ಕನ್ನಡ ಸುದ್ದಿ  /  Lifestyle  /  Brain Teaser Solve This Maths Puzzle In Less Time Which Shared In Survey World Instagram Page Rsm

Brain Teaser: ನಿಮಗೆ ಗಣಿತ ಇಷ್ಟಾನಾ ಕಷ್ಟಾನಾ? ಸುಲಭವಾದ ಈ ಲೆಕ್ಕ ಬಿಡಿಸಿ ಉತ್ತರ ಹೇಳಿ; ಮನೆ ಮಾಲೀಕ ಗಳಿಸಿದ ಲಾಭವೆಷ್ಟು?

Brain Teaser: ಸರ್ವೆ ವರ್ಲ್ಡ್‌ ಎಂಬ ಇನ್‌ಸ್ಟಾಗ್ರಾಮ್‌ ಪೇಜ್‌ನಲ್ಲಿ ಹಂಚಿಕೊಂಡ ಗಣಿತದ ಪಜಲ್‌ ಗಮನ ಸೆಳೆಯುತ್ತಿದೆ. ವ್ಯಕ್ತಿಯು 5 ಲಕ್ಷ ರೂ ಕೊಟ್ಟು ಮನೆ ಖರೀದಿ ಮಾಡಿ ಅದನ್ನು 7 ಲಕ್ಷಕ್ಕೆ ಮಾರಾಟ ಮಾಡುತ್ತಾನೆ. ಮತ್ತೆ 8 ಲಕ್ಷಕ್ಕೆ ಖರೀದಿಸಿ 10 ಲಕ್ಷಕ್ಕೆ ಮಾರುತ್ತಾನೆ. ಹಾಗಾದರೆ ಆತನಿಗೆ ಎಷ್ಟು ಲಾಭ ಬರುತ್ತದೆ ಅನ್ನೋದು ಪ್ರಶ್ನೆ, ಲೆಕ್ಕ ಹಾಕಿ ಉತ್ತರ ಹೇಳಿ.

ಈ ಚಿತ್ರ ನೋಡಿ, ಗಣಿತದ ಪ್ರಶ್ನೆಗೆ ಉತ್ತರ ಕೊಡಿ
ಈ ಚಿತ್ರ ನೋಡಿ, ಗಣಿತದ ಪ್ರಶ್ನೆಗೆ ಉತ್ತರ ಕೊಡಿ

Brain Teaser: ಶಾಲೆಯಲ್ಲಿ ಕಲಿಯುವಾಗ ಎಲ್ಲರಿಗೂ ಗಣಿತ ಕಬ್ಬಿಣದ ಕಡಲೆ. ನನಗೆ ಗಣಿತ ಇಷ್ಟ ಎಂದು ಹೇಳುವವರು ಅಲ್ಲೋ ಇಲ್ಲೋ ಒಬ್ಬರು. ಆದರೆ ಈಗ ಆ ರೀತಿ ಅಲ್ಲ. ಈಗ ಇರುವ ಬುದ್ಧಿ ಸ್ಕೂಲ್‌ನಲ್ಲಿ ಇದ್ದಿದ್ದರೆ 100ಕ್ಕೆ ನೂರು ಅಂಕ ತೆಗೆದುಬಿಡುತ್ತಿದ್ದೆ ಎಂದು ಅನೇಕರು ಹೇಳುವುದುಂಟು. ಹಾಗಿದ್ರೆ ನಿಮಗೊಂದು ಚಾಲೆಂಜ್.‌ ಈ ಲೆಕ್ಕ ಬಿಡಿಸಿ, ಸರಿ ಉತ್ತರ ಹೇಳಿ ನೋಡೋಣ.

Survey World ಇನ್‌ಸ್ಟಾಗ್ರಾಮ್‌ ಪೇಜ್‌ ಪೋಸ್ಟ್‌

ಇದೊಂದು ಗಣಿತದ ಬ್ರೈನ್‌ ಟೀಸರ್ Survey World ಎಂಬ ಇನ್‌ಸ್ಟಾಗ್ರಾಮ್‌ ಪೇಜ್‌ನಲ್ಲಿ ಈ ಬ್ರೈನ್‌ ಟೀಸರ್‌ ಹಂಚಿಕೊಳ್ಳಲಾಗಿದೆ. ಈ ಪೇಜ್‌ನಲ್ಲಿ ಇದೂ ಸೇರಿ ಸಾಕಷ್ಟು ಗಣಿತದ ಪಜಲ್‌ಗಳಿವೆ. ಒಮ್ಮೆ ನೀವು ಇದರ ಒಳ ಹೊಕ್ಕರೆ ನಿಮ್ಮ ಬ್ರೈನ್‌ ಇನ್ನಷ್ಟು ಚಟುವಟಿಕೆಯಿಂದ ಕೂಡಿರುತ್ತದೆ. ಪ್ರಶ್ನೆ ಅರ್ಥ ಮಾಡಿಕೊಂಡು ಉತ್ತರ ಬಿಡಿಸಿದರೆ ನೀವು ದೊಡ್ಡ ಸಾಧನೆ ಮಾಡಿದಂತೆ. ಅಂದ ಹಾಗೆ ಪ್ರಶ್ನೆಯನ್ನು ಗಮನವಿಟ್ಟು ಓದಿ.

