Brain Teaser: ಗಡಿಯಾರದಲ್ಲಿ ಒಟ್ಟು ಎಷ್ಟು ಅಂಕಿಗಳಿವೆ..? ಖಂಡಿತ 12 ಅಲ್ಲ, ಸರಳ ಎನಿಸಿದರೂ ಈ ಪ್ರಶ್ನೆಯಲ್ಲಿದೆ ಲಾಜಿಕ್..!
Brain Teaser: ಎಲ್ಲರ ಮನೆಯಲ್ಲಿಯೂ ಗಡಿಯಾರ ಇರುವುದು ಸರ್ವೇ ಸಾಮಾನ್ಯ. ಆದರೆ ಎಂದಾದರೂ ಇಂತಹದ್ದೊಂದು ಪ್ರಶ್ನೆ ನಿಮ್ಮ ಮನದಲ್ಲಿ ಮೂಡಿದೆಯೇ..? ಗಡಿಯಾರದಲ್ಲಿ ಒಟ್ಟು ಎಷ್ಟು ಅಂಕಿಗಳಿವೆ ಎಂಬುದಕ್ಕೆ ಉತ್ತರ ನಿಮಗೆ ಗೊತ್ತೇ..? ಈ ಪ್ರಶ್ನೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡು ನಂತರ ಉತ್ತರ ಕೊಡಿ, ಆತುರ ಬೇಡ.
Maths Puzzle: ಗಡಿಯಾರದಲ್ಲಿ ಎಷ್ಟು ಅಂಕಿಗಳಿವೆ ಎಂಬ ಈ ಪ್ರಶ್ನೆಯು ನಿಮಗೆ ಅತ್ಯಂತ ಸಿಲ್ಲಿ ಎನಿಸಬಹುದು. ಇಷ್ಟು ಸರಳವಾದ ಪ್ರಶ್ನೆಗೆ ಚಿಕ್ಕ ಮಕ್ಕಳು ಕೂಡ ಉತ್ತರ ನೀಡುತ್ತಾರೆ ಎಂಬ ಅಭಿಪ್ರಾಯ ಕೂಡ ಈಗಾಗಲೇ ತಲೆಯಲ್ಲಿ ಬಂದಿರಬಹುದು. ಆದರೆ ಕೆಲವೊಂದು ಪ್ರಶ್ನೆಗಳು ಹೇಗೆ ಇರುತ್ತವೆ ಎಂದರೆ ಅದು ಎಷ್ಟೇ ಸರಳ ಎನಿಸಿದರೂ ಕೂಡ ಉತ್ತರ ನೀಡುವಾಗ ಆ ಪ್ರಶ್ನೆಯ ಹಿಂದಿನ ಲಾಜಿಕ್ ಏನು ಎನ್ನುವುದು ಅರ್ಥವಾಗುತ್ತಾ ಹೋಗುತ್ತದೆ.
ಅದೇ ರೀತಿ ಈ ಪ್ರಶ್ನೆ ಕೂಡ..! ಇದು ಹೀಗೆ ಕೇಳುವಾಗ ನಿಮಗೆ ಅತ್ಯಂತ ಸರಳ ಎನಿಸಬಹುದು. ಆದರೆ ಇದಕ್ಕೆ ಉತ್ತರ ಖಂಡಿತವಾಗಿಯೂ ಸರಳವಾಗಿಲ್ಲ. ಉತ್ತರ ಸಿಕ್ಕ ಮೇಲೆ ಖಂಡಿತ ನೀವು ಈ ಪ್ರಶ್ನೆಗೆ ಉತ್ತರ ನೀಡುವ ಮುನ್ನ ನಾನು ಭಿನ್ನವಾಗಿ ಯೋಚಿಸಬೇಕಿತ್ತು ಎಂದು ಯೋಚಿಸದೇ ಇರಲಾರಿರಿ. ಸರಿ.. ಗಡಿಯಾರದಲ್ಲಿ ಎಷ್ಟು ಅಂಕಿಗಳಿವೆ ಎಂಬುದನ್ನು ಹೇಳಿ ನೋಡೋಣ..?
