Brain Teaser: ಚಿತ್ರದಲ್ಲಿರುವ Eಗಳ ನಡುವೆ ಎಷ್ಟು F ಹುಡುಕಲು ನಿಮಗೆ ಸಾಧ್ಯ? ಇಲ್ಲಿದೆ ನಿಮ್ಮ ಕಣ್ಣಿಗೊಂದು ಸವಾಲು
Social Media Puzzle: ಇಲ್ಲಿರುವ ಬ್ರೈನ್ ಟೀಸರ್ ತುಂಬಾನೇ ಮಜವಾಗಿದೆ. ಸಾಲು ಸಾಲು ಇಂಗ್ಲೀಷ್ Eಅಕ್ಷರಗಳ ನಡುವೆ Fಗಳು ಸೇರಿಕೊಂಡಿವೆ. ಇದರಲ್ಲಿ ನೀವು ಮಾಡಬೇಕಾಗಿರುವುದು ಇಷ್ಟೇ, ಆ ಸಾಲುಗಳಲ್ಲಿ Fಗಳನ್ನು ಹುಡುಕಬೇಕು. ಇದಕ್ಕೆ ಉತ್ತರ ಕಂಡು ಹಿಡಿಯಲು ಸಿಕ್ಕಾಪಟ್ಟೆ ಸಮಯವಿಲ್ಲ, ನಿಮಗಿರುವುದು ಕೇವಲ 5 ಸೆಕೆಂಡ್.
ಇಂಟರ್‌ನೆಟ್‌ನಲ್ಲಿ ಬ್ರೇನ್ ಟೀಸರ್‌ಗಳಿಗೆ ಏನೂ ಕೊರತೆ ಇಲ್ಲ. ಪ್ರತಿದಿನ ಹೊಸ ಹೊಸ ಪಜಲ್‌ಗಳು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಆಗ್ತಾನೇ ಇರತ್ತೆ. ಕೆಲವು ನಿಮ್ಮ ಮೆದುಳಿಗೆ ಸಾಕಷ್ಟು ಕೆಲಸ ಕೊಟ್ಟರೆ, ಇನ್ನು ಕೆಲವು ಅಯ್ಯೋ! ಇದು ಇಷ್ಟೇ ಕಣ್ರೀ ಅಂತ ಸುಲಭದಲ್ಲಿ ಕಂಡುಹಿಡಿದುಬಿಡಬಹುದು. ಆದರೆ ಕೆಲವು ಸವಾಲುಗಳು ಹಾಗಲ್ಲ, ಮೇಲ್ನೋಟಕ್ಕೆ ಬಹಳ ಸುಲಭ ಎನಿಸಿದ್ರೂ ಉತ್ತರ ಹುಡುಕುತ್ತಾ ಹೋದಂತೆ ಇನ್ನಷ್ಟು ಗೊಂದಲ ಸೃಷ್ಟಿಸಿ ಬಿಡುತ್ತವೆ. ಅದೇ ರೀತಿಯ ಇಲ್ಲೊಂದು ಬ್ರೇನ್ ಟೀಸರ್ ಇದೆ. ಇದು ಇಂಟರ್‌ನೆಟ್‌ನಲ್ಲಿ ಪಜಲ್ ಪ್ರಿಯರ ಗಮನ ಸೆಳೆದಿದೆ. ಇದೊಂದು ರೀತಿಯಲ್ಲಿ ನಿಮ್ಮ ಕಣ್ಣು ಮತ್ತು ಮೆದುಳು ಒಟ್ಟಿಗೆ ಕೆಲಸ ಮಾಡುವಂತಹ ಸವಾಲಾಗಿದೆ. ನಿಮ್ಮ ಕಣ್ಣು ಎಷ್ಟು ಬೇಗ ಗುರುತಿಸುತ್ತದೆಯೋ ಅಷ್ಟೇ ವೇಗವಾಗಿ ಮೆದುಳು ಲೆಕ್ಕ ಮಾಡಬೇಕಿದೆ. ನಿಮ್ಮದು ಸಿಕ್ಕಾಪಟ್ಟೆ ಶಾರ್ಪ್ ಕಣ್ಣು ಆಗಿದ್ದರೆ ಈ ಬ್ರೇನ್ ಟೀಸರ್‌ಗೆ ಉತ್ತರ ಕಂಡುಹಿಡುಯುವುದು ಬಹಳ ಸುಲಭ. ಇದು ಒಂದು ರೀತಿಯ ಭ್ರಮೆಯನ್ನೂ ಹುಟ್ಟಿಸುತ್ತದೆ. ಆದ್ರೂ ಈ ಬ್ರೇನ್ ಟೀಸರ್ ತುಂಬಾನೇ ಮಜವಾಗಿದೆ. ಸಾಲು ಸಾಲು ಇಂಗ್ಲೀಷ್ ಅಕ್ಷರ Eಗಳ ನಡುವೆ Fಗಳು ಸೇರಿಕೊಂಡಿವೆ. ಇದರಲ್ಲಿ ನೀವು ಮಾಡಬೇಕಾಗಿರುವುದು ಇಷ್ಟೇ, ಆ ಸಾಲುಗಳಲ್ಲಿ Fಗಳನ್ನು ಹುಡುಕಬೇಕು. ಇದಕ್ಕೆ ಉತ್ತರ ಕಂಡು ಹಿಡಿಯಲು ಸಿಕ್ಕಾಪಟ್ಟೆ ಸಮಯವಿಲ್ಲ, ನಿಮಗಿರುವುದು ಕೇವಲ 5 ಸೆಕೆಂಡ್.
