FSSAI certificate: ಕರ್ನಾಟಕದಲ್ಲಿ ಎಫ್‌ಎಸ್‌ಎಸ್‌ಎಐ ಸರ್ಟಿಫಿಕೇಟ್‌ ಪಡೆಯುವುದು ಹೇಗೆ? ಫುಡ್‌ ಬಿಸ್ನೆಸ್‌ ಮಾಡುವವರಿಗೆ ಉಪಯುಕ್ತ ಮಾಹಿತಿ
ಕನ್ನಡ ಸುದ್ದಿ  /  ಜೀವನಶೈಲಿ  /  Fssai Certificate: ಕರ್ನಾಟಕದಲ್ಲಿ ಎಫ್‌ಎಸ್‌ಎಸ್‌ಎಐ ಸರ್ಟಿಫಿಕೇಟ್‌ ಪಡೆಯುವುದು ಹೇಗೆ? ಫುಡ್‌ ಬಿಸ್ನೆಸ್‌ ಮಾಡುವವರಿಗೆ ಉಪಯುಕ್ತ ಮಾಹಿತಿ

FSSAI certificate: ಕರ್ನಾಟಕದಲ್ಲಿ ಎಫ್‌ಎಸ್‌ಎಸ್‌ಎಐ ಸರ್ಟಿಫಿಕೇಟ್‌ ಪಡೆಯುವುದು ಹೇಗೆ? ಫುಡ್‌ ಬಿಸ್ನೆಸ್‌ ಮಾಡುವವರಿಗೆ ಉಪಯುಕ್ತ ಮಾಹಿತಿ

How to apply fssai certificate online?: ಕರ್ನಾಟಕದಲ್ಲಿ ಅಥವಾ ಭಾರತದ ಇತರೆ ರಾಜ್ಯಗಳಲ್ಲಿ ಆಹಾರ ಬಿಸ್ನೆಸ್‌ ಮಾಡುವವರು foscos.fssai.gov.in ವೆಬ್‌ಸೈಟ್‌ ಮೂಲಕ ನೋಂದಣಿ ಸರ್ಟಿಫಿಕೇಟ್‌ ಅಥವಾ ಲೈಸನ್ಸ್‌ಗೆ ಅರ್ಜಿ ಸಲ್ಲಿಸಬಹುದು. ವಾರ್ಷಿಕ 12 ಲಕ್ಷ ರೂಗಿಂತ ಕಡಿಮೆ ಅಥವಾ ಹೆಚ್ಚಿನ ಫುಡ್‌ ಬಿಸ್ನೆಸ್‌ ಮಾಡುವವರು ತಪ್ಪದೇ ಈ ಮಾಹಿತಿ ತಿಳಿದುಕೊಳ್ಳಿ.

FSSAI certificate ಕರ್ನಾಟಕದಲ್ಲಿ ಎಫ್‌ಎಸ್‌ಎಸ್‌ಎಐ ಸರ್ಟಿಫಿಕೇಟ್‌ ಪಡೆಯುವುದು ಹೇಗೆ
FSSAI certificate ಕರ್ನಾಟಕದಲ್ಲಿ ಎಫ್‌ಎಸ್‌ಎಸ್‌ಎಐ ಸರ್ಟಿಫಿಕೇಟ್‌ ಪಡೆಯುವುದು ಹೇಗೆ (Canva food Photos)

FSSAI certificate: ಭಾರತದಲ್ಲಿ ಯಾವುದೇ ಫುಡ್‌ ಬಿಸ್ನೆಸ್‌ ಮಾಡಬೇಕಿದ್ದರೆ ಎಫ್‌ಎಸ್‌ಎಸ್‌ಎಐ ಸರ್ಟಿಫಿಕೇಟ್‌ ಪಡೆಯುವುದು ಕಡ್ಡಾಯವಾಗಿದೆ. ಆಹಾರ ತಯಾರಿಕೆ, ಆಹಾರ ಸಂಗ್ರಹ, ಆಹಾರ ಸಾಗಾಟ ಮತ್ತು ವಿತರಣೆ ಮುಂತಾದ ವ್ಯವಹಾರದಲ್ಲಿ ತೊಡಗುವವರು ಈ ಪ್ರಮಾಣಪತ್ರವನ್ನು ಪಡೆಯಬೇಕು. ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ನಿಯಂತ್ರಣ ಪ್ರಾಧಿಕಾರವು ಈ ಪ್ರಮಾಣ ಪತ್ರವನ್ನು ನೀಡುತ್ತದೆ. ವ್ಯವಹಾರದ ಪ್ರಮಾಣ ಮತ್ತು ವಿಧಗಳಿಗೆ ತಕ್ಕಂತ ಎಫ್‌ಎಸ್‌ಎಸ್‌ಎಐಯು ವಿವಿಧ ಬಗೆಯ ಪ್ರಮಾಣ ಪತ್ರಗಳನ್ನು ನೀಡುತ್ತದೆ.

