Brain Teaser: ‘M‘ ರಾಶಿ ನಡುವೆ ಅಡಗಿ ಕುಳಿತಿರುವ 'N' ಅಕ್ಷರವನ್ನು ಹುಡುಕಿ, ನಿಮಗಿರೋದು ಕೇವಲ 11 ಸೆಕೆಂಡ್ ಸಮಯ
ನಿಮ್ಮ ಕಣ್ಣು, ಮೆದುಳು ತುಂಬಾನೇ ಶಾರ್ಪ್ ಆಗಿದ್ಯಾ? ಇಂತಹ ಸೂಕ್ಷ್ಮವನ್ನಾದ್ರೂ ನಿಮ್ಮ ಕಣ್ಣು ಗುರುತಿಸುತ್ತಾ, ಹಾಗಾದ್ರೆ ಇಲ್ಲಿರುವ M ಅಕ್ಷರಗಳ ನಡುವೆ ಅಡಗಿ ಕುಳಿತಿರುವ N ಹುಡುಕಿ. ನಿಮಗಿರೋದು ಕೇವಲ 11 ಸೆಕೆಂಡ್ ಸಮಯ, ನಿಮ್ಮ ಕಣ್ಣು ಎಷ್ಟು ಚುರುಕಿದೆ ನೋಡೋಣ.
ಜನರು ಆಗಾಗ ಬ್ರೈನ್ ಟೀಸರ್‌ಗೆ ಉತ್ತರ ಹುಡುಕುವ ಪ್ರಯತ್ನ ಮಾಡುತ್ತಾರೆ. ಅದಕ್ಕೆ ಕಾರಣ ಇದರಿಂದ ಮನಸ್ಸು ರಿಲ್ಯಾಕ್ಸ್ ಆಗುತ್ತದೆ. ಒಂಥರಾ ಮಜಾ ಸಿಗುತ್ತದೆ. ಜೊತೆಗೆ ನಮ್ಮ ಯೋಚನಾಶಕ್ತಿಯೂ ಬೆಳೆಯುತ್ತದೆ. ಇದು ನಮ್ಮ ಐಕ್ಯೂ ಮಟ್ಟಕ್ಕೆ ಸವಾಲು ಹಾಕುವಂತಿರುವುದು ಸುಳ್ಳಲ್ಲ. ಐಕ್ಯೂ ಪರೀಕ್ಷೆಗೆ ಬ್ರೈನ್ ಟೀಸರ್‌ಗಿಂತ ಉತ್ತಮ ಇನ್ನೊಂದಿಲ್ಲ.
ಇಂದಿನ ಬ್ರೈನ್ ಟೀಸರ್ ಕಣ್ಣು ಹಾಗೂ ಮೆದುಳು ಎರಡಕ್ಕೂ ಸವಾಲು ಹಾಕುವಂತಿದೆ. ಯಾಕಂದ್ರೆ ಇದಕ್ಕೆ ಉತ್ತರ ಕಂಡುಹಿಡಿಯಲು ಕಣ್ಣಿನಷ್ಟೇ ಬುದ್ಧಿಯನ್ನೂ ಉಪಯೋಗಿಸಬೇಕಾಗುತ್ತದೆ. ಚಿತ್ರದಲ್ಲಿ ಮೇಲಿಂದ ಕೆಳಗೆ ಒಂದು ರಾಶಿ M ಅಕ್ಷರಗಳು ಕಾಣಿಸುತ್ತವೆ, ಅಡ್ಡಕ್ಕೂ ಅವೇ ಕಾಣಿಸುತ್ತವೆ, ಆದರೆ ಇದರ ನಡುವೆ ಒಂದು N ಅಕ್ಷರ ಅಡಗಿದೆ. ಅದು ಎಲ್ಲಿದೆ ಎಂದು 11 ಸೆಕೆಂಡ್ ಒಳಗೆ ಕಂಡುಹಿಡಿಯಬೇಕು. ಮೆದುಳು, ಕಣ್ಣು ಶಾರ್ಪ್ ಇದ್ರೆ 11 ಸೆಕೆಂಡ್ ಒಳಗೆ N ಕಂಡುಹಿಡಿಯುವುದು ಖಂಡಿತ ದೊಡ್ಡ ವಿಷಯವಲ್ಲ.
ಇಂತಹ ಬ್ರೈನ್ ಟೀಸರ್‌ಗಳಿಗೆ ಉತ್ತರ ಹುಡುಕುವುದು ಮೆದುಳಿಗೆ ಸಾಣೆ ಹಿಡಿದಂತೆ, ಇದರಿಂದ ನಮ್ಮಲ್ಲಿ ಯೋಚನಾಶಕ್ತಿ, ಗಮನ ಶಕ್ತಿ ಎಲ್ಲವೂ ವೃದ್ಧಿಯಾಗುತ್ತವೆ. ಹಾಗಾಗಿ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬ್ರೈನ್ ಟೀಸರ್‌ಗಳು ಸಾಕಷ್ಟು ವೈರಲ್ ಆಗುತ್ತಿವೆ.
