Brain Teaser: ಸ್ಮಿತ್ ಅವರಿಗೆ ಒಟ್ಟು ಎಷ್ಟು ಮಕ್ಕಳು? ಪ್ರಶ್ನೆ ಓದಿ 10 ಸೆಕೆಂಡ್‌ ಒಳಗೆ ಉತ್ತರಿಸಿದರೆ ನೀವೇ ಜಾಣರು
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ಸ್ಮಿತ್ ಅವರಿಗೆ ಒಟ್ಟು ಎಷ್ಟು ಮಕ್ಕಳು? ಪ್ರಶ್ನೆ ಓದಿ 10 ಸೆಕೆಂಡ್‌ ಒಳಗೆ ಉತ್ತರಿಸಿದರೆ ನೀವೇ ಜಾಣರು

Brain Teaser: ಸ್ಮಿತ್ ಅವರಿಗೆ ಒಟ್ಟು ಎಷ್ಟು ಮಕ್ಕಳು? ಪ್ರಶ್ನೆ ಓದಿ 10 ಸೆಕೆಂಡ್‌ ಒಳಗೆ ಉತ್ತರಿಸಿದರೆ ನೀವೇ ಜಾಣರು

ಈ ಬ್ರೈನ್ ಟೀಸರ್ ನಿಮ್ಮ ಬುದ್ಧಿಗೆ ಗುದ್ದು ಕೊಡುವುದರಲ್ಲಿ ಅನುಮಾನವೇ ಇಲ್ಲ. ಥ್ರೆಡ್ಸ್‌ನಲ್ಲಿ ವೈರಲ್‌ ಆಗಿರುವ ಈ ಸುಲಭ ಬ್ರೈನ್‌ ಟೀಸರ್‌ಗೆ ಹಲವು ಉತ್ತರ ಕೊಡುವ ಪ್ರಯತ್ನ ಮಾಡಿದ್ದಾರೆ. ಈಗ ನಿಮ್ಮ ಸರದಿ. ಪ್ರಶ್ನೆ ಓದಿ ಉತ್ತರ ಕೊಡುವ ಪ್ರಯತ್ನ ಮಾಡಿ.

ಪ್ರಶ್ನೆ ಓದಿ 10 ಸೆಕೆಂಡ್‌ ಒಳಗೆ ಉತ್ತರಿಸಿದರೆ ನೀವೇ ಜಾಣರು
ಪ್ರಶ್ನೆ ಓದಿ 10 ಸೆಕೆಂಡ್‌ ಒಳಗೆ ಉತ್ತರಿಸಿದರೆ ನೀವೇ ಜಾಣರು

ಬ್ರೈನ್ ಟೀಸರ್ ಅಥವಾ ಮೆದುಳಿಗೆ ಕೆಲಸ ಕೊಡುವ ಪ್ರಶ್ನೆಗಳು, ನಮ್ಮ ಮನಸ್ಸನ್ನು ತೀಕ್ಷ್ಣವಾಗಿ ಮತ್ತು ಸಕ್ರಿಯವಾಗಿಡಲು ಸಹಾಯ ಮಾಡುತ್ತವೆ. ಇದೇ ವೇಳೆ ಹಲವರು ಇಂಥಾ ಪ್ರಶ್ನೆಗಳಿಗೆ ತಲೆಗೆ ಹುಳ ಬಿಟ್ಟುಕೊಂಡು ಉತ್ತರ ಹುಡುಕುತ್ತಾರೆ. ಸೃಜನಶೀಲವಾಗಿ ಮತ್ತು ವಿಶ್ಲೇಷಣಾತ್ಮಕವಾಗಿ ಯೋಚಿಸಲು ಗಣಿತದ ಮೋಜು ಅಥವಾ ಮೆದುಳಿಗೆ ಮೇವು ಕೊಡುವ ಪ್ರಶ್ನೆಗಳು ಸಹಕಾರಿ. ಇಂಥಾ ಹಲವು ಪ್ರಶ್ನೆಗಳು ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ ಸದ್ದು ಮಾಡುತ್ತವೆ. ಇತ್ತೀಚೆಗೆ, ಬ್ರ್ಯಾಂಡನ್ ಥಾಂಪ್ಸನ್ ಎಂಬ ಬಳಕೆದಾರರೊಬ್ಬರು ಥ್ರೆಡ್ಸ್‌ನಲ್ಲಿ ಇಂತಹದೇ ಪ್ರಶ್ನೆಯೊಂದನ್ನು ಹಂಚಿಕೊಂಡಿದ್ದಾರೆ. ಈ ಪ್ರಶ್ನೆ ಇಂಟರ್ನೆಟ್‌ನಲ್ಲಿ ಜನರ ಗಮನ ಸೆಳೆದಿದೆ.

