ಕನ್ನಡ ಸುದ್ದಿ  /  Lifestyle  /  Brain Teaser Can You Determine How Much Profit This Man Makes After Selling A Chicken Viral News Mind Game Mgb

Brain Teaser: ಕೋಳಿಯನ್ನ ಖರೀದಿಸಿ ಮಾರಿದ ಗುಂಡನಿಗೆ ಸಿಕ್ಕ ಲಾಭವೆಷ್ಟು? ಥಟ್​ ಅಂತ ಉತ್ತರ ಹೇಳಿ

Brain Teaser: ಇಲ್ಲೊಂದು ಬ್ರೈನ್‌ ಟೀಸರ್‌ ಇದೆ. ಇದು ನಿಮ್ಮ ಮೆದುಳು ಎಷ್ಟು ಚುರುಕಾಗಿದೆ ಎಂಬುದನ್ನು ಪರೀಕ್ಷಿಸುತ್ತದೆ. ಉತ್ತರ ಹೇಳಿದ್ರೆ ನೀವೇ ಜಾಣರು. ಇಲ್ಲಿ ನೀವು ಈ ವ್ಯಕ್ತಿ ಕೋಳಿಯನ್ನು ಖರೀದಿಸುವುದು, ಮಾರುವುದನ್ನ ಮಾಡಿ ಎಷ್ಟು ಲಾಭ ಗಳಿಸಿದ್ದಾನೆ ಎಂದು ಹೇಳಬೇಕು.

ಗುಂಡನಿಗೆ ಸಿಕ್ಕ ಲಾಭವೆಷ್ಟು?
ಗುಂಡನಿಗೆ ಸಿಕ್ಕ ಲಾಭವೆಷ್ಟು?

ಬ್ರೈನ್‌ ಟೀಸರ್‌ಗಳು ನಿಜಕ್ಕೂ ತಲೆ ಕೆರೆದುಕೊಳ್ಳುವಂತೆ ಮಾಡುತ್ತವೆ. ಮೇಲ್ನೋಟಕ್ಕೆ ಉತ್ತರ ಹುಡುಕುವುದು ಸುಲಭ ಅನ್ನಿಸಿದರೂ ಕೂಡ ಉತ್ತರ ಸಿಗದೇ ತಲೆಗೆ ಹುಳ ಬಿಟ್ಟುಕೊಳ್ಳುತ್ತೇವೆ. ಕೆಲವೊಮ್ಮೆ ಎಷ್ಟೇ ಬ್ರೇನ್​ ಉಪಯೋಗಿಸಿದರೂ ಉತ್ತರ ಕಂಡು ಹಿಡಿಯಲು ಆಗೋದೇ ಇಲ್ಲ. ಉತ್ತರ ಬೇಕಂದ್ರೆ ನಿಮಗೆ ಸ್ವಲ್ಪ ನಿಮಗೆ ತಾಳ್ಮೆ ಇರಬೇಕು. ಇಲ್ಲೊಂದು ಅಂತಹದ್ದೇ ಬ್ರೈನ್‌ ಟೀಸರ್‌ ಇದೆ. ಇದು ನಿಮ್ಮ ಮೆದುಳು ಎಷ್ಟು ಚುರುಕಾಗಿದೆ ಎಂಬುದನ್ನು ಪರೀಕ್ಷಿಸುತ್ತದೆ. ಉತ್ತರ ಹೇಳಿದ್ರೆ ನೀವೇ ಜಾಣರು. ಇಲ್ಲಿ ನೀವು ಈ ವ್ಯಕ್ತಿ ಕೋಳಿಯನ್ನು ಖರೀದಿಸುವುದು, ಮಾರುವುದನ್ನ ಮಾಡಿ ಎಷ್ಟು ಲಾಭ ಗಳಿಸಿದ್ದಾನೆ ಎಂದು ಹೇಳಬೇಕು.

ಗುಂಡ ಹೆಸರಿನ ವ್ಯಕ್ತಿಯೊಬ್ಬ 900 ರೂಪಾಯಿ ನೀಡಿ ಕೋಳಿಯೊಂದನ್ನು ಖರೀದಿ ಮಾಡುತ್ತಾನೆ. ಅದೇ ಕೋಳಿಯನ್ನು ಆತ 1200 ರೂಪಾಯಿಗೆ ಬೇರೆಯವರಿಗೆ ಮಾರಾಟ ಮಾಡುತ್ತಾನೆ. ಈಗ ಅವನಿಗೆ ಲಾಭ ಸಿಕ್ತು ಅಲ್ವಾ? ಹಾಗಂತ ಗುಂಡ ಸುಮ್ಮನಾಗಲ್ಲ. ಮತ್ತದೇ ಕೋಳಿಯನ್ನು 1300 ರೂಪಾಯಿ ಕೊಟ್ಟು ಕೊಂಡುಕೊಳ್ಳುತ್ತಾನೆ. ಅದನ್ನ 1600 ರೂಪಾಯಿಗೆ ಮಾರಾಟ ಮಾಡುತ್ತಾನೆ. ಇಲ್ಲಿ ನಿಮ್ಮ ಕೆಲಸ ಏನು ಅಂದ್ರೆ, 20 ಸೆಕೆಂಡ್​ನಲ್ಲಿ ನೀವು ಗುಂಡನಿಗೆ ಈ ಕೋಳಿಯಿಂದ ಎಷ್ಟು ಹಣ ಲಾಭವಾಗಿ ಸಿಕ್ತು ಎಂದು ತಿಳಿಸಬೇಕು.

