ಪಕ್ಕಾ ಪ್ಲಾನ್ ಮಾಡಿ ಹೂಡಿಕೆ ಮಾಡಿದ್ರೆ ನಿವೃತ್ತಿ ವೇಳೆಗೆ 5 ಕೋಟಿ ರೂಪಾಯಿ ಸಿಗುತ್ತೆ; ಅದ್ಹೇಗೆ ನೋಡಿ -Long Term Investment Plans
Best Investment Plans: ಹೀಗೆ ಮಾಡಿದ್ರೆ ನೀವು ಖಂಡಿತವಾಗಿ ನಿವೃತ್ತಿಯ ಸಮಯದಲ್ಲಿ 5 ಕೋಟಿ ರೂಪಾಯಿ ಪಡೆಯಬಹುದು. ಅದು ಹೇಗೆ ಅನ್ನೋದನ್ನ ವಿವರವಾಗಿ ಇಲ್ಲಿ ತಿಳಿಯಿರಿ.
ರಾತ್ರೋರಾತ್ರಿ ಯಾರೂ ಕೋಟ್ಯಾಧಿಪತಿಯಾಗಲ ಆಗಲು ಸಾಧ್ಯವಿಲ್ಲ. ಇದರ ಹಿಂದೆ ಸಾಕಷ್ಟು ದುಡಿಮೆ, ತ್ಮಾಳೆ ಹಾಗೂ ನಿರಂತರವಾದ ಪ್ರಕ್ರಿಯೆ ಇರುತ್ತದೆ. ಅದೇನೇ ಇರಲಿ, ದೀರ್ಘಕಾಲದ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ ಕೋಟ್ಯಾಧಿಪತಿ ಆಗುವ ನಿಮ್ಮ ಕನಸು ನನಸಾಗುವುದು ಖಂಡಿತ! ಅದಕ್ಕಿಂತ ಮುಖ್ಯವಾಗಿ ಸರಿಯಾಗಿ ಪ್ಲಾನ್ ಮಾಡಿ ಹೂಡಿಕೆ ಮಾಡಿದರೆ ನಿವೃತ್ತಿಯ ಹೊತ್ತಿಗೆ 5 ಕೋಟಿ ರೂಪಾಯಿ ನಿಮ್ಮದಾಗಿಸಿಕೊಳ್ಳಬಹುದು ಅದು ಹೇಗೆ ಸಾಧ್ಯ? ಏನು ಮಾಡಿದರೆ ನಿವೃತ್ತಿಯ ವೇಳೆಗೆ 5 ಕೋಟಿ ರೂಪಾಯಿ ಸಿಗುತ್ತದೆ ಅನ್ನೋದರ ವಿವರಗಳನ್ನ ತಿಳಿಯೋಣ.
ನಿವೃತ್ತಿಯ ಸಮಯದಲ್ಲಿ 5 ಕೋಟಿ ರೂಪಾಯಿ ಪಡೆಯಲು ಏನು ಮಾಡಬೇಕು?
ನಿವೃತ್ತಿಯ ಸಮಯದಲ್ಲಿ ದೊಡ್ಡ ಮೊತ್ತವನ್ನು ಪಡೆಯಲು SIP (ಸಿಸ್ಟಮ್ಯಾಟಿಕ್ ಇನ್ವೆಸ್ಟ್‌ಮೆಂಟ್ ಯೋಜನೆ) ಪ್ರಮುಖ ಪಾತ್ರ ವಹಿಸುತ್ತದೆ. ಅದೇ ಸಮಯದಲ್ಲಿ, ನಿಮ್ಮ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ನೀವು ಸಿಪ್ ಅನ್ನು ಪ್ರಾರಂಭಿಸಿದರೆ, ಸಂಯೋಜನೆಯ ಪರಿಣಾಮದೊಂದಿಗೆ ನೀವು ಅದ್ಭುತ ಫಲಿತಾಂಶಗಳನ್ನು ಪಡೆಯುತ್ತೀರಿ ಎಂದು ವೈಯಕ್ತಿಕ ಹಣಕಾಸು ತಜ್ಞರು ಹೇಳುತ್ತಾರೆ. ಅದಕ್ಕಾಗಿಯೇ ಸಾಧ್ಯವಾದಷ್ಟು ಬೇಗ ಸಿಪ್ ಅನ್ನು ಪ್ರಾರಂಭಿಸಲು ಸೂಚಿಸಲಾಗುತ್ತದೆ.
