Bollywood Fashion: ಗಮನ ಸೆಳೆಯುತ್ತಿದೆ ಬಾಲಿವುಡ್ ನಟಿ ಜಾನ್ವಿ ಕಪೂರ್ ಆಕರ್ಷಕ ಬ್ಲೌಸ್ ಡಿಸೈನ್‌ಗಳು; ನಿಮಗೆ ಯಾವುದು ಇಷ್ಟ ಆಯ್ತು?
Beautiful Blouse Designs: ಸೀರೆಗೆ ತಕ್ಕಂತ ರವಿಕೆಗಳನ್ನು ಧರಿಸಿದರೆ ಸೀರೆಗೂ ಅಂದ, ಉಟ್ಟವರೂ ಚೆಂದ. ಬಾಲಿವುಡ್ ನಟಿ ಜಾನ್ವಿ ಕಪೂರ್ ಧರಿಸಿರುವ ಈ ಕುಪ್ಪಸ ಆಕರ್ಷಿಸುತ್ತಿದೆ. ಬಾಲಿವುಡ್ ಖ್ಯಾತ ಫ್ಯಾಷನ್ ಡಿಸೈನರ್‌ಗಳು ವಿನ್ಯಾಸ ಮಾಡಿರುವ ವಿವಿಧ ರೀತಿಯ ಬ್ಲೌಸ್‌ಗಳನ್ನು ಜಾನ್ವಿ ಧರಿಸಿದ್ದಾರೆ.
Bollywood Fashion: ಸೀರೆಲಿ ಹುಡುಗಿರ ನೋಡಲೇಬಾರದು...ಹೆಣ್ಣಿಗೆ ಸೀರೆ ಏಕೆ ಚೆಂದ... ಸೀರೆಗೆ ಸಂಬಂಧಿಸಿದ ಸಿನಿಮಾ ಹಾಡುಗಳನ್ನು ನೀವೆಲ್ಲಾ ಕೇಳಿರುತ್ತೀರಿ. ಕುರ್ತಾ, ಜೀನ್ಸ್, ನೈಟಿ ಹೀಗೆ ಪ್ರತಿದಿನ ತನಗೆ ಒಗ್ಗುವ ಡ್ರೆಸ್ ಧರಿಸುವ ಮಹಿಳೆಯರಿಗೆ ಸೀರೆ ಎಂದರೆ ಎಲ್ಲಿಲ್ಲದ ಪ್ರೀತಿ. ಸೀರೆಯಲ್ಲಿ ಚೆಂದ ಕಾಣದ ಹುಡುಗಿಯರೇ ಇಲ್ಲ ಎನ್ನಬಹುದು.
ಆದರೆ ಸೀರೆಗೆ ಒಪ್ಪುವ ಕುಪ್ಪಸ ಕೂಡಾ ಮುಖ್ಯ ಅಲ್ಲವೇ? ಮೊದಲೆಲ್ಲಾ ಒಂದೇ ರೀತಿಯ ಬ್ಲೌಸ್ ಧರಿಸುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಕಾಲ ಕಾಲಕ್ಕೆ ತಕ್ಕಂತೆ ಫ್ಯಾಷನ್ ಬದಲಾಗುತ್ತಿದೆ. ಹೊಸ ಹೊಸ ರೀತಿಯ ಬ್ಲೌಸ್ ಡಿಸೈನ್ ಕಣ್ಮನ ಸೆಳೆಯುತ್ತಿದೆ. ಅದರಲ್ಲೂ ಸೆಲೆಬ್ರಿಟಿಗಳ ಬ್ಲೌಸ್ ಡಿಸೈನ್ ನೋಡೋದೇ ಒಂದು ರೀತಿಯ ಚೆಂದ. ಬಾಲಿವುಡ್ ನಟಿ ಜಾನ್ವಿ ಕಪೂರ್ ಧರಿಸಿರುವ ಬ್ಲೌಸ್ ಅಂತೂ ಮಹಿಳೆಯರ ಕಣ್ಣು ಕುಕ್ಕುತ್ತಿದೆ. ಜಾನ್ವಿ ತಾವು ಸೀರೆ ಉಟ್ಟ ಅನೇಕ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅವರ ವಾರ್ಡ್‌ರೋಬ್‌ನಲ್ಲಿ ಸಾಕಷ್ಟು ಬಗೆಯ ಸೀರೆ ಕಲೆಕ್ಷನ್, ಬ್ಲೌಸ್ ಡಿಸೈನ್ ಇದೆ.
