ಕನ್ನಡ ಸುದ್ದಿ  /  Lifestyle  /  Bollywood Fashion Actress Retro Look With Elegant Saree Including Kareena Kapoor Alia Bhatt Rsm

Bollywood Fashion: ಓಲ್ಡ್‌ ಇಸ್‌ ಗೋಲ್ಡ್‌; ಆಲಿಯಾ ಭಟ್‌, ಕರೀನಾ ಕಪೂರ್‌ ಸೇರಿದಂತೆ ಬಾಲಿವುಡ್‌ ನಟಿಮಣಿಯರ ರೆಟ್ರೋ ಫ್ಯಾಷನ್‌ ಲುಕ್‌

Bollywood Fashion: 70-80ರ ದಶಕದ ಫ್ಯಾಷನ್‌ ಬೇರೆಯೇ ಇತ್ತು. ಆದರೆ ಈಗ ಮತ್ತೆ ಹಳೆ ಟ್ರೆಂಡ್‌ ಮರುಕಳಿಸುತ್ತಿದೆ. ಬಹಳ ವರ್ಷಗಳ ಹಿಂದೆ ಮಹಿಳೆಯರು ಇಷ್ಟ ಪಟ್ಟು ಉಡುತ್ತಿದ್ದ ಫ್ಲೋರಲ್‌ ಪ್ರಿಂಟ್‌ ಸೀರೆಗಳು ಮತ್ತೆ ಟ್ರೆಂಡ್‌ ಆಗುತ್ತಿದೆ. ಕರಿನಾ ಕಪೂರ್‌, ಆಲಿಯಾ ಭಟ್‌ ಸೇರಿದಂತೆ ಅನೇಕ ನಟಿಯರು ರೆಟ್ರೋ ಲುಕ್‌ನಲ್ಲಿ ಗಮನ ಸೆಳೆಯುತ್ತಿದ್ದಾರೆ.

ಬಾಲಿವುಡ್‌ ನಟಿಯರ ರೆಟ್ರೋ ಲುಕ್
ಬಾಲಿವುಡ್‌ ನಟಿಯರ ರೆಟ್ರೋ ಲುಕ್

Bollywood Fashion: ಓಲ್ಡ್‌ ಇಸ್‌ ಗೋಲ್ಡ್‌ ಎಂಬ ಮಾತಿದೆ. ಫ್ಯಾಷನ್‌ ವಿಚಾರದಲ್ಲೂ ಈಗ ರೆಟ್ರೋ ಶೈಲಿಯಲ್ಲಿ ಅನುಸರಿಸಲಾಗುತ್ತಿದೆ. ಅದರಲ್ಲೂ ಬಾಲಿವುಡ್‌ ಸೆಲೆಬ್ರಿಟಿಗಳು ಆಗಿನ ಫ್ಯಾಷನ್‌ ಕಾಪಿ ಮಾಡುತ್ತಿದ್ದಾರೆ. ಬೆಲ್‌ ಬಾಟಮ್‌ ಪ್ಯಾಂಟ್‌, ಫ್ಲೋರಲ್‌ ಸೀರೆಗಳು, ಹೇರ್‌ ಸ್ಟೈಲ್‌, ಬಿಂದಿ, ಕಿವಿ ಓಲೆ ಸೇರಿದಂತೆ ಈಗ ಎಲ್ಲಾ ಕಡೆಯೂ ರೆಟ್ರೋ ಲುಕ್‌ ಗಮನ ಸೆಳೆಯುತ್ತಿದೆ.

