ಯಪಿಐ ಮೊಬೈಲ್‌ ಆ್ಯಪ್‌‌ನಲ್ಲಿ ತಪ್ಪಾಗಿ ಹಣ ಕಳುಹಿಸಿದ್ರಾ? ಚಿಂತೆಬೇಡ, ನಿಮ್ಮ ದುಡ್ಡು ಹಿಂಪಡೆಯಬಹುದು
ಕನ್ನಡ ಸುದ್ದಿ  /  ಜೀವನಶೈಲಿ  /  ಯಪಿಐ ಮೊಬೈಲ್‌ ಆ್ಯಪ್‌‌ನಲ್ಲಿ ತಪ್ಪಾಗಿ ಹಣ ಕಳುಹಿಸಿದ್ರಾ? ಚಿಂತೆಬೇಡ, ನಿಮ್ಮ ದುಡ್ಡು ಹಿಂಪಡೆಯಬಹುದು

ಯಪಿಐ ಮೊಬೈಲ್‌ ಆ್ಯಪ್‌‌ನಲ್ಲಿ ತಪ್ಪಾಗಿ ಹಣ ಕಳುಹಿಸಿದ್ರಾ? ಚಿಂತೆಬೇಡ, ನಿಮ್ಮ ದುಡ್ಡು ಹಿಂಪಡೆಯಬಹುದು

How To Reverse UPI Transaction: ತಪ್ಪಾದ ವ್ಯಕ್ತಿಗೆ ಕಳುಹಿಸಿದ ಹಣವು ಖಾತೆಯಿಂದ ಡೆಬಿಟ್‌ ಆಯ್ತು ಎಂದು ಬಿಟ್ಟುಬಿಡುವವರೇ ಹೆಚ್ಚು. ಆದರೆ, ಯುಪಿಐ ಪಾವತಿ ವಿಧಾನದಲ್ಲಿ ಒಬ್ಬರಿಗೆ ಕಳುಹಿಸಲಾದ ಹಣವನ್ನು ಮತ್ತೆ ಹಿಂದಕ್ಕೆ ಪಡೆಯಬಹುದು.

ಯಪಿಐ ಮೊಬೈಲ್‌ ಆ್ಯಪ್‌‌ನಲ್ಲಿ ತಪ್ಪಾಗಿ ಹಣ ಕಳುಹಿಸಿದ ಹಣ ಹಿಂಪಡೆಯುವುದು ಹೇಗೆ?
ಯಪಿಐ ಮೊಬೈಲ್‌ ಆ್ಯಪ್‌‌ನಲ್ಲಿ ತಪ್ಪಾಗಿ ಹಣ ಕಳುಹಿಸಿದ ಹಣ ಹಿಂಪಡೆಯುವುದು ಹೇಗೆ?

ಯುಪಿಐ (UPI- ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್) ಪಾವತಿ ವಿಧಾನ ಈ ಕಾಲದ ಟ್ರೆಂಡ್‌. ಸಣ್ಣ ಸಣ್ಣ ಅಂಗಡಿಗಳಿಂದ ಹಿಡಿದು, ದೊಡ್ಡ ದೊಡ್ಡ ಮಾಲ್‌ಗಳವರೆಗೂ ಎಲ್ಲಾ ಕಡೆ ಯುಪಿಐ ಪೇಮೆಂಟ್‌ ವಿಧಾನ ಬಳಸುವವವರೇ ಹೆಚ್ಚು. ಪರಿಚಿತರಿಗೆ ಮಾತ್ರವಲ್ಲದೆ ಕೆಲವೊಮ್ಮೆ ಅಪರಿಚಿತರಿಗೂ ಹಣ ಕಳುಹಿಸಲು ಯುಪಿಐ ಅಪಪ್ಲಿಕೇಶನ್‌ಗಳನ್ನು ಬಳಸುತ್ತೇವೆ. ಆದರೆ, ಕೆಲವೊಮ್ಮೆ ಸಣ್ಣ ಗೊಂದಲ ಅಥವಾ ಗಡಿಬಿಡಿಯಿಂದಾಗಿ ತಪ್ಪಾದ ವ್ಯಕ್ತಿಗಳಿಗೆ ಹಣ ಕಳುಹಿಸಿ, ದುಡ್ಡು ಕಳೆದುಕೊಳ್ಳುವವರಿದ್ದಾರೆ.

ಯುಪಿಐ ಎಂದರೇನು?