@Art0fThinking ಹೆಸರಿನ X ಬಳಕೆದಾರರು ಈ ಬ್ರೇನ್ ಟೀಸರ್ ಅನ್ನು ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ಇಂಗ್ಲೀಷ್ E ಅಕ್ಷರದ ಸಾಲುಗಳಿವೆ. ಅವುಗಳ ಮಧ್ಯೆ F ಅಕ್ಷರ ಸೇರಿಕೊಂಡಿದೆ. ಈಗ ನೀವು ಆ ಎಲ್ಲಾ F ಅಕ್ಷರಗಳನ್ನು ಗುರುತಿಸಬೇಕು. ಆದರೆ ನಿಮಗಿರುವ ಸಮಯ ಮಾತ್ರ ಕೇವಲ 5 ಸೆಕೆಂಡ್. ಈ ಸವಾಲಿಗೆ ನೀವು ಸಿದ್ಧರಿದ್ದೀರಾ? ನಮಗೆ ಗೊತ್ತಿದೆ, ನೀವು ರೆಡಿಯಾಗಿಯೇ ಇದ್ದೀರಿ ಎಂದು. ಹಾಗಾದ್ರೆ F ಅಕ್ಷರ ಹುಡುಕಲು ಶುರುಮಾಡೋಣವಾ? ನಿಮ್ಮ ಸಮಯ ಈಗ ಪ್ರಾರಂಭ. ಟಿಕ್ ಟಿಕ್ 1, ಟಿಕ್ ಟಿಕ್ 2 , ಟಿಕ್ ಟಿಕ್ 3.... ಬೇಗ ಬೇಗ ಹುಡುಕಿ. ಆಯಿತು, ಆಯಿತು, ನಿಮ್ಮ ಸಮಯ ಮುಗಿಯಿತು. ಎಷ್ಟು Fಗಳನ್ನು ಹುಡುಕಿದ್ದೀರಿ. ನಮಗೆ ಗೊತ್ತಿದೆ, ನೀವೆಲ್ಲರೂ ಜೀನಿಯಸ್ ಇದ್ದೀರಿ, 5 ಸೆಕಂಡ್ ಒಳಗೆ ಉತ್ತರ ಹುಡುಕಿರುತ್ತೀರಿ. ಈ ಬ್ರೇನ್ ಟೀಸರ್ ತುಂಬಾ ಮಜವಾಗಿದೆ ಅಲ್ಲವಾ? ಇದು ನಿಮ್ಮ ಸ್ಕಿಲ್ ಎಷ್ಟಿದೆ ಅನ್ನೋದನ್ನೂ ತೋರಿಸುತ್ತದೆ.
ಈ ಬ್ರೇನ್ ಟೀಸರ್ ಅನ್ನು ಜನವರಿ 16ರಂದು Xನಲ್ಲಿ ಹಂಚಿಕೊಳ್ಳಲಾಗಿದೆ. ಇಲ್ಲಿಯವರೆಗೆ ಇದು 1.1 ಲಕ್ಷಕ್ಕೂ ಅಧಿಕ ವೀಕ್ಷಣೆ ಗಳಿಸಿದೆ. ಜೊತೆಗೆ ತಮಗೆ ಸಿಕ್ಕ ಉತ್ತರಗಳನ್ನು ಬರೆದು ಕಮೆಂಟ್ ಬಾಕ್ಸ್ ತುಂಬಿಸಿದ್ದಾರೆ. ಅದರೊಂದಿಗೆ ತಮ್ಮ ಆಲೋಚನೆಗಳನ್ನು ಸಹ ಸೇರಿಸಿದ್ದಾರೆ. ಒಬ್ಬರಂತೂ ಇದು ನನ್ನ ಹೈಸ್ಕೂಲ್ ರಿಪೋರ್ಟ್ ಕಾರ್ಡ್‌ನಷ್ಟು ಇಲ್ಲ ಎಂದು ಈ ಬ್ರೇನ್ ಟೀಸರ್‌ಗೆ ಬಹಳ ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಇದಕ್ಕೆ 11 ಎಂದ ಉತ್ತರಿಸಿದರೆ, ಮತ್ತೊಬ್ಬರು ಸರಿಯಾದ ಉತ್ತರ 10 ಎಂದು ಬರೆದುಕೊಂಡು ಪ್ರಶ್ನೆಯಲ್ಲಿರುವ F ಅನ್ನು ಎಂದಿಗೂ ಲೆಕ್ಕಕ್ಕೆ ಸೇರಿಸುವುದಿಲ್ಲ ಎಂದು ಕಮೆಂಟ್ ಮಾಡಿದ್ದಾರೆ. ಆದರೆ ಬಹಳಷ್ಟು ಜನರು ಇದಕ್ಕೆ 10 ಎಂದು ಕಮೆಂಟ್ ಮಾಡಿದ್ದಾರೆ.
ನೀವು ಎಲ್ಲಾ Fಗಳನ್ನು ಹುಡುಕಿರಬಹುದು. ಈಗ ನಿಮ್ಮ ಉತ್ತರ ಬರೆಯುವ ಸಮಯ. ಕಮೆಂಟ್ ಮಾಡಿ ನಿಮ್ಮ ಸ್ಕಿಲ್ ಎಷ್ಟಿದೆ ಎಂದು ತೋರಿಸಿ.
ವಿಭಾಗ