Brain Teaser: ಈ ತೂಬುಮಂಟಪ ಯಾವ ಊರಿನ ಕೆರೆಯದ್ದೆಂದು ಗುರುತಿಸಿರಿ, ಮಿದುಳಿಗೆ ಮೇವು ನೀಡಿದ ಡಾ. ವಡ್ಡಗೆರೆ ನಾಗರಾಜಯ್ಯ ಪ್ರಶ್ನೆ
ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಪ್ರಯಾಣಿಸುವಾಗ ಕಾಣ ಸಿಗುವ ಈ ತೂಬುಮಂಟಪ ಯಾವ ಊರಿನ ಕೆರೆಯದ್ದು? ಎಂಬ ಪ್ರಶ್ನೆಯನ್ನು ಡಾ. ವಡ್ಡಗೆರೆ ನಾಗರಾಜಯ್ಯ ಸೋಷಿಯಲ್ ಮೀಡಿಯಾದಲ್ಲಿ ಕೇಳಿದ್ದು, ಜನರು ಹಲವು ಉತ್ತರ ನೀಡಿದ್ದಾರೆ.
ಚಿತ್ರದುರ್ಗ: ಸೋಷಿಯಲ್ ಮೀಡಿಯಾದಲ್ಲಿ ಕೆಲವೊಂದು ಪೋಸ್ಟ್‌ಗಳು ನಮ್ಮ ಜ್ಞಾನ ಹೆಚ್ಚಿಸಿಕೊಳ್ಳಲು ನೆರವು ನೀಡುತ್ತದೆ. ಜತೆಗೆ, ನಮ್ಮ ಬುದ್ಧಿವಂತಿಕೆ, ಜ್ಞಾನ ಇತ್ಯಾದಿಗಳನ್ನು ಒರೆಗೆ ಹಚ್ಚುವಂತೆ ಮಾಡುತ್ತದೆ. ಮಿದುಳಿಗೆ ಕಸರತ್ತು ನೀಡುವ ಇಂತಹ ಪೋಸ್ಟ್‌ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುವುದುಂಟು. ವೈರಲ್ ಎಂದರೆ, ಸಾಕಷ್ಟು ಜನರು ಇಂತಹ ಪೋಸ್ಟ್‌ಗಳಿಗೆ ಕಾಮೆಂಟ್ ಮಾಡುತ್ತ, ಇಂತಹ ಚಟುವಟಿಕೆಯಲ್ಲಿ ಭಾಗವಹಿಸುವ ಪ್ರಕ್ರಿಯೆ ಎಂದಿರಲಿ.
ಇಂದು ಡಾ. ವಡ್ಡಗೆರೆ ನಾಗರಾಜಯ್ಯ ಅವರು ಒಂದು ಪೋಸ್ಟ್ ಹಾಕಿದ್ದರು. ಕಲಾತ್ಮಕವಾದ ಈ ತೂಬುಮಂಟಪ ಯಾವ ಊರಿನ ಕೆರೆಯದ್ದೆಂದು ಗುರುತಿಸಿರಿ. ಸುಳಿವು : ರಾಷ್ಟ್ರೀಯ ಹೆದ್ದಾರಿ- 4 ಎಂದು ಅವರು ಬರೆದಿದ್ದರು. ಈ ಪೋಸ್ಟ್‌ಗೆ ಸಾಕಷ್ಟು ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಅನ್ಯಾಯದ ವಿರುದ್ಧ ಬುಸುಗುಡುವ ರಾಮಾಚಾರಿ ಎಂಬ ನಾಗರಹಾವಿನ ಊರು ಎಂದು ಮೋಹನ್ ಕೋರಿಶೆಟ್ರು ಎಂಬ ಫೇಸ್‌ಬುಕ್ ಕಾಮೆಂಟ್ ಮಾಡಿದ್ದಾರೆ. ಇದು ಕಸ್ತೂರಿ ರಂಗಪಣ್ಣ ಹಳ್ಳಿ ಕೆರೆ ತೂಬು, ಸೂಳೆಕೆರೆ ಎಂದೆಲ್ಲ ಜನರು ಕಾಮೆಂಟ್ ಮಾಡಿದ್ದಾರೆ. ಎಲ್ಲೋ ನೋಡಿದ ಹಾಗಿದೆ ಎಂದು ಕೆಲವು ಜನರು ಕಾಮೆಂಟ್ ಮಾಡಿದ್ದಾರೆ.
ಈ ಮೇಲೆ ನೀಡಲಾದ ಚಿತ್ರವನ್ನು ಗಮನಿಸಿ ನೀವು ಕೂಡ ಯೋಚಿಸಿ. ಇದು ಚಿತ್ರದುರ್ಗದ ಯಾವ ಕರೆ ಎಂದು. ಎಲ್ಲೋ ನೋಡಿದಂತೆ ಇದೆಯೇ, ಈ ಕೆರೆಯ ತೂಬುಮಂಟಪ ಎಲ್ಲಿಯದ್ದು ಎಂದು ನಿಮಗೆ ತಿಳಿದಿದೆಯೇ? ತಿಳಿದಿಲ್ಲವೇ? ಯೋಚನೆ ಮಾಡಿ. ಈಗಾಗಲೇ ಈ ಪೋಸ್ಟ್‌ಗೆ ಕಾಮೆಂಟ್‌ನಲ್ಲಿ ಸರಿ ಉತ್ತರ ಬಂದಾಗಿದೆ.
ಯಾವ ಕೆರೆಯ ತೂಬುಮಂಟಪ?
ಈ ಪೋಸ್ಟ್‌ಗೆ ಮಹಂತೇಶ್ ಎನ್‌ಎಸ್ ಎಂಬ ಫೇಸ್‌ಬುಕ್ ಬಳಕೆದಾರರು ಮುರಗಿ ಮಠದ ಭರಮಣ್ಣ ನಾಯಕರು ನಿರ್ಮಿಸಿದ ಕೆರೆಯ ತೂಬು ಎಂದು ಉತ್ತರ ನೀಡಿದ್ದಾರೆ. ಇದಕ್ಕೆ ಡಾ. ವಡ್ಡಗೆರೆ ನಾಗರಾಜಯ್ಯ ಅವರು ಹೌದೌದು ಎಂದು ಉತ್ತರಿಸಿದ್ದಾರೆ. ಸಾಕಷ್ಟು ಜನರು ಮುರುಘಾ ಮಠದ ಮುಂದಿನ ಕೆರೆಯೆಂದು ತಿಳಿಸಿದ್ದಾರೆ. ಈ ಉತ್ತರವೂ ಸರಿ. ಅರಸನ ಕೆರೆ ಎಂಬ ಉತ್ತರವೂ ಸರಿಯಾಗಿದೆ. ಚಿತ್ರದುರ್ಗದ ಮುರುಘಾಮಠದ ಎದುರಿನ ಅರಸನಕೆರೆಯಲ್ಲಿ ಇಂಥದ್ದನ್ನು ನೋಡಿದ ನೆನಪು ಎಂದು ಗಾಣದಾಳು ಶ್ರೀಕಂಠ ಕಾಮೆಂಟ್ ಮಾಡಿದ್ದಾರೆ. ಹೌದು ಇದೇ ಉತ್ತರ ಸರಿ ಎಂದು ವಡ್ಡಗೆರೆ ನಾಗರಾಜಯ್ಯ ಉತ್ತರಿಸಿದ್ದಾರೆ.