ಕನ್ನಡ ಸುದ್ದಿ  /  ಜೀವನಶೈಲಿ  /  ನಿಮ್ಮ ಮೆದುಳಿಗೆ ಕೆಲಸ ನೀಡಲು ಇಲ್ಲಿವೆ ಅತ್ಯುತ್ತಮ ಒಗಟುಗಳು; ಇವುಗಳನ್ನು ನೀವು ಪರಿಹರಿಸುವಿರಾ?

ನಿಮ್ಮ ಮೆದುಳಿಗೆ ಕೆಲಸ ನೀಡಲು ಇಲ್ಲಿವೆ ಅತ್ಯುತ್ತಮ ಒಗಟುಗಳು; ಇವುಗಳನ್ನು ನೀವು ಪರಿಹರಿಸುವಿರಾ?

ಮೆದುಳನ್ನು ಆಲೋಚಿಸುವಂತೆ ಮಾಡುವ ಸವಾಲಿನ ಒಗಟುಗಳನ್ನು ಯಾರು ತಾನೇ ಇಷ್ಟಪಡುವುದಿಲ್ಲ? ಒಗಟುಗಳನ್ನು ಪರಿಹರಿಸುವಲ್ಲಿ ನೀವು ಈಗಾಗಲೇ ಪರಿಣಿತರಾಗಿದ್ದೇವೆ ಎಂದು ನೀವು ಭಾವಿಸಿದ್ದರೆ, ಇಲ್ಲಿದೆ ನಿಮಗಾಗಿ ಸಿಂಪಲ್ ಒಗಟುಗಳು. ಇದಕ್ಕೆ ಉತ್ತರ ಕಂಡುಹಿಡಿಯಿರಿ (ಚಿಂತಿಸಬೇಡಿ, ಉತ್ತರಗಳನ್ನು ನೀಡಲಾಗಿದೆ).

ನಿಮ್ಮ ಮೆದುಳಿಗೆ ಕೆಲಸ ನೀಡಲು ಇಲ್ಲಿವೆ ಅತ್ಯುತ್ತಮ ಒಗಟುಗಳು
ನಿಮ್ಮ ಮೆದುಳಿಗೆ ಕೆಲಸ ನೀಡಲು ಇಲ್ಲಿವೆ ಅತ್ಯುತ್ತಮ ಒಗಟುಗಳು

ಒಗಟುಗಳನ್ನು ಪರಿಹರಿಸುವುದು ಮೆದುಳಿಗೆ ಒಂದು ಕೆಲಸ ನೀಡಿದಂತೆ. ಇದು ನಿಮ್ಮ ಮೆದುಳಿನ ವ್ಯಾಯಾಮಕ್ಕೆ ಒಂದು ಆರೋಗ್ಯಕರ ಮಾರ್ಗ. ಎಲ್ಲಾದರೂ ಪ್ರವಾಸ ಹೋಗುವಾಗ ಅಥವಾ ಸ್ನೇಹಿತರ ಜೊತೆ ಕಾಲ ಕಳೆಯುತ್ತಿದ್ದಾಗ ಈ ತರಹ ಒಗಟಿನ ಆಟ ಆಡುವುದು ಒಂಥರಾ ಮಜಾ ತರುತ್ತದೆ. ಮೆದುಳಿಗೆ ಕೆಲಸ ನೀಡುವ, ಸವಾಲಿನ ಒಗಟುಗಳನ್ನು ಯಾರು ತಾನೇ ಇಷ್ಟಪಡುವುದಿಲ್ಲ ಹೇಳಿ? ಒಗಟುಗಳನ್ನು ಪರಿಹರಿಸುವಲ್ಲಿ ನೀವು ತುಂಬಾ ಪರಿಣಿತರಾಗಿದ್ದರೆ ನಾವಿಲ್ಲಿ ಕೆಲವು ಒಗಟುಗಳನ್ನು (ಉತ್ತರ ಸಹಿತ) ನೀಡಿದ್ದೇವೆ. ಅದನ್ನು ಪರಿಹರಿಸಿ.

ನಿಮ್ಮ ಮೆದುಳಿಗೆ ಸವಾಲು ಹಾಕುವ, ನಿಮ್ಮ ಮನಸ್ಸಿಗೆ ಚೈತನ್ನ ತುಂಬುವ ಒಗಟುಗಳು ಇಲ್ಲಿವೆ.

