ಕನ್ನಡ ಸುದ್ದಿ  /  Lifestyle  /  Business News Airtel Vs Jio Vs Vi Best Recharge Plans Here With 84 Days Validity Rmy

Best Recharge Plans: ಏರ್‌ಟೆಲ್, ಜಿಯೊ, ವಿಐನಲ್ಲಿ 84 ದಿನಗಳ ಪ್ರಿಪೇಯ್ಡ್ ಬೆಸ್ಟ್ ರಿಚಾರ್ಜ್ ಪ್ಲಾನ್ ಯಾವುದು

Best Recharge Plans: ಟೆಲಿಕಾಂ ಕಂಪನಿಗಳು ವಿವಿಧ ರಿಚಾರ್ಜ್ ಪ್ಲಾನ್‌ಗಳನ್ನು ನೀಡುತ್ತದೆ. ಏರ್‌ಟೆಲ್, ಜಿಯೊ ಹಾಗೂ ವಿಐನಲ್ಲಿ ಯಾವುದು ಅತ್ಯುತ್ತಮ ಪ್ಲಾನ್‌ಗಳನ್ನು ನೀಡುತ್ತಿವೆ. ವ್ಯತ್ಯಾಸ ತಿಳಿಯಿರಿ.

ಏರ್‌ಟೆಲ್, ಜಿಯೊ ಹಾಗೂ ವಿಐ ನಲ್ಲಿರುವ ಅತ್ಯುತ್ತಮ ರಿಚಾರ್ಜ್ ಪ್ಲಾನ್‌ಗಳನ್ನು ತಿಳಿಯಿರಿ. 84 ದಿನಗಳ ವ್ಯಾಲಿಡಿಟಿ ಇರುವ ಬೆಸ್ಟ್ ಪ್ಲಾನ್‌ಗಳ ಮಾಹಿತಿ ಇಲ್ಲಿದೆ.
ಏರ್‌ಟೆಲ್, ಜಿಯೊ ಹಾಗೂ ವಿಐ ನಲ್ಲಿರುವ ಅತ್ಯುತ್ತಮ ರಿಚಾರ್ಜ್ ಪ್ಲಾನ್‌ಗಳನ್ನು ತಿಳಿಯಿರಿ. 84 ದಿನಗಳ ವ್ಯಾಲಿಡಿಟಿ ಇರುವ ಬೆಸ್ಟ್ ಪ್ಲಾನ್‌ಗಳ ಮಾಹಿತಿ ಇಲ್ಲಿದೆ.

ಬೆಂಗಳೂರು: Best Recharge Plans: ಭಾರತದಲ್ಲಿ ಅತ್ಯುತ್ತಮ ಟೆಲಿಕಮ್ಯೂನಿಕೇಷನ್ ಸೇವೆಗಳನ್ನು ನೀಡುವಲ್ಲಿ ಸಂಸ್ಥೆಗಳ ಸಾಲಿನಲ್ಲಿ ಏರ್‌ಟೆಲ್, ಜಿಯೊ ಹಾಗೂ ವಿಐ ನಿಲ್ಲುತ್ತವೆ. ಬಹುತೇಕರು ಈ ಮೂರು ಕಂಪನಿಗಳ ಸೇವೆಗಳನ್ನೂ ಹೆಚ್ಚಾಗಿ ಬಳಸುತ್ತಾರೆ. ವ್ಯಾಲಿಡಿಟಿ, ಎಸ್‌ಎಂಎಸ್ ಹಾಗೂ ಡೇಟಾ ವಿಚಾರದಲ್ಲಿ ಒಂದು ಕಂಪನಿಯ ರಿಚಾರ್ಜ್ ಪ್ಲಾನ್‌ಗಳಿಗಿಂತ ಮತ್ತೊಂದು ಕಂಪನಿಯ ಪ್ಲಾನ್‌ಗಳು ವಿಭಿನ್ನವಾಗಿರುತ್ತದೆ.

