Business Ideas: 10 ಸಾವಿರ ರೂಗಿಂತ ಕಡಿಮೆ ಹೂಡಿಕೆಯ ಬಿಸ್ನೆಸ್‌ ಐಡಿಯಾಗಳು; ಸಣ್ಣದಾಗಿ ಆರಂಭಿಸಿ, ದೊಡ್ಡದಾಗಿ ಬೆಳೆಯಿರಿ
ಕನ್ನಡ ಸುದ್ದಿ  /  ಜೀವನಶೈಲಿ  /  Business Ideas: 10 ಸಾವಿರ ರೂಗಿಂತ ಕಡಿಮೆ ಹೂಡಿಕೆಯ ಬಿಸ್ನೆಸ್‌ ಐಡಿಯಾಗಳು; ಸಣ್ಣದಾಗಿ ಆರಂಭಿಸಿ, ದೊಡ್ಡದಾಗಿ ಬೆಳೆಯಿರಿ

Business Ideas: 10 ಸಾವಿರ ರೂಗಿಂತ ಕಡಿಮೆ ಹೂಡಿಕೆಯ ಬಿಸ್ನೆಸ್‌ ಐಡಿಯಾಗಳು; ಸಣ್ಣದಾಗಿ ಆರಂಭಿಸಿ, ದೊಡ್ಡದಾಗಿ ಬೆಳೆಯಿರಿ

Business Ideas under Rs. 10000: ಈ ಜಗತ್ತಿನಲ್ಲಿ ಕೆಲವರು ಸಣ್ಣ ಹೂಡಿಕೆಯಿಂದ ಆರಂಭಿಸಿ ದೊಡ್ಡಮಟ್ಟದಲ್ಲಿ ಬೆಳೆದಿದ್ದಾರೆ. ಸಾಧಿಸುವ ಛಲ, ಹಠ ಇದ್ದರೆ ಅತ್ಯಂತ ಕಡಿಮೆ ಬಜೆಟ್‌ನಿಂದಲೂ ಬಿಸ್ನೆಸ್‌ ಆರಂಭಿಸಬಹುದು. ಅಂತಹ ಕೆಲವು ಬಿಸ್ನೆಸ್‌ ಐಡಿಯಾಗಳನ್ನು ಇಲ್ಲಿ ನೀಡಲಾಗಿದೆ.

Business Ideas: 10 ಸಾವಿರ ರೂಗಿಂತ ಕಡಿಮೆ ಹೂಡಿಕೆಯ ಬಿಸ್ನೆಸ್‌ ಐಡಿಯಾಗಳು
Business Ideas: 10 ಸಾವಿರ ರೂಗಿಂತ ಕಡಿಮೆ ಹೂಡಿಕೆಯ ಬಿಸ್ನೆಸ್‌ ಐಡಿಯಾಗಳು

