Brain Teaser: ಇದರಲ್ಲೇನೋ ಮಿಸ್ಟೇಕ್ ಇದೆ, 5 ಸೆಕೆಂಡ್ನಲ್ಲಿ ಪತ್ತೆ ಮಾಡಿ ನೋಡೋಣ
ನಾವಿಲ್ಲಿ ನೀಡಿರುವ ಚಿತ್ರದಲ್ಲಿ ಎಲ್ಲಾ ಸರಿಯಿದೆ ಎಂದು ಮೇಲ್ನೋಟಕ್ಕೆ ಕಾಣಿಸಿದರೂ ಕೂಡ ಏನೋ ದೋಷವಿದೆ ಎಂಬುದೇ ಸತ್ಯ. ಇದರಲ್ಲಿರುವ ಮಿಸ್ಟೇಕ್ ಏನು ಅಂತ 5 ಸೆಕೆಂಡ್ನಲ್ಲಿ ಹೇಳಿ ನೋಡೋಣ..

ಸೋಷಿಯಲ್ ಮೀಡಿಯಾದಲ್ಲಿ ಕೆಲವೊಮ್ಮೆ ವೈರಲ್ ಆಗುವ ಬ್ರೈನ್ ಟೀಸರ್‌ಗಳು ನಿಜಕ್ಕೂ ತಲೆ ಕೆರೆದುಕೊಳ್ಳುವಂತೆ ಮಾಡುವುದು ಖಂಡಿತ. ಇವು ಮೇಲ್ನೋಟಕ್ಕೆ ಉತ್ತರ ಹುಡುಕುವುದು ಸುಲಭ ಅನ್ನಿಸಿದರೂ ಕೂಡ ಉತ್ತರ ಸಿಗದೇ ತಲೆಗೆ ಹುಳ ಬಿಟ್ಟುಕೊಳ್ಳುತ್ತೇವೆ. ಕೆಲವೊಮ್ಮೆ ಎಷ್ಟೇ ಬ್ರೇನ್ ಉಪಯೋಗಿಸಿದರೂ ಉತ್ತರ ಕಂಡು ಹಿಡಿಯಲು ಆಗೋದೇ ಇಲ್ಲ. ಉತ್ತರ ಬೇಕಂದ್ರೆ ನಿಮಗೆ ಸ್ವಲ್ಪ ನಿಮಗೆ ತಾಳ್ಮೆ ಇರಬೇಕು. ಇಲ್ಲೊಂದು ಅಂತಹದ್ದೇ ಬ್ರೈನ್ ಟೀಸರ್ ಇದೆ. ಇದು ನಿಮ್ಮ ಮೆದುಳು ಎಷ್ಟು ಚುರುಕಾಗಿದೆ ಎಂಬುದನ್ನು ಪರೀಕ್ಷಿಸುತ್ತದೆ. ಉತ್ತರ ಹೇಳಿದವರು ನಿಜಕ್ಕೂ ಜಾಣರು. ಇಲ್ಲಿ ನೀಡಲಾದ ಬ್ರೈನ್ ಟೀಸರ್ ತುಂಬಾ ಸುಲಭದ್ದು. ಆದರೆ ಕೇವಲ 5 ಸೆಕೆಂಡ್ನಲ್ಲಿ ಉತ್ತರ ಹೇಳುವವರ ಸಂಖ್ಯೆ ತುಂಬಾ ಕಡಿಮೆ.
ನಾವಿಲ್ಲಿ ನೀಡಿರುವ ಚಿತ್ರದಲ್ಲಿ 5 ಉದ್ದ ಸಾಲುಗಳಿವೆ. ಎಲ್ಲಾ ಸಾಲುಗಳಲ್ಲಿಯೂ ಇಂಗ್ಲಿಷ್ನ V ಅಕ್ಷರ ಕೂಡಿಕೊಂಡಂತಿದೆ. ಮೊದಲನೇ, ಮೂರನೇ ಮತ್ತು ಐದನೇ ಸಾಲಿನಲ್ಲಿ 4 V ಅಕ್ಷರಗಳು ಕೂಡಿಕೊಂಡಿದ್ದರೆ, ಎರಡು ಮತ್ತು ನಾಲ್ಕನೇ ಸಾಲಿನಲ್ಲಿ 3 V ಅಕ್ಷರಗಳು ಕೂಡಿಕೊಂಡಂತೆ ನಮಗೆ ಕಾಣಿಸುತ್ತಿದೆ. ಆದರೆ ಇದರಲ್ಲಿ ಏನೋ ದೋಷ ಇದೆ. ಅದು ಏನು ಅಂತ ನೀವು ಕಂಡುಹಿಡಿಯಬೇಕು.
ಇದಕ್ಕಾಗಿ ನಿಮಗೆ ನಾವು ನೀಡುವ ಸಮಯ 5 ಸೆಕೆಂಡ್ಗಳು. ನಿಮ್ಮ ಸಮಯ ಈಗ ಶುರು. ರೆಡಿ ಒನ್, ಟು, ಥ್ರೀ, ಫೋರ್...ಫೈವ್. ನಿಮ್ಮ ಟೈಂ ಮುಗಿತು. ಏನದು ಮಿಸ್ಟೇಕ್ ಅಂತ ಗೊತ್ತಾಯ್ತಾ? ಗೊತ್ತಾದ್ರೆ ನಿಮ್ಮ ಕಣ್ಣು ತುಂಬಾ ಶಾರ್ಪ್ ಇದೆ ಅಂತ ಅರ್ಥ. ಉತ್ತರ ಗೊತ್ತಾಗದೇ ಇರುವವರಿಗೆ ನಾವೊಂದು ಸುಳಿವು ಕೊಡ್ತೀವಿ. ಅದೇನಪ್ಪ ಅಂದ್ರೆ ಇದರಲ್ಲಿರುವ ಒಂದು ಮಿಸ್ಟೇಕ್ ಏನಂದ್ರೆ V ಬದಲು ಒಂದು ಕಡೆ A ಲೆಟರ್ ಇದೆ.
ಈಗ ನೀವು ಅದನ್ನ ಹುಡುಕಿದ್ರಿ ಅನಿಸುತ್ತೆ ಅಲ್ವಾ? ಈಗಲೂ ಗೊತ್ತಾಗಿಲ್ಲ ಅಂದ್ರೆ ನಾವೇ ಉತ್ತರ ಹೇಳ್ತೀವಿ ಕೇಳಿ. ಮೂರನೇ ಉದ್ದ ಸಾಲಿನಲ್ಲಿ ಕೊನೆಯದನ್ನು ನೋಡಿ. ಅಲ್ಲಿ ನಾಲ್ಕು V ಗಳ ಬದಲು ಒಂದು A ಇದೆ. ಹಾಗೂ ಅದು V ಜೊತೆ ಕೂಡಿಕೊಂಡಿಲ್ಲ. ಇದೇ ಈ ಚಿತ್ರದಲ್ಲಿರುವ ಮಿಸ್ಟೇಕ್.
ನಿಮಗಿದು ಇಷ್ಟ ಆದ್ರೆ ನಿಮ್ಮ ಸ್ನೇಹಿತರಿಗೂ ಕಳಿಸಿ. ನೋಡೋಣ ಅವರು 5 ಸೆಕೆಂಡ್ನಲ್ಲಿ ಉತ್ತರ ಹುಡುಕುತ್ತಾರಾ ಇಲ್ವಾ ಅಂತ..

ವಿಭಾಗ