Brain Teaser: ಬುದ್ಧಿವಂತರಿಗೆ ಮಾತ್ರ; ಸ್ವಲ್ಪ ಮೆದುಳಿಗೆ ಕೆಲಸ ಕೊಟ್ಟರೆ ಜಾನ್ ವಯಸ್ಸು ಕಂಡು ಹಿಡಿಯಬಹುದು
ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾದ ಬ್ರೈನ್ ಟೀಸರ್ ನೆಟ್ಟಿಗರನ್ನು ರಂಜಿಸಿದೆ. ಜಾನ್ ಅವರ ವಯಸ್ಸಿನ ಬಗ್ಗೆ ಹಾಸ್ಯಮಯ ಊಹೆಗಳು ಮತ್ತು ಚರ್ಚೆಗಳನ್ನು ಹುಟ್ಟುಹಾಕಿತು. ನೀವು ನಿಮ್ಮ ಮೆದುಳಿಗೆ ಸ್ವಲ್ಪ ಕೆಲಸ ಕೊಟ್ಟರೆ ಜಾನ್ ವಯಸ್ಸನ್ನು ಕಂಡು ಹಿಡಿಯಬಹುದು.
ಮದುಳಿಗೆ ಸವಾಲು ಹಾಕುವ ಕೆಲವೊಂದು ಪೋಟೊಗಳು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಈ ಒಗಟುಗಳು ನಮ್ಮ ಮನಸ್ಸನ್ನು ತೊಡಗಿಸಿಕೊಳ್ಳುವುದಲ್ಲದೆ, ಸೃಜನಶೀಲವಾಗಿ ಯೋಚಿಸಲು ಮತ್ತು ಅಸಾಂಪ್ರದಾಯಿಕ ಪರಿಹಾರಗಳನ್ನು ಅನ್ವೇಷಿಸಲು ನಮ್ಮನ್ನು ಪ್ರೋತ್ಸಾಹಿಸುತ್ತವೆ. ಚಿಕ್ಕವರಾಗಿರಲಿ ಅಥವಾ ವೃದ್ಧರಾಗಿರಲಿ ಸಮಯವನ್ನು ಕಳೆಯಲು ಒಂದು ಸಂತೋಷಕರವಾದ ಮಾರ್ಗವನ್ನು ನೀಡುತ್ತವೆ. ಗಂಟೆಗಟ್ಟಲೆ ಅಥವಾ ಇಡೀ ದಿನ ಸಹ ಮನೋರಂಜನೆಯನ್ನು ಒದಗಿಸುತ್ತವೆ. ನೀವು ಮಾನಸಿಕ ಸವಾಲಿನ ಮನಸ್ಥಿತಿಯಲ್ಲಿದ್ದರೆ, ನಿಮಗಾಗಿ ಇಲ್ಲೊಂದು ಪ್ರಶ್ನೆಯಿದೆ.
ಇತ್ತೀಚೆಗೆ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಮೈಂಡ್ ಟ್ಯಾಂಗಲ್ ಹಬ್ ಖಾತೆಯಿಂದ ಒಂದು ಫೋಟೊವನ್ನು ಹಂಚಿಕೊಳ್ಳಲಾಗಿದೆ. ಈ ಬ್ರೈನ್ ಟೀಸರ್‌ನಲ್ಲಿ ಪ್ರಶ್ನೆಯೊಂದನ್ನು ಸ್ವಲ್ಪ ಟ್ವಿಸ್ಟ್ ಮಾಡಿ ನೀಡಲಾಗಿದೆ. ಈ ಗೊಂದಲಮಯ ಪ್ರಶ್ನೆಗೆ ನೀವು ಉತ್ತರ ನೀಡಬಹುದು. ಆದರೆ ಸ್ವಲ್ಪ ತಲೆಗೆ ಕೆಲಸ ಕೊಟ್ಟರೆ ನಿಮಗೆ ಉತ್ತರ ಕಂಡುಕೊಳ್ಳುವುದು ಕಷ್ಟ ಎನಿಸುವುದಿಲ್ಲ. ಪ್ರಶ್ನೆ ಹೀಗಿದೆ. "ಜಾನ್ ಅವರ ತಂದೆ 31 ವರ್ಷದವರಿದ್ದಾಗ, ಜಾನ್‌ಗೆ 8 ವರ್ಷ. ಈಗ ಅವನ ತಂದೆಗೆ ಅವನಿಗಿಂತ ಎರಡು ಪಟ್ಟು ವಯಸ್ಸಾಗಿದ್ದಾನೆ. ಹಾಗಾದರೆ ಜಾನ್‌ನ ವಯಸ್ಸು ಎಷ್ಟು?" ಈ ಪ್ರಶ್ನೆಯು ಕುತೂಹಲ ಮತ್ತು ಚರ್ಚೆಯನ್ನು ಹುಟ್ಟುಹಾಕಿದೆ, ಉತ್ಸಾಹಿಗಳು ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಮೆದುಳಿಗೆ ಕೆಲಸ ಕೊಟ್ಟಿದ್ದಾರೆ.
