Brain Teaser: ಈ ಪ್ರಶ್ನೆಗೆ 15 ಸೆಕೆಂಡಿನಲ್ಲಿ ಉತ್ತರ ಕೊಟ್ಟರೆ ನೀವು ಚುರುಕು ಎಂದರ್ಥ; ಪ್ರಶ್ನೆ ಕಠಿಣ ಆದರೆ ಉತ್ತರ ಸರಳ
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ಈ ಪ್ರಶ್ನೆಗೆ 15 ಸೆಕೆಂಡಿನಲ್ಲಿ ಉತ್ತರ ಕೊಟ್ಟರೆ ನೀವು ಚುರುಕು ಎಂದರ್ಥ; ಪ್ರಶ್ನೆ ಕಠಿಣ ಆದರೆ ಉತ್ತರ ಸರಳ

Brain Teaser: ಈ ಪ್ರಶ್ನೆಗೆ 15 ಸೆಕೆಂಡಿನಲ್ಲಿ ಉತ್ತರ ಕೊಟ್ಟರೆ ನೀವು ಚುರುಕು ಎಂದರ್ಥ; ಪ್ರಶ್ನೆ ಕಠಿಣ ಆದರೆ ಉತ್ತರ ಸರಳ

ನಿಮ್ಮ ಬುದ್ದಿಗೆ ಚುರುಕು ಮುಟ್ಟಿಸುವ ಕೆಲವು ಪ್ರಶ್ನೆಗಳಿಗೆ ನೀವು ಆಗಾಗ ಇಂತಹ ಉತ್ತರಿಸಲು ಪ್ರಯತ್ನ ಮಾಡಬೇಕು. ನಾವಿಲ್ಲಿ ನೀಡಿದ ಈ ಪ್ರಶ್ನೆಗೆ ನಿಮಗೆ ಎಷ್ಟು ಬೇಗ ಉತ್ತರಿಸಲು ಸಾಧ್ಯ ಎಂದು ನೀವೆ ನಿಮ್ಮ ಪರೀಕ್ಷೆ ಮಾಡಿಕೊಳ್ಳಿ. ಸರಿಯಾದ ಉತ್ತರವನ್ನೂ ನಾವಿಲ್ಲಿ ನೀಡಿದ್ದೇವೆ.

ಪ್ರಶ್ನೆ ಕಠಿಣ ಆದರೆ ಉತ್ತರ ಸರಳ
ಪ್ರಶ್ನೆ ಕಠಿಣ ಆದರೆ ಉತ್ತರ ಸರಳ

ನಿಮ್ಮ ಬುದ್ದಿಗೆ ಚುರುಕು ಮುಟ್ಟಿಸುವ ಕೆಲವು ಪ್ರಶ್ನೆಗಳಿಗೆ ನೀವು ಆಗಾಗ ಉತ್ತರಿಸಲು ಪ್ರಯತ್ನ ಮಾಡಬೇಕು. ಹೀಗೆ ಮಾಡಿದರೆ ಮಾತ್ರ ನಿಮ್ಮ ಬುದ್ದಿ ಇನ್ನಷ್ಟು ಚುರುಕಾಗಲು ಸಾಧ್ಯವಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮ ಬುದ್ದಿಗೆ ಚುರುಕು ಮುಟ್ಟಿಸುವ ಹಲವಾರು ಪ್ರಶ್ನೆಗಳು ಇರುತ್ತವೆ. ಅವುಗಳನ್ನು ಕಂಡಾಗ ಹೆಚ್ಚಿನವರು ಕ್ಷಣಕಾಲ ಆ ಪೋಸ್ಟ್‌ ಓದಿ ಕುತೂಹಲಗೊಳ್ಳುತ್ತಾರೆ. ನಂತರ ಉತ್ತರಿಸಲು ಪ್ರಯತ್ನ ಮಾಡುತ್ತಾರೆ. ಆದರೆ ಇನ್ನು ಕೆಲವರು ಪ್ರಶ್ನೆಗೆ ಉತ್ತರ ನೀಡುವುದಕ್ಕಿಂತ ಅಥವಾ ಆ ಪ್ರಶ್ನೆಗೆ ಉತ್ತರ ಏನಾಗಿರಬಹುದು ಎಂದು ಆಲೋಚಿಸುವ ಮೊದಲೇ ಕಾಮೆಂಟ್‌ಗಳಲ್ಲಿ ಯಾವ ಉತ್ತರ ಬಂದಿದೆ ಎಂದು ಗಮನಿಸುತ್ತಾರೆ. ಆ ಉತ್ತರ ಯಾಕೆ ಬಂತು ಎಂದು ಆಮೇಲೆ ಆಲೋಚನೆ ಮಾಡುತ್ತಾರೆ.

