ಕನ್ನಡ ಸುದ್ದಿ  /  Lifestyle  /  Breakfast Recipe How To Prepare Masala Paratha At Home Snacks Recipe Different Chapati Recipe Rsa

Masala Paratha Recipe: ಅದೇ ಚಪಾತಿ ತಿಂದು ನಾಲಿಗೆ ಹೊಸ ರುಚಿ ಕೇಳ್ತಿದ್ಯಾ? ಈ ವಿಧಾನದಲ್ಲೊಮ್ಮೆ ಮಸಾಲಾ ಪರಾಠಾ ಟ್ರೈ ಮಾಡಿ ನೋಡಿ

Breakfast Recipe: ಎಲ್ಲರಿಗೂ ಇಷ್ಟವಾಗುವ ಹಾಗೆ ಅತ್ಯಂತ ಸುಲಭವಾಗಿ ಯಾವ ಉಪಹಾರ ತಯಾರಿಸಬಹುದು ಎಂಬ ಯೋಚನೆಯಲ್ಲಿ ನೀವಿದ್ದರೆ ಇಲ್ಲಿ ನಿಮಗೆ ಪರಿಹಾರವಿದೆ. ಸಖತ್ ರುಚಿಕರವಾದ ಸರಳವಾದ ಪದಾರ್ಥಗಳನ್ನು ಬಳಸಿ ತಯಾರಿಸುವ ಮಸಾಲಾ ಪರಾಠಾ ಮಾಡುವ ವಿಧಾನ ಇಲ್ಲಿದೆ ನೋಡಿ. ಇದು ಮಕ್ಕಳಿಗೆ ಮಾತ್ರವಲ್ಲ, ದೊಡ್ಡವರಿಗೂ ಬಹಳ ಇಷ್ಟವಾದ ತಿಂಡಿ.

ಮಸಾಲಾ ಪರಾಠ (ಸಾಂದರ್ಭಿಕ ಚಿತ್ರ)
ಮಸಾಲಾ ಪರಾಠ (ಸಾಂದರ್ಭಿಕ ಚಿತ್ರ) (PC: Unsplash)

Breakfast Recipe: ಒಂದೇ ಬಗೆಯ ಚಪಾತಿ ತಿಂದು ತಿಂದು ಬೋರಾಗುವುದು ಸಹಜ. ಹೀಗಾಗಿ ಏನಾದರೂ ವಿಭಿನ್ನವಾಗಿ ತಯಾರಿಸಬೇಕು ಎಂದುಕೊಂಡಿದ್ದರೆ ಖಂಡಿತವಾಗಿಯೂ ನೀವು ಮಸಾಲಾ ಪರಾಠವನ್ನು ತಯಾರಿಸಬಹುದಾಗಿದೆ. ಇದನ್ನು ನೀವು ಬೆಳಗ್ಗಿನ ಉಪಹಾರದಿಂದ ಹಿಡಿದು ರಾತ್ರಿಯ ಭೋಜನದವರೆಗೂ ನೀವು ಯಾವಾಗ ಬೇಕಿದ್ದರೂ ಇದನ್ನು ತಯಾರಿಸಿ ತಿನ್ನಬಹುದಾಗಿದೆ.

ಮಸಾಲಾ ಪರಾಠವು ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲರಿಗೂ ಇಷ್ಟವಾಗುವಂತಹ ತಿನಿಸಾಗಿದೆ. ಹೀಗಾಗಿ ನೀವು ಕೂಡ ಮನೆಯಲ್ಲಿ ಒಮ್ಮೆಯಾದರೂ ಮಸಾಲಾ ಪರಾಠಾ ತಯಾರಿಸಬೇಕು ಎಂದುಕೊಂಡಿದ್ದರೆ ಇದನ್ನು ತಯಾರಿಸುವ ವಿಧಾನ ಇಲ್ಲಿದೆ ನೋಡಿ.

ಮನೆಯಲ್ಲೇ ದೊರೆಯುವ ಪದಾರ್ಥಗಳಿಂದ ತಯಾರಿಸಬಹುದು

ಒಂದು ಪಾತ್ರೆಗೆ ಗೋಧಿ ಹಿಟ್ಟು ಹಾಗೂ ಸ್ವಲ್ಪ ಉಪ್ಪನ್ನು ಸೇರಿಸಿ. ಅಳತೆಗೆ ತಕ್ಕಷ್ಟು ನೀರನ್ನು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಿಸಿಕೊಳ್ಳಿ. ಈಗ ಗೋಧಿ ಹಿಟ್ಟು ಕಲಿಸಿದ ಪಾತ್ರೆಯನ್ನು ಬಟ್ಟೆಯಿಂದ ಮುಚ್ಚಿ 10 -15 ನಿಮಿಷಗಳ ಕಾಲ ಹಾಗೆಯೇ ಬಿಡಿ. ಈಗ ಇನ್ನೊಂದು ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ಆಮ್ಚೂರ್ ಪುಡಿ, ಜೀರಿಗೆ , ಕೊತ್ತಂಬರಿ ಪುಡಿ, ಅರಿಶಿಣ, ಖಾರದ ಪುಡಿ , ಗರಂ ಮಸಾಲಾ, ಕೊತ್ತಂಬರಿ ಸೊಪ್ಪು ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಮಿಶ್ರಣ ಮಾಡಿಟ್ಟುಕೊಳ್ಳಿ.

