Brain Teaser: ಖಾಲಿ ಕುಳಿತು ಬೋರ್‌ ಆಗಿದೆಯಾ? ಇಲ್ಲಿರುವ ಗಣಿತದ ಸವಾಲು ಬಿಡಿಸಿ, ಥಟ್‌ ಅಂತ ನಿಮ್ಮ ಬೇಸರ ಓಡಿಹೋಗುತ್ತೆ
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ಖಾಲಿ ಕುಳಿತು ಬೋರ್‌ ಆಗಿದೆಯಾ? ಇಲ್ಲಿರುವ ಗಣಿತದ ಸವಾಲು ಬಿಡಿಸಿ, ಥಟ್‌ ಅಂತ ನಿಮ್ಮ ಬೇಸರ ಓಡಿಹೋಗುತ್ತೆ

Brain Teaser: ಖಾಲಿ ಕುಳಿತು ಬೋರ್‌ ಆಗಿದೆಯಾ? ಇಲ್ಲಿರುವ ಗಣಿತದ ಸವಾಲು ಬಿಡಿಸಿ, ಥಟ್‌ ಅಂತ ನಿಮ್ಮ ಬೇಸರ ಓಡಿಹೋಗುತ್ತೆ

ಗಣಿತದ ಸವಾಲುಗಳನ್ನು ಬಿಡಿಸುವುದು ಎಂದರೆ ನಿಮಗೆ ಎಲ್ಲಿಲ್ಲದ ಖುಷಿ ನೀಡುತ್ತದೆಯಾ? ಹಾಗಾದರೆ ಇಲ್ಲೊಂದು ಪಜಲ್‌ ಇದೆ. ನೀವು ಗಣಿತದಲ್ಲಿ ಎಷ್ಟು ಪರ್ಫೆಕ್ಟ್ ಅನ್ನೋದನ್ನ ಹೇಳುತ್ತದೆ.

ಖಾಲಿ ಕುಳಿತು ಬೋರ್‌ ಆಗಿದೆಯಾ? ಇಲ್ಲಿರುವ ಗಣಿತದ ಸವಾಲು ಬಿಡಿಸಿ, ಥಟ್‌ ಅಂತ ನಿಮ್ಮ ಬೇಸರ ಓಡಿಹೋಗುತ್ತೆ
ಖಾಲಿ ಕುಳಿತು ಬೋರ್‌ ಆಗಿದೆಯಾ? ಇಲ್ಲಿರುವ ಗಣಿತದ ಸವಾಲು ಬಿಡಿಸಿ, ಥಟ್‌ ಅಂತ ನಿಮ್ಮ ಬೇಸರ ಓಡಿಹೋಗುತ್ತೆ

ಒಂದೇ ರೀತಿಯ ಕೆಲಸಗಳನ್ನು ಮಾಡಿ ಬೇಜಾರಾಗಿದೆಯಾ? ಬೇಸರು ಕಳೆಯಲು ಏನು ಮಾಡುವುದು ಎಂದು ಯೋಚಿಸುತ್ತಿದ್ದರೆ ಅದಕ್ಕೆ ಇಲ್ಲೊಂದು ಉಪಾಯವಿದೆ. ನಿಮ್ಮ ಬುದ್ದಿ ಚುರುಕಾಗಿಸಿ, ಉತ್ಸಾಹ ಮೂಡಿಸುವಂತಹ ಸುಲಭದ ದಾರಿ ಇಲ್ಲಿದೆ. ಕೆಲವು ಗಣಿತದ ಸವಾಲುಗಳನ್ನೋ ಅಥವಾ ಒಗಟುಗಳನ್ನೋ ಬಿಡಿಸುವುದೆಂದರ ಕೆಲವರಿಗೆ ಬಹಳ ಇಷ್ಟ. ತಲೆ ಕೆರೆದುಕೊಂಡು ಹೇಗಪ್ಪಾ ಇದರ ಉತ್ತರ ಕಂಡು ಹಿಡಿಯುವುದು ಎಂದು ಯೋಚಿಸಿ ನಂತರ ಉತ್ತರ ಪಡೆದುಕೊಳ್ಳುವವರಿಗೆ ಗಣಿತದ ಸವಾಲುಗಳೆಂದರೆ ಬೇಜಾರಿನಿಂದ ಹೊರಬರುವ ದಾರಿ. ಅದಕ್ಕಾಗಿ ಇಲ್ಲೊಂದು ಗಣಿತದ ಪ್ರಶ್ನೆಯನ್ನು ನಾವು ನಿಮಗಾಗಿ ಕೊಟ್ಟಿದ್ದೇವೆ.

prime_maths_quiz ಎಂಬ ಇನ್‌ಸ್ಟಾಗ್ರಾಂ ಪುಟದಲ್ಲಿ ಹಂಚಿಕೊಳ್ಳಲಾದ ಒಂದು ಬ್ರೇನ್‌ ಟೀಸರ್‌ ಹೀಗಿದೆ 36 ÷ 6 x 8 - 9. ಇದಕ್ಕೆ ಉತ್ತರ ನೀವು ಕಂಡುಹಿಡಿಯಬಲ್ಲಿರಾ? ಈ ಪೋಸ್ಟ್‌ ಅನ್ನು ನವೆಂಬರ್‌ 16 ರಂದು ಹಂಚಿಕೊಳ್ಳಲಾಗಿದೆ. ಪೋಸ್ಟ್‌ ಮಾಡಿದ ಕೆಲವೇ ಗಂಟೆಗಳಲ್ಲಿ ಸಾವಿರಾರು ಜನರು ಇದನ್ನು ಲೈಕ್‌ ಮಾಡಿ ಕಮೆಂಟ್‌ ಕೂಡಾ ಮಾಡಿದ್ದಾರೆ.