Business Ideas under Rs. 10000: ಸ್ವಂತ ವ್ಯವಹಾರ ಮಾಡಬೇಕೆಂದರೆ ಎಷ್ಟು ಹಣವಿದ್ದರೂ ಸಾಲದು. ಐದು ಹತ್ತು ಲಕ್ಷ ರೂಪಾಯಿ ಇದ್ರೂ ಬಿಸ್ನೆಸ್‌ ಮಾಡುವುದು ಕಷ್ಟ ಎನ್ನುವವರು ಇರಬಹುದು. ಬೆಂಗಳೂರಿನಂತಹ ನಗರಗಳಲ್ಲಿ ಒಂದು ಸಣ್ಣ ಕೊಠಡಿ ಬಾಡಿಗೆಗೆ ಪಡೆಯಲು ಅಡ್ವಾನ್ಸ್‌ ಹಲವು ಲಕ್ಷ ರೂಪಾಯಿ ನೀಡಬೇಕು. ಅಂಗಡಿಯೊಳಗಿನ ಐಟಂ, ಮೆಷಿನ್‌ ಅಥವಾ ಇತರೆ ಸಾಮಾಗ್ರಿಗಳಿಗೆ ಇನ್ನು ಹಲವು ಲಕ್ಷ ರೂಪಾಯಿ ಬೇಕು. ಚಂದದ ಒಂದು ಹೋಟೆಲ್‌ ಇಡೋಣವೆಂದರೂ ಹಲವು ಲಕ್ಷ ರೂಪಾಯಿ ಬೇಕಿರುತ್ತದೆ. ಇಂತಹ ಸಮಯದಲ್ಲಿ ಹತ್ತು ಸಾವಿರ ರೂಪಾಯಿ ಹೂಡಿಕೆಯಿಂದ ಬಿಸ್ನೆಸ್‌ ಮಾಡಲು ಸಾಧ್ಯವೇ ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು. ಈ ಜಗತ್ತಿನಲ್ಲಿ ಕೆಲವರು ಸಣ್ಣ ಹೂಡಿಕೆಯಿಂದ ಆರಂಭಿಸಿ ದೊಡ್ಡಮಟ್ಟದಲ್ಲಿ ಬೆಳೆದಿದ್ದಾರೆ. ಸಾಧಿಸುವ ಛಲ, ಹಠ ಇದ್ದರೆ ಅತ್ಯಂತ ಕಡಿಮೆ ಬಜೆಟ್‌ನಿಂದಲೂ ಬಿಸ್ನೆಸ್‌ ಆರಂಭಿಸಬಹುದು. ಹತ್ತು ಸಾವಿರ ರೂಪಾಯಿಯೊಳಗೆ ಉಪ್ಪಿನಕಾಯಿ ತಯಾರಿಸುವುದು, ಮಸಾಲಾ ವಸ್ತುಗಳನ್ನು ತಯಾರಿಸುವುದು, ಕೈಯಿಂದ ತಯಾರಿಸಿದ ಜುವೆಲ್ಲರಿ, ಕರಕುಶಲ ವಸ್ತುಗಳ ಮಾರಾಟ, ಆನ್‌ಲೈನ್‌ ಟ್ಯೂಟರಿಂಗ್‌, ಬರವಣಿಗೆ, ವಿನ್ಯಾಸ, ಮನೆಯಲ್ಲಿಯೇ ತಯಾರಿಸಿದ ತಿಂಡಿ ತಿನಿಸುಗಳ ಮಾರಾಟ, ಲೋಕಲ್‌ ಡೆಲಿವರಿ ಸೇವೆ ಸೇರಿದಂತೆ ಹಲವು ವ್ಯವಹಾರಗಳು, ಉದ್ಯೋಗಗಳು ಕಡಿಮೆ ಹೂಡಿಕೆ ಬಯಸುತ್ತವೆ.

ಬಿಸ್ನೆಸ್‌ ಮಾಡಲು ನಿಮ್ಮಲ್ಲಿ ಯಾವ ಕೌಶಲ ಇದೆ ಎಂದು ತಿಳಿಯಿರಿ. ನಿಮ್ಮಲ್ಲಿ ಇರುವ ಸ್ಕಿಲ್‌ ಕೋಟಿ ರೂಪಾಯಿ ಹೂಡಿಕೆ ಮಾಡುವವನಲ್ಲಿಯೂ ಇಲ್ಲದೆ ಇರಬಹುದು. ಸ್ಥಳೀಯವಾಗಿ ಜನರಿಗೆ ಏನು ಅಗತ್ಯವಿದೆ ಎಂದು ತಿಳಿಯರಿ. ಆನ್‌ಲೈನ್‌ ಮಾರುಕಟ್ಟೆಗಳ ಪ್ರಯೋಜನ ಪಡೆಯಿರಿ. ಸಣ್ಣದಾಗಿ ಆರಂಭಿಸಿ, ದೊಡ್ಡದಾಗಿ ಬೆಳೆಯಿರಿ.