ಏರ್‌ಟೆಲ್ ಮತ್ತು ಜಿಯೊ ಸಂಸ್ಥೆಗಳು ದೇಶದಲ್ಲಿ 5ಜಿ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಕೆಲಸಗಳನ್ನು ಆರಂಭಿಸಿದ್ದು, ಬಹುತೇಕ ಈ ವರ್ಷದ ವೇಳೆಗೆ 5ಜಿ ಸೇವೆಯನ್ನು ಜನರಿಗೆ ಸಿಗುವಂತೆ ಮಾಡುವ ಸಾಧ್ಯತೆ ಇದೆ. ಡೇಟಾ ಬಳಕೆಗೆ ಆಗುತ್ತಿರುವ ಸಮಸ್ಯೆಗಳಿಗೆ ಪರಿಹಾರ ನೀಡಿ ಅಂತರ್ಜಾಲಕ್ಕೆ ವೇಗ ನೀಡಲು ಮುಂದಾಗಿವೆ. ಇನ್ನ ವಿಐ (ವೊಡಾಫೋನ್ ಐಡಿಯಾ) ಭವಿಷ್ಯದಲ್ಲಿ ಅಡ್ವಾನ್ಸ್ಡ್‌ ನೆಟ್‌ವರ್ಕ್ ಸೇವೆಗಳನ್ನು ನೀಡುವ ಪ್ರಯತ್ನದಲ್ಲಿದೆ.

ಈ ಮೂರು ಕಂಪನಿಗಳು ಮೊಬೈಲ್ ಬಳಕೆದಾರರಿಗೆ ಹಲವು ರಿಚಾರ್ಜ್‌ ಪ್ಲಾನ್‌ಗಳನ್ನು ಒದಗಿಸುತ್ತಿವೆ. 28, 56 ಹಾಗೂ 84 ದಿನಗಳ ವ್ಯಾಲಿಡಿಟಿ, ಡೇಟಾ, ಎಸ್‌ಎಂಎಸ್ ಹಾಗೂ ಇತರೆ ಆಫರ್‌ಗಳೊಂದಿಗೆ ಹಲವು ಪ್ರಯೋಜನಗಳನ್ನು ಗ್ರಾಹಕರಿಗೆ ನೀಡುತ್ತಿದ್ದು, ತೀವ್ರ ಪೈಪೋಟಿಯನ್ನು ಎದುರಿಸುತ್ತಿವೆ.

ಏರ್‌ಟೆಲ್ 84 ರೂಪಾಯಿಗಳ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್‌ನಲ್ಲಿ ಏನೆಲ್ಲಾ ಇದೆ

ಏರ್‌ಟೆಲ್‌ನಲ್ಲಿ 455 ರೂಪಾಯಿ ರಿಚಾರ್ಜ್ ಪ್ಲಾನ್‌ ಹಾಕಿಸಿಕೊಂಡಿದರೆ 84 ದಿನಗಳ ವ್ಯಾಲಿಟಿಡಿ ಇರುತ್ತದೆ. ಇದು ಸುರಿ ಸುಮಾರು 3 ತಿಂಗಳ ಬೆಸ್ಟ್ ಪ್ಲಾನ್ ಅಂತಲೇ ಬಹುದು. ಈ ಪ್ಲಾನ್‌ನಲ್ಲಿ 6 ಜಿಬಿ ಹೈ ಸ್ಪೀಡ್ ಇಂಟರ್‌ನೆಟ್ ಇರಲಿದೆ. ಅಲ್ಲದೆ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಕರೆಗಳು, ಅಪೋಲೊ 24/7 ಸರ್ಕಲ್, ಹಾಲೋ ಟ್ಯೂನ್ಸ್ ಹಾಗೂ ವಿಂಕ್ ಮ್ಯೂಸಿಕ್ ಪ್ರಯೋಜನಗಳನ್ನು ಪಡೆಬಹುದು. ವ್ಯಾಲಿಡಿಯ ಅವಧಿಯಲ್ಲಿ ಗ್ರಾಹಕರು 900 ಎಸ್‌ಎಂಎಸ್‌ಗಳನ್ನು ಪಡೆಯಬಹುದು.