ಬಾಲಿವುಡ್‌ ಸೆಲೆಬ್ರಿಟಿಗಳಾದ ಜಾನ್ವಿ ಕಪೂರ್‌, ಸೋನಂ ಕಪೂರ್‌, ಕರೀನಾ ಕಪೂರ್‌ ಸೇರಿದಂತೆ ಬಹುತೇಕ ಸೆಲೆಬ್ರಿಟಿಗಳು ರೆಟ್ರೋಶೈಲಿಯ ಸೀರೆ ಉಟ್ಟು ಫೋಟೋಶೂಟ್‌ ಮಾಡಿಸಿ ಆ ಫೋಟೋಗಳನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಬಿಳಿ ಬಣ್ಣದ ಫ್ಲೋರಲ್‌ ಸೀರೆಯಲ್ಲಿ ಜಾನ್ವಿ ಕಪೂರ್‌

70-80ರ ದಶಕಲ್ಲಿ ಫ್ಲೋರಲ್‌ ಪ್ರಿಂಟ್‌ ಸೀರೆಗಳು ಬಹಳ ಫೇಮಸ್‌ ಆಗಿದ್ದವು. ಈಗಿನ ಟ್ರೆಂಡ್‌ಗೆ ತಕ್ಕಂತೆ ಮತ್ತೆ ಅಂತದ್ದೇ ಸೀರೆಗಳನ್ನು ತಯಾರಿಸಲಾಗುತ್ತಿದೆ. ಬಾಲಿವುಡ್‌ ನಟಿ ಜಾನ್ವಿ ಕಪೂರ್‌, ಬಿಳಿ ಹಾಗೂ ಕೆಂಪು ಬಣ್ಣದ ಫ್ಲೋರಲ್‌ ವಿನ್ಯಾಸದ ಸೀರೆ ಧರಿಸಿ ಪೋಸ್‌ ಕೊಟ್ಟಿದ್ದಾರೆ. ಬಿಳಿ ಬಣ್ಣದ ಸೀರೆ ಮೇಲೆ ಪ್ರಿಂಟ್‌ ಆಗಿರುವ ಕೆಂಪು ಹೂಗಳು ಆಕರ್ಷಕವಾಗಿ ಕಾಣುತ್ತಿದೆ. ಸೀರೆ ಪಾರದರ್ಶಕವಾಗಿದೆ. ಜಾನ್ವಿ, ಸೀರೆಗೆ ಒಪ್ಪುವ ಬಿಳಿ ಬಣ್ಣದ ಸ್ಲೀವ್‌ಲೆಟ್‌ ಬ್ಲೌಸ್‌ ಧರಿಸಿದ್ದಾರೆ. ಕೆಂಪು ಬಣ್ಣದ ಬಿಂದಿಯೊಂದಿಗೆ, ಆಕೆ ಧರಿಸಿರುವ ಕಿವಿಯೋಲೆ ಜಾನ್ವಿ ಅಂದವನ್ನು ಇಮ್ಮಡಿಗೊಳಿಸಿದೆ. ಈ ಬೇಸಿಗೆಯಲ್ಲಿ ನೀವು ಎಲ್ಲಾದರೂ ಹೊರಗೆ ಪಂಕ್ಷನ್‌ಗೆ ಹೋಗಬೇಕು ಎಂದುಕೊಂಡಿದ್ದರೆ, ಈ ರೀತಿಯ ಫ್ಲೋರಲ್‌ ಪ್ರಿಂಟ್‌ ಸೀರೆ ಹೇಳಿ ಮಾಡಿಸಿದಂತಿದೆ.

