Fitness Secrets: ಸುಲಭವಾಗಿ ತೂಕ ಇಳಿಸಬೇಕಾ; ನಟಿ ಕೃತಿ ಸನನ್ ರೀತಿ ಫಿಟ್ ಆಗಿರಲು ಇಲ್ಲಿದೆ ಟಿಪ್ಸ್
ಕನ್ನಡ ಸುದ್ದಿ  /  ಜೀವನಶೈಲಿ  /  Fitness Secrets: ಸುಲಭವಾಗಿ ತೂಕ ಇಳಿಸಬೇಕಾ; ನಟಿ ಕೃತಿ ಸನನ್ ರೀತಿ ಫಿಟ್ ಆಗಿರಲು ಇಲ್ಲಿದೆ ಟಿಪ್ಸ್

Fitness Secrets: ಸುಲಭವಾಗಿ ತೂಕ ಇಳಿಸಬೇಕಾ; ನಟಿ ಕೃತಿ ಸನನ್ ರೀತಿ ಫಿಟ್ ಆಗಿರಲು ಇಲ್ಲಿದೆ ಟಿಪ್ಸ್

Kriti Sanon Fitness Secrets: ಬಾಲಿವುಡ್ ನಟಿ ಕೃತಿ ಸನನ್ ತುಂಬಾ ಫಿಟ್ ಆಗಿರುವ ಬಹುಬೇಡಿಕೆಯ ನಟಿ. ಇವರು ಫಿಟ್ನೆಸ್‌ಗಾಗಿ ಹಲವು ಟಿಪ್ಸ್‌ಗಳನ್ನು ಅನುಸರಿಸುತ್ತಾರೆ. ಅದರ ವಿವರ ಇಲ್ಲಿದೆ.

ಕೃತಿ ಸನನ್ ರೀತಿ ಫಿಟ್ನ್‌ಸ್ ಆಗಿರಲು ಏನು ಮಾಡಬೇಕು. ಸುಲಭವಾಗಿ ತೂಕ ಇಳಿಸಲು ಟಿಪ್ಸ್ ಇಲ್ಲಿದೆ
ಕೃತಿ ಸನನ್ ರೀತಿ ಫಿಟ್ನ್‌ಸ್ ಆಗಿರಲು ಏನು ಮಾಡಬೇಕು. ಸುಲಭವಾಗಿ ತೂಕ ಇಳಿಸಲು ಟಿಪ್ಸ್ ಇಲ್ಲಿದೆ

ಆದಿಪುರುಷ್ ಬೆಡಗಿ ಕೃತಿ ಸನನ್ (Kriti Sanon) ಬಾಲಿವುಡ್‌ನಲ್ಲಿ ಬಹುಬೇಡಿಕೆಯ ನಟಿ. ಒಂದರ ಹಿಂದೆ ಒಂದರಂತೆ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಡಾರ್ಲಿಂಗ್ ಪ್ರಭಾಸ್ ಅಭಿನಯದ ಆದಿಪುರುಷ್‌ನಲ್ಲಿ ಈಕೆ ಮಿಂಚು ಹರಿಸಿದ್ದಳು. ಕೃತಿ ಸನನ್ ಫಿಟ್‌ನೆಸ್‌ಗೆ (Kriti Sanon Fitness) ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾಳೆ. ತಮ್ಮ ಕೆಲಸದಲ್ಲಿ ಎಷ್ಟೇ ಒತ್ತಡವಿದ್ದರೂ ಅದರ ನಡುವೆಯೇ ನಿಯಮಿತವಾಗಿ ದೈಹಿಕ ಕಸರತ್ತು ಮಾಡುವುದನ್ನು ಮರೆಯುವುದಿಲ್ಲ. ಹೀಗಾಗಿಯೇ ನೀವು ಎಷ್ಟೇ ಕೆಲಸದಲ್ಲಿ ನಿರತರಾಗಿದ್ದರೂ ನಿಯಮಿತವಾಗಿ ದೈಹಿಕ ಚಟುವಟಿಕೆಯನ್ನು ಮಾಡಲು ಮರೆಯದಿರಿ ಎಂಬುದು ಈಕೆಯ ಧ್ಯೇಯವಾಕ್ಯ. ಆ ಮಟ್ಟಿಗೆ ಫಿಟ್‌ನೆಸ್ ಕಾಯ್ದುಕೊಂಡಿದ್ದಾರೆ.

ಕೃತಿ ಸನನ್ ಆಗಾಗ ತಮ್ಮ ವರ್ಕೌಟ್ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ಇದರೊಂದಿಗೆ ತಮ್ಮ ಅಭಿಮಾನಿಗಳನ್ನೂ ಫಿಟ್ ಆಗಿರಲು ಪ್ರಚೋದಿಸುತ್ತಾರೆ. ಕೃತಿ ಅವರು ಪೋಟೊ ಪೋಸ್ಟ್ ಮಾಡಿದ ತಕ್ಷಣ ಅದಕ್ಕೆ ಸಾವಿರಾರು ಲೈಕ್ಸ್ ಮತ್ತು ಕಾಮೆಂಟ್‌ಗಳು ಬರುತ್ತವೆ. ನಟಿ ಕೃತಿ ಸನನ್ ಅವರ ದಿನನಿತ್ಯದ ವರ್ಕೌಟ್ ದಿನಚರಿ ಹೇಗಿರುತ್ತೆ ಅನ್ನೋದನ್ನು ಒಂದೊಂದಾಗಿ ತಿಳಿದುಕೊಳ್ಳೋಣ.

