Brain Teaser: ಎಲ್ಲವೂ 529 ಅಂದುಕೊಂಡ್ರಾ? 4 ಕಡೆ ಬೇರೆ ನಂಬರ್​ ಇದೆ, 10 ಸೆಕೆಂಡ್​​ನಲ್ಲಿ ಹುಡುಕಿ
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ಎಲ್ಲವೂ 529 ಅಂದುಕೊಂಡ್ರಾ? 4 ಕಡೆ ಬೇರೆ ನಂಬರ್​ ಇದೆ, 10 ಸೆಕೆಂಡ್​​ನಲ್ಲಿ ಹುಡುಕಿ

Brain Teaser: ಎಲ್ಲವೂ 529 ಅಂದುಕೊಂಡ್ರಾ? 4 ಕಡೆ ಬೇರೆ ನಂಬರ್​ ಇದೆ, 10 ಸೆಕೆಂಡ್​​ನಲ್ಲಿ ಹುಡುಕಿ

ಈ ಬ್ರೈನ್‌ ಟೀಸರ್‌ ಚಿತ್ರದಲ್ಲಿ ನಮ್ಮ ಕಣ್ಣಿಗೆ ಎಲ್ಲ ಕಡೆ 529 ಸಂಖ್ಯೆ ಇದೆ ಎಂದು ಕಾಣಿಸುತ್ತಿದೆ. ಆದರೆ ಇಲ್ಲಿ ಟ್ವಿಸ್ಟ್ ಏನಪ್ಪ ಅಂದ್ರೆ 4 ಕಡೆ 529 ಬದಲಾಗಿ ಬೇರೆ ಸಂಖ್ಯೆಗಳಿವೆ. ಅವು ಎಲ್ಲಿವೆ ಎಂದು ನೀವು ಹುಡುಕಬೇಕು.

ಬ್ರೈನ್‌ ಟೀಸರ್‌ ಚಿತ್ರ (PC:twitter/@hvgoenka)
ಬ್ರೈನ್‌ ಟೀಸರ್‌ ಚಿತ್ರ (PC:twitter/@hvgoenka)

ಸಾಮಾಜಿಕ ಜಾಲತಾಣದಲ್ಲಿ ಕೆಲವೊಮ್ಮೆ ವೈರಲ್​ ಆಗುವ ಬ್ರೈನ್‌ ಟೀಸರ್‌ಗಳು ನಿಜಕ್ಕೂ ತಲೆ ಕೆರೆದುಕೊಳ್ಳುವಂತೆ ಮಾಡುವುದು ಖಂಡಿತ. ಇವು ಮೇಲ್ನೋಟಕ್ಕೆ ಉತ್ತರ ಹುಡುಕುವುದು ಸುಲಭ ಅನ್ನಿಸಿದರೂ ಕೂಡ ಉತ್ತರ ಸಿಗದೇ ತಲೆಗೆ ಹುಳ ಬಿಟ್ಟುಕೊಳ್ಳುತ್ತೇವೆ. ಕೆಲವೊಮ್ಮೆ ಎಷ್ಟೇ ಬ್ರೇನ್​ ಉಪಯೋಗಿಸಿದರೂ ಉತ್ತರ ಕಂಡು ಹಿಡಿಯಲು ಆಗೋದೇ ಇಲ್ಲ. ಉತ್ತರ ಬೇಕಂದ್ರೆ ನಿಮಗೆ ಸ್ವಲ್ಪ ನಿಮಗೆ ತಾಳ್ಮೆ ಇರಬೇಕು. ಇಲ್ಲೊಂದು ಅಂತಹದ್ದೇ ಬ್ರೈನ್‌ ಟೀಸರ್‌ ಇದೆ. ಇದು ನಿಮ್ಮ ಮೆದುಳು ಎಷ್ಟು ಚುರುಕಾಗಿದೆ ಎಂಬುದನ್ನು ಪರೀಕ್ಷಿಸುತ್ತದೆ. ಉತ್ತರ ಹೇಳಿದವರು ನಿಜಕ್ಕೂ ಜಾಣರು. ಆದರೆ ಎಲ್ಲರಿಗೂ 10 ಸೆಕೆಂಡ್​​ನಲ್ಲಿ ಉತ್ತರ ಹುಡುಕೋಕೆ ಸಾಧ್ಯವಾಗಲ್ಲ.

