Black Friday 2024: ಏನಿದು ಬ್ಲ್ಯಾಕ್‌ ಫ್ರೈಡೇ, ಈ ದಿನವನ್ನು ಆಚರಿಸೋದೇಕೆ? ಇಲ್ಲಿದೆ ಇದರ ಇತಿಹಾಸ, ಮಹತ್ವ
ಕನ್ನಡ ಸುದ್ದಿ  /  ಜೀವನಶೈಲಿ  /  Black Friday 2024: ಏನಿದು ಬ್ಲ್ಯಾಕ್‌ ಫ್ರೈಡೇ, ಈ ದಿನವನ್ನು ಆಚರಿಸೋದೇಕೆ? ಇಲ್ಲಿದೆ ಇದರ ಇತಿಹಾಸ, ಮಹತ್ವ

Black Friday 2024: ಏನಿದು ಬ್ಲ್ಯಾಕ್‌ ಫ್ರೈಡೇ, ಈ ದಿನವನ್ನು ಆಚರಿಸೋದೇಕೆ? ಇಲ್ಲಿದೆ ಇದರ ಇತಿಹಾಸ, ಮಹತ್ವ

ಬ್ಲ್ಯಾಕ್ ಫ್ರೈ ಡೇ ಬಗ್ಗೆ ನೀವು ಕೇಳಿರಬಹುದು. ಪ್ರತಿವರ್ಷ ಡಿಸೆಂಬರ್ 29ಕ್ಕೆ ಬ್ಲ್ಯಾ ಫ್ರೈ ಡೇ ಆಚರಿಸಲಾಗುತ್ತದೆ. ಈ ಸಮಯದಲ್ಲಿ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳ ಮೇಲೆ ಭಾರಿ ರಿಯಾಯಿತಿ ನೀಡಲಾಗುತ್ತದೆ. ಅಮೆರಿಕ ಸೇರಿ ವಿವಿಧ ರಾಷ್ಟ್ರಗಳಲ್ಲಿ ಬ್ಲ್ಯಾಕ್‌ ಫ್ರೈ ಡೇ ಆಚರಣೆ ಜೋರು. ಏನಿದು ಬ್ಲ್ಯಾಕ್ ಫ್ರೈ ಡೇ, ಇದಕ್ಕೆ ಈ ಹೆಸರು ಬರಲು ಕಾರಣವೇನು, ಇದರ ಇತಿಹಾಸವೇನು?

ಬ್ಲ್ಯಾಕ್ ಫ್ರೈ ಡೇ
ಬ್ಲ್ಯಾಕ್ ಫ್ರೈ ಡೇ

ಬ್ಲ್ಯಾಕ್ ಫ್ರೈ ಡೇ ಈ ದಿನದ ಬಗ್ಗೆ ಬಹುತೇಕರು ಕೇಳಿರುತ್ತಾರೆ. ಇದನ್ನು ಎಲೆಕ್ಟ್ರಾನಿಕ್ಸ್ ಗ್ಯಾಜೆಟ್‌ಗಳ ಮೇಲೆ ರಿಯಾಯಿತಿ ನೀಡುವ ದಿನ ಎಂದಷ್ಟೇ ಹಲವರು ಭಾವಿಸಿರುತ್ತಾರೆ. ಪ್ರಪಂಚದಾದ್ಯಂತ ಹಲವು ರಾಷ್ಟ್ರಗಳಲ್ಲಿ ನವೆಂಬರ್ 29ರಂದು ಬ್ಲ್ಯಾಕ್ ಫ್ರೈ ಡೇ ಆಚರಿಸಲಾಗುತ್ತದೆ. ಹಾಗಾದರೆ ಈ ದಿನವನ್ನ ಆಚರಿಸುವ ಉದ್ದೇಶವೇನು, ಇದಕ್ಕೆ ಬ್ಲ್ಯಾಕ್ ಫ್ರೈ ಡೇ ಎಂಬ ಹೆಸರು ಹೇಗೆ ಬಂತು ಎಂದು ಎಂದಾದರೂ ನೀವು ಯೋಚಿಸಿದ್ದೀರಾ? ಖಂಡಿತ ಇದಕ್ಕೊಂದು ಇತಿಹಾಸವಿದೆ. ಅದರ ಬಗ್ಗೆ ತಿಳಿಯಲು ಮುಂದೆ ಓದಿ.

