ಕನ್ನಡ ಸುದ್ದಿ  /  ಜೀವನಶೈಲಿ  /  Airtel Vs Jio Vs Vi: 150 ರೂ ಒಳಗೆ ಯಾವುದು ಬೆಸ್ಟ್ ಪ್ಲಾನ್? ರಿಚಾರ್ಜ್ ಮಾಡಿಸುವ ಮೊದಲು ಈ ಮಾಹಿತಿ ತಿಳ್ಕೊಳಿ

Airtel vs Jio vs Vi: 150 ರೂ ಒಳಗೆ ಯಾವುದು ಬೆಸ್ಟ್ ಪ್ಲಾನ್? ರಿಚಾರ್ಜ್ ಮಾಡಿಸುವ ಮೊದಲು ಈ ಮಾಹಿತಿ ತಿಳ್ಕೊಳಿ

150 ರೂಪಾಯಿಯೊಳಗಿನ ರಿಚಾರ್ಜ್‌ನಲ್ಲಿ ಅನಿಯಮಿತ ಕರೆಗಳು, ಎಸ್‌ಎಂಎಸ್‌ ಹಾಗೂ ಡೇಟಾ ಪ್ರಯೋಜನಗಳಲ್ಲಿ ಏರ್‌ಟೆಲ್, ಜಿಯೋ ಹಾಗೂ ವಿಐನಲ್ಲಿ ಯಾವುದು ಬೆಸ್ಟ್ ಅನ್ನೋದನ್ನ ತಿಳಿಯಿರಿ.

150 ರೂಪಾಯಿಯೊಳಗೆ ಬೆಸ್ಟ್ ರಿಚಾರ್ಜ್ ಪ್ಲಾನ್ ಯಾವ ಟೆಲಿಕಾಂ ಕಂಪನಿ ನೀಡುತ್ತೆ
150 ರೂಪಾಯಿಯೊಳಗೆ ಬೆಸ್ಟ್ ರಿಚಾರ್ಜ್ ಪ್ಲಾನ್ ಯಾವ ಟೆಲಿಕಾಂ ಕಂಪನಿ ನೀಡುತ್ತೆ

ಬೆಂಗಳೂರು: ಪ್ರಮುಖ ಟೆಲಿಕಾಂ ಸಂಸ್ಥೆಗಳಾದ ಏರ್‌ಟೆಲ್, ಜಿಯೋ ಹಾಗೂ ವಿಐ (ವೊಡಾಫೋನ್ ಐಡಿಯಾ) ಸಂಸ್ಥೆಗಳು ರೀಚಾರ್ಜ್ ಪ್ಲಾನ್‌ಗಳ ಮೇಲೆ ಶೇಕಡಾ 20 ರಷ್ಟು ಬೆಲೆ ಹೆಚ್ಚಿಸಿದ್ದು, ಹೊಸ ಪ್ರಿಪೇಯ್ಡ್ ಯೋಚನೆಗಳನ್ನು ಪರಿಚಯಿಸಿವೆ. ನೀವೇನಾದರೂ 150 ರೂಪಾಯಿಯೊಳಗಿನ ಅಲ್ಪಾವಧಿಯ ಪ್ರಿಪೇಯ್ಡ್ ರಿಚಾರ್ಜ್‌ ಬಗ್ಗೆ ಪ್ಲಾನ್ ಮಾಡುತ್ತಿದ್ದರೆ, ಈ ಮೂರು ಕಂಪನಿಗಳಲ್ಲಿ ಯಾವ ಪ್ಲಾನ್ ಉತ್ತಮ ಅನ್ನೋದನ್ನ ತಿಳಿಯಿರಿ.

ಟ್ರೆಂಡಿಂಗ್​ ಸುದ್ದಿ

ಏರ್‌ಟೆಲ್, ಜಿಯೋ ಹಾಗೂ ವಿಐನಲ್ಲಿ 150 ರೂಪಾಯಿಯೊಳಗೆ ಸಿಗುವ ಪ್ಲಾನ್‌ಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇವೆ. ಅನಿಯಮಿತ ಕರೆಗಳು, ಎಸ್‌ಎಂಎಸ್ ಹಾಗೂ ಹೆಚ್ಚುವರಿ ಡೇಟಾಗಳ ಬಗ್ಗೆ ತಿಳಿಯೋಣ.

ಜಿಯೋ ರಿಚಾರ್ಜ್ ಪ್ಲಾನ್

ಜಿಯೋ 150 ರೂಪಾಯಿಯೊಳಗೆ ಕೇವಲ ಪ್ರಿಪೇಯ್ಡ್ ರಿಚಾರ್ಜ್ ಯೋಜನೆಗಳನ್ನು ಮಾತ್ರ ನೀಡುತ್ತದೆ. ಜಿಯೋದಲ್ಲಿ ಲಭ್ಯ ಇರುವ 119 ರೂಪಾಯಿ ರಿಚಾರ್ಜ್ ಪ್ಲಾನ್‌ನಲ್ಲಿ ಅನಿಯಮಿತ ವಾಯ್ಸ್ ಕಾಲ್, 300 ಎಸ್ಎಂಎಸ್ ಹಾಗೂ 1.5 ಜಿಬಿ ಡೈಲಿ ಡೇಟಾ ಸಿಗುತ್ತದೆ. ಹೆಚ್ಚುವರಿಯಾಗಿ ಜಿಯೋ ಟಿವಿ, ಜಿಯೋ ಸೆಕ್ಯೂರಿಟಿ ಹಾಗೂ ಜಿಯೋ ಕ್ಲೌಡ್‌ಗೆ ಉಚಿತ ಚಂದಾದಾರಿಕೆಯ ಪ್ರಯೋಜನಗಳನ್ನು ಪಡೆಯಬಹುದು. ಈ ಪ್ಲಾನ್‌ನ ವ್ಯಾಲಿಡಿಟಿ 14 ದಿನಗಳು ಮಾತ್ರ ಇರುತ್ತದೆ.