ಏರ್‌ಟೆಲ್ 719 ರೂಪಾಯಿಗಳ ರಿಚಾರ್ಜ್ ಪ್ಲಾನ್

ಏರ್ಟೆಲ್ 719 ರೂಪಾಯಿಗಳ ರಿಚಾರ್ಜ್‌ ಪ್ಲಾನ್‌ನ ವ್ಯಾಲಿಡಿಟಿ 84 ದಿನಗಳು ಇರುತ್ತದೆ. ಈ ಪ್ಯಾಕ್‌ನಲ್ಲಿ ಪ್ರತಿನಿತ್ಯ 1.5 ಜಿಬಿ ಹೈ ಸ್ಪೀಡ್ ಡೇಟಾ ಇರುತ್ತದೆ.ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಕರೆಗಳು, ಅನಿಯಮಿತ 5ಜಿ ಡೇಟಾ, ಟೆರ್‌ಟೆಲ್ ಚಂದಾದಾರರಿಗೆ ಅಪೋಲೊ 24/7 ಸರ್ಕಲ್, ಹಾಲೋ ಟ್ಯೂನ್ ಹಾಗೂ ವಿಂಕ್ ಮ್ಯೂಸಿಕ್ ಪ್ರಯೋಜ ಸಿಗುತ್ತದೆ.

ಏರ್‌ಟೆಲ್ 869 ರಿಚಾರ್ಜ್ ಪ್ಲಾನ್

 • ಈ ರಿಚಾರ್ಜ್‌ ಪ್ಲಾನ್‌ ಅವಧಿ 84 ದಿನಗಳು
 • ಡೈಲಿ 2ಜಿಬಿ ಹೈಸ್ಪೀಡ್ ಡೇಟಾ ಇರಲಿದೆ
 • ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಕರೆಗಳು
 • ಅನಿಯಮಿತ 5ಜಿ ಡೇಟಾ, ಅಪೋಲೊ 24/7 ಸರ್ಕಲ್
 • ಏರ್‌ಟೆಲ್ ಎಕ್ಸ್‌ಸ್ಟ್ರೀಮಿಂಗ್ ಪ್ಲೇ 15+ ಒಟಿಟಿ ಆ್ಯಪ್‌ಗಳು
 • ಹಾಲೋ ಟ್ಯೂನ್ಸ್ ಹಾಗೂ ವಿಂಕ್ ಮ್ಯೂಸಿಟ್ ಸೌಲಭ್ಯ
 • ಚಂದಾದಾರರಿಗೆ 3 ತಿಂಗಳ ಡಿಸ್ನಿಪ್ಲಸ್ ಹಾಟ್‌ಸ್ಟಾರ್ ಸಿಗಲಿದೆ
 • ಈ ಪ್ಲಾನ್‌ನಲ್ಲಿ ಪ್ರತಿ ದಿನ 100 ಎಸ್‌ಎಂಸ್‌ಗಳನ್ನು ಉಚಿತವಾಗಿ ಪಡೆಯಬಹುದು
 • ಏರ್‌ಟೆಲ್ 999 ರೂಪಾಯಿಗಳ ರಿಚಾರ್ಜ್ ಪ್ಲಾನ್