ಬ್ಲ್ಯಾಕ್ ಫ್ರೈ ಡೇ ಎನ್ನುವುದು ವಿದೇಶದಲ್ಲಿ ಶುರುವಾದ ಆಚರಣೆ. ಅಲ್ಲಿ ಇದು ಪ್ರಮುಖ ಶಾಪಿಂಗ್ ಇವೆಂಟ್‌. ಇದನ್ನು ಅಮೆರಿಕ ಸರ್ಕಾರ ರಜಾದಿನವನ್ನಾಗಿ ಘೋಷಿಸಿದೆ. ಈ ಸಮಯದಲ್ಲಿ ಚಿಲ್ಲರೆ ಸರಕುಗಳ ಮೇಲೆ ಭಾರಿ ರಿಯಾಯಿತಿ ಘೋಷಿಸಲಾಗುತ್ತದೆ. ಆ ಮೂಲಕ ಜನರನ್ನು ಆರ್ಕಷಿಸಲಾಗುತ್ತದೆ.

ಬ್ಲ್ಯಾಕ್ ಫ್ರೈ ಡೇ ಮಹತ್ವ

ಬ್ಲ್ಯಾಕ್ ಫ್ರೈ ಡೇ ಎನ್ನುವುದು ಅಮೆರಿಕದಲ್ಲಿ ಅತಿ ಹೆಚ್ಚು ಜನ ಶಾಪಿಂಗ್ ಮಾಡುವ ಜನನಿಬಿಡ ಶಾಪಿಂಗ್ ದಿನಗಳಲ್ಲಿ ಒಂದಾಗಿದೆ. ಸಾಮಾನ್ಯವಾಗಿ ಈ ಸಮಯದಲ್ಲಿ ಚಿಲ್ಲರೆ ವ್ಯಾಪಾರಿಗಳು ಭಾರಿ ರಿಯಾಯಿತಿ ನೀಡುತ್ತಾರೆ. ಈ ವರ್ಷ ಅಂದರೆ 2024ರಲ್ಲಿ ಬ್ಲ್ಯಾಕ್ ಫ್ರೈ ಡೇ ಮಾರಾಟದಿಂದ 989 ಶತಕೋಟಿ ಡಾಲರ್‌ ಆದಾಯವನ್ನು ಪಡೆಯಬಹುದು ಎಂದು ಅಂದಾಜಿಸಲಾಗಿದೆ. ಈಗ ಆನ್‌ಲೈನ್ ಮಾರಾಟ ವೇದಿಕೆಗಳು ಅಸ್ತಿತ್ವಕ್ಕೆ ಬಂದ ಮೇಲೆ ಬ್ಲ್ಯಾಕ್ ಫ್ರೈ ಡೇ ಅಮೆರಿಕಕ್ಕೆ ಮಾತ್ರ ಸೀಮಿತವಾಗಿಲ್ಲ. ಬ್ಲ್ಯಾಕ್ ಫ್ರೈ ಡೇ ಹಿನ್ನೆಲೆಯಲ್ಲಿ ಅಮೆಜಾನ್‌, ಫ್ಲಿಪ್‌ಕಾರ್ಟ್‌ನಂತಹ ಆನ್‌ಲೈನ್ ಮಾರಾಟ ವೇದಿಕೆಗಳು ಕೂಡ ವಿವಿಧ ವಸ್ತುಗಳ ಮೇಲೆ ಭಾರಿ ರಿಯಾಯಿತಿ ನೀಡುತ್ತಿದ್ದಾರೆ.

ಬ್ಲ್ಯಾಕ್‌ ಫ್ರೈ ಡೇಯನ್ನು ಆಚರಿಸುವುದೇಕೆ?