ಯುಪಿಐ ಎಂಬುದು ಅತ್ಯಂತ ಜನಪ್ರಿಯ ಪಾವತಿ ವಿಧಾನವಾಗಿದೆ. ಭಾರತದಲ್ಲಿ ಪ್ರತಿದಿನ ಲಕ್ಷಾಂತರ ಜನರು ಈ ವಿಧಾನದಲ್ಲಿ ಹಣದ ವ್ಯವಹಾರ ಮಾಡುತ್ತಾರೆ. ಇದು ಬಳಸಲು ಸುಲಭ ಮಾತ್ರವಲ್ಲದೆ ವೇಗ ಮತ್ತು ಸುರಕ್ಷಿತವಾಗಿದೆ. ಫೋನ್‌ ಪೇ, ಪೇಟಿಎಂ, ಗೂಗಲ್‌ ಪೇ ಮೊದಲಾದ ಅಪ್ಲಿಕೇಶನ್‌ಗಳು ಯುಪಿಐ ಪೇಮೆಂಟ್ಸ್‌ಗೆ ಜನಪ್ರಿಯವಾಗಿವೆ. ಈ ವಿಧಾನದಿಂದ ಮೊಬೈಲ್ ಮೂಲಕ ಬ್ಯಾಂಕ್ ಖಾತೆಗಳ ನಡುವೆ ಹಣವನ್ನು ತ್ವರಿತವಾಗಿ ಮತ್ತು ಉಚಿತವಾಗಿ ವರ್ಗಾಯಿಸಬಹುದು.

ತಪ್ಪಾದ ಖಾತೆಗೆ ಹರ್ಣ ವರ್ಗಾವಣೆಯಾದರೆ ಏನು ಮಾಡಬೇಕು?

ತಪ್ಪಾದ ವ್ಯಕ್ತಿಗೆ ಕಳುಹಿಸಿದ ಹಣವು, ತಮ್ಮ ಖಾತೆಯಿಂದ ಡೆಬಿಟ್‌ ಆಯ್ತು ಎಂದು ಬಿಟ್ಟುಬಿಡುವವರೇ ಹೆಚ್ಚು. ಆದರೆ, ಯುಪಿಐ ಪಾವತಿ ವಿಧಾನದಲ್ಲಿ ಒಬ್ಬರಿಗೆ ಕಳುಹಿಸಲಾದ ಹಣವನ್ನು ಮತ್ತೆ ಹಿಂದಕ್ಕೆ ಪಡೆಯಬಹುದು. ಯುಪಿಐ ಪಾವತಿ ವಿಧಾನವು ತುಸು ಸಂಕೀರ್ಣ ಪ್ರಕ್ರಿಯೆ. ಅಲ್ಲದೆ ಪಾವತಿಯನ್ನು ಹಿಂತಿರುಗಿಸುವುದು ಆಯಾ ಬ್ಯಾಂಕ್ ಅಥವಾ ಪಾವತಿ ಸೇವಾ ಪೂರೈಕೆದಾರರ ನೀತಿ ನಿಬಂಧನೆಗಳು ಸೇರಿದಂತೆ ವಿವಿಧ ಅಂಶಗಳ ಮೇಲೆ ಅವಲಂಬಿಸಿವೆ.

ತುರ್ತು ಸಂದರ್ಭಗಳಲ್ಲಿ ಯುಪಿಐ ಪಾವತಿ ಮಾಡಿದ ಬಳಿಕ, ಆ ಟ್ರಾನ್ಸಾಕ್ಷನ್‌ ಐಡಿ, ದಿನಾಂಕ ಮತ್ತು ಪಾವತಿ ಮಾಡಿದ ಮೊತ್ತ ಸೇರಿದಂತೆ ನಾವು ಮಾಡಿದ ವಹಿವಾಟನ್ನು ಮರೆಯುವವರೇ ಹೆಚ್ಚು. ಹೀಗಾಗಿ ಹಲವು ಸಂದರ್ಭಗಳಲ್ಲಿ ಹಣ ಹಿಂದಕ್ಕೆ ಪಡೆಯುವ ಪ್ರಯತ್ನಕ್ಕೆ ಹಲವರು ಮುಂದಾಗುವುದಿಲ್ಲ.

ನಿಯಮಗಳೇನು?