ಏರ್‌ಟೆಲ್ 999 ರೂಪಾಯಿ ರಿಚಾರ್ಜ್ ಪ್ಲಾನ್ ಅವಧಿ 84 ದಿನಗಳು

 • ವ್ಯಾಲಿಡಿಟಿಯ ಪೂರ್ಣ ಅವಧಿಯಲ್ಲಿ ಪ್ರತಿ ದಿನ 2.5ಜಿಬಿ ಹೈಸ್ಪೀಡ್ ಡೇಟಾ ಸಿಗುತ್ತದೆ
 • ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಉಚಿತ ಕರೆಗಳು
 • ಅನಿಯಮಿತ 5ಜಿ ಡೇಟಾ, ಅಪೋಲೊ 24/7 ಸರ್ಕಲ್
 • ಏರ್‌ಟೆಲ್ ಎಕ್ಸ್‌ಸ್ಟ್ರೀಮಿಂಗ್ ಪ್ಲೇ 15+ ಒಟಿಟಿ ಆ್ಯಪ್‌ಗಳು
 • ಹಾಲೋ ಟ್ಯೂನ್ಸ್ ಹಾಗೂ ವಿಂಕ್ ಮ್ಯೂಸಿಟ್ ಸೌಲಭ್ಯ
 • ಚಂದಾದಾರರಿಗೆ 3 ತಿಂಗಳ ಡಿಸ್ನಿಪ್ಲಸ್ ಹಾಟ್‌ಸ್ಟಾರ್ ಸಿಗಲಿದೆ
 • ಈ ಪ್ಲಾನ್‌ನಲ್ಲಿ ಪ್ರತಿ ದಿನ 100 ಉಚಿತ ಎಸ್‌ಎಂಎಸ್ ಸದಸ್ಯತ್ವ ಪಡೆದವರಿಗೆ ಅಮೆಜಾನ್ ಪ್ರೈಮ್ ವಿಡಿಯೊ ವೀಕ್ಷಣೆ ಸೌಲಭ್ಯ

ಏರ್‌ಟೆಲ್ 1,499 ರೂಪಾಯಿ ರಿಚಾರ್ಜ್ ಪ್ಲಾನ್

 • ಏರ್‌ಟೆಲ್‌ನಲ್ಲಿರುವ 1,499 ರೂಪಾಯಿಗಳ ರಿಚಾರ್ಜ್ ಪ್ಲಾನ್‌ಗೆ 84 ದಿನಗಳ ವ್ಯಾಲಿಡಿಟಿ ಇದೆ
 • ಚಂದಾದಾರರು ಪ್ರತಿದಿನ 3 ಜಿಬಿ ಹೈಸ್ಪೀಡ್ ಡೇಟಾವನ್ನು ಪಡೆಯುತ್ತಾರೆ
 • ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಉಚಿತ ಕರೆಗಳು
 • ಅನಿಯಮಿತ 5ಜಿ ಡೇಟಾ, ಅಪೋಲೊ 24/7 ಸರ್ಕಲ್
 • ಏರ್‌ಟೆಲ್ ಎಕ್ಸ್‌ಸ್ಟ್ರೀಮಿಂಗ್ ಪ್ಲೇ 15+ ಒಟಿಟಿ ಆ್ಯಪ್‌ಗಳು
 • ಹಾಲೋ ಟ್ಯೂನ್ಸ್ ಹಾಗೂ ವಿಂಕ್ ಮ್ಯೂಸಿಟ್ ಸೌಲಭ್ಯ
 • ಚಂದಾದಾರರಿಗೆ 3 ತಿಂಗಳ ಡಿಸ್ನಿಪ್ಲಸ್ ಹಾಟ್‌ಸ್ಟಾರ್ ಸಿಗಲಿದೆ
 • ಈ ಪ್ಲಾನ್‌ನಲ್ಲಿ ಪ್ರತಿ ದಿನ 100 ಉಚಿತ ಎಸ್‌ಎಂಎಸ್ ಸದಸ್ಯತ್ವ ಪಡೆದವರಿಗೆ ನೆಟ್‌ಫ್ಲಿಕ್ಸ್ ವೀಕ್ಷಣೆಯ ಸೌಲಭ್ಯ

