ಹಿರಿಯ ಉದ್ಯಮಿ ರತನ್ ಟಾಟಾ ಅವರಿಗೆ 8 ವರ್ಷದ ಅವಧಿಯಲ್ಲಿ ಶೇಕಡ 23000 ರಿಟರ್ನ್ಸ್ ಕೊಟ್ಟ ಸ್ಟಾಕ್ ಇದು
ಕನ್ನಡ ಸುದ್ದಿ  /  ಜೀವನಶೈಲಿ  /  ಹಿರಿಯ ಉದ್ಯಮಿ ರತನ್ ಟಾಟಾ ಅವರಿಗೆ 8 ವರ್ಷದ ಅವಧಿಯಲ್ಲಿ ಶೇಕಡ 23000 ರಿಟರ್ನ್ಸ್ ಕೊಟ್ಟ ಸ್ಟಾಕ್ ಇದು

ಹಿರಿಯ ಉದ್ಯಮಿ ರತನ್ ಟಾಟಾ ಅವರಿಗೆ 8 ವರ್ಷದ ಅವಧಿಯಲ್ಲಿ ಶೇಕಡ 23000 ರಿಟರ್ನ್ಸ್ ಕೊಟ್ಟ ಸ್ಟಾಕ್ ಇದು

ಅಪ್‌ಸ್ಟಾಕ್ಸ್ ಕಂಪನಿಯ ಷೇರುಗಳು ಹಿರಿಯ ಉದ್ಯಮಿ ರತನ್ ಟಾಟಾ ಅವರಿಗೆ 8 ವರ್ಷದ ಅವಧಿಯಲ್ಲಿ 23000 ರಿಟರ್ನ್ಸ್ ಕೊಟ್ಟಿದೆ. ಈ ಮಲ್ಟಿಬ್ಯಾಗರ್ ಕಂಪನಿಯ ವಹಿವಾಟು, ರತನ್ ಟಾಟಾ ಅವರ ಹೂಡಿಕೆಯ ಕುರಿತ ಒಂದು ಕಿರುನೋಟ.

ಹಿರಿಯ ಉದ್ಯಮಿ ರತನ್ ಟಾಟಾ ಅವರಿಗೆ 8 ವರ್ಷದ ಅವಧಿಯಲ್ಲಿ 23000 ರಿಟರ್ನ್ಸ್ ಕೊಟ್ಟ ಸ್ಟಾಕ್ ಇದು.
ಹಿರಿಯ ಉದ್ಯಮಿ ರತನ್ ಟಾಟಾ ಅವರಿಗೆ 8 ವರ್ಷದ ಅವಧಿಯಲ್ಲಿ 23000 ರಿಟರ್ನ್ಸ್ ಕೊಟ್ಟ ಸ್ಟಾಕ್ ಇದು.

ಮುಂಬಯಿ: ಹಿರಿಯ ಉದ್ಯಮಿ ರತನ್ ಟಾಟಾ ಅವರ ಪಾಲಿಗೆ ಷೇರು ಮಾರುಕಟ್ಟೆ ಹೂಡಿಕೆ ಕಂಪನಿ ಅಪ್‌ಸ್ಟಾಕ್ಸ್‌ ಮಲ್ಟಿಬ್ಯಾಗರ್‌. ಅವರು ಈ ಕಂಪನಿಯಲ್ಲಿ ತಮ್ಮ ಒಟ್ಟು ಷೇರುಗಳ ಪೈಕಿ ಶೇಕಡ 5 ಅನ್ನು ಮಾರಾಟ ಮಾಡಿದ್ದಾರೆ. ಈ ಷೇರುಗಳು ಕಳೆದ 8 ವರ್ಷಗಳ ಅವಧಿಯಲ್ಲಿ ಅವರಿಗೆ ಶೇಕಡ 23,000ಕ್ಕೂ ಹೆಚ್ಚು ಲಾಭವನ್ನು ತಂದುಕೊಟ್ಟಿವೆ. ರತನ್ ಟಾಟಾ ಈ ಷೇರುಗಳನ್ನು ಕಂಪನಿಗೆ ಬೈಬ್ಯಾಕ್ ಒಪ್ಪಂದದಲ್ಲಿ ಮಾರಾಟ ಮಾಡಿದ್ದಾರೆ. ಅವರು ತಮ್ಮ ಆರಂಭಿಕ ಹೂಡಿಕೆಯ 10 ಪಟ್ಟು ಹೆಚ್ಚು ಆದಾಯವನ್ನು ಪಡೆದಿದ್ದಾರೆ. ರತನ್ ಟಾಟಾ ಅವರು 2016 ರಲ್ಲಿ ಅಪ್‌ಸ್ಟಾಕ್ಸ್‌ನ ಶೇಕಡ 1.33 ಪಾಲನ್ನು ಖರೀದಿಸಿದ್ದರು. ಈ ಮಾರಾಟದ ನಂತರವೂ ರತನ್ ಟಾಟಾ ಅವರು ಈ ಕಂಪನಿಯಲ್ಲಿ ತಮ್ಮ ಒಟ್ಟು ಷೇರುಗಳ 95 ಪ್ರತಿಶತವನ್ನು ಹೊಂದಿದ್ದಾರೆ.