ಯಾರು ನೋಂದಣಿ ಸರ್ಟಿಫಿಕೇಟ್‌ ಪಡೆಯಬೇಕು?

ಸಣ್ಣ ಪ್ರಮಾಣದಲ್ಲಿ ವ್ಯವಹಾರ ಉದ್ದೇಶಕ್ಕಾಗಿ ಆಹಾರ ತಯಾರಿಸುವವರು ಅಂದರೆ ಬೀದಿಬದಿ ವ್ಯಾಪಾರಿಗಳು, ಸಂಚಾರಿ ಮಾರಾಟಗಾರರು, ತಾತ್ಕಾಲಿಕವಾಗಿ ಸ್ಟಾಲ್‌ ಹಾಕುವವರು ಅಥವಾ 12 ಲಕ್ಷ ರೂಪಾಯಿಯೊಳಗೆ ವಾರ್ಷಿಕ ವಹಿವಾಟು ಹೊಂದಿರುವ ಸಣ್ಣ ಅಥವಾ ಸಾಮಾನ್ಯ ಪ್ರಮಾಣದ ತಯಾರಕರು ಎಫ್‌ಎಸ್‌ಎಸ್‌ಎಐನಲ್ಲಿ ನೋಂದಣಿ ಸರ್ಟಿಫಿಕೇಟ್‌ ಪಡೆಯಬೇಕು.

ಯಾರು ಲೈಸನ್ಸ್‌ ಪಡೆಯಬೇಕು?

ವಾರ್ಷಿಕವಾಗಿ 12 ಲಕ್ಷ ರೂಪಾಯಿಗಿಂತ ಹೆಚ್ಚು ಮೊತ್ತದ ಫುಡ್‌ ಬಿಸ್ನೆಸ್‌ ಮಾಡುವವರು ಎಫ್‌ಎಸ್‌ಎಸ್‌ಎಐ ಲೈಸನ್ಸ್‌ಗೆ ಅರ್ಜಿ ಸಲ್ಲಿಸಬೇಕು.

ಎಫ್‌ಎಸ್‌ಎಸ್‌ಎಐ ಸರ್ಟಿಫಿಕೇಟ್‌ಗೆ ಅರ್ಜಿ ಸಲ್ಲಿಸುವುದು ಹೇಗೆ?

ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಇದಕ್ಕಾಗಿ ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ನಿಯಂತ್ರಣ ಪ್ರಾಧಿಕಾರ ಫುಡ್‌ ಲೈಸನ್ಸಿಂಗ್‌ ಆಂಡ್‌ ರಿಜಿಸ್ಟ್ರೇಷನ್‌ ಸಿಸ್ಟಮ್‌ (FLRS) ಮೂಲಕ ಅರ್ಜಿ ಸಲ್ಲಿಸಬೇಕು. ಇದೇ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಕೆ ಅನುಮತಿ ಪ್ರಕ್ರಿಯೆಯನ್ನು ಟ್ರ್ಯಾಕ್‌ ಮಾಡಬಹುದು. ಎಸ್‌ಎಂಎಸ್‌, ಇಮೇಲ್‌ ಮೂಲಕವೂ ಅಲರ್ಟ್‌ ದೊರಕುತ್ತದೆ.

ಎಫ್‌ಎಸ್‌ಎಸ್‌ಎಐ ನೋಂದಣಿಗೆ ಯಾವೆಲ್ಲ ದಾಖಲೆಗಳು ಬೇಕು?

ಈಗಾಗಲೇ ಹೇಳಿದಂತೆ ಬೀದಿಬದಿ ವ್ಯಾಪಾರಿಗಳು, ಸಂಚಾರಿ ಮಾರಾಟಗಾರರು, ತಾತ್ಕಾಲಿಕವಾಗಿ ಸ್ಟಾಲ್‌ ಹಾಕುವವರು ಅಥವಾ 12 ಲಕ್ಷ ರೂಪಾಯಿಯೊಳಗೆ ವಾರ್ಷಿಕ ವಹಿವಾಟು ಹೊಂದಿರುವ ಸಣ್ಣ ಅಥವಾ ಸಾಮಾನ್ಯ ಪ್ರಮಾಣದ ಆಹಾರ ಬಿಸ್ನೆಸ್‌ ಹೊಂದಿರುವವರು ಎಫ್‌ಎಸ್‌ಎಸ್‌ಎಐ ನೋಂದಣಿ ಈ ಮುಂದಿನ ದಾಖಲೆಗಳನ್ನು ಸಲ್ಲಿಸಬೇಕು.

