International Recipes: ದೇಸಿ ಫುಡ್ ತಿಂದು ಬೋರಾಗಿದ್ಯಾ? ಹಾಗಾದ್ರೆ ಸ್ವಲ್ಪ ಚೇಂಜ್ ಇರ್ಲಿ, ಈ ವಿದೇಶಿ ಖಾದ್ಯಗಳನ್ನ ಮನೆಯಲ್ಲೇ ಟ್ರೈ ಮಾಡಿ
Easy International Recipes: ನಿಮಗೆ ದಿನಾ ಒಂದೇ ರೀತಿ ತಿಂದು ತಿಂದು ಬೋರಾಗಿದ್ರೆ, ಒಮ್ಮೆ ನಾವು ಇಲ್ಲಿ ನೀಡಿದ ವಿದೇಶಿ ಫುಡ್‌ಗಳನ್ನು ಟ್ರೈ ಮಾಡಿ ನೋಡಿ. ನಿಮಗೆ ಇಷ್ಟ ಆಗುತ್ತಾ? ಇಲ್ವಾ? ಎಂದು ಒಮ್ಮೆ ಮನೆಯಲ್ಲಿ ಹೊಸ ರೀತಿಯ, ಹೊಸ ರುಚಿಯ ಈ ಅಡುಗೆಗಳನ್ನು ಮಾಡಿ ನೋಡಿ.
ನೀವು ಮನೆಯಲ್ಲಿ ಪ್ರತಿನಿತ್ಯ ಅದದೇ ಅನ್ನ ಸಾಂಬಾರ್, ದೋಸೆ, ಚಪಾತಿ ಹೀಗೆ ಇಂಡಿಯನ್ ಫುಡ್ ತಿಂದು ಬೋರಾಗಿದ್ರೆ ಕೆಲವು ವಿದೇಶಿ ಆಹಾರವನ್ನು ಮನೆಯಲ್ಲೇ ತಯಾರು ಮಾಡಬಹುದು. ನೀವು ಯಾವುದನ್ನೆಲ್ಲ ಮನೆಯಲ್ಲಿ ತಯಾರಿಸಬಹುದು ಎಂಬುದನ್ನು ನಾವಿಲ್ಲಿ ನೀಡಿದ್ದೇವೆ ಗಮನಿಸಿ. ನೀವು ನಿಮ್ಮ ಮನೆಯಲ್ಲಿ ಟ್ರೈ ಮಾಡಿ ನೋಡಿ.
1. ಮೆಕ್ಸಿಕನ್ ಟ್ಯಾಕೋಸ್
ಪದಾರ್ಥಗಳು: ಚಿಕನ್, ಟ್ಯಾಕೋ ಮಸಾಲೆ, ಟ್ಯಾಕೋ ಚಿಪ್ಪುಗಳು, ಟೊಮೆಟೊ, ಚೀಸ್, ಕ್ರೀಮ್.
ವಿಧಾನ: ಟ್ಯಾಕೋ ಮಸಾಲೆಗಳೊಂದಿಗೆ ಮಾಂಸವನ್ನು ಬೇಯಿಸಿ, ಟ್ಯಾಕೋ ಚಿಪ್ಪುಗಳನ್ನು ಹಾಗೂ ಮೇಲೆ ತಿಳಿಸಿದ ಎಲ್ಲಾ ಪದಾರ್ಥಗಳನ್ನು ಅದರ ಮೇಲೆ ಉದುರಿಸಿಕೊಂಡು ತಿನ್ನಬಹುದು.
2. ಇಟಾಲಿಯನ್ ಕ್ಯಾಪ್ರೀಸ್ ಸಲಾಡ್
ಪದಾರ್ಥಗಳು: ತಾಜಾ ಟೊಮ್ಯಾಟೊ, ಮೊಝ್ಝಾರೆಲ್ಲಾ ಚೀಸ್, ತುಳಸಿ ಎಲೆಗಳು, ಆಲಿವ್ ಎಣ್ಣೆ, ವಿನೆಗರ್, ಉಪ್ಪು, ಮೆಣಸು.
ವಿಧಾನ: ಸ್ಲೈಸ್ ಟೊಮ್ಯಾಟೊ ಮತ್ತು ಮೊಝ್ಝಾರೆಲ್ಲಾ, ತುಳಸಿ ಎಲೆಗಳೊಂದಿಗೆ ಆಲಿವ್ ಎಣ್ಣೆ ಮತ್ತು ಅದಕ್ಕೆ ವಿನೆಗರ್ ಚಿಮುಕಿಸಿ, ಉಪ್ಪು ಮತ್ತು ಮೆಣಸು ಬೆರೆಸಿ ಸಲಾಡ್ ಮಾಡಬಹುದು.
3. ಚಿಕನ್ ಕರಿ
ಬೇಕಾಗುವ ಸಾಮಾಗ್ರಿಗಳು: ಚಿಕನ್, ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಕರಿಬೇವು, ಟೊಮ್ಯಾಟೊ, ತೆಂಗಿನ ಹಾಲು, ಕೊತ್ತಂಬರಿ ಸೊಪ್ಪು.