ನಾನು 5 ಲಕ್ಷ ಕೊಟ್ಟು ಒಂದು ಮನೆ ಖರೀದಿಸಿದೆ. ಅದನ್ನು 7 ಲಕ್ಷ ರೂಪಾಯಿಗೆ ಮಾರಿದೆ. ಮತ್ತೆ ಅದೇ ಮನೆಯನ್ನು 8 ಲಕ್ಷ ಕೊಟ್ಟು ಖರೀದಿಸಿ 10 ಲಕ್ಷಕ್ಕೆ ಮತ್ತೆ ಮಾರಿದೆ. ಹಾಗಿದ್ದರೆ ನಾನು ಒಟ್ಟು ಎಷ್ಟು ಲಾಭ ಗಳಿಸಿದಂತೆ ಆಯ್ತು? ಪ್ರಶ್ನೆ ಅರ್ಥ ಆಯ್ತಾ? ಕ್ಯಾಲ್ಕುಲೇಟರ್‌ ಇಲ್ಲದೆ ಈ ಲೆಕ್ಕ ಬಿಡಿಸಲು ಸಾಧ್ಯ ಎನಿಸುತ್ತಿದೆಯಾ? ಅಥವಾ ನೀವು ಬರೆದು, ಕ್ಯಾಲ್ಕುಲೇಟರ್‌ ಬಳಸಿ ಕೂಡಾ ಉತ್ತರ ನೀಡಬಹುದು. ಹಾಗಿದ್ರೆ ಶುರು ಮಾಡಿ. ನಿಮಗೆ ಸಮಯ ಇರುವುದು ಕೆಲವೇ ಸಕೆಂಡ್‌ಗಳು ಮಾತ್ರ.

ಮನೆ ಮಾಲೀಕ ಗಳಿಸಿದ ಲಾಭವೆಷ್ಟು?

ಈ ಪೋಸ್ಟರ್‌ ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಆಗುತ್ತಿದ್ದಂತೆ ಅನೇಕರು ಇದನ್ನು ತಮ್ಮ ಖಾತೆಗೆ ಹಂಚಿಕೊಂಡಿದ್ದಾರೆ. ಕೆಲವರು ಲೈಕ್‌ ಮಾಡಿದರೆ ಕೆಲವರು ಉತ್ತರ ಕಾಮೆಂಟ್‌ ಮಾಡಿದ್ದಾರೆ. ಹಾಗಿದ್ರೆ ಜನರು ಕೊಟ್ಟ ಉತ್ತರ ಎಷ್ಟು ನೋಡೋಣ ಬನ್ನಿ. ಈ ಪ್ರಶ್ನೆಯಲ್ಲಿ ಅನೇಕ ಉಪ ಪ್ರಶ್ನೆಗಳು ಅಡಗಿವೆ. ಆ ವ್ಯಕ್ತಿ ಶ್ರೀಮಂತನಲ್ಲದಿದ್ದರೂ ಅಷ್ಟು ದೊಡ್ಡ ಮೊತ್ತ ಕೊಟ್ಟು ಮನೆ ಖರೀದಿಸಬೇಕಾಯ್ತಾ? ಮತ್ತೆ 1 ಲಕ್ಷ ನಷ್ಟ ಮಾಡಿಕೊಂಡು ಮನೆ ಮಾರಿದ್ದು ಏಕೆ ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬರು ಕಾಮೆಂಟ್‌ ಮಾಡಿ ಆ ವ್ಯಕ್ತಿಗೆ 1 ಲಕ್ಷ ಲಾಭ ಬಂದಿದೆ ಎಂದು ಬರೆದಿದ್ದಾರೆ.

ಮೊದಲ ಬಾರಿ ಮನೆ ಮಾರಿ ಲಾಭ ಮಾಡಿಕೊಂಡು ಎರಡನೇ ಬಾರಿ ಖರೀದಿಸಿ ನಷ್ಟ ಮಾಡಿಕೊಂಡಿದ್ದಾನೆ. ಮೊದಲ ಬಾರಿ 2 ಲಕ್ಷ, ಎರಡನೇ ಬಾರಿ 1 ಲಕ್ಷ ಸೇರಿ ಒಟ್ಟು 3 ಲಕ್ಷ ಲಾಭ ಬಂದಿದೆ ಎಂದು ಇನ್‌ಸ್ಟಾಗ್ರಾಮ್‌ ಯೂಸರ್‌ ಕಾಮೆಂಟ್‌ ಮಾಡಿದ್ದಾರೆ. ಹಾಗಿದ್ದರೆ ನಿಮ್ಮ ಉತ್ತರ ಏನು? ಮನೆ ಮಾರಿದ ವ್ಯಕ್ತಿ ಕೊನೆಗೆ ಲಾಭ ಗಳಿಸಿದ್ದು ಎಷ್ಟು? ಅಥವಾ ಆತ 2 ಬಾರಿ ಮನೆ ಮಾರಿ ನಷ್ಟ ಅನುಭವಿಸಿದ್ದಾನಾ? ಕಾಮೆಂಟ್‌ ಮಾಡಿ.

ವಿಭಾಗ