1. ನಾನು ಬಾಯಿ ಇಲ್ಲದೆ ಮಾತನಾಡುತ್ತೇನೆ ಮತ್ತು ಕಿವಿಗಳಿಲ್ಲದೆ ಕೇಳುತ್ತೇನೆ. ನನಗೆ ದೇಹವಿಲ್ಲ, ಆದರೆ ನಾನು ಗಾಳಿಯಿಂದ ಜೀವಂತವಾಗಿದ್ದೇನೆ. ಹಾಗಿದ್ದರೆ ನಾನ್ಯಾರು?

ಟ್ರೆಂಡಿಂಗ್​ ಸುದ್ದಿ

ಈ ಪ್ರಶ್ನೆಗೆ ಉತ್ತರ ಏನಿರಬಹುದು ಎಂದು ಯೋಚಿಸಿ ನೋಡೋಣ. ಕಿವಿ ಮತ್ತು ಬಾಯಿಯ ಬಗ್ಗೆ ಯೋಚಿಸುವಂತೆ ಮಾಡಿ ನಿಮ್ಮನ್ನು ಮೋಸಗೊಳಿಸುವುದರ ಮೇಲೆ ಈ ಒಗಟು ಅವಲಂಬಿಸಿದೆ. ಗಾಳಿಯ ಬಗ್ಗೆ ನೀವು ಸಣ್ಣ ಸುಳಿವು ಪಡೆಯುತ್ತೀರಿ. ಸಾಧ್ಯವಾದಷ್ಟು ಉತ್ತರವನ್ನು ಊಹೆ ಮಾಡಿ. ಆದರೂ ಉತ್ತರ ಗೊತ್ತಾಗದಿದ್ದಲ್ಲಿ ಇಲ್ಲಿದೆ ಉತ್ತರ.

ಉತ್ತರ: ಪ್ರತಿಧ್ವನಿ.

2. ನೀವು ಗಂಟೆಗಳಲ್ಲಿ ನನ್ನ ಜೀವನವನ್ನು ಅಳೆಯುತ್ತೀರಿ. ನಿರ್ದಿಷ್ಟ ಸಮಯದಲ್ಲಿ ಅವಧಿ ಮುಗಿಯುವ ಮೂಲಕ ನಾನು ನಿಮಗೆ ಸೇವೆ ಸಲ್ಲಿಸುತ್ತೇನೆ. ನಾನು ತೆಳ್ಳಗಿರುವಾಗ ತ್ವರಿತವಾಗಿ ಅವಧಿ ಮುಗಿಸುತ್ತೇನೆ. ದಪ್ಪವಾಗಿದ್ದಾಗ ನಿಧಾನವಾಗಿರುತ್ತೇನೆ. ಗಾಳಿ ನನ್ನ ಶತ್ರು. ಹಾಗಿದ್ದರೆ ನಾನ್ಯಾರು?

ಇದು ಪ್ರತಿಯೊಂದು ಕೋನದಿಂದಲೂ ನಿಮ್ಮನ್ನು ಆಲೋಚಿಸುವಂತೆ ಮಾಡುತ್ತದೆ. ದೊಡ್ಡ ಸುಳಿವು ಗಾಳಿಯೊಂದಿಗೆ ಕೊನೆಯಲ್ಲಿ ಬರುತ್ತದೆ. ಗಾಳಿಯು ನನ್ನ ಶತ್ರು ಎಂಬುದು ಸುಳಿವನ್ನು ನೀಡುತ್ತದೆ. ಆದರೂ ಉತ್ತರ ಗೊತ್ತಾಗದಿದ್ದಲ್ಲಿ ಇಲ್ಲಿದೆ ಉತ್ತರ.

ಉತ್ತರ: ಮೇಣದಬತ್ತಿ.

3. ನಗರಗಳಿವೆ, ಮನೆಗಳಿಲ್ಲ. ಪರ್ವತಗಳಿವೆ, ಮರಗಳಿಲ್ಲ. ನೀರಿದೆ, ಮೀನುಗಳಿಲ್ಲ. ಹಾಗಿದ್ದರೆ ನಾನ್ಯಾರು?

ಈ ಒಗಟು ನಿಮ್ಮನ್ನು ಗೊಂದಲಕ್ಕೀಡು ಮಾಡುತ್ತದೆ. ನೀವು ಕಾಣೆಯಾಗಿರುವ ವಸ್ತುಗಳ ಮೇಲೆ ಗಮನಹರಿಸುವಂತೆ ಮಾಡುತ್ತದೆ. ಅಂದರೆ ಮನೆಗಳು, ಮರಗಳು ಮತ್ತು ಮೀನುಗಳು. ಆದರೆ, ನೀವು ನಿರ್ಜೀವವಾದ ಯಾವುದೇ ವಸ್ತುವನ್ನು ಊಹಿಸಬಹುದು.

