ಕನ್ನಡ ಸುದ್ದಿ  /  Lifestyle  /  Brain Teaser Can You Find Out How Many Eggs Are Left Viral News Mind Game Mgb

Brain Teaser: ಎಷ್ಟು ಮೊಟ್ಟೆ ಉಳಿದಿವೆ ಅಂತ ಹೇಳ್ತೀರಾ? ಶೇ 99ರಷ್ಟು ಜನ ತಪ್ಪು ಉತ್ತರನೇ ಹೇಳೋದು

Viral News: ಒಬ್ಬ ವ್ಯಕ್ತಿ ಹೇಳ್ತಾನೆ, ನನ್ನ ಬಳಿ 6 ಮೊಟ್ಟೆಗಳಿವೆ. 2 ಮೊಟ್ಟೆಯನ್ನು ಒಡೆದೆ, 2 ಮೊಟ್ಟೆಯನ್ನು ಫ್ರೈ ಮಾಡಿದೆ, 2 ಮೊಟ್ಟೆಯನ್ನು ತಿಂದೆ. ಹಾಗಾದ್ರೆ ನನ್ನ ಬಳಿ ಎಷ್ಟು ಮೊಟ್ಟೆ ಉಳಿಯಿತು ಎಂದು ಕೇಳ್ತಾನೆ. ಈ ಪ್ರಶ್ನೆಗೆ ನೀವೇ ಉತ್ತರ ಕೊಡಬೇಕು.

ಎಷ್ಟು ಮೊಟ್ಟೆ ಉಳಿದಿವೆ?
ಎಷ್ಟು ಮೊಟ್ಟೆ ಉಳಿದಿವೆ?

ಸಾಮಾಜಿಕ ಜಾಲತಾಣದಲ್ಲಿ ಕೆಲವೊಮ್ಮೆ ವೈರಲ್​ ಆಗುವ ಬ್ರೈನ್‌ ಟೀಸರ್‌ಗಳು ನಿಜಕ್ಕೂ ತಲೆ ಕೆರೆದುಕೊಳ್ಳುವಂತೆ ಮಾಡುವುದು ಖಂಡಿತ. ಇವು ಮೇಲ್ನೋಟಕ್ಕೆ ಉತ್ತರ ಹುಡುಕುವುದು ಸುಲಭ ಅನ್ನಿಸಿದರೂ ಕೂಡ ಉತ್ತರ ಸಿಗದೇ ತಲೆಗೆ ಹುಳ ಬಿಟ್ಟುಕೊಳ್ಳುತ್ತೇವೆ. ಕೆಲವೊಮ್ಮೆ ಎಷ್ಟೇ ಬ್ರೇನ್​ ಉಪಯೋಗಿಸಿದರೂ ಉತ್ತರ ಕಂಡು ಹಿಡಿಯಲು ಆಗೋದೇ ಇಲ್ಲ. ಉತ್ತರ ಬೇಕಂದ್ರೆ ನಿಮಗೆ ಸ್ವಲ್ಪ ನಿಮಗೆ ತಾಳ್ಮೆ ಇರಬೇಕು. ಇಲ್ಲೊಂದು ಅಂತಹದ್ದೇ ಬ್ರೈನ್‌ ಟೀಸರ್‌ ಇದೆ. ಇದು ನಿಮ್ಮ ಮೆದುಳು ಎಷ್ಟು ಚುರುಕಾಗಿದೆ ಎಂಬುದನ್ನು ಪರೀಕ್ಷಿಸುತ್ತದೆ. ಉತ್ತರ ಹೇಳಿದವರು ನಿಜಕ್ಕೂ ಜಾಣರು. ಆದರೆ ಶೇಕಡಾ 99ರಷ್ಟು ಜನ ತಪ್ಪು ಉತ್ತರನೇ ಹೇಳೋದು.

ಒಬ್ಬ ವ್ಯಕ್ತಿ ಹೇಳ್ತಾನೆ, ನನ್ನ ಬಳಿ 6 ಮೊಟ್ಟೆಗಳಿವೆ. 2 ಮೊಟ್ಟೆಯನ್ನು ಒಡೆದೆ, 2 ಮೊಟ್ಟೆಯನ್ನು ಫ್ರೈ ಮಾಡಿದೆ, 2 ಮೊಟ್ಟೆಯನ್ನು ತಿಂದೆ. ಹಾಗಾದ್ರೆ ನನ್ನ ಬಳಿ ಎಷ್ಟು ಮೊಟ್ಟೆ ಉಳಿಯಿತು ಎಂದು ಕೇಳ್ತಾನೆ. ಈ ಪ್ರಶ್ನೆಗೆ ನೀವೇ ಉತ್ತರ ಕೊಡಬೇಕು. ನೋಡೋಣ ನಿಮ್ಮ ಬ್ರೇನ್​​ ಎಷ್ಟು ಶಾರ್ಪ್​ ಇದೆ ಅಂತ. ಉತ್ತರ ಹೇಳೋಕೆ ಗಂಟೆಗಟ್ಟಲೆ ಟೈಂ ತಗೊಂಡ್ರೆ ಆಗಲ್ಲ. 15 ಸೆಕೆಂಡ್​ ಸಮಯ ಕೊಡ್ತೀವಿ. ಅಷ್ಟರಲ್ಲಿ ಉತ್ತರ ಹೇಳಿ.