ಇದನ್ನೂ ಓದಿ: ಬಾಲಿವುಡ್ ನಟಿಯರ ಆಕರ್ಷಕ ಮಾಂಗಲ್ಯ ಡಿಸೈನ್‌ಗಳು
ಸ್ಟಡೆಡ್ ಹಾಲ್ಟರ್ ನೆಕ್ ಬ್ಲೌಸ್
ಫ್ಯಾಷನ್ ಡಿಸೈನರ್ ತರುಣ್ ತಹಿಲಿಯಾನಿ ವಿನ್ಯಾಸ ಗೊಳಿಸಿರುವ ಬ್ಲೌಸ್‌ನಲ್ಲಿ ಜಾನ್ವಿ ಕಪೂರ್ ಬಹಳ ಆಕರ್ಷಕವಾಗಿ ಕಾಣುತ್ತಿದ್ದಾರೆ. ಇದು ಸ್ಪ್ರಿಂಗ್ ಸಮ್ಮರ್ 2024 ಕಲೆಕ್ಷನ್ ಆಗಿದೆ. ಬಿಳಿ ಬಣ್ಣದ ಬ್ರೌಸ್ ವಿನ್ಯಾಸಕ್ಕೆ ಮುತ್ತಿನ ಮಣಿಗಳನ್ನು ವಿನ್ಯಾಸಗೊಳಿಸಲಾಗಿದೆ. ಅದಕ್ಕೆ ಒಪ್ಪುವ ಕಿವಿಯೋಲೆ, ಬಳೆ ತೊಟ್ಟು, ಫ್ರೀ ಹೇರ್ ಬಿಟ್ಟಿರುವ ಜಾನ್ವಿ ಕಪೂರ್ ಸಿಂಪಲ್ ಲುಕ್ ನೋಡುಗರ ಎದೆಗೆ ಕಿಚ್ಚು ಹಚ್ಚಿದೆ.
ಬೋ ಆನ್ ದಿ ನೆಕ್
ಬಿಳಿ, ಕೇಸರಿ ಬಣ್ಣದ ಸೀರೆಗೆ ಒಪ್ಪುವಂತೆ ಕೇಸರಿ ಬಣ್ಣದ ಕುಪ್ಪಸ ಕೂಡಾ ಬಹಳ ಸುಂದರವಾಗಿ ಕಾಣುತ್ತಿದೆ. ಇದರಲ್ಲಿ ಮುಂಭಾಗ ಬ್ಲೌಸ್‌ಗೆ ಹೆಚ್ಚಿನ ವರ್ಕ್ ಮಾಡಿಲ್ಲವಾದರೂ ಹಿಂಬದಿ ಕಟ್ಟಿರುವಂತೆ ಕಾಣುವ ಬ್ಲೌಸ್‌ನ ಕುಚ್ಚು ಕ್ಲಾಸಿ ಲುಕ್ ನೀಡುತ್ತಿದೆ. ನೀವೂ ಕೂಡಾ ಯಾವುದಾದರೂ ಪಾರ್ಟಿಗಳಿಗೆ ಈ ರೀತಿಯ ರವಿಕೆಗಳನ್ನು ಡಿಸೈನ್ ಮಾಡಿಸಬಹುದು.
ಎಂಬೆಲಿಶ್ಡ್ ಬ್ಲೌಸ್
60-70ರ ದಶಕದಲ್ಲಿ ಈ ರೀತಿಯ ಕುಪ್ಪಸಗಳು ಬಹಳ ಫೇಮಸ್ ಆಗಿದ್ದವು. ಓಲ್ಡ್ ಇಸ್ ಗೋಲ್ಡ್ ಎಂಬ ಮಾತಿನಂತೆ ಈಗ ಫುಲ್ ಸ್ಲಿವ್ಸ್ ರವಿಕೆಗಳು ಟ್ರೆಂಡ್‌ನಲ್ಲಿದೆ. ಸೀರೆಯ ಬಣ್ಣಕ್ಕೆ ಮ್ಯಾಚಿಂಗ್ ಇರುವ ರವಿಕೆಯಂತೂ ಪರ್ಫೆಕ್ಟ್ ಲುಕ್ ನೀಡುತ್ತದೆ.
ಜಾನ್ವಿ ಕಪೂರ್ ಸಿನಿಮಾಗಳ ವಿಚಾರಕ್ಕೆ ಬರುವುದಾದರೆ ಸದ್ಯಕ್ಕೆ ಅವರು ಮಿಸ್ಟರ್ ಆಂಡ್ ಮಿಸೆಸ್ ಮಾಹಿ, ದೇವರ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ದೇವರ, ತೆಲುಗು ಸಿನಿಮಾವಾಗಿದ್ದು ಈ ಚಿತ್ರದಲ್ಲಿ ಜಾನ್ವಿ ಕಪೂರ್‌ಗೆ ಜ್ಯೂನಿಯರ್ ಎನ್‌ಟಿಆರ್ ಜೊತೆಯಾಗಿದ್ದಾರೆ. ರಾಮ್ ಚರಣ್ ಜೊತೆ ಕೂಡಾ ಜಾನ್ವಿ ನಟಿಸುತ್ತಿದ್ದು ಇತ್ತೀಚೆಗೆ ಸಿನಿಮಾದ ಮುಹೂರ್ತ ನೆರವೇರಿದೆ.