ಸೋಷಿಯಲ್‌ ಮೀಡಿಯಾ ಬಳಕೆದಾರರು ಹಲವರು ಈ ಪ್ರಶ್ನೆಗೆ ಸರಿಯಾದ ಉತ್ತರ ಹುಡುಕುವ ಪ್ರಯತ್ನ ಮಾಡಿದ್ದಾರೆ. ಇದೇ ವೇಳೆ ಹಲವರು ಗೊಂದಲಕ್ಕೊಳಗಾಗಿ ಏನೇನೋ ಉತ್ತರ ಕೊಡುವ ಪ್ರಯತ್ನ ಮಾಡಿದ್ದಾರೆ. ಹಲವರನ್ನು ಪ್ರಶ್ನೆ ಕುತೂಹಲಕ್ಕೆ ದೂಡಿದ್ದಂತೂ ಸುಳ್ಳಲ್ಲ. ಹಾಗಿದ್ದರೆ ಸ್ಮಿತ್ ಕುಟುಂಬದ ಸದಸ್ಯರ ರಹಸ್ಯ ನೀವು ಬಗೆಹರಿಸುವಿರಾ?

ಈ ಬ್ರೇನ್‌ ಟೀಸರ್ ಹೀಗಿದೆ: "ಸ್ಮಿತ್ ಹೆಸರಿನ ವ್ಯಕ್ತಿಗೆ ನಾಲ್ವರು ಹೆಣ್ಣುಮಕ್ಕಳಿದ್ದರು. ಅವರಲ್ಲಿ ಪ್ರತಿ ಹೆಣ್ಣುಮಕ್ಕಳಿಗೂ ಸಹೋದರ ಇದ್ದಾರೆ. ಹಾಗಿದ್ದರೆ ಸ್ಮಿತ್ ಅವರಿಗೆ ಎಷ್ಟು ಮಕ್ಕಳಿದ್ದಾರೆ?

ಪ್ರಶ್ನೆ ಅರ್ಥವಾಯ್ತಾ? ಅರ್ಥವಾಗದಿದ್ದರೆ ಮತ್ತೊಮ್ಮೆ ಓದಿ. ಈ ಸರಳ ಪ್ರಶ್ನೆಗೆ ಉತ್ತರಿಸಲು ಅತಿಯಾಗಿ ಯೋಚಿಸುವ ಅಗತ್ಯವಿಲ್ಲ. ಪ್ರಶ್ನೆಯು ನೇರವಾಗಿದ್ದರೂ, ಉತ್ತರ ತುಸು ಕ್ಲಿಷ್ಟಕರವಾಗಿದೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