ನಾವೂ ಸಹ ಇಲ್ಲಿ ಒಂದು ಪ್ರಶ್ನೆಯನ್ನು ನೀಡಿದ್ದೇವೆ. ಪ್ರಶ್ನೆ ನಿಮಗೆ ತುಂಬಾ ಸರಳ ಎನಿಸಬಹುದು ಅಥವಾ ಕಠಿಣ ಎಂದು ಎನಿಸಬಹುದು. ಆದರೆ ಉತ್ತರ ಮಾತ್ರ ತುಂಬಾ ಸರಳವಾಗಿದೆ. ಇದನ್ನು ನೆನಪಿನಲ್ಲಿಟ್ಟುಕೊಂಡು ಉತ್ತರ ಕಂಡುಹಿಡಿಯಲು ಪ್ರಯತ್ನ ಮಾಡಿ.

ನಾನು 2 ವರ್ಷವನಾಗಿದ್ದಾಗ ನನ್ನ ಸಹೋದರಿಗೆ ನನಗಿಂತ ಎರಡು ಪಟ್ಟು ಹೆಚ್ಚು ವಯಸ್ಸಾಗಿತ್ತು. ನನಗೆ ಈಗ 30 ವರ್ಷ, ಹಾಗಾದ್ರೆ ನನ್ನ ಸಹೋದರಿಯ ವಯಸ್ಸೆಷ್ಟು? ಈ ಪ್ರಶ್ನೆಗೆ ಉತ್ತರ ನೀಡುವಲ್ಲಿ ಎಲ್ಲರೂ ಒಮ್ಮೆ ಗೊಂದಲಕ್ಕೊಳಗಾಗುತ್ತಾರೆ. ನೀವೂ ಈಗ ಇದೇ ಪ್ರಶ್ನೆಗೆ ಉತ್ತರ ಹುಡುಕುತ್ತಾ ಇರಬಹುದು. @ellis_puzzles ಎಂಬ ಥ್ರೆಡ್‌ ಖಾತೆಯು ಈ ಪ್ರಶ್ನೆಯನ್ನು ಹಂಚಿಕೊಂಡಿದೆ. ಕಾಣಲು ತುಂಬಾ ಸರಳವಾಗಿದೆ ಎನಿಸಿದರೂ ಹಲವರು ಈ ಪ್ರಶ್ನೆಗೆ ಉತ್ತರ ನೀಡುವಲ್ಲಿ ಸೋತಿದ್ದಾರೆ. ಇದಕ್ಕೆ ಒಂದಷ್ಟು ಜನ ಹಾಸ್ಯಮಯವಾದ ಉತ್ತರವನ್ನೂ ಸಹ ನೀಡಿದ್ದಾರೆ.

ಒಬ್ಬ ಬಳಕೆದಾರರು ತುಂಬಾ ವಿಶ್ವಾಸದಿಂದ ಉತ್ತರ ನೀಡಿದ್ದಾರೆ. ಅವರು ನೀಡಿದ ಉತ್ತರ 32. ಇನ್ನು ಹಲವರು ಅವಳು ಈಗ ಅಜ್ಜಿಯಾಗಿರಬಹುದು ಎಂದು ತಮಾಷೆಯಾಗಿ ಹೇಳಿದ್ದಾರೆ. ತಮ್ಮನಿಗೆ ಎರಡು ಪಟ್ಟು ಹೆಚ್ಚು ವರ್ಷವಾಗಿತ್ತು ಎಂದಾದರೆ ಅವಳಿಗೆ ಆಗ 4 ವರ್ಷವಾಗಿರುತ್ತದೆ. ಹಾಗಾಗಿ ಈಗ ತಮ್ಮನಿಗೆ 30 ವರ್ಷ ಎಂದಾದರೆ ಅಕ್ಕನಿಗೆ 60 ವರ್ಷ ಆಗಿರಲು ಸಾಧ್ಯವಿಲ್ಲ. ಈಗಲೂ ತಮ್ಮನಿಗಿಂತ ಅವಳು ಎರಡೇ ವರ್ಷ ದೊಡ್ಡವಳಾಗಿರುತ್ತಾಳೆ. ಹಾಗಾಗಿ 32 ವರ್ಷವಾಗಿರುತ್ತದೆ.

ಈರೀತಿಯಾಗಿ ಇದೊಂದು ಪ್ರಶ್ನೆಗೆ ಹಲವಾರು ಉತ್ತರಗಳು ಬಂದಿದೆ. ಇನ್ನು ಹೆಚ್ಚಿನವರು 34 ಎಂದೂ ಸಹ ಉತ್ತರ ನೀಡಿದ್ದಾರೆ. ಆದರೆ ಇದಕ್ಕೆ ಸರಿಯಾದ ಉತ್ತರ 32