ಇದನ್ನೂ ಓದಿ: ಬೆಂಗಳೂರಿನಲ್ಲಿ ನೀರಿನ ಅಭಾವ: ನೀರು ಉಳಿಸಲು ಇಲ್ಲಿವೆ 10 ಸರಳ ಮಾರ್ಗಗಳು

ಜಿಯೋ 84 ದಿನಗಳ ರಿಚಾರ್ಜ್ ಪ್ಲಾನ್ಸ್

ಜಿಯೋ 395 ರೂಪಾಯಿಗಳ ರಿಚಾರ್ಜ್ ಪ್ಲಾನ್

 • 84 ದಿನಗಳ ವ್ಯಾಲಿಡಿಟಿ ಅವಧಿಯಲ್ಲಿ 6 ಜಿಬಿ ಹೈಸ್ಪೀಡ್ ಡೇಟಾ ಬರಲಿದೆ
 • ಅನಿಯಮಿತ 5ಜಿ ಡೇಟಾ ಬಳಕೆ, ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಕರೆಗಳು
 • ಜಿಯೊ ಟಿವಿ, ಜಿಯೋ ಸಿನಿಮಾ ನೋಡುವ (ಪ್ರಿಮೀಯಂ ಕಂಟೆಂಟ್ ಹೊರತುಪಡಿಸಿ) ಅವಕಾಶ
 • ವ್ಯಾಲಿಡಿಟಿ ಅವಧಿಯಲ್ಲಿ 1000 ಎಸ್‌ಎಂಎಸ್‌ಗಳನ್ನು ಪಡೆಯಬಹುದು

ಜಿಯೋ 666 ರೂಪಾಯಿಗಳ ರಿಚಾರ್ಜ್ ಪ್ಲಾನ್

 • 84 ದಿನಗಳ ವ್ಯಾಲಿಡಿಟಿ ಅವಧಿಯಲ್ಲಿ 1.5 ಜಿಬಿ ಡೈಲಿ ಹೈಸ್ಪೀಡ್ ಡೇಟಾ ಇರುತ್ತೆ, 64ಕೆಬಿಪಿಎಸ್ ವರೆಗೆ ಕಡಿಮೆಯಾಗುತ್ತೆ
 • ಅನಿಯಮಿತ 5ಜಿ ಡೇಟಾ ಬಳಕೆ, ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಕರೆಗಳು
 • ಜಿಯೊ ಟಿವಿ, ಜಿಯೋ ಸಿನಿಮಾ (ಪ್ರಿಮೀಯಂ ಕಂಟೆಂಟ್ ಸೇರಿ) ನೋಡುವ ಅವಕಾಶ
 • ವ್ಯಾಲಿಡಿಟಿ ಅವಧಿಯಲ್ಲಿ ನಿತ್ಯ 100 ಎಸ್‌ಎಂಎಸ್‌ಗಳನ್ನು ಪಡೆಯಬಹುದು

ಜಿಯೋ 758 ರೂಪಾಯಿಗಳ ರಿಚಾರ್ಜ್ ಪ್ಲಾನ್

 • 84 ದಿನಗಳ ವ್ಯಾಲಿಡಿಟಿ ಅವಧಿಯಲ್ಲಿ 1.5 ಜಿಬಿ ಡೈಲಿ ಹೈಸ್ಪೀಡ್ ಡೇಟಾ ಇರುತ್ತೆ, 64ಕೆಬಿಪಿಎಸ್ ವರೆಗೆ ಕಡಿಮೆಯಾಗುತ್ತೆ
 • ಅನಿಯಮಿತ 5ಜಿ ಡೇಟಾ ಬಳಕೆ, ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಕರೆಗಳು
 • ಜಿಯೊ ಟಿವಿ, ಜಿಯೋ ಸಿನಿಮಾ (ಪ್ರಿಮೀಯಂ ಕಂಟೆಂಟ್ ಹೊರತುಪಡಿಸಿ) ನೋಡುವ ಅವಕಾಶ ಮತ್ತು ಜಿಯೋ ಕ್ಲೌಡ್
 • ವ್ಯಾಲಿಡಿಟಿ ಅವಧಿಯಲ್ಲಿ ನಿತ್ಯ 100 ಎಸ್‌ಎಂಎಸ್‌ಗಳನ್ನು ಪಡೆಯಬಹುದು
 • 3 ತಿಂಗಳು ಡಿಸ್ನಿಪ್ಲಸ್ ಹಾಟ್‌ಸ್ಟಾರ್ ಚಂದಾದಾರಿಕೆ ಸಿಗಲಿಗೆ