ಯುಪಿಐ ವಿಧಾನದಿಂದ ಪಾವತಿ ಮಾಡಿದ ಹಣ ಮತ್ತೆ ನಮ್ಮ ಖಾತೆಗೆ ಜಮೆಯಾಗಬೇಕಾದರೆ, ಖಂಡಿತವಾಗಿಯೂ ಕೆಲವೊಂದು ನಬಂಧನೆಗಳಿವೆ. ಆ ನಿರ್ಧಿಷ್ಟ ಟ್ರಾನ್ಸಾಕ್ಷನ್‌ ಮಾಡಲಾದ ಯುಪಿಐ ಸೇವಾ ಪೂರೈಕೆದಾರರ (ಸಾಮಾನ್ಯವಾಗಿ ಫೋನ್‌ ಪೇ ಗೂಗಲ್‌ ಪೇನಂಥ ಅಪ್ಲಿಕೇಶನ್‌ಗಳ) ಪಾವತಿ ನೀತಿ, ಮತ್ತು ನಿಮ್ಮಬ್ಯಾಕ್‌ ಖಾತೆಯ ನಿಬಂಧನೆಗಳನ್ನು ಅವಲಂಬಿಸಿರುತ್ತದೆ ಎಂಬುದನ್ನು ಗಮನಿಸುವುದು ಮುಖ್ಯ.

ಆಕಸ್ಮಿಕವಾಗಿ ತಪ್ಪಾದ ವ್ಯಕ್ತಿಗಳಿಗೆ ಮಾಡಲಾಗುವ ಹಣ ವರ್ಗಾವಣೆಗಳು ಅಥವಾ ಅನಧಿಕೃತ ಟ್ರಾನ್ಸಾಕ್ಷನ್‌ಗಳನ್ನು ರಿವರ್ಸಲ್ ಅಥವಾ ಕ್ಯಾನ್ಸಲ್‌ ಮಾಡಲು ಮನವಿ ಸಲ್ಲಿಸಬಹುದು ಎಂದು ಇನ್-ಸೊಲ್ಯೂಷನ್ಸ್ ಗ್ಲೋಬಲ್ ಇದರ ಡೊಮೆಸ್ಟಿಕ್ ಸಿಇಒ ಅನುಪ್ ನಾಯರ್ ಹೇಳಿದ್ದಾರೆ. ಆದರೆ, ಇದರ ಯಶಸ್ಸಿಗೆ ತ್ವರಿತವಾಗಿ ನೀವು ಮುನ್ನಡೆಯಬೇಕು. ಬ್ಯಾಂಕ್ ಅಥವಾ ಯುಪಿಐ ಸೇವಾ ಪೂರೈಕೆದಾರರನ್ನು ಸಂಪರ್ಕಿಸಿ, ರಿವರ್ಸಲ್‌ಗಾಗಿ ವಿವರವಾದ ಮಾಹಿತಿಯನ್ನು ಒದಗಿಸುವುದು ಅತ್ಯಗತ್ಯ.

ಯಾವ ಸಂದರ್ಭಗಳಲ್ಲಿ ಯುಪಿಐ ಪಾವತಿ ಹಿಂಪಡೆಯಬಹುದು?

  • ಆಕಸ್ಮಿಕವಾಗಿ ತಪ್ಪು ಯುಪಿಐ ಐಡಿ ಅಥವಾ ಮೊಬೈಲ್ ಸಂಖ್ಯೆಗೆ ಹಣವನ್ನು ಕಳುಹಿಸಿದಾಗ
  • ಅನಧಿಕೃತ ಪಾವತಿ ಮಾಡಿದಾಗ
  • ಮೋಸದಿಂದ ನಿಮ್ಮಿಂದ ಯಾರಾದರು ಹಣ ಪಾವತಿ ಮಾಡಿಸಿಕೊಂಡಾಗ
  • ಕಳುಹಿಸಿದ ಹಣ ಸ್ವೀಕರಿಸಿದವರ ಖಾತೆಗೆ ಇನ್ನೂ ಜಮೆ ಆಗದಿದ್ದಾಗ
  • ತಾಂತ್ರಿಕ ದೋಷದಿಂದ ಟ್ರಾನ್ಸಾಕ್ಷನ್‌ ವಿಫಲವಾದಾಗ