ರತನ್ ಟಾಟಾ ಅವರ ಹೂಡಿಕೆಗೆ ಭರ್ಜರಿ ಲಾಭ

ರತನ್ ಟಾಟಾ ಅವರು 2016 ರಲ್ಲಿ ಅಪ್‌ಸ್ಟಾಕ್ಸ್‌ನಲ್ಲಿ ಹೂಡಿಕೆ ಮಾಡಿದ್ದರು.ಅವರು 3.5 ಶತಕೋಟಿ ಡಾಲರ್‌ ಮೌಲ್ಯದಲ್ಲಿ ಕಂಪನಿಗೆ ಮರುಖರೀದಿಯ ಸಮಯದಲ್ಲಿ ತಮ್ಮ ಪಾಲನ್ನು ಮಾರಾಟ ಮಾಡಿದ್ದಾರೆ. ರತನ್ ಟಾಟಾ ಅವರು ತಮ್ಮ ಹೂಡಿಕೆಯ ಮೇಲೆ ಶೇಕಡಾ 23400 ರಷ್ಟು ಲಾಭವನ್ನು ಪಡೆದಿದ್ದಾರೆ ಎಂದು ಕಂಪನಿಯು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಅಪ್‌ಸ್ಟಾಕ್ಸ್ ಸಹ-ಸಂಸ್ಥಾಪಕ ಕವಿತ್ ಸುಬ್ರಮಣ್ಯಂ ಅವರು ಉದ್ಯಮಿ ರತನ್ ಟಾಟಾ ಅವರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ. “ದೇಶದ ಗೌರವಾನ್ವಿತ ಉದ್ಯಮಿ ರತನ್ ಟಾಟಾ ಅವರು ನಮ್ಮ ಉದ್ಯಮ ಪ್ರಯಾಣದ ಪ್ರಮುಖ ಭಾಗವಾಗಿದ್ದಾರೆ ಎಂಬುದು ನಮಗೆ ಹೆಮ್ಮೆಯ ವಿಷಯ. ಆರಂಭಿಕ ಹಂತದಲ್ಲಿ ಅವರ ನಂಬಿಕೆಯು ನಮ್ಮ ನೈತಿಕತೆಯನ್ನು ಹೆಚ್ಚಿಸಿತು. ಅವರ ಸಲಹೆ ಸರಳವಾಗಿದ್ದು ನಮಗೆ ಬಹಳ ಮುಖ್ಯವಾಗಿತ್ತು" ಎಂದು ಹೇಳಿದ್ದಾರೆ.

ಕಂಪನಿಯ ಆರ್ಥಿಕ ಸ್ಥಿತಿ ಹೇಗಿದೆ?

ಅಪ್‌ಸ್ಟಾಕ್ಸ್ ಕಂಪನಿಯ ನಿವ್ವಳ ಲಾಭ ಕಳೆದ ವರ್ಷ (2023) 25 ಕೋಟಿ ರೂಪಾಯಿ. ಕಂಪನಿಯ ಆದಾಯುವು ಆಗಸ್ಟ್‌ ವರೆಗಿನ ವರದಿ ಪ್ರಕಾರ, 1,000 ಕೋಟಿ ರೂಪಾಯಿ. 27 ಲಕ್ಷ ಸಕ್ರಿಯ ಬಳಕೆದಾರರನ್ನು ಕಂಪನಿ ಹೊಂದಿದೆ. ಷೇರುಪೇಟೆಯಲ್ಲಿ ಹೂಡಿಕೆ ಮಾಡುವ ಅಪ್‌ಸ್ಟಾಕ್ಸ್ ಕಂಪನಿಯನ್ನು 2009ರಲ್ಲಿ ಸ್ಥಾಪಿಸಲಾಗಿದ್ದು, ಸಹ ಸಂಸ್ಥಾಪಕ ರವಿ ಕುಮಾರ್ ಅವರ ಆರ್‌ಕೆಎಸ್‌ವಿ ಸೆಕ್ಯುರಿಟೀಸ್‌, ಸಹ ಸಂಸ್ಥಾಪಕರಾದ ರಘು ಕುಮಾರ್‌, ಶ್ರೀನಿ ವಿಶ್ವನಾಥ್‌, ಕವಿತಾ ಸುಬ್ರಹ್ಮಣ್ಯಂ ಇದರಲ್ಲಿ ಆರಂಭಿಕ ಹೂಡಿಕೆಯನ್ನು ಮಾಡಿದ್ದಾರೆ. 2024ರ ವರದಿ ಪ್ರಕಾರ, ಈ ಕ್ಷೇತ್ರದಲ್ಲಿ ಗ್ರೋವ್‌ (Groww), ಜೆರೋದಾ, ಏಂಜೆಲ್‌ವನ್‌ ನಂತರ ಅಪ್‌ಸ್ಟಾಕ್ಸ್‌ ಮತ್ತು ಐಸಿಐಸಿಐ ಡೈರೆಕ್ಟ್‌ ಟಾಪ್ 5 ಕಂಪನಿಗಳ ಪಟ್ಟಿಯಲ್ಲಿವೆ.