5 ಕೋಟಿ ರೂಪಾಯಿ ಪಡೆಯಲು 20 ವರ್ಷದಿಂದ ಎಷ್ಟು ಸಿಪ್ ಮಾಡಬೇಕು ಎಂಬ ವಿಚಾರಕ್ಕೆ ಅಕ್ಯೂಬ್ ವೆಂಚರ್ಸ್ ನ ನಿರ್ದೇಶಕ ಆಶಿಶ್ ಅಗರ್ವಾಲ್ ಪ್ರತಿಕ್ರಿಯಿಸಿದ್ದಾರೆ. 5 ಕೋಟಿ ಗಳಿಸುವ ಕನಸನ್ನು ಪ್ರಾಯೋಗಿಕವಾಗಿ ನನಸಾಗಿಸಿಕೊಳ್ಳಬಹುದು.ಜೀವನದ ಆರಂಭದಲ್ಲೇ ಹೂಡಿಕೆ ಆರಂಭಿಸಿದರೆ ಕಾಂಪೌಂಡಿಂಗ್ ಮೂಲಕ ಪವಾಡಗಳನ್ನು ಕಾಣುವಿರಿ. 20ನೇ ವಯಸ್ಸಿನಲ್ಲಿ ಪ್ರತಿ ತಿಂಗಳು 8 ಸಾವಿರ ರೂಪಾಯಿ ಸಿಪ್ ಮಾಡಿದರೆ ಶೇಕಡಾ 12 ರಷ್ಟು ಸಿಎಜಿಆರ್ ನೊಂದಿಗೆ 45ನೇ ವಯಸ್ಸಿಗೆ ಕೋಟ್ಯಾಧಿಪತಿ ಆಗಬಹುದು. 60 ವರ್ಷ ವಯಸ್ಸಾಗುವ ವೇಳೆಗೆ ನಿವೃತ್ತಿ ನಿಧಿ 5 ಕೋಟಿ ಆಗಲಿದೆ ಎಂದು ಆಶಿಶ್ ಅಗರ್ವಾಲ್ ಹೇಳಿದ್ದಾರೆ.
ನೀವು 30 ನೇ ವಯಸ್ಸಿನಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದರೆ 5 ಕೋಟಿ ರೂಪಾಯಿ ಗಳಿಸುವುದು ಹೇಗೆ? ಎಂಬ ಪ್ರಶ್ನೆಗೂ ಅಗರ್ವಾಲ್ ಅವರು ಉತ್ತರ ನೀಡಿದ್ದಾರೆ. ನೀವು 30 ನೇ ವಯಸ್ಸಿನಲ್ಲಿ ಎಸ್‌ಐಪಿ ಮೂಲಕ ಹೂಡಿಕೆ ಮಾಡಲು ಪ್ರಾರಂಭಿಸಿದರೂ, ನೀವು ಸ್ವಲ್ಪ ಹೆಚ್ಚು ಹೂಡಿಕೆ ಮಾಡಬೇಕು. ನೀವು ಪ್ರತಿ ತಿಂಗಳು 21,000 ರೂಪಾಯಿ ಹೂಡಿಕೆ ಮಾಡಿದರೆ, 60 ವರ್ಷ ವಯಸ್ಸಿನೊಳಗೆ ನೀವು ಶೇಕಡಾ 12 ರ ಸಿಎಜಿಆರ್‌ನೊಂದಿಗೆ 5 ಕೋಟಿ ಗಳಿಸಬಹುದು ಎಂದು ಸ್ಪಷ್ಟಪಡಿಸಿದ್ದಾರೆ.
