Brain Teaser: ವಿದ್ಯಾರ್ಥಿಗೆ ಎಷ್ಟು ಶರ್ಟ್ ಬೇಕು ಎಂದು ನೀವು ಹೇಳಬಲ್ಲಿರಾ? ಈ ಪ್ರಶ್ನೆ ನಿಮ್ಮ ಮೆದುಳಿಗೆ ಕೆಲಸ ಕೊಡೋದು ಪಕ್ಕಾ
Brain Teaser: ವಿದ್ಯಾರ್ಥಿಯೊಬ್ಬ ಪ್ರತಿದಿನ ಸ್ವಚ್ಛವಾದ ಬಟ್ಟೆಯನ್ನು ಧರಿಸಲು ಆತ ಎಷ್ಟು ಶರ್ಟ್ ಹೊಂದಿರಬೇಕು ಎಂಬ ಪ್ರಶ್ನೆ ಇಲ್ಲಿದೆ. ಈ ಮೆದುಳಿನ ಟೀಸರ್‌ಗೆ ನಿಮ್ಮಿಂದ ಉತ್ತರ ಹುಡುಕಲು ಸಾಧ್ಯವೇ ನೋಡಿ.
ಮೆದುಳಿಗೆ ಕೆಲಸ ಕೊಡುವ ಬ್ರೈನ್ ಟೀಸರ್‌ಗಳು ನಿಮ್ಮ ಮೆದುಳು ಕೆಲಸ ಮಾಡಲು ಮತ್ತು ಅದೇ ಸಮಯದಲ್ಲಿ ಒಂದಷ್ಟು ಮೋಜಿನಿಂದ ಸಮಯ ಕಳೆಯಲು ಪರಿಪೂರ್ಣ ಮಾರ್ಗವಾಗಿದೆ. ಮೋಜಿನ ಗಣಿತದ ಪ್ರಶ್ನೆಗಳು ನಿಮ್ಮ ಆಲೋಚನೆಗೆ ಸವಾಲೊಡ್ಡುತ್ತವೆ. ಭಿನ್ನ ವಿಭಿನ್ನ ರೀತಿಯಲ್ಲಿ ನಿಮ್ಮನ್ನು ಯೋಚಿಸುವಂತೆ ಮಾಡಿ ಗೊಂದಲಪಡಿಸುತ್ತದೆ. ಸರಿಯಾದ ಉತ್ತರ ಯೋಚಿಸಿದರೂ ಮತ್ತಷ್ಟು ಯೋಚನೆಗೆ ಒಡ್ಡುತ್ತದೆ. ನಿಮ್ಮ ಬುದ್ಧಿಶಕ್ತಿಗೆ ಮತ್ತು ಜಾಣತನಕ್ಕೆ ಸವಾಲೊಡ್ಡಲು ಈಗ ನಾವು ಸಿದ್ಧರಿದ್ದೇವೆ.
ಥ್ರೆಡ್ಸ್ ಬೈ ಥ್ರೆಡ್ಸ್ @se7en_shotsನಲ್ಲಿ ಪೋಸ್ಟ್ ಮಾಡಲಾದ ಮೆದುಳಿನ ಟೀಸರ್ ಒಂದು ಇಲ್ಲಿದೆ. ಇದು ನಿಮ್ಮ ಸಮಸ್ಯೆಯನ್ನು ಪರಿಹರಿಸುವ ಕೌಶಲ್ಯಗಳಿಗೆ ಸವಾಲು ಹಾಕುತ್ತದೆ. ನೀವು ಪ್ರತಿನಿತ್ಯವೂ ತೊಳೆದ ಮತ್ತು ಸ್ವಚ್ಛವಾದ ಬಟ್ಟೆಯನ್ನೇ ಧರಿಸುತ್ತೀರಿ ಎಂದಾದರೆ, ನಿಮ್ಮಲ್ಲಿ ಎಷ್ಟು ಹೊಸ ಬಟ್ಟೆಗಳಿವೆ ಎಂಬ ಲೆಕ್ಕ ನಿಮಗಿರುತ್ತದೆ. ತುಂಬಾ ಬಟ್ಟೆಗಳು ಇರುವವರು ಲೆಕ್ಕ ಇಟ್ಟುಕೊಳ್ಳದಿದ್ದರೂ ಆಯ್ತು. ಈ ಮೆದುಳಿನ ಟೀಸರ್ ನಿಮ್ಮ ತರ್ಕ ಮತ್ತು ಸಮಸ್ಯೆ ಪರಿಹರಿಸುವ ಕೌಶಲ್ಯಗಳನ್ನು ಪರೀಕ್ಷಿಸುತ್ತದೆ. ಸಂಖ್ಯೆಗಳ ಬಗ್ಗೆ ಎಚ್ಚರಿಕೆಯಿಂದ ಯೋಚಿಸುವಂತೆ ಮಾಡುತ್ತದೆ.
