ಕಚ್ಚಾತೈಲ ಬೆಲೆ ಬ್ಯಾರೆಲ್‌ಗೆ 80 ಡಾಲರ್‌ ದಾಟಿತು, ಪೆಟ್ರೋಲ್‌, ಡೀಸೆಲ್ ದರ ಇಳಿಕೆ ಆದೀತಾ, ಹೀಗಿದೆ ಈಗಿನ ದರ
ಕನ್ನಡ ಸುದ್ದಿ  /  ಜೀವನಶೈಲಿ  /  ಕಚ್ಚಾತೈಲ ಬೆಲೆ ಬ್ಯಾರೆಲ್‌ಗೆ 80 ಡಾಲರ್‌ ದಾಟಿತು, ಪೆಟ್ರೋಲ್‌, ಡೀಸೆಲ್ ದರ ಇಳಿಕೆ ಆದೀತಾ, ಹೀಗಿದೆ ಈಗಿನ ದರ

ಕಚ್ಚಾತೈಲ ಬೆಲೆ ಬ್ಯಾರೆಲ್‌ಗೆ 80 ಡಾಲರ್‌ ದಾಟಿತು, ಪೆಟ್ರೋಲ್‌, ಡೀಸೆಲ್ ದರ ಇಳಿಕೆ ಆದೀತಾ, ಹೀಗಿದೆ ಈಗಿನ ದರ

ಇರಾನ್ - ಇಸ್ರೇಲ್ ಸಂಘರ್ಷ, ಮಧ್ಯ ಪ್ರಾಚ್ಯ ಬಿಕ್ಕಟ್ಟಿನ ನಡುವೆ ಕಳೆದ 15 ದಿನಗಳ ಅವಧಿಯಲ್ಲಿ ಕಚ್ಚಾ ತೈಲ ಬೆಲೆ 10 ಡಾಲರ್‌ನಷ್ಟು ಏರಿಕೆಯಾಗಿದೆ. ಸದ್ಯ, ಕಚ್ಚಾತೈಲ ಬೆಲೆ ಬ್ಯಾರೆಲ್‌ಗೆ 80 ಡಾಲರ್‌ ದಾಟಿದ್ದು, ಪೆಟ್ರೋಲ್‌, ಡೀಸೆಲ್ ದರ ಇಳಿಕೆ ಸಾಧ್ಯತೆಯನ್ನು ಮಸುಕಾಗಿಸಿದೆ. ಭಾರತದ ವಿವಿಧ ರಾಜ್ಯಗಳಲ್ಲಿ ಸದ್ಯ ಇರುವ ಪೆಟ್ರೋಲ್, ಡೀಸೆಲ್‌ ದರ ವಿವರ ಹೀಗಿದೆ.

ಕಚ್ಚಾತೈಲ ಬೆಲೆ ಬ್ಯಾರೆಲ್‌ಗೆ 80 ಡಾಲರ್‌ ದಾಟಿದ್ದು, ಪೆಟ್ರೋಲ್‌, ಡೀಸೆಲ್ ದರ ಇಳಿಕೆ ಸಾಧ್ಯತೆಯನ್ನು ಕಡಿಮೆ ಮಾಡಿದೆ. (ಸಾಂಕೇತಿಕ ಚಿತ್ರ)
ಕಚ್ಚಾತೈಲ ಬೆಲೆ ಬ್ಯಾರೆಲ್‌ಗೆ 80 ಡಾಲರ್‌ ದಾಟಿದ್ದು, ಪೆಟ್ರೋಲ್‌, ಡೀಸೆಲ್ ದರ ಇಳಿಕೆ ಸಾಧ್ಯತೆಯನ್ನು ಕಡಿಮೆ ಮಾಡಿದೆ. (ಸಾಂಕೇತಿಕ ಚಿತ್ರ) (LH)

