Brain Teaser: ನಿಮ್ಮ ಬುದ್ಧಿಗೊಂದು ಸವಾಲು; ಚಳಿಯಲ್ಲಿ ಸಖತ್ ಟೈಂಪಾಸ್ ಆಗುತ್ತೆ, ಈ ಪ್ರಶ್ನೆಗೆ ಉತ್ತರಿಸಿ ನೋಡೋಣ
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ನಿಮ್ಮ ಬುದ್ಧಿಗೊಂದು ಸವಾಲು; ಚಳಿಯಲ್ಲಿ ಸಖತ್ ಟೈಂಪಾಸ್ ಆಗುತ್ತೆ, ಈ ಪ್ರಶ್ನೆಗೆ ಉತ್ತರಿಸಿ ನೋಡೋಣ

Brain Teaser: ನಿಮ್ಮ ಬುದ್ಧಿಗೊಂದು ಸವಾಲು; ಚಳಿಯಲ್ಲಿ ಸಖತ್ ಟೈಂಪಾಸ್ ಆಗುತ್ತೆ, ಈ ಪ್ರಶ್ನೆಗೆ ಉತ್ತರಿಸಿ ನೋಡೋಣ

ಸಾಮಾಜಿಕ ಜಾಲತಾಣ ಇನ್​​ಸ್ಟಾದಲ್ಲಿ ಪೋಸ್ಟ್ ಮಾಡಿರುವ ಬ್ರೈನ್ ಟೀಸರ್ ವೈರಲ್ ಆಗಿದ್ದು, ಹಲವರ ಮೆದುಳಿಗೆ ಹುಳ ಬಿಟ್ಟಿದೆ. ಇಲ್ಲಿರುವ ಪ್ರಶ್ನೆಗೆ ಸರಿಯಾದ ವಯಸ್ಸಿನ ಉತ್ತರ ಹೇಳಿದರೆ ನೀವೇ ಜಾಣರು. ನಿಮ್ಮ ಮೆದುಳು ಚುರುಕಾಗಿದ್ರೆ ಈ ಪ್ರಶ್ನೆಗೆ ಥಟ್ ಅಂತ ಉತ್ತರ ಹೇಳಿ ನೋಡೋಣ.

ಈ ಬ್ರೈನ್ ಟೀಸರ್ ನಲ್ಲಿರುವ ಪ್ರಶ್ನೆಗೆ ಥಟ್ ಅಂತ ಉತ್ತರ ಹೇಳಿ
ಈ ಬ್ರೈನ್ ಟೀಸರ್ ನಲ್ಲಿರುವ ಪ್ರಶ್ನೆಗೆ ಥಟ್ ಅಂತ ಉತ್ತರ ಹೇಳಿ

ಕಳೆದ ಮೂರ್ನಾಲ್ಕು ದಿನಗಳಿಂದ ಮೋಡ ಕವಿದ ವಾತಾವರಣದ ಜೊತೆಗೆ ಬಿಟ್ಟು ಬಿಟ್ಟು ಸುರಿಯುತ್ತಿರುವ ಮಳೆ. ಈ ವೆದರ್ ನಲ್ಲಿ ಮನೆಯಿಂದ ಹೊರ ಬಾರದ ಪರಿಸ್ಥಿತಿ ಇದೆ. ಇಂತಹ ಸಮಯದಲ್ಲಿ ಸಾಮಾನ್ಯವಾಗಿ ಜನ ಮೊಬೈಲ್ ವೀಕ್ಷಣೆ, ಸಿನಿಮಾ ನೋಡುವುದು, ಪುಸ್ತಕ ಓದುವುದು, ಬಿಸಿ ಬಿಸಿ ಆಹಾರ ತಯಾರಿಸಿ ತಿನ್ನುವುದು, ಆಟ-ಪಾಠಗಳಲ್ಲಿ ಭಾಗವಹಿಸುತ್ತಾರೆ. ಕೆಲವರು ಮೊಬೈಲ್ ಹಿಡಿದು ಕುಳಿದರೆ ಸಾಮಾಜಿಕ ಜಾಲತಾಣಗಳನ್ನು ಜಾಲಾಡಿಸುತ್ತಾರೆ. ಆಗ ಕಣ್ಣಿಗೆ ಬೀಳುವ ಕೆಲವೊಂದು ಬ್ರೈನ್ ಟೀಸರ್ ಗಳು ಇವರನ್ನು ಮುಂದೆಕ್ಕೆ ಹೋಗಲು ಬಿಡುವುದೇ ಇಲ್ಲ. ಮನಸ್ಸು ಕೂಡ ಇದಕ್ಕೆ ಉತ್ತರಿಸಿಯೇ ಮುಂದೆ ಹೋಗು ಎನ್ನುವಂತ ಸೂಚನೆಗಳನ್ನು ಕೊಡುತ್ತದೆ.