ಜಿಯೋ 805/806 ರೂಪಾಯಿಗಳ ರಿಚಾರ್ಜ್ ಪ್ಲಾನ್

 • 84 ದಿನಗಳ ವ್ಯಾಲಿಡಿಟಿ ಅವಧಿಯಲ್ಲಿ 2 ಜಿಬಿ ಡೈಲಿ ಹೈಸ್ಪೀಡ್ ಡೇಟಾ ಇರುತ್ತೆ
 • ಅನಿಯಮಿತ 5ಜಿ ಡೇಟಾ ಬಳಕೆ, ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಕರೆಗಳು
 • ಜಿಯೊ ಟಿವಿ, ಜಿಯೋ ಸಿನಿಮಾ (ಪ್ರಿಮೀಯಂ ಕಂಟೆಂಟ್ ಸೇರಿ) ನೋಡುವ ಅವಕಾಶ ಮತ್ತು ಜಿಯೋ ಕ್ಲೌಡ್ ಸೇವೆ
 • 806 ರೂಪಾಯಿಗಳ ಪ್ಲಾನ್‌ನಲ್ಲಿ ಸೋನಿಲೈವ್, 805 ರೂಪಾಯಿಗಳ ರಿಚಾರ್ಜ್‌ನಲ್ಲಿ ಜೀ5 ಚಂದಾದಾರಿಕೆ ಸಿಗುತ್ತದೆ
 • ಗ್ರಾಹಕರ ಆಯ್ಕೆಯ ಆಧಾರದ ಮೇಲೆ ಒಟಿಟಿ ಕಂಟೆಂಟ್ ನೀಡಲಾಗುತ್ತದೆ
 • ವ್ಯಾಲಿಡಿಟಿ ಅವಧಿಯಲ್ಲಿ ನಿತ್ಯ 100 ಎಸ್‌ಎಂಎಸ್‌ಗಳನ್ನು ಪಡೆಯಬಹುದು

ಜಿಯೋ 1198 ರೂಪಾಯಿಗಳ ರಿಚಾರ್ಜ್ ಪ್ಲಾನ್

 • ಜಿಯೋದಲ್ಲಿರುವ ಅತಿ ದೊಡ್ಡ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಆಗಿದೆ
 • 84 ದಿನಗಳ ವ್ಯಾಲಿಡಿಟಿ ಅವಧಿಯಲ್ಲಿ 2 ಜಿಬಿ ಡೈಲಿ ಹೈಸ್ಪೀಡ್ ಡೇಟಾ ಇರುತ್ತೆ
 • ಅನಿಯಮಿತ 5ಜಿ ಡೇಟಾ ಬಳಕೆ, ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಕರೆಗಳು
 • ಜಿಯೊ ಟಿವಿ, ಜಿಯೋ ಸಿನಿಮಾ ಪ್ರೀಮಿಯಂ, ಡಿಸ್ನಿಪ್ಲಸ್ ಹಾಟ್‌ಸ್ಟಾರ್, ಸೋನಿಲೈನ್, ಜೀ5, ಲಯನ್ಸ್‌ಗೇಟ್ ಪ್ಲೇ, ಸನ್ ನೆಕ್ಸ್ಟ್‌, ಹಾಯೈಚಾಯ್, ಎಪಿಕ್ ಆನ್ ಹಾಗೂ ಇತರೆ ಸೌಲಭ್ಯಗಳು
 • 1198 ರೂಪಾಯಿಗಳ ಈ ರಿಚಾರ್ಜ್‌ ಪ್ಲಾನ್‌ನಲ್ಲಿ 18 ಜಿಬಿ ಹೆಚ್ಚುವರಿ ಹೈಸ್ಪೀಡ್ ಡೇಟಾವನ್ನು ಪಡೆಯಬಹುದು
 • ವ್ಯಾಲಿಡಿಟಿ ಅವಧಿಯಲ್ಲಿ ನಿತ್ಯ 100 ಎಸ್‌ಎಂಎಸ್‌ಗಳನ್ನು ಪಡೆಯಬಹುದು