ಮೆದುಳಿನ ಟೀಸರ್ ಹೀಗಿದೆ
ಹಣ ಉಳಿತಾಯದ ಬಗ್ಗೆ ಜಾಗರೂಕರಾಗಿರುವ ಮತ್ತು ನಿತ್ಯ ಸ್ವಚ್ಛವಾದ ಶರ್ಟ್ ಧರಿಸಲು ಬಯಸುವ ವಿದ್ಯಾರ್ಥಿಯೊಬ್ಬನ ಕುರಿತ ಪ್ರಶ್ನೆ ಇದು. ವಿದ್ಯಾರ್ಥಿಯು ಸರಳ ದಿನಚರಿಯನ್ನು ಅನುಸರಿಸುತ್ತಾನೆ. ಪ್ರತಿ ಸೋಮವಾರ, ಆತ ತಾನು ಧರಿಸಿ ಕೊಳಕಾದ ಶರ್ಟ್‌ಗಳನ್ನು ಒಗೆಯಲು ಲಾಂಡ್ರಿಯಾತನಿಗೆ ಕೊಡುತ್ತಾನೆ. ಅದಾಗಿ ನಿಖರವಾಗಿ ಒಂದು ವಾರದ ನಂತರ, ಅವನು ಅವುಗಳನ್ನು ಮತ್ತೆ ಆತನಿಂದ ತೆಗೆದುಕೊಂಡು ಹೋಗುತ್ತಾನೆ. ಪ್ರತಿ ದಿನವೂ ಸ್ವಚ್ಛವಾದ ಶರ್ಟ್ ಧರಿಸಲು ವಿದ್ಯಾರ್ಥಿಯ ಬಳಿ ಎಷ್ಟು ಶರ್ಟ್ ಇರಬೇಕು ಎಂಬುದನ್ನು ಕಂಡುಹಿಡಿಯುವುದು ನಿಮ್ಮ ಮುಂದಿರುವ ಸವಾಲು.
ಬ್ರೈನ್ ಟೀಸರ್ ಇಲ್ಲಿದೆ ನೋಡಿ:
ವಿದ್ಯಾರ್ಥಿಗೆ ಪ್ರತಿದಿನ ತಾಜಾ ಶರ್ಟ್ ಅಗತ್ಯವಿದ್ದರೂ, ಲಾಂಡ್ರಿಯಿಂದ ಆತ ಬಟ್ಟೆ ಸಂಗ್ರಹಿಸುವ ಸಮಯವು ಈ ಪ್ರಶ್ನೆಯನ್ನು ಕಷ್ಟಕರವಾಗಿಸುತ್ತದೆ. ಹೀಗಾಗಿ ಕಾಮೆಂಟ್ ವಿಭಾಗದಲ್ಲಿ ಜನರು ಮೆದುಳಿನ ಟೀಸರ್ ಪರಿಹರಿಸಲು ಪ್ರಯತ್ನಿಸಿದ್ದಾರೆ. ಕೆಲವರು ಸೃಜನಶೀಲ ಉತ್ತರ ನೀಡಿದ್ದಾರೆ. ಇತರರು ಲಾಂಡ್ರಿಯಾತನ ಸಮಯದಿಂದ ಇನ್ನೂ ಗೊಂದಲಕ್ಕೊಳಗಾಗಿದ್ದಾರೆ.
ಬಳಕೆದಾರರೊಬ್ಬರ ಉತ್ತರ ಹೀಗಿದೆ. “ಉತ್ತರ 14. ಅವನು ತನ್ನ 7 ಶರ್ಟ್ ಗಳನ್ನು ಸಂಗ್ರಹಿಸಲು ಬಂದಾಗ, ಇನ್ನೂ 7 ಶರ್ಟ್‌ಗಳನ್ನು ಲಾಂಡ್ರಿಗೆ ತರುತ್ತಾನೆ” ಎಂಬುದು ಅವರ ಉತ್ತರವಾಗಿದೆ. ಇನ್ನೊಬ್ಬ ಬಳಕೆದಾರ, “ಸಂಖ್ಯೆ ಏನೇ ಇರಲಿ, ಅವರು ತೊಳೆಯಲು ಕೊಡುವ ಎರಡು ಪಟ್ಟು ಹೆಚ್ಚು ಶರ್ಟ್ ಹೊಂದಿರಬೇಕು” ಎಂದು ಹೇಳಿದ್ದಾರೆ.
ಈ ಮೆದುಳಿನ ಟೀಸರ್‌ಗೆ ನಿಮಗೆ ಉತ್ತರ ಸಿಕ್ಕರೆ, ನೀವು ಕೂಡಾ ಜಾಣರು.