ನಿಮ್ಮ ಸಮಯ ಈಗ ಶುರು. ಟಿಕ್​ ಟಿಕ್​ 1, ಟಿಕ್​ ಟಿಕ್​ 2, ಟಿಕ್​ ಟಿಕ್​ 3, 4, 5, 6, 7, 8, 9, 10, 11, 12, 13, 14, 15, 16, 17, 18, 19..........ಟಿಕ್​ ಟಿಕ್​ 20. ನಿಮ್ಮ ಸಮಯ ಮುಗಿತು. ಉತ್ತರ ಗೊತ್ತಾಯ್ತಾ? ಲೆಕ್ಕದಲ್ಲಿ ಚುರುಕಿದ್ದವರಿಗೆ 20 ಸೆಕೆಂಡ್​ ಯಾಕೆ ಕೇವಲ 10 ಸೆಕೆಂಡ್​ ಸಾಕು. ಹಾಗಾದ್ರೆ ಹೇಳಿ ಗುಂಡನಿಗೆ ಲಾಭ ಬಂದಿದ್ದು ಎಷ್ಟು ಅಂತ.

ಇಲ್ಲಿ ಎರಡು ಉತ್ತರಗಳು ನಿಮ್ಮನ್ನ ಗೊಂದಲಕ್ಕೆ ದೂಡುತ್ತದೆ. ಕೆಲವರು ಹೇಗೆ ಲೆಕ್ಕ ಹಾಕುತ್ತಾರೆ ಅಂದ್ರೆ 900 ರೂಪಾಯಿಗೆ ಕೊಂಡ ಕೋಳಿಯನ್ನು 1200ಕ್ಕೆ ಮಾರಿದ್ರೆ 300 ರೂಪಾಯಿ ಲಾಭ ಸಿಕ್ತು. ಅದನ್ನ ಮತ್ತೆ 1300ಕ್ಕೆ ಖರೀದಿಸಿದಾಗ 100 ರೂಪಾಯಿ ಕಳೆದುಕೊಂಡ. ಅಲ್ಲಿಗೆ 200 ರೂಪಾಯಿ ಮಾತ್ರ ಲಾಭ ಸಿಕ್ಕಂಗಾಯ್ತು. ಮತ್ತೆ ಅದನ್ನು 1600 ರೂಪಾಯಿಗೆ ಮಾರಿದಾಗ ಮತ್ತೆ 300 ರೂ ಲಾಭ ಸಿಕ್ತು. ಅಲ್ಲಿಗೆ ಒಟ್ಟು 500 ರೂಪಾಯಿ ಲಾಭ ಸಿಕ್ಕಂಗಾಯ್ತು.

ಮತ್ತೆ ಕೆಲವರು ಹೇಗೆ ಲೆಕ್ಕ ಹಾಕುತ್ತಾರೆ ಅಂದ್ರೆ ಗುಂಡ ಖರೀದಿಗೆ ಹಣ ಹಾಕಿದ್ದು 900+1300=2200. ಆತ ಮಾರಿದ ಹಣ 1200+1600=2800. ಹೀಗಾಗಿ 2800ರಲ್ಲಿ 2200 ಕಳೆದ್ರೆ 600 ರೂಪಾಯಿ ಲಾಭ ಸಿಕ್ಕ ಹಾಗೆ ಆಯ್ತು.

ಹಾಗಾದ್ರೆ ನಿಮ್ಮ ಪ್ರಕಾರ ಗುಂಡ ಗಳಿಸಿದ ಲಾಭ 500 ರೂಪಾಯಿ ಅಥವಾ 600 ರೂಪಾಯಿ. ಯೋಚಿಸಿ ಉತ್ತರ ಹೇಳಿ. ನಿಮ್ಮ ಸ್ನೇಹಿತರಿಗೂ ಇದನ್ನ ಕಳಿಸಿ. ನೋಡೋಣ ಅವರ ಉತ್ತರ ಏನು ಅಂತ.

ವಿಭಾಗ