ಈಗ ನೀವು ಬಟ್ಟೆಯಲ್ಲಿ ಮುಚ್ಚಿಟ್ಟ ಹಿಟ್ಟುಗಳನ್ನು ತೆಗೆದುಕೊಂಡು ಸಮಾನ ಗಾತ್ರದ ಉಂಡೆಗಳನ್ನು ತಯಾರಿಸಿಕೊಳ್ಳಬೇಕು. ದೊಡ್ಡ ನಿಂಬೆ ಗಾತ್ರದಲ್ಲಿ ಉಂಡೆಗಳನ್ನು ತಯಾರಿಸಿಕೊಳ್ಳಿ.ಈಗ ಒಣ ಹಿಟ್ಟನ್ನು ಮೊದಲು ಸಿಂಪಡಿಸಿಕೊಂಡು ಅದರ ಮೇಲೆ ಹಿಟ್ಟಿನ ಉಂಡೆಯನ್ನಿಟ್ಟು ಸಣ್ಣದೊಂದು ವೃತ್ತಾಕಾರದಲ್ಲಿ ನಾದಿ. ಹಿಟ್ಟಿನ ಮಧ್ಯ ಭಾಗಕ್ಕೆ ನೀವು ತಯಾರಿಸಿಟ್ಟುಕೊಂಡ ಮಸಾಲಾವನ್ನು ಸ್ವಲ್ಪ ಸೇರಿಸಿ. ಮಸಾಲಾವನ್ನು ತುಂಬಿದ ಬಳಿಕ ಈಗ ಪರಾಠಾ ಹದಕ್ಕೆ ಒತ್ತಿಕೊಳ್ಳಿ.

ಮಸಾಲೆ ಹೊರ ಬಾರದಂತೆ ಒತ್ತಿಕೊಳ್ಳಿ

ಪರಾಠಾವನ್ನು ಒತ್ತುವ ಸಂದರ್ಭದಲ್ಲಿ ಮಸಾಲೆ ಹೊರ ಬಾರದಂತೆ ನೋಡಿಕೊಳ್ಳಬೇಕು, ಕೈಯಲ್ಲಿ ಸ್ವಲ್ಪವೇ ಹಿಟ್ಟನ್ನು ಒತ್ತುತ್ತಾ ಪರಾಠಾ ಆಕೃತಿಯನ್ನು ತರಬೇಕು. ಈಗ ತವಾವನ್ನು ಮಧ್ಯಮ ಉರಿಯಲ್ಲಿ ಬಿಸಿ ಮಾಡಿಕೊಳ್ಳಿ. ಈಗ ನೀವು ಚೆನ್ನಾಗಿ ನಾದಿಕೊಂಡ ಪರಾಠಾವನ್ನು ಬಿಸಿ ಬಿಸಿ ತವಾ ಮೇಲೆ ಇರಿಸಿ ಕೆಲವು ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಿಕೊಳ್ಳಿ.

ಪರಾಠಾ ಬೇಯಿಸುವ ಸಂದರ್ಭದಲ್ಲಿ ಅದರ ಮೇಲ್ಮೈ ಮೇಲೆ ಸ್ವಲ್ಪ ತುಪ್ಪವನ್ನು ಹಾಕಿ ಸವರಿಕೊಳ್ಳಿ. ಪರಾಠಾದ ಎರಡೂ ಕಡೆಯೂ ಹೊಂಬಣ್ಣಕ್ಕೆ ತಿರುಗುವವರೆಗೂ ತವಾದ ಮೇಲೆ ಕಾಯಿಸುತ್ತಲೇ ಇರಿ. ಪರಾಠಾದ ಎರಡೂ ಕಡೆಗಳು ಹೊಂಬಣ್ಣಕ್ಕೆ ತಿರುಗಿದ ಬಳಿಕ ಇದನ್ನು ಬೇರೆ ತಟ್ಟೆಗೆ ಹಾಕಿ. ಇದನ್ನು ನೀವು ಬಿಸಿ ಬಿಸಿ ಇರುವಾಗಲೇ ಚಟ್ನಿ, ಮೊಸರು ಅಥವಾ ಉಪ್ಪಿನ ಕಾಯಿಯ ಜೊತೆಯಲ್ಲಿ ಸವಿಯಲು ನೀಡಬಹುದು .

ವಿಭಾಗ