10 ಸಾವಿರ ರೂಗಿಂತ ಕಡಿಮೆ ಹೂಡಿಕೆಯ ಬಿಸ್ನೆಸ್‌ ಐಡಿಯಾ

ಆಹಾರ ಆಧರಿತವಾಗಿ ಸಾಕಷ್ಟು ಬಿಸ್ನೆಸ್‌ ಮಾಡಬಹುದು. ಸಾಮಾನ್ಯವಾಗಿ ಕಡಿಮೆ ಶಿಕ್ಷಣ ಹೊಂದಿರುವವರೂ ಅದ್ಭುತವಾಗಿ ಆಹಾರ ತಯಾರಿಸಬಲ್ಲರು. ಮನೆಯಲ್ಲಿ ಅಜ್ಜಿಯಿಂದ ಕಲಿತ ಅಡುಗೆ ಈಗ ನಿಮಗೂ ತಿಳಿದಿರಬಹುದು. ಈ ಅಡುಗೆಯ ರುಚಿಗೆ ಮನೆಯಲ್ಲಿ, ಕುಟುಂಬದವರಲ್ಲಿ ಆಗಾಗ ಹೊಗಳಿಕೆಯ ಮಾತುಗಳು ಕೇಳುತ್ತ ಬಂದಿರಬಹುದು. ಹೀಗಾಗಿ, ಅಡುಗೆ ಆಧರಿತ ಬಿಸ್ನೆಸ್‌ ಮಾಡಬಹುದು.

ಆಹಾರ ಆಧರಿತ ಬಿಸ್ನೆಸ್‌ಗಳು

- ಮನೆಯಲ್ಲಿಯೇ ತಯಾರಿಸಿದ ಉಪ್ಪಿನಕಾಯಿ, ಚಟ್ನಿ, ಚಟ್ನಿ ಪುಡಿ ಮಾರಾಟ

- ಬೇಕರಿ ಆಹಾರಗಳು (ಕುಕ್ಕೀಸ್‌, ಕೇಕ್‌)

- ಜ್ಯೂಸ್‌ನಂಗಡಿ- ಕಡಿಮೆ ಬಾಡಿಗೆಯಲ್ಲಿ ಅಂಗಡಿ ಸಿಕ್ಕರೆ ಒಂದು ಜ್ಯೂಸ್‌ನಂಗಡಿ ಇಡಬಹುದು. ದೊಡ್ಡ ನಗರಗಳಲ್ಲಿ ಕಷ್ಟವಾದರೂ ಸಣ್ಣ ಪಟ್ಟಣಗಳಲ್ಲಿ ಈ ಬಿಸ್ನೆಸ್‌ ಆರಂಭಿಸಬಹುದು. ಮೊದಲು ಸಣ್ಣದಾಗಿ ಆರಂಭಿಸಿ, ಜ್ಯೂಸ್‌ ಚೆನ್ನಾಗಿದ್ದರೆ ಮತ್ತೆ ಗ್ರಾಹಕರ ಸಂಖ್ಯೆ ಹೆಚ್ಚಬಹುದು.

- ಸಣ್ಣ ಪ್ರಮಾಣದ ಕೇಟರಿಂಗ್-‌ ಈಗ ಪಟ್ಟಣಗಳಲ್ಲಿ ಮಾತ್ರವಲ್ಲದೆ ಹಳ್ಳಿಗಳಲ್ಲಿಯ ಕೇಟರಿಂಗ್‌ಗೆ ಬೇಡಿಕೆ ಇದೆ. ನೀವು ನಿಮ್ಮ ಮನೆಯಲ್ಲಿಯೇ ಸಣ್ಣಮಟ್ಟದ ಕೇಟರಿಂಗ್‌ ವ್ಯವಹಾರ ಆರಂಭಿಸಬಹುದು. ಅಡುಗೆ ತಯಾರಿಸಲು ಬೇಕಾದ ಕೆಲವು ಸಾಮಾಗ್ರಿಗಳು ಮನೆಯಲ್ಲಿಯೇ ಇರುವುದರಿಂದ ಹೆಚ್ಚು ಖರ್ಚು ಇರದು.