ಗಣಿತದ ಈ ಸವಾಲು ಬಿಡಿಸಲು ಪ್ರಯತ್ನಿಸುವವರಿಗೆ ಇಲ್ಲೊಂದು ಹಿಂಟ್‌ ಇದೆ. ಗಣಿತದ ಬೇಸಿಕ್‌ ಸೂತ್ರ ನೆನಪಿಸಿಕೊಳ್ಳಿ. ಭಾಗಿಸಿ, ಗುಣಿಸಿ ನಂತರ ಕಳೆಯುವುದು ಸರಿಯೋ ಅಥವಾ ಮೊದಲು ಗುಣಿಸಿ, ಕಳೆದು, ನಂತರ ಭಾಗಿಸುವುದು ಸರಿಯೋ. ಎರಡೂ ವಿಧಾನಗಳು ನಿಮಗೆ ಬೇರೆ ಬೇರೆ ಉತ್ತರ ನೀಡುತ್ತದೆ. ಆದರೆ ಶಾಲೆಯಲ್ಲಿ ಕಲಿತ ಗಣಿತದ ಸರಿಯಾದ ವಿಧಾನ ಪಾಲಿಸಿದರೆ ಖಂಡಿತ ನಿಮಗೆ ಸರಿ ಉತ್ತರ ಸಿಗುತ್ತದೆ. ಮೇಲೆ ಹೇಳಿದ ಗಣಿತದ ಸವಾಲಿಗೆ ಸರಿ ಉತ್ತರ 39 ಎಂದು ಹಲವಾರು ಜನರು ಪೋಸ್ಟ್‌ ಮಾಡಿ ಕಮೆಂಟ್‌ ಬಾಕ್ಸ್‌ ತುಂಬಿಸಿದ್ದಾರೆ. ಯೋಚಿಸುವುದೇನಿದೆ, ಒಂದು ಪೇಪರ್‌ ಮತ್ತು ಪೆನ್‌ ತೆಗೆದುಕೊಳ್ಳಿ, ಉತ್ತರ ಕಂಡುಹಿಡಿಯಲು ಪ್ರಾರಂಭಿಸಿ.

ಈ ಬ್ರೈನ್‌ ಟೀಸರ್‌ ಅನ್ನೂ ನೋಡಿ

Brain Teaser: ಗಣಿತದ ಸೂತ್ರ ನಿಮಗೆ ತಿಳಿದಿದ್ದರೆ ಸಾಕು; ಈ ಸವಾಲನ್ನು ನೀರು ಕುಡಿದಷ್ಟೇ ಸುಲಭವಾಗಿ ಬಿಡಿಸಬಹುದು; ಟ್ರೈ ಮಾಡಿ

ನಮ್ಮ ಬುದ್ಧಿಗೆ ಕಸರತ್ತು ಕೊಡುವ ಕೆಲಸ ಮಾಡುವುದು ಗಣಿತ. ದೊಡ್ಡ ದೊಡ್ಡ ಗಣಿತದ ಸವಾಲುಗಳನ್ನು ಕ್ಷಣಾರ್ಧದಲ್ಲಿ ಬಿಡಿಸುವವರನ್ನು ನೋಡಿದರೆ ಆಶ್ಚರ್ಯವಾಗುವುದಂತು ಖಂಡಿತ. ಗಣಿತವೇ ಹಾಗೆ, ಕೆಲವರಿಗೆ ನೀರು ಕುಡಿದಷ್ಟು ಸುಲಭವಾಗಿದ್ದರೆ, ಇನ್ನು ಕೆಲವರಿಗೆ ಕಬ್ಬಿಣದ ಕಡಲೆ. ಕೆಲವರಿಗೆ ಸರಳ ಗಣಿತವೂ ಕಷ್ಟವೇ. ಕೂಡಿಸಿ, ಕಳೆದು, ಗುಣಿಸಿ, ಭಾಗಿಸಿದರೂ ಉತ್ತರ ಮಾತ್ರ ದೊರೆಯುವುದಿಲ್ಲ. ಕೆಲವು ಗಣಿತದ ಸವಾಲುಗಳನ್ನು ಎಲ್ಲ ವಯಸ್ಸಿನ ಜನರು ಬಿಡಿಸಿ ಬಂದ ಉತ್ತರವನ್ನು ಎಲ್ಲರಿಗೂ ಹೇಳಿ ಆನಂದಪಡುತ್ತಾರೆ. ಇನ್ನು ಕೆಲವರು ಉತ್ತರ ಹುಡುಕಲು ಗಂಟೆಗಟ್ಟಲೆ, ಕೆಲವೊಮ್ಮೆ ದಿನಗಳವರೆಗೆ ಪ್ರಯತ್ನಿಸುವವರು ಇದ್ದಾರೆ. ನೀವು ಸಹ ಈ ಪಜಲ್‌ ಬಿಡಿಸಿ ಆನಂದಿಸಿಬಹುದು. ನಿಮಗಾಗಿ ನಾವು ಇಲ್ಲೊಂದು ಪಜಲ್‌ ನೀಡುತ್ತಿದ್ದೇವೆ. ಇದನ್ನು ಬಿಡಿಸಲು ಗಣಿತದ ಮೂಲ ತಿಳಿದಿದ್ದರೆ ಸಾಕು, ಉತ್ತರ ಸುಲಭವಾಗಿ ಕಂಡುಕೊಳ್ಳಲು ಸಾಧ್ಯ.

Whats_app_banner