ಕನ್ನಡ ಸುದ್ದಿ  /  Lifestyle  /  Black Heads Removing By Using Kitchen Items Like Cinnamon Oats Powder Skin Care Tips In Kannada Rsm

Black Heads: ಬ್ಲಾಕ್‌ ಹೆಡ್ಸ್‌ನಿಂದ ಮುಜುಗರ ಅನ್ನಿಸ್ತಿದ್ಯಾ? ಅಡುಗೆ ಮನೆಯಲ್ಲಿರುವ ಈ ವಸ್ತುಗಳೇ ನಿಮ್ಮ ಸಮಸ್ಯೆಗೆ ಪರಿಹಾರ

Black Heads: ಮುಖದ ಮೇಲಿನ ಬ್ಲಾಕ್‌ಹೆಡ್ಸ್‌ ತೆಗೆಯಲು ರಾಸಾಯನಿಕ ಪದಾರ್ಥಗಳು ಬೇಡ. ಅದರ ಬದಲಿಗೆ ಚೆಕ್ಕೆ, ಓಟ್ಸ್‌ ಸೇರಿದಂತೆ ಅಡುಗೆ ಮನೆಯಲ್ಲೇ ದೊರೆಯುವ ಕೆಲವು ವಸ್ತುಗಳನ್ನು ಬಳಸಿ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ಮನೆಯಲ್ಲೇ ದೊರೆಯುವ ವಸ್ತುಗಳನ್ನು ಬಳಸಿ ಬ್ಲಾಕ್‌ ಹೆಡ್ಸ್‌ ತೊಲಗಿಸಿ
ಮನೆಯಲ್ಲೇ ದೊರೆಯುವ ವಸ್ತುಗಳನ್ನು ಬಳಸಿ ಬ್ಲಾಕ್‌ ಹೆಡ್ಸ್‌ ತೊಲಗಿಸಿ (PC: Unsplash)

ಚೆನ್ನಾಗಿ ಕಾಣುವುದು ಎಲ್ಲರಿಗೂ ಇಷ್ಟವೇ. ಆದರೆ ಹಾರ್ಮೋನ್ಸ್‌, ಕೆಲಸದ ಒತ್ತಡ, ಧೂಳು ಹಾಗೂ ಇನ್ನಿತರ ಕಾರಣಗಳಿಂದ ಚರ್ಮ ಹಾಳಾಗುತ್ತದೆ. ಅದರಲ್ಲೂ ಮುಖದ ಮೇಲೆ ಮೊಡವೆ. ಓಪನ್‌ ಪೋರ್ಸ್‌, ಬ್ಲಾಕ್‌ ಹೆಡ್‌ ಸಮಸ್ಯೆಗಳು ಹೆಚ್ಚಾಗುತ್ತದೆ. ಮುಖದ ಮೇಲೆ ಬ್ಲಾಕ್‌ ಹೆಡ್‌ ಇದ್ದವರಿಗೆ ಮುಜುಗರ ಎನಿಸುತ್ತದೆ.

ಬ್ಲಾಕ್‌ ಹೆಡ್ಸ್‌ ತೆಗೆಯಲು ಎಲ್ಲರೂ ಅಂಗಡಿಗಳಲ್ಲಿ ಮಾರಾಟವಾಗುವ ರಾಸಾಯನಿಕಯುಕ್ತ ಉತ್ಪನ್ನಗಳನ್ನು ಖರೀದಿಸುತ್ತಾರೆ. ಆದರೆ ಇದು ತಾತ್ಕಾಲಿಕ ಫಲಿತಾಂಶ ನೀಡುತ್ತದೆ. ನಿಮಗೆ ಶಾಶ್ವತ ಪರಿಹಾರ ಬೇಕೆಂದರೆ ಮನೆಯಲ್ಲೇ ದೊರೆಯುವ ವಸ್ತುಗಳನ್ನು ಬಳಸಬಹುದು. ಇದು ಚರ್ಮಕ್ಕೂ ಸುರಕ್ಷಿತ. ಬಹಳ ಪರಿಣಾಮಕಾರಿ ಕೂಡಾ. ಪ್ರತಿದಿನ ರಾತ್ರಿ ಮಲಗುವ ಮುನ್ನ ಈ ಫೇಸ್ ಪ್ಯಾಕ್‌ಗಳನ್ನು ಬಳಸಿದರೆ ಬ್ಲಾಕ್‌ ಹೆಡ್ಸ್‌ ಮಾಯವಾಗಿ ತ್ವಚೆಯು ಕಾಂತಿಯಿಂದ ಕೂಡಿರುತ್ತದೆ.