ಜಾಲತಾಣಗಳಲ್ಲಿ ಬರುವ ಕೆಲವೊಂದು ಬ್ರೈನ್ ಟೀಸರ್ ಗಳು ಕಣ್ಣಿಗೆ ಪರೀಕ್ಷೆ ನೀಡಿದರೆ ಇನ್ನೂ ಕೆಲವು ನಮ್ಮ ಬುದ್ಧಿಗೆ ಸವಾಲು ಹಾಕುವಂತೆ ಇರುತ್ತವೆ. ಈ ಬ್ರೈನ್ ಟೀಸರ್ ಗಳನ್ನು ಬಗೆಹರಿಸುತ್ತಾ ಹೋದರೆ ಸಮಯ ಕಳೆದಿದ್ದೇ ಗೊತ್ತಾಗಲ್ಲ. ಬುದ್ಧಿಯನ್ನು ಚುರುಕುಗೊಳಿಸುವ ಈ ಅಭ್ಯಾಸಗಳು ಕೆಲವರಿಗೆ ಇಷ್ಟದ ಅಭ್ಯಾಸಗಳಾಗಿರುತ್ತವೆ. ಸಮಸ್ಯೆಯನ್ನು ಪರಿಹರಿಸುವ ಕೌಶಲ್ಯಗಳು ಮತ್ತು ಸೃಜನಶೀಲತೆಯನ್ನು ಬಳಸಲು ನಿಮ್ಮ ಮನಸ್ಸಿಗೆ ಸವಾಲು ಹಾಕುವ ಒಗಟು ನಿಮಗೆ ಆಗಾಗ ಎದುರಾಗುತ್ತವೆ. ಮೆದುಳಿನ ಟೀಸರ್ ಗಳು ಗಣಿತದ ಒಗಟುಗಳು, ಪದ ಆಟಗಳು, ಅಥವಾ ಸಂಖ್ಯೆಗಳ ಮಾದರಿಗಳು ಅಥವಾ ವಯಸ್ಸಿಗೆ ಸಂಬಂಧಿಸಿದ ಸನ್ನಿವೇಶಗಳನ್ನು ಒಳಗೊಂಡಿರುವ ಒಗಟುಗಳಂತಹ ಅನೇಕ ರೂಪಗಳಲ್ಲಿ ಬರುತ್ತವೆ. ಇವತ್ತಿನ ಬ್ರೈನ್ ಟೀಸರ್ ನಲ್ಲಿ ವಯಸ್ಸಿಗೆ ಸಂಬಂಧಿಸಿದ ಪ್ರಶ್ನೆಯೊಂದು ಇದೆ.