‘ಬ್ಲ್ಯಾಕ್ ಫ್ರೈಡೇ‘ ಎಂಬ ಪದವು 20ನೇ ಶತಮಾನದ ಮಧ್ಯಭಾಗದಲ್ಲಿ ಹುಟ್ಟಿಕೊಂಡಿತು. ಆರಂಭದಲ್ಲಿ ಇದನ್ನು ಫಿಲಿಡೆಲ್ಫಿಯಾದಲ್ಲಿ ಬಳಸಲಾಗಿತ್ತು. ಅಸ್ತವ್ಯಸ್ತವಾಗಿರುವ ಜನಸಂದಣಿಯನ್ನು ವಿವರಿಸಲು ಪೊಲೀಸರು ಬಳಸಿದ್ದ ಪದ ಬ್ಲ್ಯಾಕ್ ಫ್ರೈ ಡೇ ಎಂಬುದಾಗಿತ್ತು. ನವೆಂಬರ್ 28 ಥ್ಯಾಂಕ್ಸ್ ಗೀವಿಂಗ್ ದಿನ. ವಿದೇಶದಲ್ಲಿ ಈ ಆಚರಣೆಯು ಜೋರಿತ್ತು. ಥ್ಯಾಂಕ್ಸ್‌ ಗೀವಿಂಗ್ ನಂತರ ಅಂಗಡಿಗಳಿಗೆ ಶಾಪರ್ಸ್ ಸ್ಟ್ರೀಮ್ ಮಾಡಿದ್ದರಿಂದ ನಗರದಾದ್ಯಂತ ಭಾರೀ ದಟ್ಟಣೆ ಉಂಟಾಗಿತ್ತು. ಆಗ ಪೊಲೀಸರಿಗೆ ಜನರನ್ನು ಹತೋಟಿಗೆ ತರುವುದು ಕಷ್ಟವಾಗಿತ್ತು. ಆ ಕಾರಣಕ್ಕೆ ಫಿಲಿಡೆಲ್ಫಿಯಾ ಪೊಲೀಸರು ಥ್ಯಾಂಕ್ಸ್ ಗೀವಿಂಗ್ ನಂತರದ ದಿನಕ್ಕೆ ಬ್ಲ್ಯಾಕ್ ಫ್ರೈ ಎಂದು ಕರೆದರು. ಇದು ಋಣಾತ್ಮಕ ಅರ್ಥವನ್ನು ಹೊಂದಿತ್ತು, ಏಕೆಂದರೆ ಇದು ಕಾನೂನು ಸುವ್ಯವಸ್ಥೆ ಜಾರಿಗೆ ಸವಾಲಿನ ದಿನವಾಗಿತ್ತು. ಆದರೆ ವರ್ಷಗಳು ಕಳೆದಂತೆ ಚಿಲ್ಲರೆ ವ್ಯಾಪಾರಿಗಳು ಈ ದಿನವನ್ನು ಧನಾತ್ಮಕವಾಗಿ ತೋರಿಸಲು ಆರಂಭಿಸಿದರು. ಹೀಗೆ ಬ್ಲ್ಯಾಕ್ ಫ್ರೈ ಡೇ ಎನ್ನುವುದು ಒಂದು ವಿಶೇಷ ದಿನವಾಗಿ ಆಚರಣೆಗೆ ಬಂದಿತು.

ಬ್ಲ್ಯಾಕ್ ಫ್ರೈ ಡೇಗೆ ಸಾಂಸ್ಕೃತಿಕ ಪ್ರಾಮುಖ್ಯತೆ

ಶಾಪಿಂಗ್ ಮಾಡುವ ದಿನವನ್ನು ಮೀರಿ ಇದು ಈ ಒಂದು ಸಾಮಾಜಿಕ ಘಟನೆಯಾಗಿದೆ. ಈ ದಿನ ಸ್ನೇಹಿತರು ಹಾಗೂ ಕುಟುಂಬಗಳು ಶಾಪಿಂಗ್ ಮಾಡಲು ಹೋಗುತ್ತಾರೆ. ಈ ದಿನದಂದು ಶಾಪಿಂಗ್ ಮಾಡುವ ಜೊತೆಗೆ ವಿಶೇಷ ಈವೆಂಟ್‌ಗಳನ್ನು ಕೂಡ ಆಚರಿಸಲಾಗುತ್ತದೆ.

ಶಾಪಿಂಗ್ ಟ್ರೆಂಡ್‌

ಮೊದಲೇ ಹೇಳಿದಂತೆ ಈ ದಿನವು ಶಾಂಪಿಂಗ್ ಅನ್ನು ಸಂಕೇತಿಸುವುದರಿಂದ ಬ್ಲ್ಯಾಕ್‌ ಫ್ರೈ ಡೇ ದಿನ ಈ ಕೆಳಗಿನ ವಸ್ತುಗಳ ಮೇಲೆ ಭಾರಿ ರಿಯಾಯಿತಿ ಘೋಷಿಸಲಾಗುತ್ತದೆ. ಲೆಕ್ಟ್ರಾನಿಕ್ಸ್, ಬಟ್ಟೆ, ಆಟಿಕೆಗಳು ಮತ್ತು ಗೃಹೋಪಯೋಗಿ ವಸ್ತುಗಳ ಮೇಲೆ ರಿಯಾಯಿತಿ ಇರುತ್ತದೆ. ಟಿವಿ, ಕಂಪ್ಯೂಟರ್‌, ಮೊಬೈಲ್‌ಗಳ ಮೇಲೆ ಭಾರಿ ರಿಯಾಯಿತಿ ಇರುತ್ತದೆ. ಆನ್‌ಲೈನ್‌ನಲ್ಲಿ ವಾರಗಟ್ಟಲೆ ಬ್ಲ್ಯಾಕ್ ಫ್ರೈ ಡೇ ನಡೆಯುತ್ತದೆ. ಈ ವರ್ಷ ಅಮೆಜಾನ್‌, ಫ್ಲಿಪ್‌ಕಾರ್ಟ್‌, ಮಿಂತ್ರಾದಂತಹ ಆನ್‌ಲೈನ್‌ ವೇದಿಕೆಗಳಲ್ಲಿ ಭಾರಿ ರಿಯಾಯಿತಿ ದರದಲ್ಲಿ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ.

Whats_app_banner