂರವಾಗುವಂತದಲ್ಲ. ಈ ಜನ್ಮದಿನವು ನಿನ್ನ ಬಾಳಲ್ಲಿ ಸುಖ ಶಾಂತಿ ಹಾಗೂ ನೆಮ್ಮದಿಯನ್ನು ತರಲಿ. ಜಗತ್ತಿನ ಎಲ್ಲಾ ಸಂತೋಷಗಳು ನಿನ್ನದಾಗಲಿ.
- ನಾವು ದೂರ ಇರಬಹುದು. ಆದರೆ ನಮ್ಮ ನಡುವೆ ಇರುವ ಪ್ರೀತಿ ಎಂದಿಗೂ ದೂರವಾಗುವಂತದ್ದಲ್ಲ. ನನ್ನ ಆತ್ಮೀಯ ಗೆಳೆಯ/ಗೆಳತಿಗೆ ಜನ್ಮದಿನದ ಶುಭಾಶಯಗಳು.
- ಎಲ್ಲಾ ಸಂದರ್ಭಗಳಲ್ಲಿ ನನ್ನ ಬೆನ್ನ ಹಿಂದೆ ನಿಂತು ನನಗೆ ಬೆಂಬಲ ನೀಡುವ ನಮ್ಮ ಪ್ರೀತಿಯ ಗೆಳೆಯ/ಗೆಳತಿಗೆ ಜನ್ಮ ದಿನದ ಹಾರ್ದಿಕ ಶುಭಾಶಯಗಳು. ನಾವು ದೂರದೂರಿನಲ್ಲಿ ವಾಸಿಸುತ್ತಿರಬಹುದು. ಆದರೆ ನಮ್ಮ ಸ್ನೇಹ ನಮ್ಮನ್ನು ಎಂದಿಗೂ ಹತ್ತಿರದಲ್ಲಿಯೇ ಇಟ್ಟಿದೆ. ಆದಷ್ಟು ಬೇಗ ನಿನ್ನನ್ನು ಭೇಟಿಯಾಗುವೆ .
- ದೂರದೂರಿನಲ್ಲಿರುವ ಪ್ರೀತಿಯ ಗೆಳೆಯ/ಗೆಳತಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ನಾವು ವಾಸಿಸುವ ಸ್ಥಳದ ನಡುವೆ ಇರುವ ಅಂತರವು ನಮ್ಮ ಸ್ನೇಹವನ್ನು ಇನ್ನಷ್ಟು ಗಟ್ಟಿಗೊಳಿಸಿದೆ.
- ಬಲವಾದ ಸ್ನೇಹಕ್ಕೆ ಪ್ರತಿನಿತ್ಯ ಮಾತನಾಡುವ ಅಗತ್ಯವಿರುವುದಿಲ್ಲ. ಅಥವಾ ಪ್ರತಿದಿನವೂ ಒಟ್ಟಿಗೆ ಇರಬೇಕು ಎಂದೇನಿಲ್ಲ. ನಮ್ಮ ಹೃದಯದಲ್ಲಿ ಎಲ್ಲಿಯವರೆಗೆ ಪರಸ್ಪರ ಪ್ರೀತಿ, ಸ್ನೇಹ ಜೀವಂತವಾಗಿ ಇರುತ್ತದೆಯೋ ಅಲ್ಲಿಯವರೆಗೂ ಈ ಸ್ನೇಹಕ್ಕೆ ಯಾವುದೇ ಬರವಿಲ್ಲ. ಗೆಳೆಯ/ಗೆಳತಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
- ನಿನ್ನ ಜನ್ಮದಿನವನ್ನು ನಾನು ಸಂಭ್ರಮಿಸುತ್ತಿದ್ದೇನೆ. ಇಲ್ಲಿಂದಲೇ ನಿನಗೆ ಎಲ್ಲಾ ಪ್ರೀತಿಯನ್ನು ಧಾರೆಯೆರೆಯುತ್ತಿದ್ದೇನೆ. ಪ್ರೀತಿಯ ಗೆಳೆಯ/ಗೆಳತಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ಇದನ್ನೂ ಓದಿ: ನಿನ್ನ ಸ್ನೇಹವೇ ಅನನ್ಯ, ನಿನ್ನನ್ನು ಪಡೆದ ನಾನೇ ಧನ್ಯ; ಕ್ರಿಕೆಟ್ ಲೋಕದಲ್ಲಿ ಕೃಷ್ಣ-ಕುಚೇಲರಂತೆ ಇರುವ ಜೀವದ ಗೆಳೆಯರು ಇವರೇ!