ವಿಧಾನ: ಈರುಳ್ಳಿ, ಬೆಳ್ಳುಳ್ಳಿ ಮತ್ತು ಶುಂಠಿಯನ್ನು ಬಾಡಿಸಿಕೊಳ್ಳಿ. ಚಿಕನ್ ಮತ್ತು ಕರಿ ಪುಡಿ ಸೇರಿಸಿ, ಕಂದು ಬಣ್ಣ ಬರುವವರೆಗೆ ಬೇಯಿಸಿ. ಟೊಮ್ಯಾಟೊ ಮತ್ತು ತೆಂಗಿನ ಹಾಲು ಸೇರಿಸಿ, ಚಿಕನ್ ಬೇಯುವವರೆಗೆ ಆಡಿಸುತ್ತಿರಿ. ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ತಿನ್ನಿ.
6. ಥಾಯ್ ಸ್ಪ್ರಿಂಗ್ ರೋಲ್ಸ್
ಪದಾರ್ಥಗಳು: ರೈಸ್ ಪೇಪರ್, ಬೇಯಿಸಿದ ಸೀಗಡಿ , ಅಕ್ಕಿ ನೂಡಲ್ಸ್ (ಶಾವಿಗೆ), ಕ್ಯಾಬೇಜ್, ಪುದೀನ, ಕೊತ್ತಂಬರಿ ಸೊಪ್ಪು, ಹೊಯ್ಸಿನ್ ಸಾಸ್.
ವಿಧಾನ: ರೈಸ್ ಪೇಪರ್ ಮೃದುವಾಗುವವರೆಗೆ ಬೆಚ್ಚಗಿನ ನೀರಿನಲ್ಲಿ ನೆನೆಸಿ. ಸೀಗಡಿ ನೂಡಲ್ಸ್ ಮತ್ತು ಕ್ಯಾಬೇಜ್ ಎಲೆಗಳನ್ನು ಕತ್ತರಿಸಿ ಹಾಕಿ. ಬಿಗಿಯಾಗಿ ರೋಲ್ ಮಾಡಿ ಮತ್ತು ಹೊಯ್ಸಿನ್ ಸಾಸ್‌ನಲ್ಲಿ ಅದನ್ನು ಅದ್ದಿಕೊಂಡು ತಿನ್ನಿ.
7. ಮೊಮೊಸ್
ಗೋಧಿ ಮತ್ತು ಮೈದಾ ಹಿಟ್ಟು1 ಟೀಸ್ಪೂನ್ ಉಪ್ಪು, 1/4 ಟೀಚಮಚ ಬೇಕಿಂಗ್ ಪೌಡರ್, 1/4 ಕಪ್ ತುಪ್ಪ ಅಥವಾ ಎಣ್ಣೆ, 1/2 ಕಪ್ ಉಗುರು ಬೆಚ್ಚಗಿನ ನೀರು. ಇವೆಲ್ಲವನ್ನು ಬಳಸಿ ನೀವು ಮೊಮೊ ಮಾಡಿಕೊಂಡು ತಿನ್ನಬಹುದು. ಇದಕ್ಕೆ ತರಕಾರಿಗಳು ಸಹ ಬೇಕಾಗುತ್ತದೆ. ಮೋದಕದ ಆಕಾರದಲ್ಲಿ ಹಿಟ್ಟಿನೊಳಗಡೆ ತುರಿದ ತರಕಾರಿಗಳನ್ನು ತುಂಬಿ ಹಬೆಯಲ್ಲಿ ಬೇಯಿಸಿದರೆ ಮೊಮೊ ರೆಡಿಯಾಗುತ್ತದೆ.
8. ಸೂಪ್ ನ್ಯೂಡಲ್ಸ್
ಎಲ್ಲ ತರಕಾರಿಗಳನ್ನು ಅಂದರೆ ನಿಮ್ಮಲ್ಲಿ ಯಾವುದಿದೆಯೋ ಆ ಎಲ್ಲ ತರಕಾರಿಗಳನ್ನು ಬಳಸಿಕೊಂಡು ನೀವು ಸೂಪ್ ಮಾಡಬಹುದು. ಮಾರ್ಕೆಟ್‌ನಲ್ಲಿ ಸಾದಾ ಮಸಾಲೆ ಇಲ್ಲದ ನೂಡಲ್ಸ್ ಸಿಗುತ್ತದೆ. ಅದನ್ನು ತಂದು ತರಕಾರಿಯಿಂದ ಸೂಪ್ ಮಾಡಿ ಅದಕ್ಕೆ ಪೆಪ್ಪರ್ ಪೌಡರ್ ಹಾಕಿ ಇನ್ನೊಂದಷ್ಟು ಹಸಿ ತರಕಾರಿಗಳನ್ನು ಇಟ್ಟುಕೊಂಡು ತಿನ್ನಬಹುದು.
ವಿಭಾಗ