150 ರೂಪಾಯಿಯ ಅಡಿಯಲ್ಲಿ ಮತ್ತೊಂದು ಜಿಯೋ ಪ್ರಿಪೇಯ್ಡ್ ಪ್ಲಾನ್ ಅಂದರೆ 149 ರೂಪಾಯಿಯ ರಿಚಾರ್ಜ್. ಈ ಯೋಜನೆಯಲ್ಲಿ ಅನಿಯಮಿತ ವಾಯ್ಸ್ ಕಾಲ್, 1 ಜಿಬಿ ಡೈಲಿ ಡೇಟಾ, ದಿನಕ್ಕೆ 100 ಎಸ್‌ಎಂಎಸ್ ಮಾಡುವ ಅವಕಾಶ ಇದೆ. ಇದರಲ್ಲೂ ಜಿಯೋ ಸೆಕ್ಯೂರಿಟಿ ಹಾಗೂ ಜಿಯೋ ಕ್ಲೌಡ್‌ಗೆ ಉಚಿತ ಚಂದಾದಾರಿಕೆಯ ಪ್ರಯೋಜನಗಳನ್ನು ಪಡೆಯಬಹುದು. ಈ ಪ್ಲಾನ್‌ 20 ದಿನಗಳ ವರೆಗೆ ಮಾನ್ಯವಾಗಿರುತ್ತದೆ.

ವಿಐ ರಿಚಾರ್ಜ್ ಯೋಜನೆಗಳು

ವೊಡೋಫೋನ್ಐಡಿಯಾ-ವಿಐ 150 ರೂಪಾಯಿಯೊಳಗೆ ಕೆಲವು ಯೋಜನೆಗಳನ್ನು ಹೊಂದಿದೆ. 129 ರೂಪಾಯಿಗೆ ರಿಚಾರ್ಜ್ ಮಾಡಿದರೆ ಅನಿಯಮಿತ ವಾಕ್ಸ್ ಕಾಲ್, ಡೈಲಿ 200 ಎಂಬಿ ಡೇಟಾ ಇರಲಿದ್ದು, 18 ದಿನ ಮಾತ್ರ ವ್ಯಾಲಿಡಿಟಿ ಇರುತ್ತದೆ. ಈ ಪ್ಲಾನ್‌ನಲ್ಲಿ ಉಚಿತ ಎಸ್‌ಎಂಎಸ್ ಸೌಲಭ್ಯ ಇರುವುದಿಲ್ಲ.

ಇನ್ನ 149 ರೂಪಾಯಿ ರಿಚಾರ್ಜ್‌ ಪ್ಲಾನ್‌ನಲ್ಲಿ ಪ್ರತಿ ದಿನ 1 ಜಿಬಿ ಡೇಟಾ, ಇದರಲ್ಲಿ ಉಚಿತ ಎಂಎಸ್‌ಎಂ ಸೌಲಭ್ಯವಿಲ್ಲ. ವ್ಯಾಲಿಡಿಟಿ 21 ದಿನಗಳು ಮಾತ್ರ ಇರುತ್ತದೆ. 155 ರೂಪಾಯಿ ರಿಚಾರ್ಜ್ ಮಾಡಿಕೊಂಡರೆ ಈ ಯೋಜನೆಯನ್ನು 24 ದಿನಕ್ಕೆ ವಿಸ್ತರಿಸಿಕೊಳ್ಳಬಹುದು. ಜೊತೆಗೆ 300 ಉಚಿತ ಎಸ್‌ಎಂಎಸ್ ಸೌಲಭ್ಯ ಪಡೆಯಬಹುದು.

ಏರ್‌ಟೆಲ್ ರಿಜಾರ್ಜ್ ಪ್ಲಾನ್

ಏರ್‌ಟೆಲ್‌ನಲ್ಲಿ 150 ರೂಪಾಯಿಯೊಳಗೆ ಯಾವುದೇ ಪ್ರಿಪೇಯ್ಡ್ ಪ್ಲಾನ್‌ ಆಫರ್‌ಗಳನ್ನು ಇಲ್ಲ. ಆದರೆ 200 ರೂಪಾಯಿಯೊಳಗೆ ಹಲವು ಪ್ಲಾನ್‌ಗಳನ್ನು ಹೊಂದಿದೆ. 155 ರೂಪಾಯಿಗೆ ರಿಚಾರ್ಜ್ ಮಾಡಿದರೆ ಡೈಲಿ 1 ಜಿಬಿ ಡೇಟಾ, ಅನಿಯಮಿತ ಕರೆಗಳು ಹಾಗೂ 300 ಎಸ್‌ಎಂಎಸ್‌ಗಳು ಉಚಿತವಾಗಿದ್ದು, 24 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಇದರಲ್ಲಿ 1 ತಿಂಗಳ ಪ್ರೈಮ್ ವಿಡಿಯೊ ಮೊಬೈಲ್ ಸಬ್‌ಸ್ಕ್ರಿಪ್ಷನ್, ಫ್ರೀ ಹಾಲೋ ಟ್ಯೂನ್ಸ್ ಹಾಗೂ ವಿಂಕ್ ಮ್ಯೂಸಿಕ್ ಸೌಲಭ್ಯವಿದೆ. (This copy first appeared in Hindustan Times Kannada website. To read more like this please logon to kannada.hindustantime.com)