ಸಿಪ್ ಲೆಕ್ಕಾಚಾರದ ಪ್ರಕಾರ, 25 ವರ್ಷಗಳವರೆಗೆ ಪ್ರತಿ ತಿಂಗಳು 27 ಸಾವಿರ ಹೂಡಿಕೆ ಮಾಡಿದರೆ. ನೀವು ಹೂಡಿದ ಮೊತ್ತ 81 ಲಕ್ಷ ಆಗಲಿದೆ. 12 ಶೇಕಡಾ ಸಿಎಜಿಆರ್‌ನೊಂದಿಗೆ 25 ವರ್ಷಗಳ ನಂತರ 5,12,36,147 ರೂಪಾಯಿ ಆಗುತ್ತದೆ.
ಅದೇನೀವು 35ನೇ ವಯಸ್ಸಿನಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದರೆ?
ಸಿಪ್ ಲೆಕ್ಕಾಚಾರದ ಪ್ರಕಾರ, ನೀವು 35 ನೇ ವಯಸ್ಸಿನಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದರೆ, 60 ರ ವಯಸ್ಸಿನಲ್ಲಿ 5 ಕೋಟಿ ಗಳಿಸುವ ಅವಕಾಶ ಇದೆ. ಆದರೆ ಸ್ವಲ್ಪ ದೊಡ್ಡವನ್ನೇ ಪ್ರತಿ ತಿಂಗಳು ಹೂಡಿಕೆ ಮಾಡಬೇಕಾಗುತ್ತದೆ. ತಿಂಗಳಿಗೆ 27 ಸಾವಿರ ಹೂಡಿಕೆ ಮಾಡಬೇಕು. ನೀವು ಇದರ ಮೇಲೆ ಶೇಕಡಾ 12 ರಷ್ಟು ಸಿಎಜಿಆರ್ ರಿಟರ್ನ್ ಪಡೆದರೆ 5 ಕೋಟಿ ರೂಪಾಯಿ ಆಗಲಿದೆ. ನೀವು ಹೂಡಿಕೆ ಮಾಡಿದ ಮೊತ್ತ 79,20,000 ಆಗಿರುತ್ತದೆ. ಅದರ ಮೇಲೆ 12 ಪ್ರತಿಶತ ಸಿಎಜಿಆರ್ ನೊಂದಿಗೆ, ನಿಮ್ಮ ಹೂಡಿಕೆ ಮೌಲ್ಯ 5,00,26,514 ರೂಪಾಯಿ ಆಗಿರುತ್ತದೆ.
ಸ್ಟಾಕ್ ಮಾರುಕಟ್ಟೆಗಳು ಮತ್ತು ಮ್ಯೂಚುವಲ್ ಫಂಡ್‌ಗಳು ಅಪಾಯಕಾರಿ ವ್ಯವಹಾರವಾಗಿದೆ. ಅದಕ್ಕಾಗಿಯೇ ನೀವು ನಿವೃತ್ತಿ ನಿಧಿಗಳಿಗಾಗಿ ವೈವಿಧ್ಯಮಯ ಹೂಡಿಕೆ ಬಂಡವಾಳವನ್ನು ಹೊಂದಲು ಮರೆಯದಿರಿ.
(ಗಮನಿಸಿ: ಇವು ಕೇವಲ ತಜ್ಞರ ಅಭಿಪ್ರಾಯಗಳು ಮಾತ್ರ. ಇದಕ್ಕೂ ಹಿಂದೂಸ್ತಾನ್ ಟೈಮ್ಸ್ ಕನ್ನಡಕ್ಕೆ ಯಾವುದೇ ಸಂಬಂಧವನ್ನು ಹೊಂದಿಲ್ಲ. ಯಾವುದೇ ಹೂಡಿಕೆಯನ್ನು ಪ್ರಾರಂಭಿಸುವ ಮೊದಲು, ನಿಮ್ಮ ಹಣಕಾಸು ಸಲಹೆಗಾರರನ್ನು ಸಂಪರ್ಕಿಸಿ)
(This copy first appeared in Hindustan Times Kannada website. To read more like this please logon to kannada.hindustantimes.com )