ವಿಐ 84 ದಿನಗಳ ರಿಚಾರ್ಜ್ ಪ್ಲಾನ್ಸ್

ವಿಐ 459 ರೂಪಾಯಿಗಳ ರಿಚಾರ್ಜ್ ಪ್ಲಾನ್

 • ವಿಐನಲ್ಲಿರುವ 459 ರೂಪಾಯಿಗಳ ಪ್ಲಾನ್ 84 ದಿನಗಳ ವ್ಯಾಲಿಡಿಯಿನ್ನು ಹೊಂದಿದೆ
 • ಯಾವುದೇ ದೈನಂದಿನ ಬಳಕೆಯ ಮಿತಿಯಿಲ್ಲದೆ 6ಜಿಬಿ ಹೈಸ್ಪೀಡ್ ಡೇಟಾ
 • ಅನಿಯಮಿತ ಕರೆಗಳು, ವಿಐ ಮೂವೀಸ್ ಹಾಗೂ ಟಿವಿ ಸೇವೆಗಳು ಲಭ್ಯ
 • 84 ದಿನಗಳ ವ್ಯಾಲಿಡಿಟಿ ಅವಧಿಯಲ್ಲಿ 1000 ಎಸ್‌ಎಂಎಸ್‌ಗಳು ಉಚಿತ
 • ಎಸ್‌ಎಂಎಸ್‌ ಕೋಟಾ ಮುಗಿದ ಬಳಿಕ ಲೋಕಲ್ ಎಸ್‌ಎಂಎಸ್‌ಗೆ 1 ರೂಪಾಯಿ ಹಾಗೂ ಎಸ್‌ಟಿಡಿ ಎಸ್‌ಎಂಎಸ್‌ಗೆ 1.5 ರೂಪಾಯಿ ಚಾರ್ಜ್ ಮಾಡುತ್ತೆ

ವಿಐ 719 ರೂಪಾಯಿಗಳ ರಿಚಾರ್ಜ್ ಪ್ಲಾನ್

 • ವಿಐನಲ್ಲಿರುವ 719 ರೂಪಾಯಿಗಳ ಪ್ಲಾನ್ 84 ದಿನಗಳ ವ್ಯಾಲಿಡಿಯಿನ್ನು ಹೊಂದಿದೆ
 • ಪ್ರತಿ ದಿನ 1.5 ಜಿಬಿ ಹೈಸ್ಪೀಡ್ ಡೇಟಾ ಸಿಗಲಿದೆ
 • ಯಾವುದೇ ದೈನಂದಿನ ಬಳಕೆಯ ಮಿತಿಯಿಲ್ಲದೆ 6ಜಿಬಿ ಹೈಸ್ಪೀಡ್ ಡೇಟಾ
 • ಅನಿಯಮಿತ ಕರೆಗಳು, ವಿಐ ಮೂವೀಸ್ ಹಾಗೂ ಟಿವಿ ಸೇವೆಗಳು ಲಭ್ಯ
 • ರಿಚಾರ್ಜ್ ಡೇಟಾ ಹೊರತುಪಡಿಸಿ ರಾತ್ರಿ 12 ರಿಂದ ಬೆಳಗ್ಗೆ 6ರವರೆಗೆ ಅನಿಯಮಿತ ಡೇಟಾ
 • ಬಳಸದೆ ಇರುವ ಡೇಟಾವನ್ನು ವಾರಂತ್ಯಕ್ಕೆ ಕ್ಯಾರಿ ಫಾರ್ವರ್ಡ್ ಮಾಡುವ ಅವಕಾಶ
 • ಹೆಚ್ಚವರಿ ಶುಲ್ಕವಿಲ್ಲದೆ, 2ಜಿಬಿ ವರೆಗೆ ಬ್ಯಾಕ್‌ಅಪ್ ಡೇಟಾ ಸಿಗಲಿದೆ
 • ಪ್ರತಿ ದಿನ 100 ಎಸ್ಎಂಎಸ್‌ಗಳು ಉಚಿತ