ದಾಲ್ಚಿನ್ನಿ ಪುಡಿ ಫೇಸ್ ಪ್ಯಾಕ್

ಒಂದು ಬೌಲ್‌ನಲ್ಲಿ 1 ಚಮಚ ದಾಲ್ಚಿನ್ನಿ(ಚೆಕ್ಕೆ) ಪುಡಿ ಮತ್ತು 1 ಚಮಚ ಜೇನುತುಪ್ಪ ಸೇರಿಸಿ ಮಿಶ್ರಣ ಮಾಡಿ. ನಂತರ ಮುಖಕ್ಕೆ ಹಚ್ಚಿಕೊಳ್ಳಿ. 10-15 ನಿಮಿಷಗಳ ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.

ಗ್ರೀನ್ ಟೀ ಎಲೆಗಳ ಫೇಸ್ ಪ್ಯಾಕ್

ಮೊದಲು ಗ್ರೀನ್ ಟೀ ಎಲೆಗಳು ಅಥವಾ ಗ್ರೀನ್ ಟೀ ಬ್ಯಾಗ್ ಅನ್ನು ಬಿಸಿ ನೀರಿನಲ್ಲಿ ಒಂದು ಗಂಟೆ ನೆನೆಸಿಡಿ. ನಂತರ ಈ ನೀರನ್ನು ಬ್ಲಾಕ್‌ ಹೆಡ್ಸ್‌ ಇರುವ ಜಾಗಕ್ಕೆ ಹಚ್ಚಿ. ನಂತರ ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆಯಿರಿ. ಇದನ್ನು ಪ್ರತಿನಿತ್ಯ ರಾತ್ರಿ ಬಳಸಿದರೆ ಮುಖದಲ್ಲಿರುವ ಕಪ್ಪು ಕಲೆಗಳು ನಿವಾರಣೆಯಾಗಿ ಮುಖ ಕಾಂತಿಯುತವಾಗುತ್ತದೆ.

ಓಟ್ಸ್‌-ಮೊಸರು ಫೇಸ್‌ಪ್ಯಾಕ್‌

ಒಂದು ಬೌಲ್‌ನಲ್ಲಿ 2 ಚಮಚ ಓಟ್ಸ್ 3 ಚಮಚ ಮೊಸರು ಮಿಶ್ರಣ ಮಾಡಿ. ನಂತರ ಅದನ್ನು ಮುಖಕ್ಕೆ ಹಚ್ಚಿ 10-15 ನಿಮಿಷ ಬಿಡಿ. ನಂತರ ನಿಮ್ಮ ಕೈಗಳನ್ನು ಒದ್ದೆ ಮಾಡಿಕೊಂಡು ಮುಖವನ್ನು ನಿಧಾನವಾಗಿ ಸ್ಕ್ರಬ್ ಮಾಡಿ, ತಣ್ಣೀರಿನಿಂದ ಮುಖ ತೊಳೆಯಿರಿ. ಈ ಫೇಸ್ ಪ್ಯಾಕ್ ಬಳಸಿದರೆ ತ್ವಚೆಯ ಮೇಲಿರುವ ಕೊಳೆ ಹಾಗೂ ಸತ್ತ ಜೀವಕೋಶಗಳು ನಿವಾರಣೆಯಾಗಿ ಮುಖ ಕಾಂತಿಯುತವಾಗುತ್ತದೆ ಹಾಗೂ ಕಪ್ಪು ತಲೆಗಳು ಮಾಯವಾಗುತ್ತವೆ.