- ವಾಸಿಸುವ ಸ್ಥಳ ದೂರವಾಗಿರಬಹುದು. ಆದರೆ ಹೃದಯದಿಂದ ನೀನು ನನಗೆ ಎಂದಿಗೂ ಹತ್ತಿರವಾಗಿದ್ದೀಯಾ. ಆತ್ಮೀಯ ಗೆಳೆಯ/ಗೆಳತಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
- ನಮ್ಮ ಸ್ನೇಹ ಇನ್ನೊಂದು ವರ್ಷವನ್ನು ಪೂರೈಸಿದೆ. ಸಾಕಷ್ಟು ನೆನಪುಗಳು, ಪ್ರೀತಿಯನ್ನು ಎಂದಿಗೂ ನನ್ನ ಜೊತೆ ಇಟ್ಟುಕೊಳ್ಳುತ್ತೇನೆ. ನಾವು ಎಷ್ಟೇ ದೂರವಿದ್ದರೂ ನಮ್ಮ ನಡುವಿನ ಸ್ನೇಹ ಎಂದಿಗೂ ಹತ್ತಿರ. ಜನ್ಮದಿನದ ಹಾರ್ದಿಕ ಶುಭಾಶಯಗಳು.
- ಜೀವನ ನಮ್ಮನ್ನು ಬೇರೆ ಬೇರೆ ಊರುಗಳಲ್ಲಿ ಇರಿಸಿರಬಹುದು. ಆದರೆ ಈ ದೂರ ನಮ್ಮ ಸ್ನೇಹಕ್ಕೆ ಎಂದಿಗೂ ಅಡ್ಡಿ ತಾರದು. ಪ್ರೀತಿಯ ಗೆಳತಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
- ನಿಜವಾದ ಸ್ನೇಹಿತರು ಎಂದಿಗೂ ದೂರವಾಗಲು ಸಾಧ್ಯವೇ ಇಲ್ಲ. ದೂರದ ಸ್ಥಳದಲ್ಲಿ ಇರಬಹುದು ಆದರೆ ಹೃದಯದಿಂದ ನಾವೆಂದಿಗೂ ಹತ್ತಿರದಲ್ಲೇ ಇರುತ್ತೇವೆ. ಜನ್ಮದಿನದ ಹಾರ್ದಿಕ ಶುಭಾಶಯ.
- ದೂರವೆಷ್ಟೇ ಇರಲಿ. ನಮ್ಮ ಹಲವು ವರ್ಷಗಳ ಸ್ನೇಹಕ್ಕೆ ಈ ದೂರ ಮುಖ್ಯವಲ್ಲ. ಹೃದಯದಿಂದ ನಾವೆಷ್ಟು ಹತ್ತಿರ ಎನ್ನುವುದು ಮುಖ್ಯ. ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
- ನಮ್ಮ ಮೈಲುಗಳಷ್ಟು ದೂರದ ಸ್ನೇಹಕ್ಕೆ ಇನ್ನೊಂದು ವರ್ಷ ತುಂಬಿದೆ. ನನ್ನ ಜೀವಕ್ಕೆ ನೀನು ಎಂದಿಗೂ ಹತ್ತಿರವೆನಿಸುತ್ತೀಯಾ. ಪ್ರೀತಿಯ ಸ್ನೇಹಿತನಿಗೆ ಜನ್ಮದಿನದ ಶುಭಾಶಯಗಳು.
ಇದನ್ನೂ ಓದಿ: ನಾಳೆ ಸ್ನೇಹಿತರ ದಿನ; ನಿಮ್ಮ ಬೆಸ್ಟ್ ಫ್ರೆಂಡ್ಗೆ ವಿಶ್ ಮಾಡಲು, ಸ್ಟೇಟಸ್ ಹಾಕಿಕೊಳ್ಳಲು ಇಲ್ಲಿವೆ ಇಮೇಜ್ಗಳು
ವಿಭಾಗ
ಆಹಾರ, ಆರೋಗ್ಯ, ಬ್ಯೂಟಿ ಟಿಪ್ಸ್, ರೆಸಿಪಿ, ಪ್ರವಾಸ, ಫಿಟ್ನೆಸ್, ಆಯುರ್ವೇದ, ಪೇರೆಂಟಿಂಗ್ ಟಿಪ್ಸ್ ಸೇರಿದಂತೆ ನಿಮ್ಮ ದೈನಂದಿನ ಜೀವನ ಸುಗಮಗೊಳಿಸುವ ಉಪಯುಕ್ತ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ದ ಲೈಫ್ಸ್ಟೈಲ್ ವಿಭಾಗ ನೋಡಿ.