ಈ ಮೆದುಳಿನ ಟೀಸರ್ ಅನ್ನು ಇಲ್ಲಿ ನೋಡಿ:
ಜಾಲತಾಣಗಳಲ್ಲಿ ಪ್ರಶ್ನೆಗೆ ಮಿಶ್ರ ಪ್ರತಿಕ್ರಿಯೆಗಳು
ಯಾವುದೇ ಆಕರ್ಷಕ ಒಗಟುಗಳಂತೆ, ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆಯು ಉತ್ಸಾಹಭರಿತವಾಗಿದೆ. ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್‌ಗಳನ್ನು ಮಾಡಿದ್ದಾರೆ. "ನಾನು ಅವರ ಕುಟುಂಬ ವಿಷಯವನ್ನು ಪರಿಶೀಲಿಸಲು ಬಯಸುವುದಿಲ್ಲ" ಎಂದು ಒಬ್ಬ ಬಳಕೆದಾರರು ವ್ಯಂಗ್ಯವಾಡಿದರೆ, ಇನ್ನೊಬ್ಬರು "ನಿಜವಾಗ್ಲೂ ನನಗೆ ಗೊತ್ತಿಲ್ಲ, ಎಂದು ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದಾರೆ. ಇನ್ನೂ ಕೆಲವರು ತಮ್ಮದೇ ಶೈಲಿಯಲ್ಲಿ ಗೊತ್ತಿಲ್ಲ ಎಂಬ ಉತ್ತರಗಳನ್ನು ನೀಡಿದ್ದಾರೆ.
ಇದು ಆನ್‌ಲೈನ್ ಪ್ರೇಕ್ಷಕರ ಕಲ್ಪನೆಯನ್ನು ಸೆರೆಹಿಡಿಯುವ ಮೊದಲ ಒಗಟು ಅಲ್ಲ. ಈ ಹಿಂದೆಯೂ ಇದೇ ರೀತಿಯ ಬ್ರೈನ್ ಟೀಸರ್, ಒಗಟುಗಳನ್ನು ಹಂಚಿಕೊಂಡು ಗಮನ ಸೆಳೆಯಲಾಗಿತ್ತು. “ನಾನು 2 ವರ್ಷದವಳಿದ್ದಾಗ, ನನ್ನ ಸಹೋದರಿ ನನ್ನ ವಯಸ್ಸಿಗಿಂತ ಎರಡು ಪಟ್ಟು ದೊಡ್ಡವಳಾಗಿದ್ದಳು. ಈಗ ನನಗೆ 30 ವರ್ಷ. ನನ್ನ ತಂಗಿಯ ವಯಸ್ಸೆಷ್ಟು?” ಇಲ್ಲೊಂದು ಪೋಸ್ಟ್ ಇದೆ ನೋಡಿ.
ಸವಾಲನ್ನು ಸ್ವೀಕರಿಸಲು ಸಿದ್ಧರಿದ್ದೀರಾ?
ನೀವು ನಿಮ್ಮನ್ನು ಮೆದುಳಿನ ಟೀಸರ್ ಗಳ ಚಾಂಪಿಯನ್ ಎಂದು ಪರಿಗಣಿಸಿದರೆ, ಈ ಒಗಟುಗಳು ಖಂಡಿತವಾಗಿಯೂ ಪ್ರಯತ್ನಿಸಲು ಯೋಗ್ಯವಾಗಿವೆ. ಆದ್ದರಿಂದ, ಸ್ವಲ್ಪ ಸಮಯ ತೆಗೆದುಕೊಳ್ಳಿ, ಸೃಜನಶೀಲವಾಗಿ ಯೋಚಿಸಿ ಮತ್ತು ನೀವು ಕೋಡ್ ಅನ್ನು ಭೇದಿಸಬಹುದೇ ಎಂದು ನೋಡಿ!