ಮೊಟ್ಟೆಯ ಬಿಳಿಭಾಗ

ಒಂದು ಬಟ್ಟಲಿನಲ್ಲಿ ಮೊಟ್ಟೆಯ ಬಿಳಿಭಾಗವನ್ನು ಮಾತ್ರ ತೆಗೆದುಕೊಳ್ಳಬೇಕು. ನಂತರ ಅದನ್ನು ಮುಖಕ್ಕೆ ಹಚ್ಚಿ ಒಣಗಲು ಬಿಡಿ. ಅದರ ನಂತರ ಮೊಟ್ಟೆಯ ಬಿಳಿ ಬಣ್ಣವನ್ನು ಎರಡನೇ ಬಾರಿಗೆ ಮತ್ತೆ ಅನ್ವಯಿಸಬೇಕು. ಅದು ಒಣಗಿದ ನಂತರ, ಅದನ್ನು ಮೂರನೇ ಬಾರಿಗೆ ಅನ್ವಯಿಸಿ ಮತ್ತು ಒಣಗಲು ಬಿಡಿ. 15 ನಿಮಿಷಗಳ ನಂತರ ತಣ್ಣೀರಿನಿಂದ ತೊಳೆಯಿರಿ. ಬೇಕಿದ್ದಲ್ಲಿ ಎಗ್‌ ವೈಟ್‌ ಜೊತೆಗೆ 1/2 ಟೀಸ್ಪೂನ್ ನಿಂಬೆ ರಸ, 1 ಟೀಸ್ಪೂನ್ ಜೇನುತುಪ್ಪವನ್ನು ಕೂಡ ಸೇರಿಸಬಹುದು. ಇದನ್ನು ವಾರಕ್ಕೆ ಎರಡು ಬಾರಿ ಬಳಸಿದರೆ ತ್ವಚೆಯಲ್ಲಿರುವ ಕೊಳೆ ಮತ್ತು ಸತ್ತ ಜೀವಕೋಶಗಳೆಲ್ಲ ನಿವಾರಣೆಯಾಗುತ್ತದೆ.

ಟೊಮೆಟೊ ಫೇಸ್ ಪ್ಯಾಕ್

ಟೊಮೆಟೊ ಫೇಸ್ ಪ್ಯಾಕ್‌ಗಾಗಿ ಮೊದಲು ಮಾಗಿದ ಟೊಮೆಟೊವನ್ನು ಪೇಸ್ಟ್‌ ಮಾಡಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿ 2 ನಿಮಿಷ ಮೃದುವಾಗಿ ಮಸಾಜ್ ಮಾಡಿ. ನಂತರ ಇದನ್ನು 15 ನಿಮಿಷ ನೆನೆಸಿ ತಣ್ಣೀರಿನಿಂದ ಮುಖ ತೊಳೆಯಿರಿ. 3 ದಿನಗಳಿಗೊಮ್ಮೆ ಟೊಮೇಟೊ ಫೇಸ್ ಪ್ಯಾಕ್ ಬಳಸಿದರೆ ಮುಖ ಹೊಳೆಯುತ್ತದೆ. ಬ್ಲ್ಯಾಕ್ ಹೆಡ್ಸ್ ಕೂಡಾ ನಿವಾರಣೆಯಾಗುತ್ತದೆ.

ಉತ್ತಮ ಫಲಿತಾಂಶಕ್ಕಾಗಿ ಇಲ್ಲಿ ತಿಳಿಸಿರುವ ಯಾವುದಾದರೊಂದು ಫೇಸ್‌ ಪ್ಯಾಕನ್ನು ನಿಯಮಿತವಾಗಿ ಬಳಸಿ.

ವಿಭಾಗ