ಉತ್ತರ: ನಕ್ಷೆ.

4. ಮಾರ್ಚ್ ಮತ್ತು ಏಪ್ರಿಲ್ ಮಧ್ಯ (ಇಂಗ್ಲೀಷ್ ಅಕ್ಷರ) ದಲ್ಲಿ ಏನು ಕಂಡುಬರುತ್ತದೆ? ಅದು ಯಾವುದೇ ತಿಂಗಳ ಆರಂಭದಲ್ಲಿ ಅಥವಾ ಕೊನೆಯಲ್ಲಿ ಕಾಣುವುದಿಲ್ಲ?

ಇದರ ಉತ್ತರ ಬಹಳ ಸಿಂಪಲ್ ಆಗಿದೆ. ಇಂಗ್ಲೀಷ್ ಅಕ್ಷರಗಳಲ್ಲಿ ಈ ಎರಡೂ ತಿಂಗಳ ಹೆಸರನ್ನು ಬರೆದು, ಮಧ್ಯದಲ್ಲಿ ಯಾವ ಅಕ್ಷರ ಬಂದಿದೆ ಎಂಬುದನ್ನು ಗಮನಿಸಿ. ಸರಿಯಾದ ಉತ್ತರವನ್ನು ನೀವು ಖಂಡಿತಾ ಪಡೆಯುವಿರಿ.

ಉತ್ತರ: ‘ಆರ್’ (R) ಅಕ್ಷರ.

5. ಜನರಿಂದ ತುಂಬಿದ ದೋಣಿಯನ್ನು ನೀವು ನೋಡಿರುವಿರಿ. ಅದು ಮುಳುಗಿಲ್ಲ, ಆದರೆ ನೀವು ಮತ್ತೆ ನೋಡಿದಾಗ ದೋಣಿಯಲ್ಲಿ ಒಬ್ಬ ವ್ಯಕ್ತಿಯೂ ಕಾಣುವುದಿಲ್ಲ. ಏಕೆ?

ಇದು ಬಹಳ ಕಠಿಣ ಒಗಟಾಗಿದೆ. ಇದು ತಾರ್ಕಿಕ ಚಿಂತನೆಯನ್ನು ಆಹ್ವಾನಿಸುತ್ತವೆ. ಅವರೆಲ್ಲರೂ ದೋಣಿಗೆ ಕೆಳಗೆ ಹೋದರು, ಅಥವಾ ದೋಣಿಯನ್ನು ಬಿಟ್ಟು ಹಾರಿದರು ಎಂಬ ಉತ್ತರವನ್ನು ಬಹಳ ಜನ ನೀಡುತ್ತಾರೆ. ಆದರೆ, ನೀವು ಒಂದು ಪದದ ಮೇಲೆ ಕೇಂದ್ರೀಕರಿಸಬೇಕು. ಅದರ ಇತರ ಅರ್ಥಗಳ ಬಗ್ಗೆ ಯೋಚಿಸಬೇಕು.

ಉತ್ತರ: ಎಲ್ಲಾ ಜನರು ಮದುವೆಯಾಗಿದ್ದರು.

6. ಇಂಗ್ಲೀಷ್ ಭಾಷೆಯಲ್ಲಿ ಯಾವ ಪದವು ಈ ಕೆಳಗಿನವುಗಳನ್ನು ಮಾಡುತ್ತದೆ?

ಮೊದಲೆರಡು ಅಕ್ಷರಗಳು ಗಂಡು, ಮೊದಲ ಮೂರು ಅಕ್ಷರಗಳು ಹೆಣ್ಣನ್ನು, ಮೊದಲ ನಾಲ್ಕು ಅಕ್ಷರಗಳು ಶ್ರೇಷ್ಠತೆಯನ್ನು ಸೂಚಿಸಿದರೆ, ಇಡೀ ಪ್ರಪಂಚವೇ ಶ್ರೇಷ್ಠ ಮಹಿಳೆಯನ್ನು ಸೂಚಿಸುತ್ತದೆ. ಹಾಗಿದ್ದರೆ ಆ ಪದ ಯಾವುದು?