ವಿಐ 839 ರೂಪಾಯಿಗಳ ರಿಚಾರ್ಜ್ ಪ್ಲಾನ್

 • ವಿಐನಲ್ಲಿರುವ 839 ರೂಪಾಯಿಗಳ ಪ್ಲಾನ್ 84 ದಿನಗಳ ವ್ಯಾಲಿಡಿಯಿನ್ನು ಹೊಂದಿದೆ
 • ಪ್ರತಿ ದಿನ 2 ಜಿಬಿ ಹೈಸ್ಪೀಡ್ ಡೇಟಾ ಸಿಗಲಿದೆ
 • ಅನಿಯಮಿತ ಕರೆಗಳು, ವಿಐ ಮೂವೀಸ್ ಹಾಗೂ ಟಿವಿ ಸೇವೆಗಳು ಲಭ್ಯ
 • ರಿಚಾರ್ಜ್ ಡೇಟಾ ಹೊರತುಪಡಿಸಿ ರಾತ್ರಿ 12 ರಿಂದ ಬೆಳಗ್ಗೆ 6ರವರೆಗೆ ಅನಿಯಮಿತ ಡೇಟಾ
 • ಬಳಸದೆ ಇರುವ ಡೇಟಾವನ್ನು ವಾರಂತ್ಯಕ್ಕೆ ಕ್ಯಾರಿ ಫಾರ್ವರ್ಡ್ ಮಾಡುವ ಅವಕಾಶ
 • ಹೆಚ್ಚವರಿ ಶುಲ್ಕವಿಲ್ಲದೆ, 2ಜಿಬಿ ವರೆಗೆ ಬ್ಯಾಕ್‌ಅಪ್ ಡೇಟಾ ಸಿಗಲಿದೆ
 • 3 ತಿಂಗಳ ಡಿಸ್ನಿಪ್ಲಸ್ ಹಾಟ್‌ಸ್ಟಾರ್ ಈ ಪ್ಲಾನ್‌ನಲ್ಲಿ ಬರಲಿದೆ
 • ಪ್ರತಿ ದಿನ 100 ಎಸ್ಎಂಎಸ್‌ಗಳು ಉಚಿತ

ವಿಐ 1066 ರೂಪಾಯಿಗಳ ರಿಚಾರ್ಜ್ ಪ್ಲಾನ್

 • ವಿಐನಲ್ಲಿರುವ 1066 ರೂಪಾಯಿಗಳ ಪ್ಲಾನ್ 84 ದಿನಗಳ ವ್ಯಾಲಿಡಿಯಿನ್ನು ಹೊಂದಿದೆ
 • ಪ್ರತಿ ದಿನ 2 ಜಿಬಿ ಹೈಸ್ಪೀಡ್ ಡೇಟಾ ಸಿಗಲಿದೆ
 • ಅನಿಯಮಿತ ಕರೆಗಳು, ವಿಐ ಮೂವೀಸ್ ಹಾಗೂ ಟಿವಿ ಸೇವೆಗಳು ಲಭ್ಯ
 • ರಿಚಾರ್ಜ್ ಡೇಟಾ ಹೊರತುಪಡಿಸಿ ರಾತ್ರಿ 12 ರಿಂದ ಬೆಳಗ್ಗೆ 6ರವರೆಗೆ ಅನಿಯಮಿತ ಡೇಟಾ
 • ಬಳಸದೆ ಇರುವ ಡೇಟಾವನ್ನು ವಾರಂತ್ಯಕ್ಕೆ ಕ್ಯಾರಿ ಫಾರ್ವರ್ಡ್ ಮಾಡುವ ಅವಕಾಶ
 • ಹೆಚ್ಚವರಿ ಶುಲ್ಕವಿಲ್ಲದೆ, 2ಜಿಬಿ ವರೆಗೆ ಬ್ಯಾಕ್‌ಅಪ್ ಡೇಟಾ ಸಿಗಲಿದೆ
 • 1 ವರ್ಷ ಡಿಸ್ನಿಪ್ಲಸ್ ಹಾಟ್‌ಸ್ಟಾರ್ ಈ ಪ್ಲಾನ್‌ನಲ್ಲಿ ಬರಲಿದೆ
 • ಪ್ರತಿ ದಿನ 100 ಎಸ್ಎಂಎಸ್‌ಗಳು ಉಚಿತ

(This copy first appeared in Hindustan Times Kannada website. To read more like this please logon to kannada.hindustantimes.com )