ಕರಕುಶಲ ವಸ್ತುಗಳು

- ಕೈಯಲ್ಲಿಯೇ ತಯಾರಿಸಿದ ಕ್ರಾಫ್ಟ್‌ಗಳು

- ಕೈಯಲ್ಲಿಯೇ ತಯಾರಿಸಿದ ಆಭರಣಗಳು

- ಅಲಂಕಾರಿಕ ವಸ್ತುಗಳು

- ಹ್ಯಾಂಡ್‌ಮೇಡ್‌ ಪೇಪರ್‌ ಬ್ಯಾಗ್‌ಗಳು

ಸರ್ವೀಸ್‌ ಆಧರಿತ ಬಿಸ್ನೆಸ್‌ಗಳು

- ಆನ್‌ಲೈನ್‌ ಟ್ಯೂಟರಿಂಗ್‌

- ಫ್ರೀಲ್ಯಾನ್ಸ್‌ ರೈಟಿಂಗ್‌ ಅಥವಾ ಗ್ರಾಫಿಕ್‌ ಡಿಸೈನ್‌

- ಲೋಕಲ್‌ ಡೆಲಿವರಿ ಸರ್ವೀಸ್‌

- ಸಣ್ಣ ಪ್ರಮಾಣದ ಇವೆಂಟ್‌ ಪ್ಲ್ಯಾನಿಂಗ್‌

ಡಿಜಿಟಲ್‌ ಬಿಸ್ನೆಸ್‌ಗಳು

- ಬ್ಲಾಗಿಂಗ್‌, ಕಂಟೆಂಟ್‌ ಕ್ರಿಯೇಷನ್‌, ಯೂಟ್ಯೂಬ್‌

- ಸೋಷಿಯಲ್‌ ಮೀಡಿಯಾ ಮ್ಯಾನೇಜ್‌ಮೆಟ್‌

- ಅಫಿಲಿಯೇಟ್‌ ಮಾರ್ಕೆಟಿಂಗ್‌

- ಆನ್ಲೈನ್‌ ಆರ್ಟ್‌ ಕ್ಲಾಸ್‌

- ವೆಬ್‌ಸೈಟ್‌ ಡಿಸೈನ್‌: ನೀವು ವೆಬ್‌ಡಿಸೈನ್‌ನಂತಹ ಕೋರ್ಸ್‌ ಕಲಿತಿದ್ದರೆ ಮನೆಯಲ್ಲಿಯೇ ಕುಳಿತು ಫ್ರೀಲ್ಯಾನ್ಸ್‌ ವೆಬ್‌ ಡಿಸೈನ್‌ ಮಾಡಬಹುದು.

ಇಲ್ಲಿ ನೀಡಲಾಗಿರುವುದು ಉದಾಹರಣೆಯಷ್ಟೇ. ನೀವು ಇರುವ ಊರು, ಸ್ಥಳದ ಅವಶ್ಯಕತೆ ಗಮನಿಸಿ. ಅಲ್ಲಿ ಯಾವ ರೀತಿಯ ವ್ಯವಹಾರಕ್ಕೆ ಬೇಡಿಕೆ ಇದೆ ಎಂದು ಪರಿಶೀಲಿಸಿ. ಅದಕ್ಕೆ ತಕ್ಕಂತೆ ಯೋಜನೆ ರೂಪಿಸಬಹುದು. ಇಲ್ಲಿ ಹತ್ತು ಸಾವಿರ ರೂಪಾಯಿ ಎನ್ನುವುದು ಸಾಂಕೇತಿಕ ಅಷ್ಟೇ. ಅದಕ್ಕಿಂತ ಕಡಿಮೆ ಅಥವಾ ಹೆಚ್ಚು ಹಣವಿದ್ದರೆ ಅದಕ್ಕೆ ತಕ್ಕಂತೆ ಮುಂದುವರೆಯಿರಿ. ಶುಭವಾಗಲಿ.

Whats_app_banner