ಸರಿ ಹಾಗಾದ್ರೆ 11 ಸೆಕೆಂಡ್ ಕಳೆದ್ರೂ ನಿಮಗೆ ಉತ್ತರ ಹುಡುಕೋಕೆ ಸಾಧ್ಯವಾಗಿಲ್ವಾ? ಹಾಗಾದರೆ ನಾವು ನಿಮಗೆ ಸಹಾಯ ಮಾಡುತ್ತವೆ. N ಎಲ್ಲಿದೆ ಗೊತ್ತಾ, ಅಡ್ಡದಿಂದ ಮೂರನೇ ಸಾಲಿನಲ್ಲಿ 5ನೇ ಅಕ್ಷರ ಗಮನಿಸಿ. ಅದೇ N. ಉತ್ತರ ತಿಳಿಯಿತು ಅಲ್ವಾ, ಇನ್ನೇಕ ತಡ ನಿಮ್ಮ ಸ್ನೇಹಿತರು, ಸಹೋದ್ಯೋಗಿ ಹಾಗೂ ಸಂಬಂಧಿಕರಿಗೂ ಈ ಬ್ರೈನ್ ಟೀಸರ್‌ಗೆ ಉತ್ತರ ಹುಡುಕಲು ಹೇಳಿ, ಅವರು ಎಷ್ಟು ಜಾಣರು, ಅವರ ಕಣ್ಣು ಎಷ್ಟು ಶಾರ್ಪ್ ಇದೆ ಪರೀಕ್ಷಿಸಿ.
ಇದನ್ನೂ ಓದಿ
Brain Teaser: 2+3=10, 6+5=66, 7+2=63 ಆದ್ರೆ 4+7= ಎಷ್ಟು? ಲೆಕ್ಕದಲ್ಲಿ ಪಕ್ಕಾ ಇದ್ರೆ ಪಟ್ ಅಂತ ಉತ್ತರ ಹೇಳಿ
ಸಂಡೇ ಹೇಗಪ್ಪಾ ಟೈಮ್ ಪಾಸ್ ಮಾಡೋದು, ಹೊರಗಡೆ ಹೋಗೋಕು ಬೇಜಾರು ಅನ್ನೋರ ಲಿಸ್ಟ್‌ನಲ್ಲಿ ನೀವೂ ಇದ್ರೆ ನಿಮಗಾಗಿ ಇಲ್ಲಿದೆ ಒಂದು ಬೇಸರ ಕಳೆಯುವ ಪಜಲ್. ಇದೊಂದು ಕೂಡಿಸುವ ಲೆಕ್ಕವಾದ್ರೂ 4+7 ಎಷ್ಟು ಎಂದು ಹೇಳೋಕೆ ನೀವು ಖಂಡಿತ ಸಾಕಷ್ಟು ಬುದ್ಧಿ ಉಪಯೋಗಿಸಬೇಕಾಗುತ್ತೆ, ಗಣಿತಪ್ರೇಮಿಗಳು ಟ್ರೈ ಮಾಡಿ ನೋಡೋಣ.
Brain Teaser: ನಿಮ್ಮ ಕಣ್ಣು ಸಖತ್ ಶಾರ್ಪ್ ಇದ್ಯಾ? 4 ಸೆಕೆಂಡ್ ಒಳಗೆ ಚಿತ್ರದಲ್ಲಿ ಯಾವ ಮೀನು ಭಿನ್ನವಾಗಿದೆ ಕಂಡುಹಿಡಿಯಿರಿ
ನಿಮ್ಮ ಕಣ್ಣು ನಿಜಕ್ಕೂ ಹದ್ದಿನ ಕಣ್ಣಿನಷ್ಟೇ ಸೂಕ್ಷ್ಮವಾಗಿದೆ ಎಂದು ನಿಮಗೆ ಅನ್ನಿಸ್ತಾ ಇದ್ಯಾ, ಹಾಗಾದ್ರೆ ನಿಮಗಾಗಿ ಇಲ್ಲೊಂದು ಬ್ರೈನ್ ಟೀಸರ್ ಇದೆ. ಇದರಲ್ಲಿ ಮೀನುಗಳು ಹಾಗೂ ಬಾಲ್‌ಗಳಿವೆ. ಇರುವ ಮೀನುಗಳಲ್ಲಿ ಒಂದೇ ಒಂದು ಭಿನ್ನವಾಗಿದೆ. ಅದು ಯಾವುದು ಎಂದು 4 ಸೆಕೆಂಡ್ ಒಳಗೆ ಕಂಡುಹಿಡಿಯಬೇಕು. ನಿಮ್ಮ ಸಮಯ ಈಗ ಶುರು.