ಪೇಸ್ಟಲ್‌ ಫ್ಲೋರಲ್‌ ಸೀರೆಯಲ್ಲಿ ಕರೀನಾ ಕಪೂರ್‌

ಬಾಲಿವುಡ್‌ ಬೇಬೊ ಎಂದೇ ಕರೆಯಲ್ಪಡುವ ಕರೀನಾ ಕಪೂರ್‌ ಕೂಡಾ ಪೇಸ್ಟ್‌ ಫ್ಲೋರಲ್‌ ಸೀರೆ ಧರಿಸಿ ಪೋಸ್‌ ಕೊಟ್ಟಿದ್ದಾರೆ. ಬಿಳಿ ಬಣ್ಣದ ಸೀರೆ ಮೇಲೆ ಪಿಂಕ್‌ ಬಣ್ಣದ ದೊಡ್ಡ ದೊಡ್ಡ ಹೂಗಳ ಪ್ರಿಂಟ್‌ ಸುಂದರವಾಗಿದೆ. ಜೊತೆಗೆ ಸೀರೆ ಅಂಚಿಗೆ ತಿಳಿ ಚಿನ್ನದ ಬಣ್ಣ ಬಾರ್ಡರ್‌ ಅಂತೂ ಅದ್ಧೂರಿಯಾಗಿ ಕಾಣುತ್ತಿದೆ. ಈ ಸೀರೆಗೆ ಕರೀನಾ ಕಪೂರ್‌ ಕುಪ್ಪಸಕ್ಕೆ ಹೊಂದುವ ಸ್ಲೀವ್‌ಲೆಸ್‌ ರವಿಕೆ ತೊಟ್ಟಿದ್ದಾರೆ. ಪಿಂಕ್‌ ಬಣ್ಣದ ಕಿವಿಯೋಲೆ ಧರಿಸಿ ಸಿಂಪಲ್‌ ಮೇಕಪ್‌ನಲ್ಲೂ ಗ್ಲಾಮರಸ್‌ ಆಗಿ ಕಾಣುತ್ತಿದ್ದಾರೆ.

ಆಲಿಯಾ ಭಟ್‌

ನಟಿ ಆಲಿಯಾ ಭಟ್‌ ಬಿಳಿ ಬಣ್ಣದ ಫ್ಲೋರಲ್‌ ಪ್ರಿಂಟೆಡ್‌ ಸೀರೆ ಉಟ್ಟು ಫೋಟೋಶೂಟ್‌ ಮಾಡಿಸಿದ್ದಾರೆ. ಈ ಬಿಳಿ ಬಣ್ಣದ ಸಿಲ್ಕ್‌ ಸೀರೆ ಮೇಲೆ ಹಳದಿ ಬಣ್ಣದ ಪ್ರಿಂಟ್‌ ಇದೆ. ಸೀರೆಯ ಬಣ್ಣದ ಅರ್ಧ ತೋಳಿನ ಕುಪ್ಪಸ ಧರಿಸಿರುವ ಆಲಿಯಾ ಅದಕ್ಕೆ ಒಪ್ಪುವ ಜುಮುಕಿ, ಕೆಂಪು ಬಣ್ಣದ ಬಿಂದಿ ಧರಿಸಿ ಸಿಂಪಲ್‌ ಮೇಕಪ್‌ನಲ್ಲಿ ನೋಡುಗರ ಹೃದಯಕ್ಕೆ ಲಗ್ಗೆ ಇಟ್ಟಿದ್ದಾರೆ.

ಪೇಸ್ಟಲ್‌ ಪಿಂಕ್‌ ಸೀರೆಯಲ್ಲಿ ಸೋನಂ ಬಿನ್ನಾಣ

ಸೋನಮ್ ಕಪೂರ್ ತನ್ನ ಸಾರ್ಟೋರಿಯಲ್ ಪಿಕ್ಸ್ ಮತ್ತು ಸೊಗಸಾದ ಫ್ಯಾಶನ್ ಸೆನ್ಸ್‌ಗೆ ಹೆಸರುವಾಸಿಯಾಗಿದ್ದಾರೆ. ಇತ್ತೀಚೆಗೆ ಅವರು 90 ರ ದಶಕದ ಲುಕ್‌ ನೀಡುವ ತಿಳಿ ಬಾದಾಮಿ ಬಣ್ಣದ ಫ್ಲೋರಲ್‌ ಸೀರೆ ಧರಿಸಿ ಅದನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸೀರೆಗೆ ಒಪ್ಪುವಂತೆ ಕಡು ಬಾದಾಮಿ ಬಣ್ಣದ ಸಿಲ್ಕ್‌, ಫ್ರಿಲ್‌ ಇರುವಂತೆ ಕುಪ್ಪಸ ತೊಟ್ಟಿದ್ದಾರೆ. ಕಾಸ್ಟ್ಯೂಮ್‌ಗೆ ಒಪ್ಪುವ ಸಿಂಪಲ್‌ ಜುವೆಲರಿಗಳನ್ನು ಧರಿಸಿದ್ದಾರೆ.