ಈ ಒಗಟು ಬಿಡಿಸಲು ಅಷ್ಟೇನೂ ಕಷ್ಟಕರವಾಗಿಲ್ಲ. ನಿಮ್ಮ ಮೆದುಳಿಗೆ ಸ್ವಲ್ಪ ಕೆಲಸ ಕೊಟ್ಟರೆ ಸಾಕು. ಸಿನಿಮಾ ಬಗ್ಗೆ ಯೋಚಿಸಿದರೆ ಸಾಕು, ನಿಮಗೆ ಉತ್ತರ ಸಿಕ್ಕಿಬಿಡುತ್ತದೆ.

ಉತ್ತರ: ಹೀರೋಯಿನ್ (Heroine, ನಾಯಕಿ).

7. ನಾನು ಗಣಿಯಿಂದ ಬಂದಿದ್ದೇನೆ. ಯಾವಾಗಲೂ ಮರದಿಂದ ಸುತ್ತುವರಿದಿರುತ್ತೇನೆ. ಎಲ್ಲರೂ ನನ್ನನ್ನು ಬಳಸುತ್ತಾರೆ. ಹಾಗಿದ್ದರೆ ನಾನ್ಯಾರು?

ಗಣಿಯ ಕಲ್ಪನೆಯು ನಿಮ್ಮನ್ನು ಕಲ್ಲಿದ್ದಲು ಅಥವಾ ವಜ್ರದತ್ತ ಚಿಂತನೆಗೆ ಕೊಂಡೊಯ್ಯಬಹುದು. ಮರದ ವಿವರ ಇರುವುದು ನಿಮಗೆ ಸಿಕ್ಕಿರುವ ಉತ್ತಮ ಸುಳಿವು. ಈ ಒಗಟು ಕಠಿಣವಾಗಿದೆ. ಆದರೆ ಮರದ ಬಗ್ಗೆ ಇರುವ ಪ್ರಶ್ನೆಯು ನಿಮಗೆ ಉತ್ತರ ಹುಡುಕಲು ಸುಲಭವಾಗಿಸಬಹುದು.

ಉತ್ತರ: ಪೆನ್ಸಿಲ್ ಸೀಸ.

8. ನನ್ನ ಬಳಿ ಕೀಗಳಿವೆ. ಆದರೆ ಬೀಗಗಳು ಮತ್ತು ಸ್ಥಳವಿಲ್ಲ. ಕೊಠಡಿಗಳೂ ಇಲ್ಲ. ನೀವು ಪ್ರವೇಶಿಸಬಹುದು, ಆದರೆ ನೀವು ಹೊರಗೆ ಹೋಗಲು ಸಾಧ್ಯವಿಲ್ಲ. ಹಾಗಿದ್ದರೆ ನಾನ್ಯಾರು?

ನೀವು ಪ್ರವೇಶಿಸಬಹುದು ಎಂಬ ಪ್ರಶ್ನೆಯು ನಿಮ್ಮನ್ನು ಯೋಚಿಸುವ ಮೂಲಕ ಇದು ಮೋಸಗೊಳಿಸುತ್ತದೆ. ಕೀಲಿಗಳು, ವಿಶೇಷವಾಗಿ ಬೀಗಗಳ ಅಗತ್ಯವಿಲ್ಲದ ಕೆಲವು ಇತರ ಅರ್ಥಗಳು ಯಾವುವು ಎಂಬುದನ್ನು ಊಹಿಸಿ..

ಉತ್ತರ: ಕೀಬೋರ್ಡ್

ಒಟ್ಟಿನಲ್ಲಿ ಈ ಒಗಟುಗಳು ನಿಮ್ಮನ್ನು ಆಲೋಜಿಸುವಂತೆ ಮಾಡಿರಬಹುದು ಎಂದು ನಾವು ಭಾವಿಸುತ್ತೇವೆ. ನಿಮ್ಮ ಮೆದುಳಿಗೆ ಖಂಡಿತಾ ಕೆಲಸ ಕೊಟ್ಟಿರುತ್ತದೆ. ಇದನ್ನು ನೀವು ನಿಮ್ಮ ಪ್ರೀತಿಪಾತ್ರರ ಬಳಿ ಅಥವಾ ಸ್ನೇಹಿತರ ಬಳಿ ಒಗಟನ್ನು ಬಿಡಿಸುವಂತೆ ಕೇಳಿ. ಖಂಡಿತಾ ಇದು ನಿಮ್ಮನ್ನು ರಂಜಿಸುವುದರಲ್ಲಿ ಸಂಶಯವಿಲ್ಲ.