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆಯ ನಿರೀಕ್ಷೆಗೆ ಕಚ್ಚಾ ತೈಲ ದರ ಹೊಡೆತ ನೀಡಿದೆ. ಕಳೆದ ಸೆಪ್ಟೆಂಬರ್ 27 ರಿಂದ ಕಚ್ಚಾ ತೈಲ ಬೆಲೆ ಗಗನಮುಖಿಯಾಗಿದೆ. ಈ ಅವಧಿಯಲ್ಲಿ, ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ ಸುಮಾರು 10 ಡಾಲರ್‌ ಹೆಚ್ಚಾಗಿದೆ. ಸೆಪ್ಟೆಂಬರ್ 27 ರ ಮೊದಲು, ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 70 ಡಾಲರ್‌ ಇತ್ತು. ಆ ಸಂದರ್ಭದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಅಗ್ಗವಾಗುವ ನಿರೀಕ್ಷೆಯನ್ನು ಹೆಚ್ಚಿಸಿತ್ತು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಬ್ಲೂಮ್‌ಬರ್ಗ್ ಎನರ್ಜಿ ಪ್ರಕಟಿಸಿದ ಇತ್ತೀಚಿನ ದರದ ಪ್ರಕಾರ, ಬ್ರೆಂಟ್ ಕ್ರೂಡ್‌ನ ಡಿಸೆಂಬರ್ ಫ್ಯೂಚರ್ಸ್ ಪ್ರತಿ ಬ್ಯಾರೆಲ್‌ಗೆ 80.70 ಡಾಲರ್‌ ಆಗಿದೆ. ಆದರೆ, ಡಬ್ಲ್ಯುಟಿಐನ ನವೆಂಬರ್ ಫ್ಯೂಚರ್ಸ್ ಪ್ರತಿ ಬ್ಯಾರೆಲ್‌ಗೆ 76.93 ಡಾಲರ್‌ ಇತ್ತು. ಸಂಘರ್ಷದ ಕಾರಣದಿಂದಾಗಿ ಇರಾನ್‌ನ ತೈಲ ಪೂರೈಕೆ ಕಡಿಮೆಯಾದರೆ, ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 20 ಅಮೆರಿಕನ್ ಡಾಲರ್‌ ಹೆಚ್ಚಾಗುತ್ತದೆ ಎಂದು ಗೋಲ್ಡ್‌ಮನ್ ಸ್ಯಾಚ್ಸ್ ಅಂದಾಜಿಸಿದೆ. ಒಪೆಕ್‌+ ನ ಹೆಚ್ಚುವರಿ ಸಾಮರ್ಥ್ಯವು ಪೂರೈಕೆ ನಷ್ಟಗಳನ್ನು ಸಣ್ಣ ಪ್ರಮಾಣದಲ್ಲಿ ಸರಿದೂಗಿಸಬಹುದು. ಇದರಿಂದ ಬೆಲೆ ಏರಿಕೆ ತಡೆಯುವ ಕೆಲಸ ಕಷ್ಟ ಸಾಧ್ಯ ಎಂದು ವರದಿ ವಿವರಿಸಿದೆ. ಏತನ್ಮಧ್ಯೆ, ತೈಲ ಮಾರುಕಟ್ಟೆ ಪೆಟ್ರೋಲಿಯಂ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಬಿಡುಗಡೆ ಮಾಡಿದೆ. ಇಂದಿಗೂ ಇದರಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಕಚ್ಚಾ ತೈಲದ ಮೇಲೆ ಭಾರತದ ಕಣ್ಣು

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಪಶ್ಚಿಮ ಏಷ್ಯಾದಲ್ಲಿ ಬೆಳೆಯುತ್ತಿರುವ ಬಿಕ್ಕಟ್ಟಿನಿಂದಾಗಿ ಜಾಗತಿಕ ಕಚ್ಚಾ ತೈಲ ಬೆಲೆ ಏರಿಕೆಯಾಗುತ್ತಿದ್ದು, ಭಾರತವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ಯಾವುದೇ ಸವಾಲುಗಳನ್ನು ನಿಭಾಯಿಸುವ ಸಂಪೂರ್ಣ ವಿಶ್ವಾಸ ಹೊಂದಿದೆ ಎಂದು ಹೇಳಿದ್ಧಾರೆ.

ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚಾದರೆ, ಲಭ್ಯತೆಯ ಮೇಲೆ ಪರಿಣಾಮ ಬೀರಬಹುದು. "ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ" ಎಂದು ಸಚಿವ ಪುರಿ ಅವರು ಎಕ್ಸಾನ್‌ಮೊಬಿಲ್ ಗ್ಲೋಬಲ್ ಔಟ್‌ಲುಕ್ 2024 ರ ಕಾರ್ಯಕ್ರಮದಲ್ಲಿ ಭಾಗವಹಿಸಿದ ವೇಳೆ ಹೇಳಿದರು.

ಪೆಟ್ರೋಲ್, ಡೀಸೆಲ್‌ ದರ ಎಲ್ಲಿ ಎಷ್ಟಿದೆ

ಇಂಡಿಯನ್ ಆಯಿಲ್ ಪ್ರಕಾರ, ಇಂದು ಅಕ್ಟೋಬರ್ 8 ರಂದು ದೆಹಲಿಯಲ್ಲಿ ಪೆಟ್ರೋಲ್ ಬೆಲೆ 94.72 ರೂ. ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 87.62 ರೂ. ಪೋರ್ಟ್ ಬ್ಲೇರ್‌ನಲ್ಲಿ ಒಂದು ಲೀಟರ್ ಪೆಟ್ರೋಲ್ 82.42 ರೂ.ಗೆ ಮತ್ತು ಡೀಸೆಲ್ 78.01 ರೂ.ಗೆ ಲಭ್ಯವಿದೆ. ಲಕ್ನೋದಲ್ಲಿ ಇಂದು ಪೆಟ್ರೋಲ್ ಬೆಲೆ 94.65 ರೂ ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ 87.76 ರೂ. ಅಂಡಮಾನ್ ನಿಕೋಬಾರ್ ನಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ ಕೇವಲ 82.42 ರೂ. ಆದರೆ, ಡೀಸೆಲ್ ಪ್ರತಿ ಲೀಟರ್‌ಗೆ 78.01 ರೂ. ಇದೆ. ಲೈವ್ ಮಿಂಟ್ ಮಾಹಿತಿ ಪ್ರಕಾರ ಕರ್ನಾಟಕ, ತಮಿಳುನಾಡು ಸೇರಿ ರಾಜ್ಯಗಳಲ್ಲಿ ಚಾಲ್ತಿಯಲ್ಲಿರುವ ಪೆಟ್ರೋಲ್ ಮತ್ತು ಡೀಸೆಲ್ ದರ ವಿವರ ಹೀಗಿದೆ.

ರಾಜ್ಯಪೆಟ್ರೋಲ್ ದರ ಲೀಟರ್ (ರೂಪಾಯಿ)ಡೀಸೆಲ್ ಬೆಲೆ ಲೀಟರ್ (ರೂಪಾಯಿ)
ಕರ್ನಾಟಕ102.8688.94
ಅಂಡಮಾನ್ ನಿಕೋಬಾರ್82.4278.01
ಆಂಧ್ರ ಪ್ರದೇಶ108.2996.17
ಅರುಣಾಚಲ ಪ್ರದೇಶ90.9280.44
ಅಸ್ಸಾಂ97.1489.38
ಬಿಹಾರ105.1892.04
ಚಂಡೀಗಢ94.2482.40
ಛತ್ತೀಸ್‌ಗಡ100.3993.33
ದಾದರ್ - ನಗರ್ ಹವೇಲಿ92.5188.00
ದಾಮನ್‌- ಡಿಯು92.3287.81
ದೆಹಲಿ94.7287.62
ಗೋವಾ96.5288.29
ಗುಜರಾತ್ 94.7190.39
ಹರಿಯಾಣ94.2482.40
ಕೇರಳ107.5696.43
ಮಹಾರಾಷ್ಟ್ರ103.4489.97
ತಮಿಳುನಾಡು100.7592.34
ತೆಲಂಗಾಣ107.4195.65
ಒಡಿಶಾ101.0692.64