- ಮಾಲೀಕರ ವಿಳಾಸ ದಾಖಲೆ

- ಪಾಸ್‌ಪೋರ್ಟ್‌ ಗಾತ್ರದ ಫೋಟೋ

- ವ್ಯವಹಾರದ ಹೆಸರು ತಮ್ತು ವಿಳಾಸ ಮಾಹಿತಿ

- ಎಫ್‌ಎಸ್‌ಎಸ್‌ಎಐ ಡಿಕ್ಲರೇಷನ್‌ ಫಾರ್ಮ್‌

ಕರ್ನಾಟಕದಲ್ಲಿ ಎಫ್‌ಎಸ್‌ಎಸ್‌ಎಐ ಸರ್ಟಿಫಿಕೇಟ್‌ ಪಡೆಯಲು ಯಾವೆಲ್ಲ ದಾಖಲೆಗಳು ಬೇಕು?

- ಡಿಕ್ಲರೇಷನ್‌ ಫಾರ್ಮ್‌

- ಅಥಾರಿಟಿಯ ಲೆಟರ್‌

- ಬಾಡಿಗೆ ಪ್ರಾಪರ್ಟಿಯಲ್ಲಿದ್ದರೆ ಬಾಡಿಗೆ ಒಪ್ಪಂದದ ಪ್ರತಿ

- ಫುಡ್‌ ಸೇಫ್ಟಿ ಮ್ಯಾನೇಜ್‌ಮೆಂಟ್‌ ಸಿಸ್ಟಮ್‌ ಪ್ಲ್ಯಾನ್‌ ಅಥವಾ ಸರ್ಟಿಫಿಕೇಟ್‌

- ವ್ಯವಹಾರ ಸ್ಥಳದ ವಿದ್ಯುತ್‌/ನೀರಿನ ಬಿಲ್‌

- ಮಾಲೀಕರು/ಪಾಲುದಾರರು/ನಿರ್ದೇಶಕರ ಐಡೆಂಟೆಟಿ ಕಾರ್ಡ್‌

- ನಮೂನೆ IX

ಮೊಬೈಲ್‌ನಲ್ಲಿಯೂ ಅರ್ಜಿ ಸಲ್ಲಿಸಬಹುದು?

ಆಸಕ್ತರು ಮೊಬೈಲ್‌ನಲ್ಲಿಯೇ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ಗೂಗಲ್‌ ಪ್ಲೇ ಸ್ಟೋರ್‌ಗೆ ಹೋಗಿ Food Safety Connect App ಡೌನ್‌ಲೋಡ್‌ ಮಾಡಿಕೊಳ್ಳಿ. ಅಲ್ಲಿ ಕೇಳಲಾಗುವ ಮಾಹಿತಿಯನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಬಹುದು.

ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಬಯಸುವವರು foscos.fssai.gov.in ವೆಬ್‌ಸೈಟ್‌ ಮೂಲಕ ಅರ್ಜಿ ಸಲ್ಲಿಸಬಹುದು. ಎಫ್‌ಎಸ್‌ಎಸ್‌ಎಐ ಸರ್ಟಿಫಿಕೇಟ್‌ ಪಡೆಯಲು ಈ ವೆಬ್‌ ವಿಳಾಸವನ್ನು ಎಚ್ಚರಿಕೆಯಿಂದ ಗಮನಿಸಿ. ವೆಬ್‌ಸೈಟ್‌ನ ವಿಳಾಸದಲ್ಲಿ gov ಎಂದು ಇರುವುದನ್ನು ಖಚಿತಪಡಿಸಿಕೊಳ್ಳಿ. ವಿವಿಧ ಖಾಸಗಿ ಸಂಸ್ಥೆಗಳು ಕಮಿಷನ್‌ ಪಡೆದು ಈ ರೀತಿಯ ಸರ್ಟಿಫಿಕೇಟ್‌ ಪಡೆಯಲು ಸಹಾಯ ಮಾಡುತ್ತವೆ. ಆದರೆ, ಆನ್‌ಲೈನ್‌ ಮೂಲಕ ನೀವೇ ಸುಲಭವಾಗಿ ಅರ್ಜಿ ಸಲ್ಲಿಸಬಹುದು.

Whats_app_banner