ನಟಿ ಕೃತಿ ಸನನ್ ಜಿಮ್‌ಗೆ ಹೋಗುವುದರ ಜೊತೆಗೆ ಯೋಗ ಮತ್ತು ನೃತ್ಯವನ್ನೂ ಮಾಡುತ್ತಾರೆ. ಇದು ನಿಮ್ಮ ವರ್ಕೌಟ್ ದಿನಚರಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದಂತಿದೆ. ಏಕೆಂದರೆ ನೀವು ಪ್ರತಿದಿನ ಒಂದೇ ರೀತಿಯ ವರ್ಕೌಟ್ ಮಾಡಿದರೆ ಬೇಸರವಾಗುತ್ತದೆ. ಈ ರೀತಿ ಹಲವು ವರ್ಕೌಟ್ ಮಾಡಿದರೆ ಹೊಸತನ ಮತ್ತಷ್ಟು ಉತ್ಸಾಹವನ್ನು ಹೆಚ್ಚಿಸುತ್ತದೆ. ಹೀಗಾಗಿ ಪ್ರತಿದಿನ ವ್ಯಾಯಾಮ ಮಾಡಬೇಕು ಎಂಬ ಭಾವನೆ.

ದೇಹದ ಕ್ಯಾಲೋರಿ ಬರ್ನ್ ಮಾಡುವುದು ಹೇಗೆ?

ನಟಿ ಕೃತಿ ಸನನ್ ಪ್ರಕಾರ, ನಡಿಗೆ ಉತ್ತಮ ವ್ಯಾಯಾಮಗಳಲ್ಲಿ ಒಂದಾಗಿದೆ. ಕೆಲಸದ ಸಂದರ್ಭದಲ್ಲಿ ವರ್ಕೌಟ್ ಮಾಡಲು ಸಮಯ ಸಿಗದಿದ್ದಾಗ ಸಾಧ್ಯವಾದಷ್ಟು ನಡೆಯುತ್ತಾರೆ. ಫೋನಿನಲ್ಲಿ ಮಾತನಾಡುವಾಗ ಸಾಧ್ಯವಾದಷ್ಟು ನಡೆಯುತ್ತಾರೆ. ಇದರಿಂದ ನಾವು ಹೆಚ್ಚು ಕ್ಯಾಲೂರಿಗಳನ್ನು ಬರ್ನ್ ಮಾಡಬಹುದು. ವಾಕಿಂಗ್ ಎಲ್ಲಕ್ಕಿಂತ ಉತ್ತಮವಾದ ವ್ಯಾಯಾಮ. ಅದಕ್ಕಾಗಿಯೇ ಎಲ್ಲರೂ ವಾಕಿಂಗ್ ಮಾಡಬೇಕು. ಇಂದಿನ ದಿನಗಳಲ್ಲಿ ಕಚೇರಿಗಳಲ್ಲಿ ಕೆಲಸ ಮಾಡುವವರು ನಡೆಯುವುದಕ್ಕೆ ಮರೆದಿದ್ದಾರೆ. ಆದರೆ ಇದು ಒಳ್ಳೆಯ ಅಭ್ಯಾಸವಲ್ಲ.

ಆರೋಗ್ಯವಾಗಿರಲು ನಮ್ಮ ದೇಹಕ್ಕೆ ಸಾಕಷ್ಟು ನೀರು ಬೇಕು. ನಿಮ್ಮನ್ನು ಹೈಡ್ರೀಕರಿಸಲು ಪ್ರತಿದಿನ ಸಾಕಷ್ಟು ನೀರು ಕುಡಿಯಿರಿ. ಕೃತಿ ಸನನ್ ಕೂಡ ಸಾಕಷ್ಟು ನೀರು ಕುಡಿಯುತ್ತಾರೆ. ತರಕಾರಿ ಮತ್ತು ಹಣ್ಣಿನ ಜ್ಯೂಸ್ ಕುಡಿಯಿರಿ. ಪಾಲಕ್, ಸೌತೆಕಾಯಿ, ಸೋರೆಕಾಯಿ, ನಿಂಬೆ, ಪುದೀನಾ, ಗ್ರೀನ್ ಆ್ಯಪನ್ ಜ್ಯೂಸ್ ಅಗತ್ಯಕ್ಕೆ ತಕ್ಕಂತೆ ಪ್ರತಿದನ ಒಂದರ ನಂತರ ಒಂದರಂತೆ ತೆಗೆದುಕೊಳ್ಳಬೇಕು.

ಆರೋಗ್ಯಕರ ಆಹಾರಕ್ಕೆ ಕೃತಿ ಸನನ್ ಮೊದಲ ಆದ್ಯತೆ ನೀಡುತ್ತಾರೆ. ಯಾವುದೇ ಕಾರಣಕ್ಕೂ ಜಂಕ್ ಫುಡ್ ತಿನ್ನಬೇಡಿ. ತಾಜಾ ಹಣ್ಣುಗಳನ್ನು ಮತ್ತು ಸಲಾಡ್‌ಗಳನ್ನು ಸಾಕಷ್ಟು ಸೇವಿಸಿ. ಹೊಳೆಯುವ ತ್ವಚೆಯ ರಹಸ್ಯವೆಂದರೆ ಈ ತಾಜಾ ಹಣ್ಣುಗಳು ಮತ್ತು ತರಕಾರಿಗಳು. ನೀವು ಕೃತಿ ಸನನ್ ಅವರಂತೆ ಫಿಟ್ ಆಗಿರಲು ಬಯಸಿದರೆ ಈ ಮೇಲಿನ ಕ್ರಮವನ್ನು ಅನುಸಿರಿದರೆ ಸನನ್ ರೀತಿ ನೀವು ಕೂಡ ಸುಂದರವಾಗಿ ಕಾಣುತ್ತೀರಿ. (This copy first appeared in Hindustan Times Kannada website. To read more like this please logon to kannada.hindustantime.com)

Whats_app_banner