ಆರ್​ಪಿಜಿ ಗ್ರೂಪ್‌ನ ಅಧ್ಯಕ್ಷ ಹರ್ಷ್ ಗೋಯೆಂಕಾ ಅವರು ತಮ್ಮ ಎಕ್ಸ್ (ಟ್ವಿಟರ್​) ಖಾತೆಯಲ್ಲಿ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ 10 ಉದ್ದ ಸಾಲುಗಳು, 24 ಅಡ್ಡ ಸಾಲುಗಳಿವೆ. ಎಲ್ಲ ಸಾಲಿನಲ್ಲಿಯೂ ಸಂಖ್ಯೆಗಳಿವೆ. ನಮ್ಮ ಕಣ್ಣಿಗೆ ಎಲ್ಲ ಕಡೆ 529 ಸಂಖ್ಯೆ ಇದೆ ಎಂದು ಕಾಣಿಸುತ್ತಿದೆ. ಆದರೆ ಇಲ್ಲಿ ಟ್ವಿಸ್ಟ್ ಏನಪ್ಪ ಅಂದ್ರೆ 4 ಕಡೆ 529 ಬದಲಾಗಿ ಬೇರೆ ಸಂಖ್ಯೆಗಳಿವೆ. ಅವು ಎಲ್ಲಿವೆ ಎಂದು ನೀವು ಹುಡುಕಬೇಕು.

ಹಾಗಂತ ಗಂಟೆಗಟ್ಟಲೆ ಅದನ್ನೇ ಹುಡುಕುತ್ತಾ ಕೂರೋದಲ್ಲ. ನಿಮಗಿರುವುದು ಕೇವಲ 10 ಸೆಕೆಂಡ್ ಸಮಯ​. ಅಷ್ಟರಲ್ಲಿ ನೀವು ಆ 4 ವಿಭಿನ್ನ ಸಂಖ್ಯೆಗಳನ್ನು ಪತ್ತೆ ಮಾಡಿ ಹೇಳಿ. ನಿಮ್ಮ ಪತ್ತೆದಾರಿ ಕೆಲಸ ಈಗ ಶುರು. 1, 2, 3, 4, 5, 6, 7, 8, 9...10. ನಿಮ್ಮ ಟೈಂ ಮುಗಿತು. ಹುಡುಕಿದ್ರಾ? ಹುಡುಕಿದ್ರೆ ನೀವೇ ಜಾಣರು. ನಿಮ್ಮ ಕಣ್ಣು ಮತ್ತು ಮೆದುಳು ಸಿಕ್ಕಾಪಟ್ಟೆ ಶಾರ್ಪ್​ ಇದೆ ಅಂತ ಅರ್ಥ.

ಈ ಪೋಸ್ಟ್​ಗೆ ಕಾಮೆಂಡ್​ ಮಾಡಿರುವ ಒಬ್ಬರು, ನಾನು ಕೇವಲ 4 ಸೆಕೆಂಡ್​​ನಲ್ಲಿ ಕಂಡುಹಿಡಿದೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ನಾನು ಎರಡನ್ನು ಮಾತ್ರ ಕಂಡುಹಿಡಿದೆ ಉಳಿದೆರಡು ಆಗಿಲ್ಲ ಎಂದಿದ್ದಾರೆ. ಮತ್ತೊಬ್ಬರು, ನಾನು ಎಲ್ಲವನ್ನೂ ಗುರುತಿಸಿದೆ ಆದರೆ 10 ಸೆಕೆಂಡ್​​ಗಿಂತ ಹೆಚ್ಚು ಸಮಯ ತೆಗೆದುಕೊಂಡೆ ಎಂದು ಹೇಳಿದ್ದಾರೆ.

ನಿಮಗೆ ಆ 4 ವಿಭಿನ್ನ ಸಂಖ್ಯೆಗಳು ಯಾವುದು ಅಂತಾ ಗೊತ್ತಾಗಿಲ್ವಾ? ನಾವೇ ಉತ್ತರ ಹೇಳ್ತೀವಿ ಕೇಳಿ. ಅಷ್ಟೊಂದು 529 ನಂಬರ್​​ಗಳ ಮಧ್ಯೆ 592, 295, 259, 229 ಸಂಖ್ಯೆಗಳಿವೆ. ಅದೇ 3 ಸಂಖ್ಯೆಗಳೇ ಅದಲು ಬದಲು ಆಗಿದ್ದರಿಂದ ನೋಡುಗರಿಗೆ ಗೊಂದಲವಾಗುತ್ತೆ. ಮತ್ತೊಮ್ಮೆ ಚಿತ್ರ ಗಮನಿಸಿ. ಈ ಬ್ರೈನ್‌ ಟೀಸರ್‌ ನಿಮಗೆ ಇಷ್ಟ ಆಗಿದ್ರೆ ನಿಮ್ಮ ಸ್ನೇಹಿತರಿಗೂ ಕಳಿಸಿ, ನೋಡೋಣ ಅವರೆಷ್ಟು ಶಾರ್ಪ್​ ಇದ್ದಾರೆ ಅಂತ.

Whats_app_banner