ಗಡಿಯಾರದಲ್ಲಿರುವ ಅಂಕಿಗಳ ಸಂಖ್ಯೆ ಖಂಡಿತ 12 ಅಲ್ಲ
ಈ ಪ್ರಶ್ನೆಗೆ ನೀವು 12 ಎಂಬ ಉತ್ತರ ನೀಡಬೇಕು ಎಂದುಕೊಂಡಿದ್ದರೆ ನಿಮ್ಮ ಉತ್ತರ ತಪ್ಪು. ಗಡಿಯಾರದಲ್ಲಿ ಒಟ್ಟು 15 ಅಂಕಿಗಳಿವೆ.ಅವುಗಳು 1, 2, 1, 2, 3, 4, 5, 6, 7, 8, 9, 1, 0, 1 ಹಾಗೂ 1. ಈ ಪ್ರಶ್ನೆಗೆ ಉತ್ತರ ನೀಡುವ ಮುನ್ನ ನೀವು ಸ್ವಲ್ಪ ಗಣಿತವನ್ನು ನೆನಪು ಮಾಡಿಕೊಳ್ಳಬೇಕು. ಇಲ್ಲಿ ನಾವು ಗಡಿಯಾರದಲ್ಲಿ ಎಷ್ಟು ಸಂಖ್ಯೆಗಳಿವೆ ಎಂದು ಕೇಳಿಲ್ಲ. ಬದಲಾಗಿ ಎಷ್ಟು ಅಂಕಿಗಳಿವೆ ಎಂದು ಕೇಳಿದ್ದೇವೆ. ಜಗತ್ತಿನಲ್ಲಿ ಅಂಕಿಗಳು ಎಂದರೆ , 2, 3, 4, 5, 6, 7, 8, 9 ಹಾಗೂ 0 ಮಾತ್ರ. ಎರಡು ಅಂಕಿಗಳು ಸೇರಿದಾಗ ಅದೊಂದು ಸಂಖ್ಯೆಯಾಗಿ ಬದಲಾಗುತ್ತದೆ. ಅದೇ ರೀತಿ ಗಡಿಯಾರದಲ್ಲಿ 10,11 ಹಾಗೂ 12 ಎನ್ನುವುದು ಸಂಖ್ಯೆಗಳು. ಇಲ್ಲಿ ನಾವು ಅಂಕಿಗಳು ಎಷ್ಟು ಎಂದು ಕೇಳಿರುವುದರಿಂದ ನೀವು 10,11 ಹಾಗೂ 12ನ್ನು 1,1,1,2,1,0 ಎಂದೇ ಪರಿಗಣಿಸಬೇಕು.
ಈ ಪ್ರಶ್ನೆಗೆ ಉತ್ತರ ನೀಡುವ ಮುನ್ನ ನೀವು ಗಣಿತದಲ್ಲಿ ಬರುವ ಶಬ್ದಗಳ ಬಗ್ಗೆ ಮಾಹಿತಿ ಹೊಂದಿರಬೇಕು. ಅಂಕಿ ಹಾಗೂ ಸಂಖ್ಯೆ ಎರಡೂ ಒಂದೇ ಎಂದು ಯಾರ್ಯಾರು ಎಂದುಕೊಂಡಿದ್ದಾರೋ ಅವರೆಲ್ಲರೂ ಖಂಡಿತವಾಗಿ ಈ ಪ್ರಶ್ನೆಗೆ ತಪ್ಪು ಉತ್ತರವನ್ನು ನೀಡುತ್ತಾರೆ. ಹೀಗಾಗಿ ಯಾರಾದರೂ ಗಡಿಯಾರದಲ್ಲಿ ಎಷ್ಟು ಅಂಕಿಗಳಿವೆ ಎಂದು ಕೇಳಿದಾಗ ನೀವು ಮೊದಲು ಅಂಕೆ ಹಾಗೂ ಸಂಖ್ಯೆಯ ನಡುವಿನ ವ್ಯತ್ಯಾಸ ಅರಿತುಕೊಳ್ಳುವುದು ಒಳ್ಳೆಯದು.
ಕಾಲ ಮುಂದುವರೆದಂತೆಲ್ಲಾ ಗಡಿಯಾರದ ರೂಪ, ಗಡಿಯಾರದಲ್ಲಿರುವ ಅಂಕಿಗಳು ಸಹ ಕಡಿಮೆಯಾಗಿವೆ. ಎಷ್ಟೋ ಗಡಿಯಾರಗಳಲ್ಲಿ 1,3,6,9,12 ಮಾತ್ರ ಇರುತ್ತದೆ. ಮತ್ತೆ ಕೆಲವು ಗಡಿಯಾರಗಳಲ್ಲಿ ಯಾವುದೇ ಅಂಕಿ ಸಂಖ್ಯೆಗಳು ನಮೂದಾಗಿಯೇ ಇರುವುದಿಲ್ಲ. ಇಂತಹ ಗಡಿಯಾರಗಳನ್ನೆಲ್ಲ ಗಮನದಲ್ಲಿಟ್ಟು ಈ ಪ್ರಶ್ನೆಗೆ ಉತ್ತರ ನೀಡಲು ಸಾಧ್ಯವಿಲ್ಲ. ಹಳೆಯ ಕಾಲದ ಒಂದರಿಂದ ಹನ್ನೆರಡವರೆಗೂ ಸಂಖ್ಯೆಗಳನ್ನು ಹೊಂದಿರುವ ಗಡಿಯಾರವನ್ನು ತಲೆಯಲ್ಲಿಟ್ಟುಕೊಂಡು ಮಾತ್ರ ನೀವು ಉತ್ತರ ನೀಡಬಹುದಾಗಿದೆ.
ವಿಭಾಗ