ಸಾಮಾಜಿಕ ಜಾಲತಾಣ ಇನ್​​ಸ್ಟಾದಲ್ಲಿ ಪೋಸ್ಟ್ ಮಾಡಿರುವ ಬ್ರೈನ್ ಟೀಸರ್ ಬಿರುಗಾಳಿ ಎಬ್ಬಿಸಿದೆ. ಬ್ರೈನ್ ಟೀಸರ್ ಸಹೋದರ ಮತ್ತು ಅವನ ಒಡಹುಟ್ಟಿದವರ ನಡುವಿನ ವಯಸ್ಸಿನ ವ್ಯತ್ಯಾಸದ ಆಧಾರದ ಮೇಲೆ ಸಹೋದರನ ವಯಸ್ಸನ್ನು ಕಂಡುಹಿಡಿಯಲು ನಿಮಗೆ ಸವಾಲು ಹಾಕಲಾಗಿದೆ. ಸಹೋದರನ ಪ್ರಸ್ತುತ ವಯಸ್ಸನ್ನು ಕಂಡುಹಿಡಿಯಲು ಬ್ರೈನ್ ಟೀಸರ್ ನಿಮಗೆ ಸವಾಲು ಹಾಕಿದೆ, ಪ್ರಶ್ನೆ ಹೀಗಿದೆ. ನಾನು 4 ವರ್ಷವನಿದ್ದಾಗ ನನ್ನ ತಮ್ಮನ ವಯಸ್ಸು ನನ್ನ ವಯಸ್ಸಿನ ಅರ್ಧದಷ್ಟು ಇತ್ತು. ಈಗ ನನಗೆ 18 ವರ್ಷ. ಹಾಗಿದ್ದರೆ ನಮ್ಮ ತಮ್ಮನ ವಯಸ್ಸು ಎಷ್ಟು ಎಂದು ಕೇಳಲಾಗಿದೆ.

ಬ್ರೈನ್ ಟೀಸರ್ ಇಲ್ಲಿದೆ ನೋಡಿ

ಬ್ರೈನ್ ಟೀಸರ್ ಗೆ ನೆಟ್ಟಿಗರು ಹೇಗೆ ಪ್ರತಿಕ್ರಿಯಿಸಿದರು ಎಂಬುದು ಇಲ್ಲಿದೆ

ಇನ್​​ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಲಾಗಿರುವ ಈ ಪ್ರಶ್ನೆಗೆ ನೆಟ್ಟಿಗರು ತಮ್ಮ ಉತ್ತರಗಳನ್ನು ಕಾಮೆಂಟ್ ಮಾಡುವ ಮೂಲಕ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ, ಇದು ಉತ್ಸಾಹಭರಿತ ಚರ್ಚೆಯನ್ನೂ ಹುಟ್ಟುಹಾಕಿದೆ. ಈ ಒಗಟನ್ನು ಬಿಡಿಸಲು ಪ್ರಯತ್ನಿಸುತ್ತಿರುವ ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ, “16 ವರ್ಷಗಳು. ಏಕೆಂದರೆ 2 ವರ್ಷಗಳ ವಯಸ್ಸಿನ ವ್ಯತ್ಯಾಸದ ಅಂತರ” ಎಂದಿದ್ದಾರೆ.

ಎರಡನೇಯವರು “ನಿಮ್ಮ ಸಹೋದರ ಯಾವಾಗಲೂ ನಿಮಗಿಂತ 2 ವರ್ಷ ಚಿಕ್ಕವನಾಗಿರುತ್ತಾನೆ” ಎಂದು ಪ್ರತಿಕ್ರಿಯಿಸಿದ್ದಾರೆ. ಸರಳ ವಯಸ್ಸಿನ ಸಂಬಂಧಗಳನ್ನು ಅರ್ಥಮಾಡಿಕೊಳ್ಳುವುದು ಹೇಗೆ ತಾರ್ಕಿಕ ಪರಿಹಾರಕ್ಕೆ ಕಾರಣವಾಗಬಹುದು ಎಂಬುದನ್ನು ಈ ಟ್ರಿಕ್ ಮೆದುಳಿನ ಟೀಸರ್ ಎತ್ತಿ ತೋರಿಸುತ್ತದೆ.

Whats_app_banner