“ವಂಚಕರು ಮೋಸದಿಂದ ಹಣ ಕಳುಹಿಸಿಕೊಂಡಾಗ ಅಂಥಾ ಸಂದರ್ಭದಲ್ಲಿ BHIM/NPCI ಕಸ್ಟಮರ್‌ ಕೇರ್‌ಗೆ ವಂಚನೆಯ ದೂರು ನೀಡುವುದು ಮುಖ್ಯ. ಆದರೆ, ಹಣವು ಯಶಸ್ವಿಯಾಗಿ ಹಿಂತಿರುಗಿಸುವ ಯಾವುದೇ ಗ್ಯಾರಂಟಿ ಇರುವುದಿಲ್ಲ. ಹೀಗಾಗಿ ಅಂಥಾ ಸಂದರ್ಭಗಳನ್ನು ತಪ್ಪಿಸುವುದು ಮುಖ್ಯ. ಹಣ ಸ್ವೀಕರಿಸುವವರ ವಿವರಗಳನ್ನು ಪರಿಶೀಲಿಸುವುದು, ಸರಿಯಾದ ಮೊತ್ತವನ್ನು ನಮೂದಿಸುವುದು ಮತ್ತು ಅಪರಿಚಿತರೊಂದಿಗೆ ಜಾಗರೂಕರಾಗಿರುವುದು ಸೇರಿದಂತೆ ಮುನ್ನೆಚ್ಚರಿಕೆ ವಹಿಸುವುದು ನಿರ್ಣಾಯಕ,” ಎಂದು ನಾಯರ್ ಹೇಳಿದ್ದಾರೆ.

ತ್ವರಿತ ಕ್ರಮ ಅತ್ಯಗತ್ಯ

ಯುಪಿಐ ಪಾವತಿಯನ್ನು ರಿವರ್ಸ್ ಮಾಡಬೇಕಾದರೆ, ಸಾಧ್ಯವಾದಷ್ಟು ಬೇಗ ಬ್ಯಾಂಕ್ ಅಥವಾ ಯುಪಿಐ ಸೇವಾ ಪೂರೈಕೆದಾರರನ್ನು ಸಂಪರ್ಕಿಸಬೇಕು. ನಿಮ್ಮ ಸಮಸ್ಯೆಯನ್ನು ವರದಿ ಮಾಡಿದಷ್ಟು ಬೇಗ, ಹಣ ಹಿಂತಿರುಗಿಸುವ ಸಾಧ್ಯತೆಯಿದೆ. ಈ ಬಗ್ಗೆ ನಿಮಗೆ ಖಚಿತ ಮಾಹಿತಿ ಇಲ್ಲದಿದ್ದರೆ, ಸಹಾಯಕ್ಕಾಗಿ ನಿಮ್ಮ ಬ್ಯಾಂಕ್ ಅಥವಾ ಯಪಿಐ ಸೇವಾ ಪೂರೈಕೆದಾರರನ್ನು ಸಂಪರ್ಕಿಸುವುದು ಉತ್ತಮ.

ದೂರು ನೀಡಿ

ಬ್ಯಾಂಕ್ ಅಥವಾ ಯಪಿಐ ಸೇವಾದಾರರಿಂದ ಹಣವನ್ನು ಹಿಂಪಡೆಯಲು ಸಾಧ್ಯವಾಗದಿದ್ದರೆ, ನೀವು NPCI (ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ)ಗೆ ದೂರು ಸಲ್ಲಿಸಬಹುದು. ಇದು ಭಾರತದಲ್ಲಿ ಯುಪಿಐ ವ್ಯವಸ್ಥೆಯನ್ನು ನಿರ್ವಹಿಸುವ ಸಂಸ್ಥೆಯಾಗಿದೆ. ಇದಲ್ಲದೆ ನಿಮ್ಮ ಸಮಸ್ಯೆಗೆ ಪರಿಹಾರ ಕೊಡಲು ನಿಮ್ಮ ಬ್ಯಾಂಕ್‌ಗೆ ಸಾಧ್ಯವಾಗದಿದ್ದರೆ, ನಿಮ್ಮ ಅಧಿಕಾರ ವ್ಯಾಪ್ತಿಗೆ ಅನುಗುಣವಾಗಿ ಬ್ಯಾಂಕಿಂಗ್ ಒಂಬುಡ್ಸ್‌ಮನ್ ಅಥವಾ ಸಂಬಂಧಿತ ನಿಯಂತ್ರಕ ಅಧಿಕಾರಿಗಳ ಗಮನಕ್ಕೆ ತರಬಹುದು

Whats_app_banner