ನಿಮ್ಮ ಸಮಯ ಈಗ ಶುರು. ರೆಡಿ ಒನ್​, ಟು, ಥ್ರೀ, ಫೋರ್, ಫೈವ್​........& ಫಿಫ್ಟೀನ್. ನಿಮ್ಮ ಸಮಯ ಮುಗಿತು. ಉತ್ತರ ಗೊತ್ತಾಯ್ತಾ? ಬಹುಷಃ ಕೆಲವರ ಉತ್ತರ 0 ಆಗಿರಬಹುದು. ಈ ಉತ್ತರ ಕೊಡುವವರು ಹೇಗೆ ಯೋಚನೆ ಮಾಡಿರ್ತಾರೆ ಅಂದ್ರೆ

ಒಡೆದ 2 ಮೊಟ್ಟೆಯೇ ಬೇರೆ, ಫ್ರೈ ಮಾಡಿದ 2 ಮೊಟ್ಟೆಯೇ ಬೇರೆ ಹಾಗೂ ತಿಂದ 2 ಮೊಟ್ಟೆಯೇ ಬೇರೆ ಅಂತ ಅನ್​ಕೊಂಡಿರ್ತಾರೆ. ಆದರೆ ಈ ಉತ್ತರ ತಪ್ಪು.

ಇನ್ನೂ ಕೆಲವರ ಉತ್ತರ 4 ಆಗಿರುತ್ತದೆ. ಇವರು ಹೇಗೆ ಥಿಂಕ್​ ಮಾಡಿರ್ತಾರೆ ಅಂದ್ರೆ ಒಡೆದ 2 ಮೊಟ್ಟೆಯನ್ನೇ ಫ್ರೈ ಮಾಡಿ ತಿಂದಿದಾನೆ, ಉಳಿದದ್ದು 4 ಮೊಟ್ಟೆ ಅಂತ. ಆದರೆ ಈ ಉತ್ತರವೂ ತಪ್ಪು. ಹಾಗಾದ್ರೆ ನಿಜ ಉತ್ತರ ಏನು? ಉತ್ತರ ಗೊತ್ತಾಗಬೇಕು ಅಂದ್ರೆ ಮೊದಲು ಕೇಳಲಾದ ಪ್ರಶ್ನೆಯನ್ನು ಸರಿಯಾಗಿ ಇನ್ನೊಮ್ಮೆ ಓದಿ.

ಅಲ್ಲಿ ಅವನು ನನ್ನ ಬಳಿ 6 ಮೊಟ್ಟೆಗಳಿವೆ. 2 ಮೊಟ್ಟೆಯನ್ನು ಒಡೆದೆ, 2 ಮೊಟ್ಟೆಯನ್ನು ಫ್ರೈ ಮಾಡಿದೆ, 2 ಮೊಟ್ಟೆಯನ್ನು ತಿಂದೆ. ಹಾಗಾದ್ರೆ ನನ್ನ ಬಳಿ ಎಷ್ಟು ಮೊಟ್ಟೆ ಉಳಿಯಿತು ಎಂದು ಕೇಳ್ತಾನೆ ಅಲ್ವಾ? ಅವನು ಮೊದಲೇ ಹೇಳಿದಾನಲ್ಲ ನನ್ನ ಬಳಿ 6 ಮೊಟ್ಟೆಗಳಿವೆ ಅಂತ. ಅವನೇನಾದ್ರೂ ನನ್ನ ಬಳಿ 6 ಮೊಟ್ಟೆಗಳು ಇತ್ತು ಅಂತ ಹೇಳಿದ್ರೆ ಉತ್ತರ 4 ಆಗುತ್ತಿತ್ತು. ಆದರೆ ಅವನ ಮಾತು ವರ್ತಮಾನದಲ್ಲಿದೆ. 2 ಮೊಟ್ಟೆಯನ್ನು ಒಡೆದು, ಫ್ರೈ ಮಾಡಿ, ತಿಂದ ಬಳಿಕವೂ ಅವನ ಬಳಿ 6 ಮೊಟ್ಟೆಗಳಿವೆ ಎಂದರ್ಥ. ಹೀಗಾಗಿ ಈ ಪ್ರಶ್ನೆಗೆ ಉತ್ತರ 6.

ಈ ಬ್ರೇನ್​ ಟೀಸರ್ ನಿಮಗೆ ಇಷ್ಟ ಆಗಿದ್ರೆ ಇದನ್ನ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ. ನೋಡೋಣ ಅವರೆಷ್ಟು ಶಾರ್ಪ್ ಇದ್ದಾರೆ ಅಂತ ಗೊತ್ತಾಗತ್ತೆ.

ವಿಭಾಗ