ನೆಟ್ಟಿಗರಿಂದ ಬಗೆಬಗೆಯ ಉತ್ತರ

ಸ್ಮಿತ್ ಅವರ ಪ್ರತಿ ಹೆಣ್ಣುಮಕ್ಕಳಿಗೆ ಒಬ್ಬನೇ ಸಹೋದರ ಇದ್ದಾನೆ. ಹೀಗಾಗಿ ಉತ್ತರ 5 ಇರಬಹುದು ಎಂಬುದು ಹೆಚ್ಚಿನ ಬಳಕೆದಾರರ ಅಭಿಪ್ರಾಯ. ನೀವು ಕೂಡಾ ಇದನ್ನೇ ಯೋಚಿಸಿರಬಹುದು. ಅನೇಕ ಬಳಕೆದಾರರು ಉತ್ತರ ಐದು ಎಂದಿದ್ದಾರೆ. ಸ್ಮಿತ್‌ಗೆ ನಾಲ್ವರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ ಎಂದು ವಿಶ್ವಾಸದಿಂದ ಹಲವು ಬಳಕೆದಾರರು ಹೇಳಿಕೊಂಡಿದ್ದಾರೆ. ಒಬ್ಬ ಮಗ ಅಂದಮೇಲೆ ಎಲ್ಲಾ ಹೆಣ್ಣುಮಕ್ಕಳಿಗೂ ಆತ ಸಹೋದರ. ಆತ ಅಣ್ಣನಿರಬಹುದು ಅಥವಾ ತಮ್ಮನೂ ಆಗಬಹುದು ಎಂಬುದು ಬಳಕೆದಾರರ ಲೆಕ್ಕಾಚಾರ.

ಥ್ರೆಡ್ಸ್ ಬಳಕೆದಾರರಿಂದ ಬಗೆಬಗೆಯ ಉತ್ತಗಳನ್ನು ಪ್ರತಿಕ್ರಿಯೆ ರೂಪದಲ್ಲಿ ನೀಡಿದ್ದಾರೆ. ಕೆಲವರ ಉತ್ತರ ಹಾಸ್ಯಮಯವಾಗಿದೆ. ಒಬ್ಬ ಬಳಕೆದಾರನ ಕಾಮೆಂಟ್‌ ಹೀಗಿದೆ. “ಐದು, ಇದು ಸ್ಪಷ್ಟ ಉತ್ತರ. ಕೇವಲ ಒಬ್ಬ ಸಹೋದರ!” ಎಂದಿದ್ದಾರೆ. ಇನ್ನೊಬ್ಬರು “ಉತ್ತರ ಗೊಂದಲ ಉಂಟು ಮಾಡುತ್ತಿಲ್ಲ. ಐದು ಅಲ್ಲ ಎಂದು ನಾನು ಭಾವಿಸುತ್ತೇನೆ,” ಎಂದಿದ್ದಾರೆ.

ಮೂರನೇ ಬಳಕೆದಾರ, “ನಿಜವಾಗಿಯೂ ಎಷ್ಟು ಸಹೋದರರು ಇದ್ದಾರೆ? ಸ್ಮಿತ್ ಅವರೇ, ದಯವಿಟ್ಟು ಸ್ಪಷ್ಟಪಡಿಸಿ!” ಎಂದು ಹಾಸ್ಯಮಯವಾಗಿ ಹೇಳಿದ್ದಾರೆ.

ಇನ್ನೊಬ್ಬ ಬಳಕೆದಾರರ ಉತ್ತರ ಮಜವಾಗಿದೆ. ಅವರ ಉತ್ತರ 0. ಯಾಕೆಂದರೆ ಪ್ರಶ್ನೆಯು ಭೂತಕಾಲದಲ್ಲಿದೆ. ಸ್ಮಿತ್ ಅವರಿಗೆ ನಾಲ್ವರು ಹೆಣ್ಣುಮಕ್ಕಳಿದ್ದರು ಎಂಬುದು ಪ್ರಶ್ನೆ. ಹೀಗಾಗಿ ಸಹೋದರರು ಬೇರೆ ಬೇರೆ ಅಪ್ಪಂದಿರ ಮಕ್ಕಳಾಗಿರಬಹುದು ಎಂಬುದು ಅವರ ಊಹೆ. ಈಗ ನಿಮ್ಮ ಸರದಿ. ನಿಮ್ಮ ತಲೆಯಲ್ಲಿ ಏನೇನು ಉತ್ತರ ಓಡುತ್ತಿದೆ. ನಿಮ್ಮ ಪ್ರಕಾರ ಸರಿಯಾದ ಉತ್ತರ ಯಾವುದು ಎಂಬುದನ್ನು ನೀವೇ ಹೇಳಿ.

ಬುದ್ಧಿಗೆ ಗುದ್ದು ಕೊಡುವ ಇನ್ನಷ್ಟು ಪ್ರಶ್ನೆಗಳಿಗೆ ಇಲ್ಲಿ ಕ್ಲಿಕ್‌ ಮಾಡಿ